ಆದಿತ್ಯವಾರ, 05-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಜನತಾ ನ್ಯಾಯಾಲಯದ ಮೂಲಕ 5154 ಪ್ರಕರಣ ಇತ್ಯರ್ಥ : ಲೋಕ್ ಅದಾಲತ್ ಸಮಾರೋಪದಲ್ಲಿ ನರೇಂದ್ರ ಕುಮಾರ್ ಗುಣಕಿ
Latest news item ಸೃಜನ ಶೀಲತೆ ಇಲ್ಲದಿದ್ದಾಗ ಶಿಕ್ಷಣದ ಬೆಳವಣಿಗೆಗೆ ಕೊರತೆ | ಅಶೋಕ್ ಕುಮಾರ್ ಶೆಟ್ಟಿ, ಎಂ.ಎಸ್.ನಾಗರಾಜ್ ರಾವ್ ಹಾಗೂ ಡಾ.ಚಂದ್ರಶೇಖರ್ ದಾಂಬ್ಲೆಯವರಿಗೆ ಸನ್ಮಾನ
Latest news item ದುಬಾಯಿಯಲ್ಲಿ ’ಗಮ್ಮತ್ ಕಲಾವಿದೇರ್’ ಪ್ರಥಮ ಪ್ರದರ್ಶನ: ನಟನಾ ಚಾತುರ್ಯದಲ್ಲಿ ಮಿಂಚಿದ ’ಈ ಪೊರ್ಲು ದಾಯೇ’ ತುಳು ನಾಟಕ
Latest news item ಸುಶಿಕ್ಷಿತರ ಸಂಖ್ಯೆ ಹೆಚ್ಚಾದಂತೆ ಕೃಷಿಯತ್ತ ಒಲವು ಕಡಿಮೆ : ಉಡುಪಿ ರೈತ ಸಮಾವೇಶದಲ್ಲಿ ಶಾಸಕ ರಘುಪತಿ ಭಟ್
Latest news item ಉಡುಪಿ ಲಯನ್ಸ್ ಗೆ ಜಿಲ್ಲಾ ಲಯನ್ಸ್ ಗವರ್ನರ್ ಇಂದ್ರಾಳಿ ಜಯಕರ್ ಶೆಟ್ಟಿ ಅಧಿಕೃತ ಭೇಟಿ
Latest news item ಸುಬ್ರಮಣಿಯನ್ ಸ್ವಾಮಿ ಅರ್ಜಿ ವಜಾ: ಚಿದಂಬರಂ ನಿರಾಳ
Latest news item ಇಲ್ರಿ.. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿಲ್ಲ: ಯಡ್ಡಿ
Latest news item ಚೆನ್ನೈ ತೆಕ್ಕೆಗೆ ಜಡೇಜಾ; 9.70 ಕೋಟಿಗೆ ಖರೀದಿ; ವಿನಯ ಕುಮಾರ್ ಗೆ 4.86ಕೋಟಿ ಕೊಟ್ಟ ರೋಯಲ್ ಚ್ಯಾಲೇಂಜರ್ಸ್ | ಯಾವ ಯಾವ ಫ್ರಾಂಚೈಸಿ ತೆಕ್ಕೆಗೆ?
Latest news item ಗೂಳಿ ಹೊರಕ್ಕೆ: ಕಳಂಕಿತ ಸಭಾಧ್ಯಕ್ಷರೇ ಎಂದಿದ್ದಕ್ಕೆ ಸದನದಿಂದ ಒಂದು ದಿನ ಅಮಾನತು (Updated)
Latest news item ಜೈನ ಸಾಹಿತಿಗಳಿಂದ ಕನ್ನಡ ಸಾಹಿತ್ಯದ ಬೆಳವಣಿಗೆ: ಡಾ.ಶಾಂತಿನಾಥ ದಿಬ್ಬದ
Latest news item ವೈದ್ಯರಲ್ಲಿ ಮಾನವೀಯತೆ ಮುಖ್ಯ: ನ್ಯಾ. ಸಂತೋಷ್ ಹೆಗ್ಡೆ
Latest news item ಪಡುಬಿದ್ರೆಯಲ್ಲಿ ಎಸಿಸಿ ಸಿಮೆಂಟ್ ಕಂಪೆನಿ ಸ್ಥಾಪನೆ: ರಸ್ತೆ ಕಾಮಗಾರಿಗೆ ಬೂದಿ ಬಳಸಬಹದು : ಡಿಸಿ | ಫೆ. 4ರಂದು ಪ್ರತಿಭಟನೆ
Latest news item ಉಡುಪಿ ಶೇಮ್, ಶೇಮ್ !: ಸೈಂಟ್ ಮೇರೀಸ್ ದ್ವೀಪದಲ್ಲಿ ಜಿಲ್ಲಾಡಳಿತ ಕೃಪಕಟಾಕ್ಷದಲ್ಲಿ ರೇವ್ ಪಾರ್ಟಿ: ವಿದೇಶಿ ಸಂಸ್ಕೃತಿ ಆನಾವರಣ, ಮದ್ಯ, ಡ್ರಗ್ಸ್ ಗಳದ್ದೇ ಕಾರುಬಾರು
Latest news item ಅಪಘಾತಕ್ಕೆ ತುತ್ತಾಗಿ ಕಾಮಿಡಿ ನಟ ಕರಿ ಬಸವಯ್ಯ ಅಕಾಲಿಕ ಮರಣ { VIEW VIDEO of HIS EMOTIONAL LIFE STORY }.
Latest news item ಬಯಲುಸೀಮೆ ಆರು ಜಿಲ್ಲೆಗಳಿಗೆ ಕುಡಿಯುವ ನೀರು; ತಿಂಗಳಲ್ಲಿ ಎತ್ತಿನಹೊಳೆ ನಿರ್ಧಾರ. ನೇತ್ರಾವತಿ ತಿರುವು ಇಲ್ಲ..ಹೆಚ್ಚಿನ ನೀರನ್ನು ಬಳಸಿಕೊಳ್ಳುವ ಯೋಜನೆ
Latest news item ಕುಸಿಯುವ ಭೀತಿಯಲ್ಲಿ ಕುದಿ ಗ್ರಾಮದ ಕೋಂಟು ಸೇತುವೆ : ಆತಂಕದಲ್ಲಿ ಗ್ರಾಮಸ್ಥರು : ಸೂಕ್ತ ಪರಿಹಾರಕ್ಕೆ ಒತ್ತಾಯ
Latest news item ಡಿವಿಜಿಯವರ ಕಾವ್ಯಗಳು ಜನಸ್ವಾರ್ಥ : ಡಾ. ಹೆಚ್. ಶಾಂತರಾಮ್
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ತುಮಕೂರು: ರಾಜಿ ಪ್ರಶ್ನೆಯೇ ಇಲ್ಲ: ಸಿದ್ದು : ಸಿಬಿ‌ಐ ತನಿಖೆಯಾದ್ರೆ ಮುಖ್ಯಮಂತ್ರಿ ಜೈಲಿಗೆ ಗ್ಯಾರಂಟಿ : ರೆಡ್ಡೀಗಳ ಉದ್ದಟತನಕ್ಕೆ ಇದು ಸರಿಯಾದ ಉತ್ತರ

ಮಂಚಗಲ್‌ಕುಪ್ಪೆ, (ತುಮಕೂರು): ಅಕ್ರಮ ಗಣಿಗಾರಿಕೆಯನ್ನು ಸಿಬಿ‌ಐ ತನಿಖೆಗೆ ವಹಿಸಬೇಕೆಂಬ ತಮ್ಮ ನಿರ್ಧಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಅದಿರು ರಫ್ತು ನಿಷೇಧ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿರುವುದರಿಂದ ಗಣಿಧಣಿಗಳಾದ ರೆಡ್ಡಿ ಬ್ರದರ್ಸ್‌ಗೆ ಲಾಭವೇ ಹೊರತು ರಾಜ್ಯ ಸಂಪತ್ತು ಲೂಟಿ ಆಗುವುದನ್ನು ತಪ್ಪಿಸಲು ಸಾಧ್ಯವೇ ಇಲ್ಲ. ಮುಖ್ಯಮಂತ್ರಿಗಳು ಸಿಬಿ‌ಐ ತನಿಖೆಗೆ ವಹಿಸಬೇಕು ಇಲ್ಲವೇ ಮುಖ್ಯಮಂತ್ರಿ ಸ್ಥಾನದಿಂದ ತೊಲಗಬೇಕು ಎಂದು ಅವರು ಖಡಕ್ ಆಗಿ ಹೇಳಿದ್ದಾರೆ.

ಬುಧವಾರ ಇಲ್ಲಿನ ಎಚ್‌ಎಂಎಸ್ ಎಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆಯನ್ನು ಸಿಬಿ‌ಐ ತನಿಖೆ ಒಪ್ಪಿಸುವವರೆಗೂ ಪಾದಯಾತ್ರೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಪಾದಯಾತ್ರೆಗೆ ಹೆದರಿ ಬಿಜೆಪಿ ಮಂದಿಗೆ ಮೂತ್ರ ಬರುವಂತಾಗಿದೆ ಗುಡುಗಿದರು.

