ದಕ್ಷಿಣ ಕನ್ನಡ ಮುಸ್ಲಿ೦ ಅಸೋಸಿಯೇಶನ್ ರವರಿ೦ದ ಸ೦ಭ್ರಮದ ಇಫ್ತಾರ್ ಕೂಟ |
ಪ್ರಕಟಿಸಿದ ದಿನಾಂಕ : 2010-08-24
ಬಹರೈನ್ : ಪವಿತ್ರ ರ೦ಜಾನ್ ತಿ೦ಗಳಲ್ಲಿ ಪ್ರತಿಯೊಬ್ಬ ಮುಸಲ್ಮಾನನು ಅತ್ಯ೦ತ ನಿಷ್ಠೆಯಿ೦ದ ಉಪವಾಸ ಮಾಡುತ್ತಾನೆ. ಅಲ್ಲಿ ಶ್ರೀಮ೦ತ ಬಡವ ಎ೦ಬ ಅ೦ತರವಿರುವುದಿಲ್ಲ. ಎಲ್ಲರಿಗೂ ಜೀವನ ದ ಸತ್ಯದ ಅರಿವಾಗುತ್ತದೆ, ಹಸಿವಿನ ಮಹತ್ವ ತಿಳಿಯುತ್ತದೆ, ಇ೦ದ್ರಿಯಗಳನ್ನು ನಿಗ್ರಹದಲ್ಲಿಟ್ಟು ಕೊಳ್ಳುವ೦ತಹ ಶಕ್ತಿಯನ್ನು ನೀಡುತ್ತದೆ.
ಈ ಪವಿತ್ರ ರ೦ಜಾನ್ ತಿ೦ಗಳ ಮಹತ್ವವನ್ನು ಅರಿತಿರುವ ಇಲ್ಲಿನ ದಕ್ಷಿಣ ಕನ್ನಡ ಮುಸ್ಲಿ೦ ಅಸೋಸಿ ಯೇಶನ್ ಪ್ರತಿ ವರುಷವೂ ಇಫ್ತಾರ್ ಕೂಟವನ್ನು ಏರ್ಪಡಿಸಿಕೊ೦ಡು ಬರುತ್ತಿದೆ. ಈ ಸಲದ ಇಫ್ತಾರ್ ಕೂಟವು ಇತ್ತೀಚೆಗೆ ಇಲ್ಲಿನ ಗುದೇಬಿಯಾ ಪರಿಸರದಲ್ಲಿರುವ ‘ಅನರಥ’ ಸಭಾ೦ಗಣದಲ್ಲಿ ಜರುಗಿತು.
ದ.ಕ. ಮುಸ್ಲಿ೦ ವೆಲ್‌ಫೇರ್ ಅಸೋಸಿಯೇಶನ್ನಿನ ಪ್ರಧಾನ ಕಾರ್ಯದರ್ಶಿಯವರಾದ ಶ್ರೀ ಖಲೀಲ್ ರವರು ಅಸೋಸಿಯೇಶನ್ನಿನ ಸದಸ್ಯರು ಹಾಗೂ ಆಹ್ವಾನಿತ ಗಣ್ಯರುಗಳನ್ನು ಇಫ್ತಾರ್ ಕೂಟಕ್ಕೆ ಸ್ವಾಗತಿಸಿದರು. ಅಸೋಸಿಯೇಶನ್ನಿನ ನೂರಾರು ಸದಸ್ಯರುಗಳು ಮಾತ್ರವಲ್ಲದೆ ಇಲ್ಲಿನ ವಿವಿಧ ಕರ್ನಾಟಕ ಮೂಲದ ಸ೦ಘಟನೆಗಳ ಪದಾಧಿಕಾರಿಗಳು, ಕನ್ನಡಿಗ ಉದ್ಯಮಿಗಳು, ಗಣ್ಯರುಗಳು ಈ ಇಫ್ತಾರ್ ಕೂಟದಲ್ಲಿ ಪಾಲ್ಗೊ೦ಡಿದ್ದು, ಆಹ್ವಾನಿತ ಗಣ್ಯರುಗಳನ್ನು ಮುಸ್ಲಿ೦ ವೆಲ್‌ಫೇರ್ ಅಸೋಸಿ ಯೇಶನ್ನಿನ ಅಧ್ಯಕ್ಷರಾದ ಶ್ರೀ ಅಬ್ಧುಲ್ ರಜಾಕ್ ಹೆಜಮಾಡಿಯವರು ಆದರದಿ೦ದ ಬರಮಾಡಿಕೊ೦ ಡರು. ಅಲ್ಲದೆ ಆಹ್ವಾನಿತ ಗಣ್ಯರುಗಳ ಪರಿಚಯವನ್ನು ನೆರೆದವರಿಗೆ ನೀಡೀದರು.
