ಅದಿರು ಸಾಗಾಣಿಕೆ ನಿಷೇಧ: ಹೊರಬಿದ್ದ ಸರ್ಕಾರಿ ಆದೇಶ |
ಪ್ರಕಟಿಸಿದ ದಿನಾಂಕ : 2010-07-29
ಬೆಂಗಳೂರು, ಜು. 28: ರಾಜ್ಯದಿಂದ ರಫ್ತು ಉದ್ದೇಶಕ್ಕೆ ಅದಿರು ಸಾಗಾಣೆಯನ್ನು ನಿಷೇಧಸಿ ರಾಜ್ಯ ಸರ್ಕಾರ ಇಂದು ಅdhiಕೃತ ಆದೇಶ ಹೊರಡಿಸಿದೆ.
ಅಕ್ರಮ ಗಣಿಗಾರಿಕೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ರಫ್ತು ನಿಷೇಧಸುವುದಾಗಿ ಮುಖ್ಯಮಂತ್ರಿಗಳು ಮಂಗಳವಾರವಷ್ಟೇ ನೀಡಿದ ಹೇಳಿಕೆ ಹಿನ್ನೆಲೆಯಲ್ಲಿ ಆದೇಶ ಹೊರಬಿದ್ದಿದೆ. ರಫಿ¤ಗಾಗಿ ಅದಿರು ಸಾಗಾಣೆ ಪರವಾನಗಿಯನ್ನು ನಿಷೇಧಸುವುದನ್ನು ತಕ್ಷಣದಿಂದ ಜಾರಿಗೆ ತರಲಾಗಿದೆ.
ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹಾಗೂ ಅನಧ ಕೃತ ಗಣಿಗಾರಿಕೆ ಸಾಗಾಣಿಕೆ ತಡೆಗಟ್ಟಲು ಎಲ್ಲಾ ರೀತಿಯ ಪರಿಣಾಮಕಾರಿ ಅಗತ್ಯ ಕ್ರಮಗಳನ್ನು ತುರ್ತಾಗಿ ತೆಗೆದುಕೊಳ್ಳುವಂತೆ ಎಲ್ಲಾ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿrದೆಶಕರು ಮತ್ತು ಹಿರಿಯ ಭೂ ವಿಜ್ಞಾನಿಗಳಿಗೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಜಂಟಿ ಕಾರ್ಯದರ್ಶಿ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-07-29 00:00:00
|
|
|