ಯಡಿಯೂರಪ್ಪ ಕರ್ನಾಟಕ ಕಂಡ ಅತ್ಯಂತ ದುರ್ಬಲ ರಾಜಕಾರಣಿ. ಸಿಬಿ‌ಐ ತನಿಖೆಗೆ ಅಕ್ರಮ ಗಣಿಗಾರಿಕೆಯನ್ನು ಒಪ್ಪಿಸಿದರೆ ಯಡಿಯೂರಪ್ಪ ಮತ್ತವರ ಸಂಪುಟದ ಆನೇಕ ಮಂತ್ರಿಗಳು ಶ್ರೀ ಕೃಷ್ಣನ ಜನ್ಮಸ್ಥಳಕ್ಕೆ (ಜೈಲಿಗೆ) ಹೋಗುವುದು ಖಚಿತ. ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಪ್ರತಿಪಾದಿಸಿದರು.

ಸಚಿವ ಶ್ರೀರಾಮುಲು ಜೈಲಿಗೆ ಹೋಗುವ ಸಾಧ್ಯತೆಗಳು ಇರುವುದರಿಂದ ಬೆಂಗಳೂರು ಜೈಲಿಗೆ ಮುಂಚಿತವಾಗಿ ಹೋಗಿ ಭೇಟಿ ಮಾಡಿ, ಅಲ್ಲಿ ವಾತಾವರಣವನ್ನು ವೀಕ್ಷಣೆ ಮಾಡಿ ಬಂದಿದ್ದಾರೆ. ಕಾಂಗ್ರೆಸ್ ಮುಖಂಡರ ಆಸ್ತಿಪಾಸ್ತಿ ಬಗ್ಗೆಯೂ ತನಿಖೆ ಮಾಡಲಿ, ಬಿಜೆಪಿ ಮಂತ್ರಿ ಮಹೋದಯರ ಆಸ್ತಿಪಾಸ್ತಿಯ ಬಗ್ಗೆ ತನಿಖೆ ನಡೆಸಲಿ. ಅಪರಾಧಿ ಸ್ಥಾನದಲ್ಲಿ ಇರುವ ಯಡಿಯೂರಪ್ಪನವರಿಗೆ ತನಿಖೆಗಳನ್ನು ಎದುರಿಸುವ ನೈತಿಕ ಸ್ಥೈರ್ಯವೇ ಇಲ್ಲ.

ಲೋಕಾಯುಕ್ತರಿಗೆ ಮುಖ್ಯಮಂತ್ರಿ, ಮಂತ್ರಿ ಮತ್ತು ಶಾಸಕರ ವಿರುದ್ಧವೂ ತನಿಖೆ ನಡೆಸುವ ಅಧಿಕಾರ ನೀಡದೇ, ಪ್ರಯೋಜನಕ್ಕೆ ಬಾರದ ಪರಮಾಧಿಕಾರ ನೀಡಲಾಗಿದೆ ಎಂದು ಟೀಕಿಸಿದರು.

ರಫ್ತು ನಿಷೇಧದಿಂದ ರೆಡ್ಡಿ ಬ್ರದರ್ಸ್‌ಗೆ ಲಾಭ: ರಾಜ್ಯದ ಕೆಲ ಬಂದರುಗಳಿಂದ ಕಬ್ಬಿಣದ ಅದಿರನ್ನು ರಫ್ತು ಮಾಡಲು ನಿಷೇಧ ಮಾಡಿರುವುದರಿಂದ ಗಣಿಧಣಿಗಳಾದ ಜನಾರ್ದನರೆಡ್ಡಿ ಮತ್ತು ಸಹೋದರರಿಗೆ ಲಾಭ. ಇದನ್ನು ಮರೆಮಾಚಲು ರಾಜ್ಯದಲ್ಲಿ ಅದಿರು ರಫ್ತು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಇದರ ಹಿಂದೆ ರಾಜ್ಯ ಸಂಪತ್ತನ್ನು ಉಳಿಸುವ ಕಾಳಜಿ ನಯಾಪೈಸೆದಷ್ಟೂ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಳ್ಳ ವ್ಯಾಪಾರಿಗಳು: ಸಚಿವರಾದ ಕರುಣಕರೆಡ್ಡಿ, ಜನಾರ್ದನರೆಡ್ಡಿ, ಶ್ರೀರಾಮುಲು ಅವರು ಕಳ್ಳ ವ್ಯಾಪಾರಿಗಳು, ಲೂಟಿಕೋರರು. ಅವರಿಗೆ ಸತ್ಯಾಗ್ರಹ, ಹೋರಾಟ ಮಾಡಿ ಗೊತ್ತಿಲ್ಲ. ಗಾಂಧೀಜಿ, ಅಂಬೇಡ್ಕರ್ ಅವರಂತೂ ಗೊತ್ತೆ ಇಲ್ಲ. ದೇಶದ ಇತಿಹಾಸವೂ ತಿಳಿದಿಲ್ಲ. ಮೂಲತಃ ಅವರು ರಾಜಕಾರಣಿಗಳೇ ಅಲ್ಲ. ಅಂಥವರಿಗೆ ತಾವು ನಡೆಸುತ್ತಿರುವ ಪಾದಯಾತ್ರೆ ಬಗ್ಗೆ ಟೀಕೆ ಮಾಡುವ ನೈತಕತೆ ಇಲ್ಲ.

ಕಾಂಗ್ರೆಸ್ ಪಾದಯಾತ್ರೆ ನಡೆಸುತ್ತಿರುವುದು ಕಬ್ಬಿಣ ತಿನ್ನಲಿಕ್ಕೆ ಅಲ್ಲ. ಬಳ್ಳಾರಿ ಅಭಿವೃದ್ಧಿ ಸಹಿಸದೇ ವಿರೋಧಪಕ್ಷಗಳು ಟೀಕೆ ಮಾಡುತ್ತಿವೆ ಎಂಬುದು ನಗೆಪಾಟಲಿನ ಸಂಗತಿ. ಸರ್ಕಾರದ ಹಂಗಿ ಲ್ಲದೇ 50  ಸಾವಿರ ಮನೆಗಳನ್ನು ನೆರೆಸಂತ್ರಸ್ತರಿಗೆ ಕಟ್ಟಿಸಿ ಕೊಡಲಾಗುವುದು ಎಂದು ಗುದ್ದಲಿ ಪೂಜೆ ನೆರವೇರಿಸಿದರು. ಇಲ್ಲಿಯವರೆಗೂ ಒಂದೇ ಒಂದು ಮನೆ ಕಟ್ಟಿಲ್ಲ. ಇದು ಬಳ್ಳಾರಿ ಅಭಿವೃದ್ಧಿಯೇ ? ಎಂದು ಪ್ರಶ್ನಿಸಿದರು.

ಅಕ್ರಮ ಗಣಿಗಾರಿಕೆಯನ್ನು ಸಿಬಿ‌ಐ ತನಿಖೆಗೆ ಒಪ್ಪಿಸುವವರೆಗೂ ಪಾದಯಾತ್ರೆಯನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಸಿಬಿ‌ಐಗೆ ಒಪ್ಪಿಸಿ ಬಿಜೆಪಿ ಗಿರಾಕಿಗಳು ಪಾದಯಾತ್ರೆಯನ್ನಾದರೂ ಮಾಡಲಿ, ತಿರುಪತಿ ಯಾತ್ರೆಯನ್ನಾದರೂ ಮಾಡಲಿ. ನಮ್ಮದೇನು ಅಭ್ಯಂತರವಿಲ್ಲ ಎಂದು ಹೇಳಿದರು.

ಗಾಂಧಿ ಭಜನೆ ಮಾಡಿರಲಿಲ್ಲವೇ?

ಪಾದಯಾತ್ರೆ ವೇಳೆ ಡೊಳ್ಳು ಕುಣಿತ, ವೀರಭದ್ರೇಶ್ವರನ ಕುಣಿತ, ತಮಟೆ ಮತ್ತು ಲಾವಣಿ ಪದ ಗಳನ್ನು ಹಾಡಿದ ಬಗ್ಗೆ ಬಿಜೆಪಿ ಟೀಕಿಸಿದ ಬಗ್ಗೆ ಸಿದ್ದು ಪ್ರತಿಕ್ರಿಯಿಸಿದ್ದು ಹೀಗೆ.

