ಮ೦ಗಳೂರು : ಮಸ್ಕತ್‌ನ ‘ಸೇವಾ’ದಿಂದ ಪ್ರತಿಭಾವ೦ತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ |
ಪ್ರಕಟಿಸಿದ ದಿನಾಂಕ : 2010-08-02
ಮಂಗಳೂರು, ಆ.1: ಸೌತ್ ಕೆನರಾ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಶನ್ (ಸೇವಾ) ಮಸ್ಕತ್ -ಒಮಾನ್ ಇದರ ಆಶ್ರಯದಲ್ಲಿ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಇಂದು ನಗರದಲ್ಲಿ ನಡೆಯಿತು.
ಸಮಾರಂಭದಲ್ಲಿ ಮುಖ್ಯ ಅತಿಥಿ ಯಾಗಿ ಭಾಗವಹಿಸಿದ್ದ ಮುಸ್ಲಿಮ್ ಎಜುಕೇಶನಲ್ ಇನ್ಸಿಟಿಟ್ಯೂ ಟ್ಸ್ ಫೆಡರೇಶನ್‌ನ ಅಧ್ಯಕ್ಷ ವೈ. ಮುಹಮ್ಮದ್ ಬ್ಯಾರಿ ಮಾತನಾಡಿ, ಕರಾವಳಿಯ ಮುಸ್ಲಿಮರು ಶೈಕ್ಷಣಿಕವಾಗಿ ಹಿಂದುಳಿ ದಿದ್ದಾರೆ ಎಂಬ ಅರೋಪ ಇತ್ತೀಚಿನ ದಿನಗಳಲ್ಲಿ ದೂರವಾಗುತ್ತಿದೆ. ಮುಸ್ಲಿಮ್ ಶೈಕ್ಷಣಿಕ ಸಂಸ್ಥೆಗಳು ಅಲ್ಲಲ್ಲಿ ಸ್ಥಾಪನೆ ಗೊಳ್ಳುವ ಮೂಲಕ ಶಿಕ್ಷಣದ ಮಹತ್ವದ ಅರಿವಾಗುತ್ತಿದೆ ಎಂದರು.
ಮುಸ್ಲಿಂ ಯುವತಿಯರು ಕೂಡ ಸಾಕಷ್ಟು ಸಂಖ್ಯೆಯಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೆಯ್ಯುತ್ತಿ ದ್ದಾರೆ. ಆದರೆ, ಮುಸ್ಲಿಮ್ ಯುವಕರಲ್ಲಿ ಆ ಬಗ್ಗೆ ಇನ್ನೂ ಪ್ರಜ್ಞೆ ಬಂದಿಲ್ಲ. ಈ ನಿಟ್ಟಿನಲ್ಲಿ ಮುಸ್ಲಿಮ್ ಯುವಕರಲ್ಲಿ ಶೈಕ್ಷಣಿಕ ಜಾಗೃತಿ ಹುಟ್ಟು ಹಾಕುವ ಅವಶ್ಯಕತೆ ಇದೆ ಎಂದು ತಿಳಿಸಿದರು.
ಕೆಲವು ವರ್ಷಗಳ ಹಿಂದೆ ಮುಸ್ಲಿಂ ವಿದ್ಯಾರ್ಥಿಗಳಿಗೆ ಕಲಿಯುವ ಅವಕಾಶ ಗಳಿರಲಿಲ್ಲ. ಮಾರ್ಗ ದರ್ಶನವಿರಲಿಲ್ಲ. ಆರ್ಥಿಕ ಅಡಚಣೆಯೂ ಇತ್ತು. ಆದರೆ, ಇದೀಗ ಅಂತಹ ಯಾವುದೇ ತೊಡಕು ಗಳೂ ಇಲ್ಲ ಎಂದು ಮುಹಮ್ಮದ್ ಬ್ಯಾರಿ ನುಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಂ.ಇ. ಮೂಳೂರು, ಉದ್ಯೋಗ, ಉದ್ಯಮ ಕ್ಕಾಗಿ ಗಲ್ಫ್ ದೇಶಗಳಿಗೆ ತೆರಳಿದ ಕರಾವಳಿಯ ಮುಸ್ಲಿಮರು ಬೇರೆ ಬೇರೆ ಸಂಘಟನೆ ಗಳನ್ನು ಕಟ್ಟಿ ಕೊಂಡು ತಾಯ್ನಿಡಿನ ಮತ್ತು ಸಮಾಜದ ಮೇಲಿನ ಪ್ರೀತಿ ಯಿಂದ ಸಹಾಯಗಳನ್ನು ಮಾಡುತ್ತಿ ದ್ದಾರೆ. ಇದನ್ನೆಲ್ಲಾ ಕ್ರೋಡೀಕರಿಸಿಕೊಂಡು ಅರ್ಹರಿಗೆ ಹಂಚುವ ಕೆಲಸವಾಗ ಬೇಕಾಗಿದೆ ಎಂದರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಎಂ.ಬಿ. ಅಬ್ದುಲ್ ರಹ್‌ಮಾನ್ ಅಧ್ಯಕ್ಷತೆ ವಹಿಸಿ ದ್ದರು. ನೈಫ್ ಅಧ್ಯಕ್ಷ ರಫೀವುದ್ದೀನ್ ಕುದ್ರೋಳಿ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದರು. ಸೇವಾ ಅಧ್ಯಕ್ಷ ಅಕ್ಬರ್ ಅಲಿ ಸಂಸ್ಥೆಯ ಧ್ಯೇಯೋ ದ್ದೇಶಗಳ ಬಗ್ಗೆ ವಿವರಿಸಿದರು. ಸ್ಥಾಪಕ ಅಧ್ಯಕ್ಷ ಶೇಖ್ ಉಮರ್ ವಿದ್ಯಾರ್ಥಿ ವೇತನದ ಸದುಪಯೋಗ ಪಡೆದು ಕೊಳ್ಳುವಂತೆ ಮನವಿ ಮಾಡಿದರು.
ಉಪಾಧ್ಯಕ್ಷ ಮೋನಬ್ಬ ಅಬ್ದುಲ್ ಖಾದರ್ ಸ್ವಾಗತಿಸಿದರು. ಮುಹಮ್ಮದ್ ಅಝ್ಮಲ್ ಕಿರಾಅತ್ ಪಠಿಸಿದರು.
ರಹೀಂ ಉಚ್ಚಿಲ್ ಕಾರ್ಯಕ್ರಮ ನಿರೂಪಿಸಿದರು.
ವರದಿಯ ವಿವರಗಳು |
 |
ಕೃಪೆ : ವಾಭಾ/ಚಿತ್ರ-ದೈಜೀ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-08-02 00:00:00
|
|
|