ಕರ್ನಾಟಕ ಸಂಘ ಶಾರ್ಜಾದ ಆಶ್ರಯದಲ್ಲಿ ಮಯೂರ ಕಪ್ ಟೂರ್ನಮೆಂಟ್ 2010 |
ಪ್ರಕಟಿಸಿದ ದಿನಾಂಕ : 2010-08-26
ಕರ್ನಾಟಕ ಸಂಘ ಶಾರ್ಜಾದ ಎಂಟನೇ ವಾರ್ಷಿಕೋತ್ಸವ ಇತ್ತೀಚಿಗೆ ನಡೆದಿದ್ದು ನವಂಬರ್ 12ರಂದು ವಾಂಡರರ್ಸ್ ಕ್ಲಬ್ ನಲ್ಲಿ ಮಯೂರ ಕಪ್ ಟೂರ್ನಮೆಂಟ್ 2010ನ್ನು ನಡೆಸಲು ನಿರ್ಧರಿಸಿದೆ.
ಆ ದಿನ ಬೆಳಗ್ಗೆ 8.00ರಿಂದ ಸಂಜೆ 6.00 ರ ವರೆಗೆ ಟೂರ್ನಮೆಂಟ್ ನಡೆಯಲಿದೆ.
ಯುಎಇಯಲ್ಲಿರುವ ಎಲ್ಲಾ ಕನ್ನಡಿಗರಿಗೆ ಟೂರ್ನಿಯಲ್ಲಿ ಪಾಲ್ಗೊಳ್ಳಲು ಮುಕ್ತ ಅವಕಾಶವಿದ್ದು ಮಹಿಳೆಯರಿಗಾಗಿ ತ್ರೋಬಲ್, ಪುರುಷರಿಗಾಗಿ ವಾಲಿಬಾಲ್, ಕಬಡ್ಡಿ ಮತ್ತು ಹಗ್ಗ ಜಗ್ಗಾಟ ನಡೆಯಲಿದೆ.
ಆದೇ ದಿನ ಕನ್ನಡ ರಾಜ್ಯೋತ್ಸವ ಆಚರಣೆಯು ನಡೆಯಲಿದೆ. ಮಕ್ಕಳಿಗೆ ವಿಶೇಷ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು ಅವು ಯಾವುದು ಎಂಬುದನ್ನು ಬಳಿಕ ತಿಳಿಸ ಲಾಗುವುದು ಎಂದು ಸಂಘದ ಮೂಲಗಳು ಹೇಳಿವೆ.
ಭಾಗವಹಿಸುವ ತಂಡಗಳಿಗೆ ಬೆಳಗ್ಗಿನ ಉಪಹಾರವನ್ನು ಆಯೋಜಕರು ಉಚಿತವಾಗಿ ಒದಗಿಸುತ್ತಿದ್ದು, ಆಹ್ವಾನಿತರಿಗೆ, ಅತಿಥಿಗಳಿಗೆ ಮಧ್ಯಾಹ್ನದ ಉಚಿತ ಊಟವಿದೆ.
ಭಾಗವಹಿಸುವ ಪ್ರತಿಯೊಂದು ತಂಡಗಳಿಗೂ ಗೌರವ ಕಾಣಿಕೆಗಳನ್ನು ನೀಡಲಾಗುತ್ತಿದೆ.
ಹೆಚ್ಚಿನ ಮಾಹಿತಿಗಾಗಿ ಕೆ ಎಸ್ ಎಸ್ ಸದಸ್ಯರನ್ನು ಸಂಪರ್ಕಿಸಬಹುದು.
ರಾಜು ಭಂಡಾರಿ - 050-2837866 ದಿನೇಶ್ ಬಿ,ಎಂ050-5694146 ಆನಂದ್ ಬೈಲೂರ್ 050-4982189 ಸುಗಂಧರಾಜ್ ಬೇಕಲ್ 050-7743738
ಜೀವನ್ ಕುಕ್ಯಾನ್ 050-8052172
ವರದಿಯ ವಿವರಗಳು |
 |
ಕೃಪೆ : Press Release & Raj Shekar Ajekar ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-08-26 00:00:00
|
|
|