ಡೊಳ್ಳು ಕುಣಿತ, ಲಾವಣಿ ಮತ್ತಿತರ ಜಾನಪದ ಪ್ರಾಕಾರಗಳು ಗ್ರಾಮೀಣ ಸಂಸ್ಕೃತಿಯ ಅವಿ ಭಾಜ್ಯ ಅಂಗ. ಪಾದಯಾತ್ರೆ ವೇಳೆ ಗ್ರಾಮೀಣ ಜನರು ನೃತ್ಯ, ಹಾಡುಗಳನ್ನು ಹಾಡಿದಾಗ, ಅವರ ಭಾವನೆಗಳಿಗೆ ಸ್ಪಂದಿಸಲು ಅವರೊಡನೆ ಹೆಜ್ಜೆ ಹಾಕಲಾಯಿತು. ಅದನ್ನು ತಪ್ಪು ಎನ್ನುವ ಬಿಜೆಪಿ ಮಂದಿಗೆ ಗ್ರಾಮೀಣ, ಕಲೆ ಮತ್ತು ಸಂಸ್ಕೃತಿ ಗೊತ್ತಿಲ್ಲ. ನಮ್ಮದು ರೆಸಾರ್ಟ್ ಸಂಸ್ಕೃತಿಯಲ್ಲ. ಜಾನಪದ ಸಂಸ್ಕೃತಿ. ಅದು ಅಶ್ಲೀಲವಲ್ಲ.

ಮಹಾತ್ಮಾಗಾಂಧೀಜಿ ಅವರು ಚಳವಳಿ ಮಾಡುತ್ತಿದ್ದ ವೇಳೆ ಭಜನೆ ಮಾಡುತ್ತಿದ್ದರು. ಅದು ಅಸಂಸ್ಕೃತಿಯೇ. ಬಿಜೆಪಿ ಮುಖಂಡರು ಗ್ರಾಮೀಣ ಸಂಸ್ಕೃತಿಯ ಬಗ್ಗೆ ಟೀಕೆ ಮಾಡುವ ಮೂಲಕ ಗ್ರಾಮೀಣ ಜನರಿಗೆ ಅವಮಾನ ಮಾಡಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದರು.

ಉತ್ಸಾಹದ ನಡಿಗೆ, ಅಡ್ಡಿಯಾಗದ ಮಳೆ

ಬೆಂಗಳೂರು, ಜು. 28: ಅಡ್ಡಿಯಾಗಬೇಕಿದ್ದ ಮಳೆ ಉತ್ಸಾಹ ತಂದಿತು, ಜಾನಪದ ಕಲಾತಂಡಗಳು ನಡಿಗೆಗೆ ಉತ್ಸಾಹ ತುಂಬಿದವು, ಧಣಿದ ಕಾರ್ಯಕರ್ತರಿಂದ ಊಟಕ್ಕೆ ಪರದಾಟ...,

ನಾಲ್ಕು ದಿನಗಳ ಹಿಂದೆ ಬಳ್ಳಾರಿಯತ್ತ ಮುಖಮಾಡಿ ಹೊರಟು 70 ಕಿ.ಮೀ. ಕ್ರಮಿಸಿ ತುಮಕೂರು ಸೇರಿದ ಕಾಂಗ್ರೆಸ್ ಪಾದಯಾತ್ರೆಯಲ್ಲಿ ಇಂದು ಹಲವು ವಿಶೇಷಗಳಿದ್ದವು. ಮಂಗಳಮುಖೀಯರು ಮೂದಲ ಬಾರಿಗೆ ಪಾದಯಾತ್ರೆಯಲ್ಲಿ ಎಂಟ್ರಿ ಪಡೆದು, ಭಾಗಿಯಾದರು. ಪಾದಯಾತ್ರೆಗೆ ಸಾಥ್ ನೀಡುವ ಜವಾಬ್ದಾರಿ ಇಂದು ಮಂಡ್ಯ ಮತ್ತು ರಾಮನಗರ ಜಿಲ್ಲಾ ಕಾಂಗ್ರೆಸ್­ಗಳ ಹೆಗಲೇರಿತ್ತು . ನಿರೀಕ್ಷೆಗೂ ಮೀರಿ ಈ ಎರಡು ಜಿಲ್ಲೆಗಳಿಂದ ಕಾರ್ಯಕರ್ತರು ಆಗಮಿಸಿದ್ದರು.

ಬಿಜೆಪಿ ನಾಯಕರು ಹಾಗೂ ಸಚಿವರ ಮೂದಲಿಕೆಗೂ ಅಂಜದೆ, ಇಂದೂ ಕಾಂಗ್ರೆಸ್ ನಾಯಕರು ಜಾನಪದ ತಂಡಗಳೊಂದಿಗೆ ಹಾಡಿ ಕುಣಿದರು. ದೇವರ ಹೊಸಳ್ಳಿಯಲ್ಲಿ ಸಿದ್ದರಾಮಯ್ಯ ಅವರು ನಂದಿ ಧ್ವಜವನ್ನು ತಲೆಮೇಲೆ ಒತ್ತುಕೊಂಡು ಕುಣಿದರು.

ರೇನ್ಕೋಟ್ ಧರಿಸಿಯೇ ನಟಿಯೂ ಆದ ಉಮಾಶ್ರೀ ಮಾರ್ಗದುದ್ದಕ್ಕೂ ಪಾದಯಾತ್ರೆಯ 'ಸ್ಟಾರ್ ಕ್ಯಾಂಪೈನರ್' ಆಗಿದ್ದರು.

ಉತ್ಸಾಹದೊಂದಿಗೆ ದಾಬಸ್ಪೇಟೆಯಿಂದ ಯಾತ್ರೆ ಮುಂದುವರಿಸಿದ ಪಾದಯಾತ್ರೆಯೊಂದಿಗೆ ಮಾರ್ಗಮಧ್ಯೆ ಕಾಂಗ್ರೆಸ್ ಕಾರ್ಯಕರ್ತರು, ಸಾರ್ವಜನಿಕರು ಸ್ಥಳೀಯ ಕಲಾವಿದರೊಂದಿಗೆ ಭಾಗಿಯಾದರು. ಡೊಳ್ಳು ಕುಣಿತದ ಅಬ್ಬರ ಮಳೆಯ ಅಬ್ಬರಕ್ಕೆ ಸವಾಲ್ ಹಾಕಿತ್ತು . ನಾಲ್ಕು ದಿನಗಳ ನಡಿಗೆಯ ನೋವಿನ ನಡುವೆಯೂ ತಮಟೆ ಸದ್ದಿಗೆ ನಾಯಕರ ಕಾಲು ತಾವಾಗಿಯೇ ಕುಣಿಯುತ್ತಿದ್ದವು. ಮಾರ್ಗಮಧ್ಯೆ ಸಿದ್ದರಾಮಯ್ಯ ಎರಡೆರಡು ಬಾರಿ ಷೂ ಬದಲಿಸಿದರು.

ಮಾರ್ಗಮಧ್ಯೆ ಕಾಮತ್ ಹೋಟೆಲ್­ನವರು ಪಾದಯಾತ್ರಿಗಳಿಗೆ ಉಚಿತವಾಗಿ ತಿಂಡಿ, ಕಾಫಿ, ಹಣ್ಣಿನ ರಸಗಳನ್ನು ವಿತರಿಸಿದರು. ನಡಿಗೆ ಗ್ರಾಮಗಳನ್ನು ತಲುಪುತ್ತಿದ್ದಂತೆ ಮಹಿಳೆಯರು ನಾಯಕರಿಗೆ ಎದುರಾಗಿ ಆರತಿ ಎತ್ತಿದ್ದರು. ದಾಬಸ್ಪೇಟೆಯಿಂದ ಹಿರೇಹಳ್ಳಿ ವರೆಗೆ ಅಬ್ಬರದ ಮಳೆಯಲ್ಲೇ ನಡಿಗೆ ಸಾಗಿತು. ಕಾರ್ಯಕರ್ತರು ಸ್ವಲ್ಪಮಟ್ಟಿಗೆ ಚದುರಿದರೂ, ಕೋಟು ಧರಿಸಿದ ನಾಯಕರು ಮುಂದುವರಿದರು.

ಸತತ ನಾಲ್ಕನೇ ದಿನದ ನಡಿಗೆಯಿಂದ ಬಳಲಿರುವ ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಅವರೂ ಕಾಲುನೋವಿನಿಂದ ಕುಂಟುತ್ತಲೇ ಸಾಗಿದರು. ಡಿ.ಕೆ. ಶಿವಕುಮಾರ್ ಕಣ್ಣುಗಳು ಕೆಂಪಗಾಗಿ ಜ್ವರದಲ್ಲಿದ್ದರು. ಆದರೆ, ಕಾರ್ಯಕರ್ತರ ಉತ್ಸಾಹ ನಾಯಕರಲ್ಲಿ ಆತ್ಮವಿತ್ವಾಸವನ್ನು ಹೆಚ್ಚಿಸಿತ್ತು .

