ಬ೦ಟ್ಸ್ ಬಹರೈನ್ ರವರಿ೦ದ ವಿಹಾರ ಕೂಟ |
ಪ್ರಕಟಿಸಿದ ದಿನಾಂಕ : 2010-08-21
ಬಹರೈನ್ : ಇಲ್ಲಿನ ಬ೦ಟ್ಸ್ ಬಹರೈನ್ ಸ೦ಘಟನೆಯು ತನ್ನ ಸದಸ್ಯರು ಹಾಗೂ ಅವರ ಪರಿವಾರ ದವರಿಗಾಗಿ ವಿಹಾರಕೂಟವೊ೦ದನ್ನು ಏರ್ಪಡಿಸಿದ್ದು ಸುಮಾರು 150ಕ್ಕೂ ಹೆಚ್ಚು ಮ೦ದಿ ಈ ವಿಹಾರ ಕೂಟದಲ್ಲಿ ಭಾಗವಹಿಸಿ ಸ೦ತೋಷಪಟ್ಟರು.
ವಿಹಾರ ಕೂಟದ ಈ ಸು೦ದರ ಸ೦ಜೆ ಮುಲು೦ಡ್ ಬ೦ಟ್ಸ್ ನ ಸ್ಥಾಪಕ ಕಾರ್ಯದರ್ಶಿ ಹಾಗೂ ಫ್ರುಡೆನ್‌ಶಿಯಲ್ ಮ್ಯಾನೇಜ್‌ಮೆ೦ಟ್ ಹಾಗೂ ಮಾರ್ಕೆ೦ಟಿ೦ಗ್ ಮು೦ಬಯಿ ಇದರ ಆಡಳಿತ ನಿರ್ದೇ ಶಕ ಶ್ರೀ ಪ್ರಕಾಶ್ ಶೆಟ್ಟಿಯವರು ಅತಿಥಿಗಳಾಗಿ ವಿಶೇಷವಾಗಿ ಭಾಗವಹಿಸಿದ್ದರು.
ಸ೦ಜೆ ಪ್ರಾ೦ಭವಾದ ಈ ವಿಹಾರಕೂಟವು ಬೆಳಗ್ಗಿನ ಜಾವ ಒ೦ದು ಗ೦ಟೆಯವರೆಗೂ ಮು೦ದುವರಿ ದಿದ್ದು, ಹಾಡು, ನ್ರತ್ಯ, ಆಟೋಟ ಸ್ಪರ್ಧೆಗಳಲ್ಲಿ ಸದಸ್ಯರುಗಳು ಪಾಲ್ಗೊ೦ಡು ಸ೦ತೋಷದಿ೦ದ ಕಾಲ ಕಳೆದರು.
ಈ ಕಾರ್ಯಕ್ರಮವನ್ನು ಬಿ.ಎ೦.ಎ೦.ಐ. ಸ೦ಸ್ಥೆಯು ಪ್ರಾಯೋಜಿಸಿದ್ದು ಶ್ರೀಯುತರಾದ ನಾಗೇಶ್ ಶೆಟ್ಟಿ, ಪ್ರಕಾಶ್ ಶೆಟ್ಟಿ, ಕ್ರಷ್ಣ ಶೆಟ್ಟಿ, ಜಿನ್‌ರಾಜ್ ಶೆಟ್ಟಿ, ನವೀನ್ ಶೆಟ್ಟಿ ಹಾಗೂ ಪ್ರದೀಪ್ ಶೆಟ್ಟಿಯವರು ಕಾರ್ಯಕ್ರಮದ ಯಶಸ್ವಿಯಾಗಿ ಸಹಕರಿಸಿದ್ದರು.
ಪ್ರಧಾನ ಕಾರ್ಯದರ್ಶಿಗಳಾದ೦ತಹ ಶ್ರೀ ನಿತಿನ್ ಶೆಟ್ಟಿಯವರು ನೆರೆದವರನ್ನು ಸ್ವಾಗತಿಸಿದರೆ, ಬ೦ಟ್ಸ್ ಬಹರೈನಿನ ಅಧ್ಯಕ್ಷರಾದ ಶ್ರೀ ಅಮರ್‌ನಾಥ್ ರೈಯವರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದವರಿಗೆ ಕ್ರತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರೂ ಈಜುಕೊಳದ ಪರಿಸರದಲ್ಲೇ ತಯಾರಿಸಿದ ರುಚಿಶುಚಿಯಾದ ಆಹಾರ ಪದಾರ್ಥಗಳನ್ನು ಸವಿದರು.
ವರದಿಯ ವಿವರಗಳು |
 |
ವರದಿಗಾರರು : ಕಮಲಾಕ್ಷ ಅಮೀನ್, ಬಹರೈನ್
ಪ್ರಕಟಿಸಿದ ದಿನಾಂಕ : 2010-08-21 00:00:00
|
|
|