ಕಾರ್ಕಳದ ’ಹಿತೈಷಿ’ ಹಾಗೂ ಯುಎಇ ಆಮ್ಚಿಗೆಲೆ ಸಮಾಜದ ಜಂಟಿ ಸಹಯೋಗದಲ್ಲಿ ವಿದ್ಯಾರ್ಥಿ ವೇತನ ಹಾಗೂ ಸಾಧಕರಿಗೆ ಸಮ್ಮಾನ |
ಪ್ರಕಟಿಸಿದ ದಿನಾಂಕ : 2010-08-26
ವಿದ್ಯಾರ್ಥಿ ವೇತನ ಹಾಗೂ ಸಾಧಕರಿಗೆ ಸಮ್ಮಾನ ಕಾರ್ಯಕ್ರಮವು ಶ್ರೀನಿವಾಸ ಕಲಾ ಮಂದಿರದಲ್ಲಿ ಜರಗಿತು.
ಕಾರ್ಕಳ: ಕಾರ್ಕಳದ ಸಮಾಜ ಸೇವಾ ಸಂಸ್ಥೆ ಹಿತೈಷಿ ಹಾಗೂ ಕೊಲ್ಲಿ ರಾಷ್ಟ್ರದಲ್ಲಿನ ಯುಎಇ ಆಮ್ಚಿಗೆಲೆ ಸಮಾಜದ ಜಂಟಿ ಸಹಯೋಗದಲ್ಲಿ ವಿದ್ಯಾರ್ಥಿ ವೇತನ ಹಾಗೂ ಸಾಧಕರಿಗೆ ಸಮ್ಮಾನ ಕಾರ್ಯಕ್ರಮವು ಆ. 22 ರಂದು ಸ್ಥಳಿಯಯ ಶ್ರೀನಿವಾಸ ಕಲಾ ಮಂದಿರದಲ್ಲಿ ಜರಗಿತು.
ಈ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಮಹಿಳಾ ಕೈಗಾರಿಕೋದ್ಯಮಿ ರೇಖಾ ಗಣೇಶ್ ಕಾಮತ್, ಎಸ್ಎಸ್ಎಲ್ಸಿಯಲ್ಲಿ ರಾಜ್ಯಮಟ್ಟದಲ್ಲಿ ರಾಯಂಕ್ ವಿಜೇತೆ ನಮೃತಾ ಪ್ರಭು ಹಾಗೂ ಪದವಿಯಲ್ಲಿ ರಾಯಂಕ್ ವಿಜೇತೆ ಅಂಜನಾ ಪೈ ಅವರನ್ನು ಸಮ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿದ ಆಮಿcಗೆಲೆ ಸಮಾಜದ ಅಧ್ಯಕ್ಷ ರಾಮಚಂದ್ರ ಹೆಗ್ಡೆ ಅವರು ಮಾತನಾಡಿ, ವಿದ್ಯಾರ್ಥಿವೇತನಕ್ಕೆ ಸಹಕಾರ, ಪ್ರೋತ್ಸಾಹ ನೀಡುವಲ್ಲಿ ಕೊಲ್ಲಿ ರಾಷ್ಟ್ರದ ಯುಎಇ ಆಮಿcಗೆಲೆ ಸಮಾಜದ ಸೇವೆ ನಿರಂತರವಾಗಿ ನಡೆಯಲಿದೆ ಎಂದರು.
ಹಿತೈಷಿಯಿಂದ ರೂ. 90 ಸಾವಿರ, ಆಮಿcಗೆಲೆ ಸಮಾಜ ಸೇವಾ ಸಂಸ್ಥೆಯಿಂದ 5.60 ಲ.ರೂ. ಸೇರಿದಂತೆ ಒಟ್ಟು 6.50 ಲ.ರೂ. ವಿದ್ಯಾರ್ಥಿ ವೇತನವನ್ನು 735 ಸೆಕೆಂಡರಿ ವೃತ್ತಿಪರ ಹಾಗೂ ಪದವಿ ಶಿಕ್ಷಣ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಕಾಪೋìರೇಶನ್ ಬ್ಯಾಂಕಿನ ಮಹಾಪ್ರಬಂಧಕ ಬಿ. ಆರ್. ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
ಹಿತೈಷಿಯ ಉಪಾಧ್ಯಕ್ಷೆ ಸುವರ್ಣ ಟಿ. ನಾಯಕ್ ಅವರು ರೇಖಾ ಗಣೇಶ್ ಕಾಮತ್ ಅವರಿಗೆ ಬಾಗಿನ ಅರ್ಪಿಸಿ ಆಶೀರ್ವದಿಸಿ ದರು.
ಯುಎಇ ಸಮಾಜದ ಕಾರಾಯಕಾರಿ ಸದಸ್ಯ ಅಂಡಾರು ರಾಮದಾಸ ಕಿಣಿ ಅವರು ಪ್ರಸ್ತಾವನೆಗೆದರು.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-08-26 00:00:00
|
|
|