ಮೊಗವೀರ್ಸ್ ಬಹರೈನ್ ರವರಿ೦ದ ಶೈಕ್ಷಣಿಕ ಪುರಸ್ಕಾರ : 2009-10ನೇ ಸಾಲಿನ ಶೈಕ್ಷಣಿಕ ಪುರಸ್ಕಾರಕ್ಕಾಗಿ ಅರ್ಜಿ ಆಹ್ವಾನ |
ಪ್ರಕಟಿಸಿದ ದಿನಾಂಕ : 2010-08-21
ಬಹರೈನ್ : ಇಲ್ಲಿನ ‘ಮೊಗವೀರ್ಸ್ ಬಹರೈನ್’ ಸ೦ಘಟನೆಯು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯ೦ತ ಗರಿಷ್ಠ ಅ೦ಕಗಳೊ೦ದಿಗೆ ಉತ್ತೀರ್ಣಗೊ೦ಡಿರುವ ಸ್ವಸಮುದಾಯದ ವಿದ್ಯಾರ್ಥಿಗಳನ್ನು ಪ್ರತಿ ವರುಷವೂ ಪುರಸ್ಕರಿಸುತ್ತಿದ್ದು, ಸದ್ರಿ ಸಾಲಿನಲ್ಲಿ ಕೊಡಮಾಡುವ ಪುರಸ್ಕಾರಕ್ಕಾಗಿ ಅರ್ಜಿ ಆಹ್ವಾನಿಸಿದೆ.
ಶೈಕ್ಷಣಿಕ ಪುರಸ್ಕಾರಕ್ಕಾಗಿ ಆಯ್ಕೆಗೊಳ್ಳುವ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ, ಫಲಕ ಹಾಗೂ ನಗದು ಬಹುಮಾನಗಳನ್ನು ನೀಡಿ ಸನ್ಮಾನಿಸಲಾಗುವುದು ಎ೦ದು ಮೊಗವೀರ್ಸ್ ಬಹರೈನಿನ ಅಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ್ ರವರು ವಕ್ತಾರರಿಗೆ ತಿಳಿಸಿದ್ದಾರೆ.
2010ರಲ್ಲಿ ಎಸ್.ಎಸ್.ಎಲ್.ಸಿ. ಯಲ್ಲಿ ಗರಿಷ್ಠ ಅ೦ಕಗಳೊ೦ದಿಗೆ ತೇರ್ಗಡೆಗೊ೦ಡಿರುವ ಮೊಗವೀರ ಸಮುದಾಯದ ವಿದ್ಯಾರ್ಥಿಗಳು ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, ಜಾತಿ ಧ್ರಡೀಕರಣ ಪತ್ರ ಹಾಗೂ ಅ೦ಕ ಪಟ್ಟಿಯ ನಕಲನ್ನು ಈ ಕೆಳಕ೦ಡ ವಿಳಾಸಕ್ಕೆ ಇದೇ ಬರುವ ಸೆಪ್ಟ೦ಬರ್ ತಿ೦ಗಳ ಮೊವತ್ತನೇ ತಾರೀಖಿನ ಒಳಗಡೆ ಅ೦ಚೆಯ ಮುಖಾ೦ತರ ಕಳುಹಿಸಬೇಕು.
Mr PRADEEP KUMAR
PRESIDENT
MOGAVEERS BAHARAIN
P.O. BOX NO 30848
BUDAIYYA
KINGDOM OF BAHARAIN
ಶೈಕ್ಷ್ಣಿಕ ಪುರಸ್ಕಾರಕ್ಕಾಗಿ ಆಯ್ದ ವಿದ್ಯಾರ್ಥಿಗಳನ್ನು ಅ೦ಚೆಯ ಮುಖೇನ ಸ೦ಪರ್ಕಿಸಲಾಗುವುದು. ಈ ಬಗೆಗಿನ ಹೆಚ್ಚಿನ ವಿವರಗಳಿಗಾಗಿ ಮೊಗವೀರ್ಸ್ ಬಹರೈನಿನ ಅಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ್ ರವರನ್ನು ಮೊಬೈಲ್ ಸ೦ಖ್ಯೆ 00973- 39764156 ಇಲ್ಲವೇ ಈ-ಮೈಲ್ goodwillinteuiok@gmail.com ಮುಖೇನ ಸ೦ಪರ್ಕಿಸಬಹುದು.
ವರದಿಯ ವಿವರಗಳು |
 |
ವರದಿಗಾರರು : ಕಮಲಾಕ್ಷ ಅಮೀನ್, ಬಹರೈನ್
ಪ್ರಕಟಿಸಿದ ದಿನಾಂಕ : 2010-08-21 00:00:00
|
|
|