ಉಡುಪಿ: ಜ್ಯೋತಿ ಗುರುಪ್ರಸಾದ್ ರವರ ‘ಈ ಕ್ಷಣಕ್ಕೆ’ ಹಾ.ಮಾ.ನಾಯಕ ಬಹುಮಾನ |
ಪ್ರಕಟಿಸಿದ ದಿನಾಂಕ : 2010-07-30
ಉಡುಪಿ, ಜು.29: ಶಿವಮೊಗ್ಗ ಕರ್ನಾಟಕ ಸಂಘದ ವತಿಯಿಂದ ಪ್ರತಿ ವರ್ಷ ಕನ್ನಡದ ಅತ್ಯುತ್ತಮ ಅಂಕಣ ಬರಹಗಳ ಕೃತಿಗೆ ನೀಡಲಾಗುವ ‘ಹಾ.ಮಾ.ನಾಯಕ’ ಬಹುಮಾನವನ್ನು ಈ ಬಾರಿ ಕನ್ನಡದ ಖ್ಯಾತ ಕವಯಿತ್ರಿ ಹಾಗೂ ಅಂಕಣಕಾರ್ತಿ ಕಾರ್ಕಳದ ಜ್ಯೋತಿ ಗುರುಪ್ರಸಾದ್‌ರ ‘ಈ ಕ್ಷಣ’ಕ್ಕೆ ನೀಡಲಾಗಿದೆ.
ಶಿವಮೊಗ್ಗ ಕರ್ನಾಟಕ ಸಂಘದ ಪುಸ್ತಕ ಬಹುಮಾನ ವಿತರಣಾ ಸಮಾರಂಭ ಜು.31ರಂದು ಸಂಜೆ 6 ಗಂಟೆಗೆ ಶಿವಮೊಗ್ಗದಲ್ಲಿ ನಡೆಯಲಿದೆ. ಬೆಂಗಳೂರಿನ ಕುವೆಂಪು ಭಾಷಾ ಭಾರತಿಯ ಅಧ್ಯಕ್ಷ ಡಾ.ಪ್ರಧಾನ ಗುರುದತ್ತ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಕರ್ನಾಟಕ ಸಂಘದ ಅಧ್ಯಕ್ಷ ಡಾ.ತೀ.ನಂ.ಶಂಕರನಾರಾಯಣ ಪ್ರಶಸ್ತಿ ಪ್ರದಾನ ಮಾಡುವರು. ಇದೇ ಸಮಾರಂಭ ದಲ್ಲಿ ಉತ್ತಮ ಅನುವಾದ ಕೃತಿಗೆ ನೀಡಲಾಗುವ ಪ್ರೊ.ಎಸ್.ವಿ.ಪರಮೇಶ್ವರ ಭಟ್ಟ ಬಹುಮಾನವನ್ನು ಚಿದಾನಂದ ಸಾಲಿಯವರ ‘ಯಜ್ಞ’ ಕೃತಿಗೆ ನೀಡಲಾಗುವುದು.
ಜ್ಯೋತಿ ಗುರುಪ್ರಸಾದ್ ಮೈಸೂರು ವಿವಿಯಿಂದ ಕನ್ನಡ ಎಂ.ಎ.ಪದವಿ ಹಾಗೂ ಕರ್ನಾಟಕ ಮುಕ್ತ ವಿವಿಯಿಂದ ಇಂಗ್ಲಿಷ್ ಎಂ.ಎ. ಪದವಿ ಪಡೆದಿದ್ದಾರೆ. ಜ್ಯೋತಿಯವರ ಚುಕ್ಕಿ ಸಂಕಲನದ ಹಸ್ತಪ್ರತಿಗೆ ಉಡುಪಿ ಗೋವಿಂದ ಪೈ ಸಂಶೋಧನಾ ಕೇಂದ್ರದಿಂದ ‘ಕಡೆಂಗೋಡ್ಲು ಕಾವ್ಯ ಪ್ರಶಸ್ತಿ’ ದೊರಕಿದೆ. ಅಲ್ಲದೇ ಇನ್ನೂ ಅನೇಕ ಪ್ರಶಸ್ತಿಗಳನ್ನು ಈ ಕವನ ಸಂಕಲನ ಬಾಚಿಕೊಂಡಿದೆ.
ವರದಿಯ ವಿವರಗಳು |
 |
ಕೃಪೆ : ವಾಭಾ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-07-30 00:00:00
|
|
|