ಒಮನ್ : ವಿಮಾನದಲ್ಲಿ ಹುಸಿ ಬಾಂಬ್: ಭಾರತೀಯನ ವಿಚಾರಣೆ |
ಪ್ರಕಟಿಸಿದ ದಿನಾಂಕ : 2010-08-22
ಒಮನ್ ಗುರುವಾರ ವಿಮಾನವೊಂದರಲ್ಲಿ ಬಾಂಬ್ ಇದೆ ಎಂಬ ಕರೆ ಉಂಟು ಮಾಡಿದ ಭಯದ ವಾತಾವರಣ ತಿಳಿಯಾದರೂ ಅದಕ್ಕೆ ಕಾರಣನಾದ ಭಾರತೀಯ ಪ್ರಾಯಾಣಿಕನ ವಿಚಾರಾಣೆ ಮುಂದುವರಿದಿದೆ ಆದ್ರೆ ಕಾರಣವಿನ್ನೂ ಅಸ್ಪಷ್ಟವಾಗಿದೆ ಎಂದು ತನಿಖೆ ನಡೆಸುತ್ತಿರುವ ದ ರಾಯಲ್ ಒಮನ್ ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಕರೆ ಮಾಡಿರುವವ ವ್ಯಕ್ತಿ ವಿಮಾನದಲ್ಲಿದ್ದ ೧೫೨ ಮಂದಿಯಲ್ಲಿ ಒಬ್ಬನಾಗಿದ್ದು ಆತ ಕೆಲಸದ ಒತ್ತಡದಿಂದಾಗಿ ಮಾನಸಿಕ ಸಮತೋಲನ ಕಳೆದು ಕೊಂಡವನಂತೆ ಕಾಣುತ್ತಿರುವುದಾಗಿ ಅವರು ಅಭಿಪ್ರಾಯ ಪಟ್ಟಿದ್ದಾರೆ.
ಹುಸಿಬಾಂಬ್ ಕರೆಯನ್ನು ಅನುಸರಿಸಿ ಕುವೈಟ್- ಮುಂಬಯಿ ನಡುವೆ ಯಾನ ಬೆಳೆಸಲಿದ್ದ ಜೆಟ್ ಏರ್ ವೇಸ್ ನ ಆ ವಿಮಾನವನ್ನು ಸಮೀಪದ ಮಸ್ಕತ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿ ತಪಾಸಣೆ ಮಾಡಲಾಗಿತ್ತು.
ಆ ಭಾರತೀಯ ಪ್ರಯಾಣಿಕ ಇನ್ನು ಪೊಲೀಸರ ವಶದಲ್ಲಿದ್ದು ಆತನ ಮಾನಸಿಕ ಸ್ಥಿತಿಗತಿಯನ್ನು ವೈದ್ಯರ ಮೂಲಕ ತಪಾಸಣೆಗೊಳಗಾಗಿಸಬೇಕಾಗುತ್ತದೆ. ಒಂದು ವೇಳೆ ಆತನ ಮಾನಸಿಕ ಸ್ಥಿತಿ ಸಮತೋಲನ ತಪ್ಪಿರುವುದು ಸಾಬೀತಾದರೆ ಅವನನ್ನು ಬಿಡುಗಡೆಗೊಳಿಸಲಾಗುತ್ತದೆ. ಆದರೆ ಪೊಲೀಸರು ಪ್ರಕರಣದ ವಿವಿಧ ಮಗ್ಗಲುಗಳಲ್ಲಿ ತನಿಖೆಯನ್ನು ಕೇಂದ್ರೀಕರಿಸಿದ್ದಾರೆ. ಮೇಲ್ನೋಟಕ್ಕೆ ಆತ ಆರ್ಥಿಕ ಹೊಡೆತದಿಂದಾಗಿ ಸ್ಥಿಮಿತ ಕಳೆದು ಕೊಂಡಿರುವುದು ಪೊಲೀಸರ ಗಮನಕ್ಕೆ ಬಂದಿದೆ.
ಮೊದಲು ವಿಮಾನದ ಪ್ರಕರಣ ಈಗ ಭಾರತೀಯ ಅದರಲ್ಲಿ ಸಿಲುಕಿರುವುದು ಚರ್ಚೆಯ ವಿಶಯ ವಾಗಿದೆ.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-08-22 00:00:00
|
|
|