ಕುವೈಟ್‌ನಲ್ಲಿ ನೌಕರಿ ಕೊಡಿಸದೇ ವಂಚನೆ: ದೂರು |
ಪ್ರಕಟಿಸಿದ ದಿನಾಂಕ : 2008-01-29
ಮಂಗಳೂರು, ಜ.೨೮: ಕುವೈಟ್‌ನಲ್ಲಿ ನೌಕರಿ ಕೊಡಿಸುವುದಾಗಿ ಹೇಳಿ ತೆರಳಿದ ಮಂಗಳೂರಿನ ಏಳು ಜನರಿಗೆ ಆಲ್ಲಿನ ಏಜೆಂಟ್ ನೌಕರಿ ಕೊಡಿಸದೆ ವಂಚಿಸಿರುವ ಬಗ್ಗೆ ಕುವೈಟ್‌ನಿಂದ ವಾಪಾಸಾಗಿರುವ ಏಳು ಜನರು ಕುವೈಟ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ (ಕಾರ್ಮಿಕ ವಿಭಾಗ) ಕಾರ್ಯದರ್ಶಿಗೆ ಆಲ್ಲಿನ ಸಾಮಾಜಿಕ ಕಾರ್ಯಕರ್ತರೊಬ್ಬರ ಸಹಕಾರದಿಂದ ದೂರು ನೀಡಿರುವುದಾಗಿ ಇಂದು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯ ಮೂಲಕ ನೋಂದವರ ಪರವಾಗಿ ರೋಕಿ ಡಿಸೋಜಾ ತಿಳಿಸಿದರು.
ಕಳೆದ ಆಕ್ಟೋಬರ್ ೨ರಂದು ಮಂಗಳೂರಿನ ಏಜೆಂಟ್ ಒಬ್ಬರ ಮೂಲಕ ಮುಂಬೈ ಮಾರ್ಗವಾಗಿ ಕುವೈಟ್‌ಗೆ ತೆರಳಿದ ಪೀಟರ್, ಉರ್ಬನ್ ಡಿಸೋಜಾ, ಪ್ಯಾಸಲ್ ರೋಡ್ರಿಗಸ್, ಆಶೋಕ್ ಗೋಪು ಪೂಜಾರಿ, ವಲೇರಿಯನ್ ರೊಡ್ರಿಗಸ್, ಪ್ರದೀಪ್ ಆಳಕೆ, ಸಂದೀಪ್ ಗಾಣಿಕಗ ಎಂಬವರ ತಂಡ ಕುವೈಟ್‌ನಲ್ಲಿ ಜಾಫರ್ ಎಂಬ ವ್ಯಕ್ತಿಯು ಕೆಲಸ ಒದಗಿಸಿಕೊಡುತ್ತೇನೆ ಎಂಬ ಭರವಸೆಯ ಮೇಲೆ ವಿದೇಶಕ್ಕೆ ತಲುಪಿದ್ದರು. ಆಕ್ಟೋಬರ್ ೨೩ರ ವರೆಗೆ ಯಾವುದೇ ವ್ಯವಸ್ಥೆ ಆಗಲಿಲ್ಲ.
ಕುವೈಟ್ ಏರ್‌ಫೋರ್ಟ್‌ನಲ್ಲಿ ಪಾಸ್‌ಪೋರ್ಟ್ ಹಾಗೂ ವೀಸಾ ಪ್ರತಿಯನ್ನು ಪರಿಶೀಲಿಸಿ ಅದರ ಮೂಲ ಪ್ರತಿಯನ್ನು ವೀಸಾ ಕಲೆಕ್ಷನ್ ಸೆಂಟರ್‌ನಲ್ಲಿ ಜಮಾ ಮಾಡದೆ ಇರುವುದರಿಂದ ಕುವೈಟ್ ಪೊಲೀಸರು ೭ ಜನರನ್ನು ಮುಂಬೈಗೆ ವಾಪಾಸು ಕಳುಹಿಸಿದರು.
ಮುಂಬೈಯಲ್ಲಿನ ಎಮಿಗ್ರೇಶನ್ ಸೆಂಟರ್‌ನಲ್ಲಿ ನಮ್ಮನ್ನು ಕೈದಿಗಳಂತೆ ಬಂಧಿಸಿ ತಲಾ ೫೦೦ ರೂ. ದಂಡ ವಿಧಿಸಿದ್ದಾರೆ. ಎರಡು ಗಂಟೆಗಳ ಕಾಲ ರಿಮಾಂಡ್ ಹೋಂನಲ್ಲಿ ಇರಿಸಿದ್ದಾರೆ ಎಂದು ವಂಚನೆಗೊಳಗಾದ ಉರ್ಬನ್ ಡಿಸೋಜಾ ತಿಳಿಸಿದರು.
ಇದಾದ ಬಳಿಕ ಮಂಗಳೂರಿನ ಏಜೆಂಟ್ ನಮ್ಮ ಬಳಿ ಬಂದು ಮುಂದೆ ತೊಂದರೆಯಾಗದಂತೆ ಭರವಸೆ ನೀಡಿ ಮತ್ತೊಮ್ಮೆ ಕುವೈಟ್‌ಗೆ ಕಳುಹಿಸಲಾಯಿತು. ಆಲ್ಲಿ ಹೋಗಿ ಒಂದು ತಿಂಗಳಾದರೂ ಕಂಪನಿಗೆ ಕೆಲಸಕ್ಕೆ ಸೇರಿಸುವ ವ್ಯವಸ್ಥೆ ಆಗದೆ ತಿಂಗಳು ಕಳೆದರೂ ಆಲ್ಲಿನ ಏಜೆಂಟ್ ಜಾಫರ್ ಸೂಕ್ತ ವ್ಯವಸ್ಥೆ ಮಾಡದೆ ವೀಸಾ ಹಾಗೂ ಪಾಸ್ ಪೋರ್ಟ್‌ನ ಮೂಲಪ್ರತಿ ತನ್ನಲ್ಲಿಟ್ಟುಕೊಂಟು ಸತಾಯಿಸಿದ ಎಂಬು ಉರ್ಬನ್ ತಿಳಿಸಿದರು.
ಆಂತಿಮವಾಗಿ ಕುವೈಟ್‌ನಲ್ಲಿ ಪಿ. ಬಿ. ಪಿಂಟೊ ಆವರನ್ನು ಸಂಪರ್ಕಿಸಿ ಈ ಬಗ್ಗೆ ಭಾರತೀಯ ರಾಯಭಾರಿ ಕಚೇರಿಗೆ ದೂರು ನೀಡಲಾಗಿದೆ ಎಂದು ಉರ್ಬನ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರದೀಪ್, ವಲೇರಿಯನ್ ರೊಡ್ರಿಗರ್ಸ, ಸಂದೀಪ್, ವಾಲ್ಟರ್ ಮೊದಲಾದವರು ಉಪಸ್ಥಿತರಿದ್ದರು.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ದೇಶಾದ್ರಿ ಕಣಸೋಗಿ
ಪ್ರಕಟಿಸಿದ ದಿನಾಂಕ : 2008-01-29
|
|
|