ಇಂದು ದಿನವಿಡೀ ಮಂಗಳಮುಖೀಯರ ತಂಡ ಪಾದಯಾತ್ರೆ ಜತೆಗಿತ್ತು . ಮೋಟಮ್ಮ ಅವರು ತಮ್ಮದೇ ಮಹಿಳೆಯರ ತಂಡದೊಂದಿಗೆ ದಿಟ್ಟ ಹೆಜ್ಜೆ ಇಡುತ್ತಾ ಮುನ್ನಡೆಯುತ್ತಿದ್ದರು. ಉಮಾಶ್ರೀ ಅವರಂತೂ ಕುಣಿದು ಕುಪ್ಪಳಿಸುತ್ತಾ , ಸಾರ್ವಜನಿಕರತ್ತ ಕೈಬೀಸುತ್ತಾ ಗಮನ ಸೆಳೆಯುತ್ತಿದ್ದರು. ಪಂಚೆ, ಶರ್ಟಿಗೆ ಮೂರೆ ಹೋಗಿರುವ ಉಗ್ರಪ್ಪ ಅವರು, ಸಾಮಾನ್ಯ ಹಳ್ಳಿಗರಂತೆ ಪಂಚೆ ಮೇಲೆತ್ತಿ ಕಟ್ಟಿಕೊಂಡು ಉತ್ಸಾಹಭರಿತರಾಗಿ ಹೆಜ್ಜೆ ಹಾಕುತ್ತಿದ್ದರು.

ನಡಿಗೆಯ ಮಾರ್ಗದರ್ಶನದ ಜವಾಬ್ದಾರಿ ಹೊತ್ತಿದ್ದ ಎಚ್.ಎಂ. ರೇವಣ್ಣ ಅವರು, ಮಹಿಳೆಯರೂ ಮಳೆಯಲ್ಲೇ ನಡೆಯುತ್ತಿದ್ದಾರೆ. ಗಂಡಸರೆಲ್ಲಾ ಬನ್ನಿ ಎಂದು ಮಳೆಯಿಂದ ಪೆಟ್ರೋಲ್ ಬಂಕ್, ಅಂಗಡಿ ಮಳಿಗೆಗಳಡಿ ಆಶ್ರಯ ಪಡೆದಿದ್ದ ಜನರನ್ನು ಉತ್ತೇಜಿಸುತ್ತಿ ದ್ದರು. ಮಳೆಯಲ್ಲೇ ಯುವ ಕಾಂಗ್ರೆಸ್ಸಿಗರು ಬೈಕ್ ರಾಯಲಿಯನ್ನೂ ನಡೆಸಿದರು. ಎಚ್.ಕೆ. ಪಾಟೀಲ್, ಬಿ.ಎಲ್. ಶಂಕರ್ ಅವರಂತಹ ಕೆಲವು ನಾಯಕರು ಇಂದು ಪಾದಯಾತ್ರೆಗೆ ಗೈರುಹಾಜರಾದರು.

ಊಟಕ್ಕೆ ಪರದಾಟ:

ಪಾದಯಾತ್ರೆ ಆರಂಭದ ದಿನದಿಂದಲೂ ಊಟೋಪಚಾರ ವ್ಯವಸ್ಥೆ ಅಚ್ಚುಕಟ್ಟಾಗಿತ್ತು . ಆದರೆ, ಇಂದು ಮಧ್ಯಾಹ್ನ ಲೋಪ ವಾಯಿತು. ಮಳೆಯಲ್ಲಿ ನೆನೆದು ಹಸಿವಿನಿಂದ ಕಂಗೆಟ್ಟಿದ್ದ ಕಾರ್ಯಕರ್ತರು ಸಮರ್ಪಕವಾಗಿ ಊಟ ಸಿಗದೆ ಪರದಾಡಿದರು. ನಿಗದಿಗಿಂತ ಎರಡು ತಾಸು ವಿಳಂಬವಾಗಿ ಯಾತ್ರೆ ಎಚ್ಎಂಎಸ್ ಕಾಲೇಜು ತಲುಪಿತು. ಮಾಜಿ ಶಾಸಕ ಹಾಗೂ ತುಮಕೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶಫಿ ಅಹ್ಮದ್ ಅವರಿಗೆ ಸೇರಿದ ಈ ಕಾಲೇಜಿನಲ್ಲಿ ಊಟದ ಜವಾಬ್ದಾರಿಯನ್ನೂ ಅವರೇ ವಹಿಸಿಕೊಂಡಿದ್ದರು.

ರೆಡ್ಡಿಗಳ ಉದ್ಧಟತನಕ್ಕೆ ಇದು ಉತ್ತರ

ರೆಡ್ಡಿ ಸಹೋದರರ ಸವಾಲಿಗೆ ತೊಡೆತಟ್ಟಿ ಕಾಂಗ್ರೆಸ್ ಪದಾತಿದಳವನ್ನು ಬೆಂಗಳೂರಿನಿಂದ ಬಳ್ಳಾರಿಗೆ ಮುನ್ನಡೆಸುತ್ತಿರುವ ಮಹಾದಂಡನಾಯಕ ಸಿದ್ದರಾಮಯ್ಯ ಪಾದ ಬೆಳೆಸುತ್ತಿರುವೆಡೆ ಯೆಲ್ಲ ಮುತ್ತುತ್ತಿರುವ ಜನಜಂಗುಳಿಯೇ ಈ ಮಾತಿಗೆ ಸಾಕ್ಷಿ. ಇಂಥ ವಿಭಿನ್ನ ವ್ಯಕ್ತಿತ್ವದ ಸಿದ್ದ ರಾಮಯ್ಯ ಅವರೊಂದಿಗಿನ ಆಪ್ತ ಹಾಗೂ ಖಾಸಗಿ ವಿಚಾರಗಳ ಕುಶಲೋಪರಿಯಿದು.

ತುಮಕೂರು: ಗಡುಸು ಧ್ವನಿ, ಒರಟು ನಡೆ, ನೇರ ನುಡಿ. ಇಂದಿನ ‘ಸೊಫೆಸ್ಟಿಕೇಷನ್’ ರಾಜಕಾರಣ ದಿಂದ ಗಾವುದ ದೂರವಿರುವ ವ್ಯಕ್ತಿತ್ವ. ಮೇಲು ನೋಟಕ್ಕೆ ಹುಂಬ ಹಳ್ಳಿಗನಂತೆ ಕಾಣುವ ಆದರೆ ಮಾತಿಗೆ ನಿಂತರೆ ಯಾವುದೇ ವಿಷಯದ ಬಗ್ಗೆ ಅಂಥೆಟಿಕ್ ಎನಿಸುವಂತೆ ಮಾತನಾಡುವ ಸಾಮ ರ್ಥ್ಯವಿರುವ ರಾಜಕಾರಣಿ ಯಾರು ಎಂಬ ಪ್ರಶ್ನೆಗೆ ತಕ್ಷಣ ದೊರೆಯುವ ಉತ್ತರ ಸಿದ್ದರಾಮಯ್ಯ.

ಒರಟು ರಾಜಕಾರಣಿ ಎಂದೇ ಗುರುತಿಸಲಾಗುವ ಸಿದ್ದರಾಮಯ್ಯ, ಅವರ ಆಪ್ತ ಗೆಳೆಯ ಸಿ.ಎಂ. ಇಬ್ರಾಹಿಂ ಅವರ ಪ್ರಕಾರ ಸಿದ್ದು ‘ಹೋರಿ ಟಗರು’ ಟಗರಿನ ಒರಟುತನವೇ ಅವರಿಗೆ ಆಸ್ತಿ. ಮೆಚ್ಚುವ ಜನರ ಪಾಲಿಗೆ ಅದೇ ಪ್ರಿಯ.

ಹೀಗಾಗಿಯೇ ಅವರು ಕರುನಾಡಿನ ರಾಜಕಾರಣದ ಅಂಗಳದಲ್ಲಿ ಉಳಿದಿರುವ ಕೆಲವೇ ಕ್ರೌಡ್ ಪುಲ್ಲರ್ ನಾಯಕರ ಪೈಕಿ ಅಗ್ರಗಣ್ಯ.

ರೆಡ್ಡಿ ಸಹೋದರರ ಸವಾಲಿಗೆ ತೊಡೆತಟ್ಟಿ ಕಾಂಗ್ರೆಸ್ ಪದಾತಿದಳವನ್ನು ಬೆಂಗಳೂರಿನಿಂದ ಬಳ್ಳಾರಿಗೆ ಮುನ್ನಡೆಸುತ್ತಿರುವ ಮಹಾದಂಡನಾಯಕ ಸಿದ್ದರಾಮಯ್ಯ ಪಾದ ಬೆಳೆಸುತ್ತಿರುವೆಡೆ ಯೆಲ್ಲ ಮುತ್ತುತ್ತಿರುವ ಜನಜಂಗುಳಿಯೇ ಈ ಮಾತಿಗೆ ಸಾಕ್ಷಿ. ಇಂಥ ವಿಭಿನ್ನ ವ್ಯಕ್ತಿತ್ವದ ಸಿದ್ದರಾಮ ಯ್ಯ ಅವರೊಂದಿಗಿನ ಆಪ್ತ ಹಾಗೂ ಖಾಸಗಿ ವಿಚಾರಗಳ ಕುಶಲೋಪರಿಯಿದು.

ಸಿದ್ದರಾಮಯ್ಯ ಅವರು ಜನರಿಗೆ ಏಕೆ ಇಷ್ಟವಾಗುತ್ತಾರೆ?

