ಜಿಲ್ಲೆಯಲ್ಲಿ ಮುಂಗಾರು ಚುರುಕು : ಬಿಡದೆ ಸುರಿಯುತ್ತಿರುವ ಮಳೆಯಿಂದ ಮನೆಗಳಿಗೆ ಹಾನಿ |
ಪ್ರಕಟಿಸಿದ ದಿನಾಂಕ : 2010-07-29
ಮಂಗಳೂರು / ಸುಳ್ಯ, ಜು. 29: ಎರಡು ತಿಂಗಳಿಂದ ಬೇಕೋ ಬೇಡವೋ ಎನ್ನುವ ರೀತಿಯಲ್ಲಿ ಹನಿಹನಿಯಾಗಿ ಸುರಿಯುತ್ತಿದ್ದ ಮಳೆ ಬುಧವಾರ ದಿಂದ ಚುರುಕುಗೊಂಡಿದೆ. ಇಂದು ಕೂಡ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಕೆಲವು ದಿನಗಳಿಂದ ಬಿಸಿಲು ಮಳೆಯ ಕಣ್ಣುಮುಚ್ಚಾಲೆ ಆಡುತ್ತಿದ್ದ ಮಳೆ ಇದೀಗ ಬೆಳಿಗ್ಗಿನಿಂದಲೇ ಧಾರಕರವಾಗಿ ಸುರಿಯುತ್ತಿರುವುದರಿಂದ ಕೆಲವು ಕಡೆಗಳಲ್ಲಿ ಹಾನಿ ಸಂಭವಿಸಿ ನಷ್ಟವುಂಟಾದ ಬಗ್ಗೆ ವರದಿಯಾಗಿದೆ.

ಸುಳ್ಯ ಸ್ನೇಹ ಶಾಲೆ ಬಳಿಯ ತಂಗ ಅವರ ಮನೆ ಕಂಪೌಂಡ್ ಮತ್ತು ಮನೆ ಕುಸಿದು ಸಾಕಷ್ಟು ನಷ್ಟ ಉಂಟಾಗಿದೆ. ಮರ್ಕಂಜದ ಸತೀಶ್ ಸೂಟೆಗದ್ದೆ ಅವರ ಮನೆಯ ಹೆಂಚು ಗಾಳಿಗೆ ಹಾರಿ ಹೋಗಿದ್ದು, ಒಂದು ಹೆಂಚು ಸತೀಶ್ ಅವರ ಮೇಲೆ ಬಿದ್ದು ಗಾಯಗೊಂಡು ಆಸ್ಪೆತ್ರೆ ಸೇರಿದ್ದಾರೆ. ಇವರ ತಂದೆ ಕುಶಾಲಪ್ಪ ಗೌಡ ಅವರ ಮನೆ ಕೂಡಾ ಮಳೆಗೆ ಹಾನಿಯಾಗಿದ್ದು, ಸುಮಾರು ಮೂರು ಲಕ್ಷದಷ್ಟು ನಷ್ಟ ಉಂಟಾಗಿದೆ ಎಂದು ಅವರು ತಿಳಿಸಿದ್ದಾರೆ.
ಜಟ್ಟಿಪಳ್ಳದ ಜಯರಾಮ ಅವರ ಮನೆಗೂ ಹಾನಿಯಾಗಿದೆ. ಇನ್ನೂ ಹಲವೆಡೆ ಮನೆಗೆ ಹಾನಿಯಾಗಿರುವ ಬಗ್ಗೆ ವರದಿಗಳು ಬರುತ್ತಿವೆ ಎಂದು ತಹಶೀಲ್ದಾರ್ ಕಚೇರಿಯವರು ತಿಳಿಸಿದ್ದಾರೆ.
ವರದಿಯ ವಿವರಗಳು |
 |
ವರದಿಗಾರರು : ಸತೀಶ್ ಕಾಪಿಕಾಡ್
ಪ್ರಕಟಿಸಿದ ದಿನಾಂಕ : 2010-07-29 00:00:00
|
|
|