ಮಂಗಳೂರು ರೈಲು ನಿಲ್ದಾಣ ಮೇಲ್ದರ್ಜೆಗೆ ಕ್ರಮ |
ಪ್ರಕಟಿಸಿದ ದಿನಾಂಕ : 2010-07-30
ಮಂಗಳೂರು, ಜು. 29: ಪ್ರಸಕ್ತ ವರ್ಷದಲ್ಲಿ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಮೇಲ್ದರ್ಜೆಗೆ ಹಲವು ಯೋಜನೆಗಳು ಅನುಷ್ಠಾನಗೊಳ್ಳಲಿವೆ.
ಒಟ್ಟು 3.49 ಕೋಟಿ ರೂ. ವೆಚ್ಚದಲ್ಲಿ ಎರಡನೇ ಕಾಲ್ನಡಿಗೆ ಮೇಲ್ಸೇತುವೆ, ಹೊಸ ಬುಕ್ಕಿಂಗ್ ಕಚೇರಿ, ಸಮಗ್ರ ಭದ್ರತಾ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದು ಪಾಲಕ್ಕಾಡಿನಲ್ಲಿ ಜರಗಿದ ರೈಲ್ವೇ ಬಳಕೆದಾರರ ಸಭೆಯಲ್ಲಿ ರೈಲ್ವೇ ವಿಭಾಗೀಯ ವ್ಯವಸ್ಥಾಪಕ ಎಸ್. ಕೆ. ರೈನಾ ಅವರು ತಿಳಿಸಿದರು.
ಜೊತೆಗೆ ಪ್ರಯಾಣಿಕರಿಗೆ ಲಿಫ್ಟ್ ಸೌಲಭ್ಯ ಕಲ್ಪಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ವರದಿಯ ವಿವರಗಳು |
 |
ಕೃಪೆ : ಸತೀಶ್ ಕಾಪಿಕಾಡ್ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-07-30
|
|
|