-ಜನರನ್ನೇ ಕೇಳಬೇಕು. ನನಗೆ ಅನಿಸುತ್ತೆ ಇದ್ದುದನ್ನು ಇದ್ದ ಹಾಗೇ ಮಾತನಾಡುತ್ತೇನೆ. ಮಾತ ನಾಡಿದಂತೆ ನಡೆದುಕೊಳ್ಳುತ್ತೇನೆ ಎಂಬ ಕಾರಣಕ್ಕೆ ಇರಬೇಕು.

63ರ ವಯಸ್ಸಿನಲ್ಲಿ 320 ಕಿ.ಮೀ. ಪಾದಯಾತ್ರೆ ಹೊರಟಿರುವಿರಿ, ಈ ಯಾತ್ರೆ ನಿಮಗೆ ಎಷ್ಟು ಮುಖ್ಯ?

-ಇದರಲ್ಲಿ ವ್ಯೆಯಕ್ತಿಕವಾಗಿ ನನಗೆ ಮುಖ್ಯವಾದುದು ಏನೂ ಇಲ್ಲ. ಆದರೆ, ಈ ರೆಡ್ಡಿಗಳು ಪ್ರಜಾ ಪ್ರಭುತ್ವಕ್ಕೆ ವಿರುದ್ಧವಾಗಿ ವರ್ತಿಸುತ್ತಿರುವುದು ನನಗೆ ಸಂಡೂರಿಗೆ ಹೋದಾಗ ಗೊತ್ತಾಯಿತು. ನನ್ನನ್ನು ಒಬ್ಬ ಪೊಲೀಸ್ ಕಾನ್ಸ್‌ಟೇಬಲ್ ಕೂಡ ಬಂದು ನೋಡದಂತೆ ಮಾಡಿಬಿಟ್ಟಿದ್ದರು. ಆಗ ಪಾದಯಾತ್ರೆ ಮಾಡಬೇಕು ಅನಿಸಿತ್ತು. ಇದಾದ ಮೇಲೂ ಅವರು ನನ್ನ ಬಗ್ಗೆ ಉದ್ಧಟತನದಿಂದ ಕೆಟ್ಟದಾಗಿ ಮಾತನಾಡಿದರು. ನಂತರ ಸವಾಲು ಹಾಕಿದರು. ಹೀಗೆ ಒಂದಕ್ಕೊಂದು ಬೆಳೆಯುತ್ತಾ ಹೋಗಿ ಈ ನಿರ್ಧಾರಕ್ಕೆ ಬರುವಂತಾಯಿತೇ ಹೊರತು ವೈಯಕ್ತಿಕ ಲಾಭಕ್ಕೋಸ್ಕರ ಈ ಹೋರಾ ಟ ನಡೆಯುತ್ತಿಲ್ಲ.

ಇಷ್ಟು ದೂರದ ಯಾತ್ರೆ, ದೇಹ ಸಾಥ್ ನೀಡುತ್ತಿದೆಯೇ?

-ನಾನು ‘ಡಯಾಬಿಟಿಕ್ ಪೇಶೆಂಟ್. ಇದರಿಂದಾಗಿ ಮಾಂಸಖಂಡಗಳು ವೀಕ್ ಆಗಿರುತ್ತವೆ. ನರ ಗಳೂ ದುರ್ಬಲವಾಗಿರುತ್ತವೆ. ಅಲ್ಲದೆ, ಹಿಂದೆ ಶಾಸಕರ ದಿನಾಚರಣೆ ವೇಳೆ ಕಬ್ಬಡಿ ಆಡುವಾಗ ಕಾಲಿಗೆ ಗಾಯ ಆಗಿತ್ತು. ಅದು ತುಸುನೋವು ಕೊಡುತ್ತೆ. ಆದರೆ, ಇದರಿಂದ ನಡೆಯಲು ಅಂಥ ಸಮಸ್ಯೆಯೇನೂ ಆಗುತ್ತಿಲ್ಲ.

ಪಾದಯಾತ್ರೆಯಿಂದಾಗಿ ದಿನಕ್ಕೊಂದು ಕಡೆ ಮಲಗುತ್ತಿದ್ದೀರಿ, ಸ್ಥಳ ಬದಲಾವಣೆ ನಿದ್ರೆಗೆ ತೊಂದರೆ ಕೊಡುತ್ತಿಲ್ಲವೇ?

-ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ ಬರುತ್ತೆ. ನಾನು ಯಾವುದರ ಬಗ್ಗೆಯೂ ಅಷ್ಟಾಗಿ ಚಿಂತಿ ಸುವುದಿಲ್ಲ. ಒಂದು ಬಾರಿ ನಿರ್ಧಾರ ಕೈಗೊಂಡರೆ ಅದನ್ನು ಮಾಡಿಯೇ ತೀರುತ್ತೇನೆ. ಪರಿಣಾಮ ಲಾಭವೋ ಅಥವಾ ನಷ್ಟ ತರುವುದೋ ಎಂಬುದನ್ನೆಲ್ಲಾ ಮನಸ್ಸಿಗೆ ಹಚ್ಚಿಕೊಳ್ಳುವುದಿಲ್ಲ. ಈ ಮನಸ್ಥಿತಿ ಇರೋರಿಗೆ ಎಲ್ಲಿ ಮಲಗಿದರೂ ನಿದ್ದೆ ಬರುತ್ತೆ.

ಪಾದಯಾತ್ರೆ ಬಗ್ಗೆ ಹೈಕಮಾಂಡ್ (ಅರ್ಥಾತ್ ಪತ್ನಿ) ಸಹಕಾರ ದೊರೆತಿದೆಯೇ?

-ನನ್ನ ರಾಜಕಾರಣದ ನಿರ್ಧಾರಗಳ ಬಗ್ಗೆ ಪತ್ನಿ ಅಥವಾ ಮಕ್ಕಳು ಯಾವತ್ತೂ ಆಕ್ಷೇಪಿಸಿಲ್ಲ. ಈ ವಿಚಾರದಲ್ಲಿ ನಾನು ತುಂಬಾ, ತುಂಬಾ ಅದೃಷ್ಟವಂತ. ಮನೆ ವಾರ್ತೆ ವಿಚಾರದಲ್ಲಿ ನನ್ನ ಹೆಂಡತಿ ಮಾತು ನಡೆಯತ್ತೆ. ಆದರೆ, ರಾಜಕೀಯವಾಗಿ ನಾನು ಏನು ಮಾಡಿದರೂ ಹೆಂಡತಿ ಮತ್ತು ಮಕ್ಕಳು ಸಂಪೂರ್ಣ ಸಹಕಾರ ನೀಡುತ್ತಾರೆ.

ಪಾದಯಾತ್ರೆಯಲ್ಲಿ ಬರೇ ಪುಳ್‌ಚಾರ್ ಮಾತ್ರ ಅಂತೆ, 16 ದಿನ ಮಾಂಸಹಾರ ಮುಟ್ಟಂಗಿಲ್ವಲ್ಲ?

-ನಾನು ಒಂದು ಕಾಲದಲ್ಲಿ ಇದ್ದಷ್ಟು ಮಾಂಸಹಾರ ಪ್ರಿಯನಾಗಿ ಇಂದು ಉಳಿದಿಲ್ಲ. ಕುರಿಮಾಂಸ ತಿನ್ನುವುದು ಬಿಟ್ಟು ಐದಾರು ವರ್ಷವಾಗಿದೆ. ಆದರೆ, ಈಗಲೂ ವಾರಕ್ಕೊಮ್ಮೆ ನಾಟಿ ಕೋಳಿ ತಿನ್ನುತ್ತೇನೆ. ಇಂತಹ ವಿಚಾರಗಳಲ್ಲಿ ನನಗೆ ಅತಿ ಎನಿಸುವಷ್ಟು ಆತ್ಮಬಲವಿದೆ. ಏನೂ ಬೇಕಾ ದರೂ ಬಿಡಬಲ್ಲೆ ಏನೂ ಬೇಕಾದರೂ ಮತ್ತೆ ಸ್ಟಾರ್ಟ್ ಮಾಡಬಲ್ಲೆ. ಇಂತಹ ಆತ್ಮಬಲ ಇದ್ದುದರಿಂ ದಲೇ ನಾನು ಸಿಗರೇಟ್ ಬಿಡಲು ಸಾಧ್ಯವಾಗಿದ್ದು.

ಹೌದಾ, ಅದನ್ನು ಹೇಗೆ ಬಿಟ್ರಿ?

-೧೯೮೭ರಲ್ಲಿ ಸಿಗರೇಟ್ ಬಿಟ್ಬಿಟ್ಟೆ. ಒಂದು ದಿನ ರಾತ್ರಿ ಒಂದಾದ ಮೇಲೆ ಒಂದರಂತೆ ಸಿಕ್ಕಾಪಟ್ಟೆ ಸಿಗರೇಟ್ ಸೇದಿದೆ. ಯಾಕೋ ಇಸ್ಸಿ ಎನಿಸಿತು. ಬಿಡಬೇಕು ಅಂತ ಗಟ್ಟಿ ನಿರ್ಧಾರ ಮಾಡಿ ಬಿಟ್ಟವನು ಇವತ್ತಿಗೂ ಮುಟ್ಟಿಲ್ಲ.

