ಮತ್ಸಗಂಧಾ ಸಹಿತ ಹಲವು ರೈಲುಗಳು ಇಂದೂ ರದ್ದು... |
ಪ್ರಕಟಿಸಿದ ದಿನಾಂಕ : 2010-07-29
ಮುಂಬಯಿ, ಜು. 28: ಕೊಂಕಣ ರೈಲ್ವೆ ಮತ್ಸಗಂಧಾ ಸಹಿತ ಹಲವು ರೈಲುಗಳನ್ನು ಜು. 29ರಂದು ರದ್ದು ಪಡಿಸಿದೆ.
ಮತ್ಸಗಂಧಾ ಅಪ್ ಮತ್ತು ಡೌನ್ ರೈಲುಗಳನ್ನು ಜು. 29ರಂದು ರದ್ದುಪಡಿಸಲಾಗಿದೆ. ಅಂತೆಯೇ ಮಾಂಡೊವಿ ಎಕ್ಸ್ಪ್ರೆಸ್, ಕೊಂಕಣಕನ್ಯಾ ಎಕ್ಸ್ಪ್ರೆಸ್, ಜನಶತಾಬಿ ಎಕ್ಸ್ಪ್ರೆಸ್, ಮಡ್ಗಾಂ & ಸಾವಂತ್ವಾಡಿ ಪ್ಯಾಸೆಂಜರ್ ರೈಲುಗಳು ಜು. 29ರಂದು ರದ್ದಾಗಿವೆ.
ಜು. 29ರಂದು ಕುರ್ಲಾದ ಲೋಕಮಾನ್ಯ ತಿಲಕ ಟರ್ಮಿನಸ್ನಿಂದ ಹೊರಡುವ ನೇತ್ರಾವತಿ ಎಕ್ಸ್ಪ್ರೆಸ್ ರೈಲಿನ ಪ್ರಯಾಣಿಕರನ್ನು ಜು.28ರಂದು ತಿರುವನಂತಪುರದಿಂದ ಹೊರಟು ಬರುವ ನೇತ್ರಾವತಿ ಎಕ್ಸ್ಪ್ರೆಸ್ ರೈಲಿನಲ್ಲಿ ರವಾನಿಸಲಾಗುವುದು ಎಂದು ಕೊಂಕಣ ರೈಲ್ವೆ ಪ್ರಕಟನೆ ತಿಳಿಸಿದೆ.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-07-29 00:00:00
|
|
|