ಕುವೈತ್: ಐಎಂಡಬ್ಲುಎನಿಂದ ಇಫ್ತಾರ್ ಕೂಟ |
ಪ್ರಕಟಿಸಿದ ದಿನಾಂಕ : 2010-08-24
ಕುವೈತ್, ಆ.23: ಕುವೈತ್‌ನಲ್ಲಿ ಕಾರ್ಯಾಚರಿಸುತ್ತಿರುವ ಇಂಡಿಯನ್ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಶನ್ (ಐಎಂಡಬ್ಲುಎ) ವತಿಯಿಂದ ತನ್ನ ಸದಸ್ಯರ ಕುಟುಂಬಗಳಿಗೆ ಇಫ್ತಾರ್ ಮತ್ತು ಭೋಜನಾ ಕೂಟವನ್ನು ಕುವೈತ್ ನಲ್ಲಿರುವ ಗಾರ್ಡೆನಿಯ ಕುವೈತ್ ಕಾಂಟಿನೆಂಟಲ್ ಹೋಟೆಲ್‌ನಲ್ಲಿ ಶುಕ್ರವಾರ ಆಯೋಜಿಸಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕುವೈತ್‌ನ ಭಾರತದ ರಾಯಭಾರಿ ಅಜಯ್ ಮಲ್ಹೋತ್ರ ಮಾತನಾಡಿ ಭಾರತೀಯ ಮೂಲದವರನ್ನು ಸಂಘಟಿಸಿರುವ ‘ಐಎಂಡಬ್ಲುಎ’ಯ ಕಾರ್ಯವನ್ನು ಶ್ಲಾಘಿಸಿದರು.
ರಮಝಾನ್ ಕುರ್‌ಆನ್ ಅವತೀರ್ಣಗೊಂಡ ತಿಂಗಳಾಗಿದ್ದು, ಅದು ಸಹೋದರತೆ ಪಾಠವನ್ನು ವಿಶ್ವಕ್ಕೆ ಕಲಿಸಿದೆ ಎಂದು ಮಲ್ಹೋತ್ರ ಹೇಳಿದರು. ಇದೇ ಸಂದರ್ಭ ಮಲ್ಹೋತ್ರ ದೇಶದ ಸ್ವಾತಂ ತ್ರೋತ್ಸವದ ಶುಭಾಶಯ ಕೋರಿದರು.
ಮೀರ್ ಇಬ್ರಾಹೀಂ ಅಲಿ ಖಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪತ್ರಕರ್ತ ಶರಫುದ್ದೀನ್ ಮುಖ್ಯ ಭಾಷಣ ಮಾಡಿದರು. ಕುವೈತ್ ಅವ್‌ಖಾಫ್ ಸಚಿವಾಲಯದ ಪ್ರತಿನಿಧಿಯಾಗಿ ಶೈಖ್ ಮುಹಮ್ಮದ್ ಡೇನಿಯಲ್ ಪಾಲ್ಗೊಂಡಿದ್ದರು. ಇಸ್ತಾರ್ ಅಹ್ಮದ್ ಕಿರಾಅತ್ ಪಠಿಸಿದರು. ಡಾ.ಮುಹಮ್ಮದ್ ನಈಮುದ್ದೀನ್ ಕಾರ್ಯಕ್ರಮ ನಿರೂಪಿಸಿದರು.
ವರದಿಯ ವಿವರಗಳು |
 |
ಕೃಪೆ : ವಾಭಾ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-08-24 00:00:00
|
|
|