ಪಾದಯಾತ್ರೆಯಂತಹ ಹೋರಾಟದ ಮುಂಚೂಣಿಯಲ್ಲಿದ್ದವರು ಅನಂತರ ಉನ್ನತ ಸ್ಥಾನಕ್ಕೆ ಮುಟ್ಟಿದ ಉದಾಹರಣೆ ನಮ್ಮ ನಾಡಿನಲ್ಲಿದೆ. ಈ ಯಾತ್ರೆ ನಂತರ ಸಿದ್ದರಾಮ ಯ್ಯ ಯಾವ ಸ್ಥಾನಕ್ಕೆ ಮುಟ್ಟಬಹುದು?

-ಹೋರಾಟ ನನಗೆ ಹೊಸದಲ್ಲ. ತುರ್ತು ಪರಿಸ್ಥಿತಿ ವೇಳೆ ಹೋರಾಟ ಮಾಡಿದ್ದೆವು. ರೈತ ಸಂಘಟ ನೆ ಹೋರಾಟಗಳಲ್ಲಿ ಇದ್ದೆ. ಆದರೆ, ಈ ಪಾದಯಾತ್ರೆ ಸರ್ಕಾರ... (ಗಣಿ ಲೂಟಿ ರಾಜಕಾರಣದ ಬಗ್ಗೆ ಚಿಕ್ಕದೊಂದು ಭಾಷಣ)

ಹೋಗ್ಲಿ, ಪಾದಯಾತ್ರೆ 16 ದಿನ ಇರತ್ತೆ ಮಧ್ಯದಲ್ಲಿ ಮನೆಗೆ ಹೋಗಬೇಕು ಅನಿಸಲ್ವ?

-ಅನಿಸಿದರೂ ಹೋಗಲ್ಲ. ಪಾದಯಾತ್ರೆ ಮುಗಿಯುವವರೆಗೂ ನಾನು ಇದರಲ್ಲೇ ಇರುತ್ತೇನೆ. ನನ್ನ ಗೆಳೆಯರು, ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ತಮ್ಮ ಮನೆಗೆ ಉಳಿದುಕೊಳ್ಳಲು ಬನ್ನಿ ಎಂದು ಒತ್ತಾಯಿಸುತ್ತಾರೆ. ಆದರೆ, ಇಷ್ಟೊಂದು ನಮ್ಮ ಮಾತಿಗೆ ಗೌರವಕೊಟ್ಟು ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಇವರನ್ನು ಬಿಟ್ಟು ಬೇರೆ ಕಡೆ ಹೋಗೋದು ಸರಿಯಲ್ಲ. ಹೀಗಾಗಿಯೇ 16 ದಿನ ಮನೆಕಡೆ ತಲೆ ಹಾಕಲ್ಲ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-07-29 00:00:00

Tell a Friend
ಇತರ ಸಂಭಂದಪಟ್ಟ ವರದಿಗಳು
»ಕಾಂಗ್ರೆಸ್ ಹೇಳಿದಂತೆ ಕುಣಿಯಲು ಆಗಲ್ಲ: ಯಡಿಯೂರಪ್ಪ
»ಬೆ೦ಗಳೂರು: ಕಾ೦ಗ್ರೆಸ್ ನ ಪಾದಯಾತ್ರೆಯ ಪ್ರತಿಯಾತ್ರೆಯಾಗಿ ಇಡೀ ರಾಜ್ಯ ಸುತ್ತಲು ಬಿ‌ಎಸ್‌ವೈ ಚಿಂತನೆ
»ತುಮಕೂರು: ರಾಜಿ ಪ್ರಶ್ನೆಯೇ ಇಲ್ಲ: ಸಿದ್ದು : ಸಿಬಿ‌ಐ ತನಿಖೆಯಾದ್ರೆ ಮುಖ್ಯಮಂತ್ರಿ ಜೈಲಿಗೆ ಗ್ಯಾರಂಟಿ : ರೆಡ್ಡೀಗಳ ಉದ್ದಟತನಕ್ಕೆ ಇದು ಸರಿಯಾದ ಉತ್ತರ
»ಬಳ್ಳಾರಿಗೆ ಆದ ಅವಮಾನ-ತಲೆ ಬೋಳಿಸಿಕೊಂಡ ಶ್ರೀರಾಮುಲು!: ಕಾಲಿಗೆ ಚಪ್ಪಲಿ ಹಾಕಲಾರೆ, ಕಪ್ಪು ಬಟ್ಟೆ ಧರಿಸುವೆ...: ತಾಯಿಯ ಆಶೀರ್ವಾದ ಇರುವವರೆಗೆ ರಾಜಿನಾಮೆ ಕೊಡಲಾರೆ
»ಬಳ್ಳಾರಿ: ಅಸಮಾಧಾನ: ಸಚಿವ ಸ್ಥಾನಕ್ಕೆ ಶ್ರೀರಾಮುಲು ರಾಜೀನಾಮೆ?
»ಪಾದಯಾತ್ರೆ: ಡಾಬಸ್‌ಪೇಟೆಯ ಅರಳಿಕಟ್ಟೆಯಲ್ಲಿ ಪ೦ಚಾಯ್ತಿ : ಜನಾದೇಶಕ್ಕೆ ಬನ್ನಿ: ಯಡಿಯೂರಪ್ಪಗೆ ಸಿದ್ದು ಪಂಥಾಹ್ವಾನ
»‘ನಾಡ ರಕ್ಷಣಾ ನಡಿಗೆ’: 3ನೇ ದಿನವೂ ಕುಗ್ಗದ ಉತ್ಸಾಹ; ಜನಬೆಂಬಲದ ಹಿಗ್ಗಿನಲ್ಲಿ ಮರೆಯಾದ ‘ನೋವು’
»ಕ್ರಮ ಸಲ್ಲ: ರೆಡ್ಡಿ ಸಹೋದರು ಹೈಕೋರ್ಟ್‌ಗೆ - ಚುನಾವಣಾ ಆಯೋಗಕ್ಕೆ ಆದೇಶಿಸಲು ಮನವಿ
»ಅಕ್ರಮ ಗಣಿಗಾರಿಕೆ: ಕಬ್ಬಿಣ ಅದಿರು ರಪ್ತು ಪರ್ಮಿಟ್­ಗೂ ಕತ್ತರಿ; ಬುಧವಾರ ಮಹತ್ವದ ಆದೇಶ
»ಬೇಗೂರು: ಪಾದಯಾತ್ರೆಗೆ ಅಭೂತಪೂರ್ವ ಜನ ಬೆ೦ಬಲ: ಎರಡೇ ದಿನಗಳಲ್ಲಿ ಸರ್ಕಾರದ ಬಗ್ಗೆ ತೀವ್ರ ಅಸಮಧಾನ: ಕೇಳುಗರಿಗೆ ರ೦ಜನೆಯನ್ನು ನೀಡೀದ ಸಿದ್ದು ಅವರ ವೀರಗಾಸೆ, ಸುಬ್ಬಾ ಭಟ್ಟರ ಹಾಸ್ಯ
»ನೆಲಮ೦ಗಲ: ಅದಿರು ಕಣ್ಮರೆ: ಸಿ‌ಎಂ ಕೈ: ಬಿ‌ಎಸ್‌ವೈ, ರೆಡ್ಡಿಗಳೇ ನೇಣುಗಂಬ ಏರಲು ಸಿದ್ಧರಾಗಿ: ಸಿದ್ದು
»ಕಾಂಗ್ರೆಸ್ ಪಾದಯಾತ್ರೆ ವಿಫಲ: ಮೊದ್ಲು ಕಬ್ಬಿಣ ಅದಿರು ರಫ್ತು ನಿಷೇಧಿಸ್ಲಿ: ಕ್ರಿಮಿನಲ್ ಹಿನ್ನೆಲೆಯ ರೆಡ್ಡಿ ಬ್ರದರ್ಸ್ ಅಗತ್ಯವೇ?: - ಎಚ್‌ಡಿಕೆ
»ಟಾರ್ಗೆಟ್ ಬಳ್ಳಾರಿ ಪಾದಯಾತ್ರೆ ಎರಡನೇ ದಿನಕ್ಕೆ: ಬಿಸಿಲ ಝಳ-ಉತ್ಸಾಹಿ ಕಾರ್ಯಕರ್ತರು, ಬಸವಳಿದ ನೇತಾರರು; ಸಿದ್ದರಾಮಯ್ಯಗೆ ಕಾಲುನೋವು, ಡಿಕೆಶಿಗೆ ಜ್ವರ : ಇವರ ಕಚ್ಚಾಟದಲ್ಲಿ ಹುತಾತ್ಮರನ್ನು ಮರೆತು ಬಿಟ್ಟರೇ?
»ಅಕ್ರಮ ಗಣಿಗಾರಿಕೆ: ಕಾಂಗ್ರೆಸ್ ನಾಡರಕ್ಷಣೆ ನಡಿಗೆಗೆ ಚಾಲನೆ; ಕುಸಿದು ಬಿದ್ದ ಕಾರ್ಯಕರ್ತ ಸಾವು | ಕಾಂಗ್ರೆಸ್ ಪಕ್ಷದೊಳಗಿನ ಪೈಪೋಟಿ ಯಾತ್ರೆ: ಯಡ್ಡಿ; ಕಾಂಗ್ರೆಸಿಗರ ಅಂತಿಮ ಯಾತ್ರೆ: ರೆಡ್ಡಿ
»ಮದ್ದೂರು: ಕಾಂಗ್ರೆಸ್ ಪಾದಯಾತ್ರೆಗೆ ಪೊಲೀಸ್ ರಕ್ಷಣೆ; ವಿರೋಧ ಪಕ್ಷಗಳ ಗದ್ದಲದ ನಡುವೆ ಅಭಿವೃದ್ಧಿ ಕಾರ್ಯ: ಪೊಲೀಸ್ ಇಲಾಖೆಗೆ ಹೆಚ್ಚುವರಿಯಾಗಿ 253 ಕೋಟಿ ಬಿಡುಗಡೆ: ವಿ.ಎಸ್.ಆಚಾರ್ಯ
»ಬೆ೦ಗಳೂರು: ರಾಜ್ಯದಲ್ಲಿ ಯಾತ್ರಾಯುಗ: ಈಗ ಕಾಂಗ್ರೆಸ್ ನಡಿಗೆ ; ಬೆನ್ನಲ್ಲೇ ಕಮಲ ಮೇಳ : ಜತೆಗೆ ಜೆಡಿ‌ಎಸ್ ಆಂದೋಲನ : ಕೈ ‘ನಾಡ ರಕ್ಷಣಾ ನಡಿಗೆ’ ಇಂದು ಆರಂಭ
»ಪಾದಯಾತ್ರೆಗೆ ಸಿಎಂ ನಕಾರ; ರೆಡ್ಡಿ ಬ್ರದರ್ಸ್ ಗರಂ
»