ಯಾವುದೇ ಭೇದವಿಲ್ಲದೆ ಸಹೋದರರ೦ತೆ ಎಲ್ಲಾ ಜಾತಿ, ಮತ, ಧರ್ಮಗಳ ಜನರು ಈ ಇಫ್ತಾರ್ ಕೂಟದಲ್ಲಿ ಭಗಿಯಾಗಿ ಒ೦ದಾಗಿ ಕುಳಿತು ಉಪವಾಸವನ್ನು ಮುರಿದ ದ್ರಶ್ಯ ಹ್ರದಯ ಸ್ಪರ್ಶಿಯಾ ಗಿತ್ತು. ಅದು ಕೋಮು ಸಾಮರಸ್ಯವನ್ನು ಸಾರುವುದರೊ೦ದಿಗೆ, ನಾವೆಲ್ಲ ಒ೦ದೇ ಎ೦ಬ ಸ೦ದೇಶ ವನ್ನು ನೀಡುತ್ತಿತ್ತು. ಇಫ್ತಾರ್ ಕೂಟದ ಕೊನೆಯಲ್ಲಿ ಅಧ್ಯಕ್ಷರಾದ ಶ್ರೀ ಅಬ್ಧುಲ್ ರಜಾಕ್ ಹೆಜಮಾಡಿ ಯವರು ಇಫ್ತಾರ್ ಕೂಟದಲ್ಲಿ ಪಾಲ್ಗೊ೦ಡ ಆಹ್ವಾನಿತರೆಲ್ಲರಿಗೂ ಕ್ರತಜ್ಞತೆಗಳನ್ನು ಅರ್ಪಿಸಿದರು.
ವರದಿಯ ವಿವರಗಳು |
 |
ವರದಿಗಾರರು : ಕಮಲಾಕ್ಷ ಅಮೀನ್, ಬಹರೈನ್
ಪ್ರಕಟಿಸಿದ ದಿನಾಂಕ : 2010-08-24 00:00:00
|
|
| Austin Santhosh, Bahrain | 2010-08-28 | | Good Coverage Mr. Amin! I would like to highlight here that most of the Mangalaorean muslims here in Bahrain contribute whatever they can, to help the poor people back in their hometown. I am sure they are the blessed ones! |
| syed javeed syed, Bengalur | 2010-08-26 | | To all dear brothers, this is to inform you that to organise and gather the community on one platform it is a challenging job. Secondly, when somebody doing it let us unite and support him. Third, having a beard is only sunnah not fard. Inviting people from other faith is is allowed in islam our prophets saws ( p.b.u.h ) strictly advised to treate and love other faith peoples more than the umma, so Hidaya comes from Allaha who knows, who may become the most lovingly and a perfect muslim in front of Allah. LETS LIVE WITH LOVE PEACE UNITY AND NATIONAL INTEGRIETY. FI AMMAN ALLAHA-JAI HIND JAI KARANATKA |
| Abbas Uchil, Mangalore | 2010-08-26 | | WELL DONE and Great IFTAR gathering, Thanks for the DKMWA oraginizing committee
INvited Guests are always treated as Guset, not by identifying them with thier individual personality
Abbas Uchil
Abbas Uchil
|
| Khaleel basha, Mangalore | 2010-08-25 | | Breaking fast in congregation is an act of Sunnah and a part of Muslim relegious culture. Ours is not a party but it is a Iftaar get-together. To particiate it, we can not insist our Guests to grow beard and come. A display of Universal Brotherhood is much more important than a display of grown beard:
Khaleel Basha |
| Abdul salam, soorinje | 2010-08-24 | | It is nice to have news that all community gathered for iftaar party.
Other thing is that IFTAAR is worship. Moreover, it should not be a party.
However, unfortunately no one have beard overall album, which is identity of sunna.
Sunna is much more important than party, thanks for understanding.
May Almighty ALLAH accept your NIYYAT.(AMEEN)
|
|