ಪ್ರತಿಸ್ಪಂದನ
sreenivasa, India
2010-07-29
ಶ್ರೀಯುತ ಯಡಿಯೂರಪ್ಪನವರೇ, ನೀವು ಎಂದೂ ಕಾಂಗ್ರೆಸ್ಸಿಗರ ಒತ್ತಾಸೆಗೆ ಮಣಿಯಬೇಡಿ. ಏನೇ ಆದರೂ ಸಿ.ಬಿ.ಐ ತನಿಖೆಗೆ ಕೊಡಬೇಡಿ. ಅವರು ಎಲ್ಲಿಯವರೆಗೆ ಪಾದಯಾತ್ರೆ ಮಾಡುತ್ತಾರೆ ಎಂದು ನೋಡಿಯೇ ಬಿಡುವ. ಜನ ಬೇಬಲ ಖಂಡಿತಾ ನಿಮಗಿದೆ. ನೀವು ಈಗ ರಾಜ್ಯದಲ್ಲಿ ಮಾಡುತ್ತಿರುವ ಬೆಳವಣಿಗೆ ಕಾರ್ಯಕ್ರಮಗಳು ಕಾಂಗ್ರೆಸ್ಸಿಗೆ ಹಿತವೆನಿಸದೆ, ಸಹಿಸಲಾಗದೆ ಹೇಗಾದರೂ ಮಾಡಿ ಬಿ.ಜೆ.ಪಿ ಸರಕಾರವನ್ನು ಉರುಳಿಸುವುದೇ ಅವರ ಉದ್ದೇಶ. ಅದಕ್ಕೆ ಎಡೆ ಮಾಡಿಕೊಡದೆ ನೀವು ರೆಡ್ಡಿ ಸಹೋದರರು ಒಂದಾಗಿ ಆಡಳಿತ ಮಾಡಿದರೆ ಜನತೆಗೆ ಖುಷಿ.
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರ್ನಾಟಕ]

»ಕನ್ನಡ ಭಾಷೆ, ಸಾಹಿತ್ಯ ಪರಂಪರೆಗೆ ಐತಿಹಾಸಿಕ ಹಿನ್ನೆಲೆಗಳಿವೆ: ಮೂಡಿಗೆರೆ: 3ನೆ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪದಲ್ಲಿ ಸಮ್ಮೇಳನಾಧ್ಯಕ್ಷ ಡಿ.ಬಿ.ಸುಬ್ಬೇಗೌಡ
»ಶಂಕಿತ ಮಂಗನ ಕಾಯಿಲೆ ಪ್ರಕರಣ ಪತ್ತೆ: ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ವ್ಯಕ್ತಿ ದಾಖಲು; ಡಿಎಚ್‌ಓ-ಜಿ.ಪಂ. ಸದಸ್ಯರ ಭೇಟಿ
»ಗುಜರಿ ಅಂಗಡಿಯಲ್ಲಿ ಗಿಲೆಟಿನ್ ಸ್ಫೋಟ: ಮಾಲಕನ ಸಾವು
»ಸರಕಾರಕ್ಕೆ ಆರು ತಿಂಗಳ ಆನಂದ: ಭ್ರಷ್ಟಾಚಾರ ಮುಕ್ತ ಆಡಳಿತವೇ ನನ್ನ ಗುರಿ: ಸದಾನಂದ ಗೌಡ
»ಎತ್ತಿನಹೊಳೆ ಯೋಜನೆಯಿಂದ ಪರಮಶಿವಯ್ಯ ವರದಿಗೆ ಹಿನ್ನಡೆಯಾದರೆ ಹೋರಾಟ: ಸಂಸದ ಬಸವರಾಜು ಎಚ್ಚರಿಕೆ
»ಹಾಸ್ಯನಟನ ಅಂತಿಮಯಾತ್ರೆಯುದ್ದಕ್ಕೂ ಕಣ್ಣೀರು: ಹುಟ್ಟೂರು ಕೊಡಿಗೆಹಳ್ಳಿಯಲ್ಲಿ ಕರಿಬಸವಯ್ಯ ಅಂತ್ಯ ಕ್ರಿಯೆ
»ಸ್ಥಾನ ನೀಡಿ, ಇಲ್ಲವೇ ಪರಿಣಾಮ ಎದುರಿಸಿ: ಹೈಕಮಾಂಡ್‌ಗೆ ಬಿಎಸ್‌ವೈ ಎಚ್ಚರಿಕೆ
»ಬಿಎಸ್‌ವೈ ಕುಟುಂಬವನ್ನು ಮತ್ತೆ ಬೆಂಬತ್ತಿದ ಸಮನ್ಸ್: ಲೋಕಾಯುಕ್ತ ಕೋರ್ಟ್ ಆದೇಶ, ಮಾ.3ಕ್ಕೆ ಮುಂದಿನ ವಿಚಾರಣೆ
»ಶಿಕ್ಷಕರಿಗೆ ಅನುದಾನ ನೀಡದಿದ್ದರೆ ಸತ್ಯಾಗ್ರಹ: ಬಸವರಾಜ್
»ನಾನು ಘೋಷಣೆ ಮಾಡುವ ಮುಖ್ಯಮಂತ್ರಿಯಲ್ಲ: ಸದಾನಂದಗೌಡ
»ಇಲ್ರಿ.. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿಲ್ಲ: ಯಡ್ಡಿ
»`ಐಷಾರಾಮಿ ಜೀವನ: ನಾಗರಿಕತೆ ನಾಶ’: ಸುರೇಶ್ ಹೆಬ್ಳೀಕರ್
»ಸುವರ್ಣ ರಂಗ ಸಮ್ಮಾನ್ ಪ್ರಶಸ್ತಿ: ಮಾಹಿತಿ ಆಹ್ವಾನ
»ಒಳಮೀಸಲಾತಿ ವಿರುದ್ಧ ಒಗ್ಗಟ್ಟು:ಬಿಜೆಪಿ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶ(Updated)
»ಮಾಡು ಇಲ್ಲವೇ ಮಡಿ ಸ್ಥಿತಿ: ಯಡಿಯೂರಪ್ಪ ದಿಢೀರ್ ದೆಹಲಿಗೆ ದೌಡು
»ಜೈಲು ಗೋಡೆ ಎರಡು ಕೋಟಿ ನುಂಗಿತ್ತಾ..!
»ಗೂಳಿ ಹೊರಕ್ಕೆ: ಕಳಂಕಿತ ಸಭಾಧ್ಯಕ್ಷರೇ ಎಂದಿದ್ದಕ್ಕೆ ಸದನದಿಂದ ಒಂದು ದಿನ ಅಮಾನತು (Updated)
»ಮಡೆಸ್ನಾನ ನಿಷೇಧಕ್ಕೆ ಯತ್ನ: ಡಾ.ಆಚಾರ್ಯ
»ಹೈಕಮಾಂಡ್ ತುರ್ತು ಬುಲಾವ್: ದಿಲ್ಲಿಗೆ ದೌಡಾಯಿಸಿದ ಬಿಎಸ್‌ವೈ
»ಶಾಲಾ ಮಕ್ಕಳ ಮೇಲೆ ಲಾಠಿ ಪ್ರಹಾರ: ಬಜ್ಪೆ ಇನ್ಸ್‌ಪೆಕ್ಟರ್ ಮೇಲೆ ಕ್ರಮದ ಭರವಸೆ
»ಹಿಂದುಳಿದವರ ಅಭಿವೃದ್ಧಿಗೆ ಬಜೆಟ್‌ನಲ್ಲಿ ಸಾವಿರ ಕೋಟಿ ರೂ. ಮೀಸಲು: ಸಿಎಂ
»ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ: ತಾಯಿ-ಮಗು ಮೃತ್ಯು
»ವಿರೋಧದ ಮಧ್ಯೆ ಧಾರ್ಮಿಕ ದತ್ತಿ ವಿಧೇಯಕ ಅಂಗೀಕಾರ: ಮಹಿಳಾ ವಿವಿಗೆ ಎಲ್ಲ ಜಿಲ್ಲೆಗಳನ್ನು ಸೇರಿಸಿ: ಮಾತಿನ ಚಕಮಕಿ
»ಭದ್ರಾ, ಕುದುರೆಮುಖ ಆದಿವಾಸಿಗಳನ್ನು ಒಕ್ಕಲೆಬ್ಬಿಸುವುದಿಲ್ಲ: ಸಿಎಂ
»ಕೆಜಿಎಫ್ ತಾಲೂಕು ಕೇಂದ್ರಕ್ಕೆ ಆಗ್ರಹ: ಬಂದ್ ಯಶಸ್ವಿ
»ಕಳಪೆ ಬಿತ್ತನೆ ಬೀಜ ಪೂರೈಕೆ: ಕೈಗೆ ಬಂದ ತುತ್ತು ಬಾಯಿಗಿಲ್ಲ
»ರಾಜ್ಯದ ಆರ್ಥಿಕ ಸ್ಥಿತಿಯ ‘ಶ್ವೇತಪತ್ರ’ಕ್ಕೆ ಡಾ.ಜಿ.ಪರಮೇಶ್ವರ್ ಆಗ್ರಹ
»ಸುಬ್ರಹ್ಮಣ್ಯ ಸ್ವಾಮಿಗೆ ಡಾಕ್ಟರೇಟ್
»ಬಯಲುಸೀಮೆ ಆರು ಜಿಲ್ಲೆಗಳಿಗೆ ಕುಡಿಯುವ ನೀರು; ತಿಂಗಳಲ್ಲಿ ಎತ್ತಿನಹೊಳೆ ನಿರ್ಧಾರ. ನೇತ್ರಾವತಿ ತಿರುವು ಇಲ್ಲ..ಹೆಚ್ಚಿನ ನೀರನ್ನು ಬಳಸಿಕೊಳ್ಳುವ ಯೋಜನೆ
»`ಕೆನೆಪದರ' ಮಿತಿ ರೂ 3.5 ಲಕ್ಷಕ್ಕೆ ಹೆಚ್ಚಳ: ರಾಜ್ಯ ಸರ್ಕಾರ ತೀರ್ಮಾನ
»ಹಂಪಿ:ನಿಧಿ ಶೋಧ, ವಿಗ್ರಹಕ್ಕೆ ಕುತ್ತು
»ಡಿನೋಟಿಫಿಕೇಶನ್: ಮತ್ತೆ ಬಂಧನದ ಭೀತಿಯತ್ತ ಬಿ‌ಎಸ್‌ವೈ
»ಬೆಂಗಳೂರಿನಲ್ಲಿ ಸೀಟ್ ಬೆಲ್ಟ್ ನಿಯಮ ಜಾರಿ ...
»ಮೂಡಿಗೆರೆ ತಾಲೂಕು ಮೂರನೆ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ: ಆಡಳಿತ ಭಾಷೆಯಾಗಿ ಕನ್ನಡ ಜಾರಿಗೊಳಿಸುವಲ್ಲಿ ಸರಕಾರ ವಿಫಲ; ಸಮ್ಮೇಳನಾಧ್ಯಕ್ಷ ಡಿ.ಬಿ.ಸುಬ್ಬೇಗೌಡ
»ಅಕ್ರಮ ನಿವೇಶನ ಆರೋಪ: ಉ.ಲೋಕಾಯುಕ್ತರ ರಾಜೀನಾಮೆಗೆ ನಿವೃತ್ತ ನ್ಯಾ. ಸಲ್ಡಾನಾ ಆಗ್ರಹ
»ಗಣಿ ವರದಿ ಚರ್ಚೆಗೆ ಪಟ್ಟು: ಕೊನೆಗೂ ಮಣಿದ ಸ್ಪೀಕರ್
» ‘ಸ್ಪೀಕರ್’ ಗದ್ದಲ: ಪಕ್ಷೇತರರಿಂದ ಸಭಾತ್ಯಾಗ; ಮೇಲ್ಮನೆಯಲ್ಲಿ ಎರಡನೆ ದಿನವೂ ಪ್ರತಿಧ್ವನಿಸಿದ ‘ಲೋಕ’ ಗದ್ದಲ
»ಸಿದ್ದಗಂಗಾ ಶ್ರೀಗಳು ಸಾಯಿಬಾಬಾರ ಪ್ರತಿರೂಪ: ಬಿಎಸ್‌ವೈ
»ಆರೆಸ್ಸೆಸ್ ಕಪಿಮುಷ್ಟಿಯಲ್ಲಿ ರಾಜ್ಯ ಸರಕಾರ; ಆರೆಸ್ಸೆಸ್ ದೇಶದ್ರೋಹಿ ಸಂಘಟನೆ: ಸಂಸದ ವಿಶ್ವನಾಥ್ ಆತಂಕ
»ಕಳೆದ ಬಜೆಟ್ ಯೋಜನೆಗಳು ಇನ್ನೂ ಅನುಷ್ಠಾನಗೊಂಡಿಲ್ಲ: ಕುವಾರಸ್ವಾಮಿ
»ದಲಿತ ಶಾಸಕರಿಗೆ ರಕ್ಷಣೆ ಇಲ್ಲ: ನಮ್ಮ ಬೇಡಿಕೆಯನ್ನು ಕಡೆಗಣಿಸಲಾಗುತ್ತಿದೆ: ಗೂಳಿಹಟ್ಟಿ
»ಕೆಜಿಎಫ್: ಕಾನೂನು ಸಾಕ್ಷರತಾ ರಥಕ್ಕೆ ಚಾಲನೆ
»ಬಿಳಿಗಿರಿರಂಗನಬೆಟ್ಟದಲ್ಲಿ ಹೆಚ್ಚುವರಿ ಯಾತ್ರಿ ನಿವಾಸಕ್ಕೆ 77ಲಕ್ಷ ರೂ. ಮಂಜೂರು: ಜಿ.ಎನ್.ನಂಜುಂಡಸ್ವಾಮಿ
»ಹಿಂದೂ ವಿರೋಧಿ ಮತಾಂತರವಾದಿಗಳನ್ನು ಸದೆಬಡೆಯಿರಿ: ಪೇಜಾವರ ಶ್ರೀ ಕರೆ
»‘ನಿಜವಾದ ಸ್ವಾತಂತ್ರ್ಯ ಇನ್ನೂ ಸಿಕ್ಕಿಲ್ಲ’: ಅಣ್ಣಾ ಹಜಾರೆ
»ಅಗತ್ಯ ಬಿದ್ದಲ್ಲಿ ಬಿಎಸ್‌ವೈ ಮತ್ತೆ ಮುಖ್ಯಮಂತ್ರಿ: ನಾಯ್ಡು
»ವಿಧಾನ ಸಭೆ ಕಲಾಪಕ್ಕೆ ಆಗಮಿಸಿದ ಬೋಪಯ್ಯ: ರಾಜೀನಾಮೆಗೆ ಒತ್ತಾಯಿಸಿ ಅನರ್ಹ ಶಾಸಕರಿಂದ ಸಭಾತ್ಯಾಗ
»ಹರಪನಹಳ್ಳಿ: ಪೇಜಾವರ ಶ್ರೀಗಳಿಗೆ ಕಪ್ಪು ಬಟ್ಟೆ ಪ್ರದರ್ಶನ
»ಬಿಎಸ್‌ವೈ ಬೆಂಬಲಿಗರ ಹೊಸ ಗೇಮ್‌: ಶಾಸಕರ ಸಹಿ ಸಂಗ್ರಹ...
»ಹಿಂದೂ ಸಮಾವೇಶದ ನೆಲದಲ್ಲಿ ತಲೆ ಎತ್ತಲಿದೆ ಟೌನ್‌ಶಿಪ್: ಹಿಂದೂಗಳನ್ನು ಒಗ್ಗೂಡಿಸಿದ ಶಕ್ತಿ ಸ್ಥಳದ ಭಾವನಾತ್ಮಕತೆ ಉಳಿಸುವ ಯತ್ನ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri