ಆದಿತ್ಯವಾರ, 05-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಜನತಾ ನ್ಯಾಯಾಲಯದ ಮೂಲಕ 5154 ಪ್ರಕರಣ ಇತ್ಯರ್ಥ : ಲೋಕ್ ಅದಾಲತ್ ಸಮಾರೋಪದಲ್ಲಿ ನರೇಂದ್ರ ಕುಮಾರ್ ಗುಣಕಿ
Latest news item ಸೃಜನ ಶೀಲತೆ ಇಲ್ಲದಿದ್ದಾಗ ಶಿಕ್ಷಣದ ಬೆಳವಣಿಗೆಗೆ ಕೊರತೆ | ಅಶೋಕ್ ಕುಮಾರ್ ಶೆಟ್ಟಿ, ಎಂ.ಎಸ್.ನಾಗರಾಜ್ ರಾವ್ ಹಾಗೂ ಡಾ.ಚಂದ್ರಶೇಖರ್ ದಾಂಬ್ಲೆಯವರಿಗೆ ಸನ್ಮಾನ
Latest news item ದುಬಾಯಿಯಲ್ಲಿ ’ಗಮ್ಮತ್ ಕಲಾವಿದೇರ್’ ಪ್ರಥಮ ಪ್ರದರ್ಶನ: ನಟನಾ ಚಾತುರ್ಯದಲ್ಲಿ ಮಿಂಚಿದ ’ಈ ಪೊರ್ಲು ದಾಯೇ’ ತುಳು ನಾಟಕ
Latest news item ಸುಶಿಕ್ಷಿತರ ಸಂಖ್ಯೆ ಹೆಚ್ಚಾದಂತೆ ಕೃಷಿಯತ್ತ ಒಲವು ಕಡಿಮೆ : ಉಡುಪಿ ರೈತ ಸಮಾವೇಶದಲ್ಲಿ ಶಾಸಕ ರಘುಪತಿ ಭಟ್
Latest news item ಉಡುಪಿ ಲಯನ್ಸ್ ಗೆ ಜಿಲ್ಲಾ ಲಯನ್ಸ್ ಗವರ್ನರ್ ಇಂದ್ರಾಳಿ ಜಯಕರ್ ಶೆಟ್ಟಿ ಅಧಿಕೃತ ಭೇಟಿ
Latest news item ಸುಬ್ರಮಣಿಯನ್ ಸ್ವಾಮಿ ಅರ್ಜಿ ವಜಾ: ಚಿದಂಬರಂ ನಿರಾಳ
Latest news item ಇಲ್ರಿ.. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿಲ್ಲ: ಯಡ್ಡಿ
Latest news item ಚೆನ್ನೈ ತೆಕ್ಕೆಗೆ ಜಡೇಜಾ; 9.70 ಕೋಟಿಗೆ ಖರೀದಿ; ವಿನಯ ಕುಮಾರ್ ಗೆ 4.86ಕೋಟಿ ಕೊಟ್ಟ ರೋಯಲ್ ಚ್ಯಾಲೇಂಜರ್ಸ್ | ಯಾವ ಯಾವ ಫ್ರಾಂಚೈಸಿ ತೆಕ್ಕೆಗೆ?
Latest news item ಗೂಳಿ ಹೊರಕ್ಕೆ: ಕಳಂಕಿತ ಸಭಾಧ್ಯಕ್ಷರೇ ಎಂದಿದ್ದಕ್ಕೆ ಸದನದಿಂದ ಒಂದು ದಿನ ಅಮಾನತು (Updated)
Latest news item ಜೈನ ಸಾಹಿತಿಗಳಿಂದ ಕನ್ನಡ ಸಾಹಿತ್ಯದ ಬೆಳವಣಿಗೆ: ಡಾ.ಶಾಂತಿನಾಥ ದಿಬ್ಬದ
Latest news item ವೈದ್ಯರಲ್ಲಿ ಮಾನವೀಯತೆ ಮುಖ್ಯ: ನ್ಯಾ. ಸಂತೋಷ್ ಹೆಗ್ಡೆ
Latest news item ಪಡುಬಿದ್ರೆಯಲ್ಲಿ ಎಸಿಸಿ ಸಿಮೆಂಟ್ ಕಂಪೆನಿ ಸ್ಥಾಪನೆ: ರಸ್ತೆ ಕಾಮಗಾರಿಗೆ ಬೂದಿ ಬಳಸಬಹದು : ಡಿಸಿ | ಫೆ. 4ರಂದು ಪ್ರತಿಭಟನೆ
Latest news item ಉಡುಪಿ ಶೇಮ್, ಶೇಮ್ !: ಸೈಂಟ್ ಮೇರೀಸ್ ದ್ವೀಪದಲ್ಲಿ ಜಿಲ್ಲಾಡಳಿತ ಕೃಪಕಟಾಕ್ಷದಲ್ಲಿ ರೇವ್ ಪಾರ್ಟಿ: ವಿದೇಶಿ ಸಂಸ್ಕೃತಿ ಆನಾವರಣ, ಮದ್ಯ, ಡ್ರಗ್ಸ್ ಗಳದ್ದೇ ಕಾರುಬಾರು
Latest news item ಅಪಘಾತಕ್ಕೆ ತುತ್ತಾಗಿ ಕಾಮಿಡಿ ನಟ ಕರಿ ಬಸವಯ್ಯ ಅಕಾಲಿಕ ಮರಣ { VIEW VIDEO of HIS EMOTIONAL LIFE STORY }.
Latest news item ಬಯಲುಸೀಮೆ ಆರು ಜಿಲ್ಲೆಗಳಿಗೆ ಕುಡಿಯುವ ನೀರು; ತಿಂಗಳಲ್ಲಿ ಎತ್ತಿನಹೊಳೆ ನಿರ್ಧಾರ. ನೇತ್ರಾವತಿ ತಿರುವು ಇಲ್ಲ..ಹೆಚ್ಚಿನ ನೀರನ್ನು ಬಳಸಿಕೊಳ್ಳುವ ಯೋಜನೆ
Latest news item ಕುಸಿಯುವ ಭೀತಿಯಲ್ಲಿ ಕುದಿ ಗ್ರಾಮದ ಕೋಂಟು ಸೇತುವೆ : ಆತಂಕದಲ್ಲಿ ಗ್ರಾಮಸ್ಥರು : ಸೂಕ್ತ ಪರಿಹಾರಕ್ಕೆ ಒತ್ತಾಯ
Latest news item ಡಿವಿಜಿಯವರ ಕಾವ್ಯಗಳು ಜನಸ್ವಾರ್ಥ : ಡಾ. ಹೆಚ್. ಶಾಂತರಾಮ್
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ಬೆ೦ಗಳೂರು: ರಾಜ್ಯದಲ್ಲಿ ಪುಷ್ಯವೃಷ್ಟಿ, ಜೀವನದಿಗಳಿಗೆ ಮರುಜೀವ, ತು೦ಬಿ ಹರಿಯುತ್ತಿರುವ ಜಲಾಶಯಗಳು, ಭಾರೀ ಮಳೆಯ ಮುನ್ಸೂಚನೆ; ಭಾಗಮಂಡಲ ಜಲಾವೃತ. ಆಲಮಟ್ಟಿಯಿಂದ 90 ಸಾವಿಕ ಕ್ಯುಸೆಕ್ ನೀರು ಹೊರಕ್ಕೆ

-ಕಬಿನಿ, ಆಲಮಟ್ಟಿ ಜಲಾಶಯಗಳಲ್ಲಿ ನೀರಿನ ಮಟ್ಟ ಹೆಚ್ಚಳ

-ಆಲಮಟ್ಟಿಯಿಂದ 90 ಸಾವಿಕ ಕ್ಯುಸೆಕ್ ನೀರು ಹೊರಕ್ಕೆ

-ಬೆಳಗಾವಿ ಜಿಲ್ಲೆಯಲ್ಲಿ ಮಳೆಗೆ ಒಬ್ಬ ಸಾವು

ಬೆಂಗಳೂರು, ಜು. ೨೮ : ಅಂತೂ ಆತಂಕ ದೂರವಾದಂತಿದೆ. ಮಂಗಳವಾರ ತಡ ರಾತ್ರಿಯಿಂದೀ ಚೆಗೆ ಮತ್ತು ಬುಧವಾರ ಸಂಜೆಯವರೆಗೂ ರಾಜ್ಯದ ಹೆಚ್ಚಿನ ಭಾಗಗಳಲ್ಲಿ ಧಾರಾಕಾರ ಮಳೆಯಾ ಗಿದೆ. ಇದು ಜಲಾಶಯಗಳಲ್ಲಿನ ನೀರಿನ ಮಟ್ಟ ಹೆಚ್ಚುವಂತೆ ಮಾಡಿದೆ. ಆಲಮಟ್ಟಿ ಜಲಾಶಯ ತುಂಬಿರುವ ಹಿನ್ನೆಲೆಯಲ್ಲಿ ೧೯ ಗೇಟುಗಳನ್ನು ತೆರೆದು ಹೆಚ್ಚುವರಿ ೯೦ ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ. ತುಂಗಾ ಜಲಾಶಯದಿಂದಲೂ ನೀರು ಹೊರಬಿಡಲಾಗಿದೆ.

ಗುರುವಾರದಿಂದ ಆಲಮಟ್ಟಿ ಜಲಾಶಯದ ವಿದ್ಯುತ್ ಉತ್ಪಾದನಾ ಕೇಂದ್ರ ಕಾರ್ಯಾರಂಭ ಮಾಡಲಿದೆ. ಹಿಪ್ಪರಗಿ ಬ್ಯಾರೆಜ್‌ನ ೨೨ ಗೇಟ್‌ಗಳನ್ನು ತೆರೆಯಲಾಗಿದೆ.

ಜೀವ ನದಿ ಕಾವೇರಿ, ಕಬಿನಿ, ತುಂಗಭದ್ರಾ, ವರದಾ ನದಿಗಳು ತುಂಬಿ ಹರಿಯುತ್ತಿದ್ದು, ಜಲಾಶಯ ಗಳಲ್ಲಿ ನೀರಿನ ಮಟ್ಟ ಏರತೊಡಗಿದೆ. ಹೀಗಾಗಿ, ಯಾವುದೇ ಕ್ಷಣದಲ್ಲಿ ಕಬಿನಿ, ನಾರಾಯಣಪುರ, ಹಾರಂಗಿ ಜಲಾಶಯಗಳಿಂದ ನೀರನ್ನು ಹೊರ ಬಿಡುವ ಸಾಧ್ಯತೆ ಇರುವುದರಿಂದ ನದಿಪಾತ್ರದ ಜನರಿಗೆ ಸುರಕ್ಷಿತ ತಾಣಕ್ಕೆ ತೆರಳುವಂತೆ ಆಯಾ ಜಿಲ್ಲಾಡಳಿತ ಸೂಚಿಸಿದೆ. ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದ್ದರೂ, ಅಣೆಕಟ್ಟೆ ತುಂಬಲು ಇನ್ನೂ ೫೦ ಅಡಿ ನೀರು ಬರಬರಬೇಕು.

ಭಾಗಮಂಡಲದಲ್ಲಿ ಧಾರಾಕಾರ ಮಳೆಯಾದ್ದರಿಂದ ಆ ಪ್ರದೇಶ ಜಲಾವೃತವಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಗೋಡೆ ಕುಸಿದು ೫ ವರ್ಷದ ಬಾಲಕನೊಬ್ಬ ಸಾವನ್ನಪ್ಪಿದ್ದಾನೆ. ಕರಾವಳಿ ಸೇರಿದಂತೆ ರಾಜ್ಯದ ಎಲ್ಲೆಡೆ ಮುಂದಿನ ೪೮ ಗಂಟೆಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ನಾರಾಯಣಪುರ ಜಲಾಶಯ ತುಂಬಲು ಕೇವಲ ಒಂದು ಅಡಿ ಬಾಕಿ ಉಳಿದಿದೆ.

ಗೋಡೆ ಕುಸಿದು ಬಾಲಕ ಸಾವು: ಬೆಳಗಾವಿ ಜಿಲ್ಲೆಯಲ್ಲಿ ವಾರದಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಬುಧವಾರ ಮುಂಜಾನೆ ಸುರಿದ ಮಳೆಗೆ ಕಣಬರ್ಗಿಯ ನಾಯಕ ಗಲ್ಲಿಯಲ್ಲಿ ಗೋಡೆ ಕುಸಿದ ಪರಿಣಾಮ ಪರಶುರಾಮ ನಾಗಪ್ಪ ಪರಸಣ್ಣವರ (೫) ಮೃತಪಟ್ಟಿದ್ದಾನೆ. ಕೃಷ್ಣಾ ನದಿ ಸೇರಿದಂತೆ ಜಿಲ್ಲೆಯ ವಿವಿಧ ನದಿಗಳ ಒಳಹರಿವು ಸುಮಾರು ಎರಡು ಅಡಿಯಷ್ಟು ಹೆಚ್ಚಿದೆ.

ಭಾಗಮಂಡಲ ಜಲಾವೃತ: ಕೊಡಗು ಜಿಲ್ಲೆಯ ಬಹುತೇಕ ಕಡೆ ಬುಧವಾರ ಧಾರಾಕಾರ ಮಳೆ ಯಾಗಿದೆ. ಮಡಿಕೇರಿ, ಭಾಗಮಂಡಲ, ತಲಕಾವೇರಿಗಳಲ್ಲಿ ಭಾರಿ ಮಳೆಯಾಗಿದ್ದು, ಭಾಗಮಂಡಲ ದಲ್ಲಿ ಕಾವೇರಿ ಪ್ರವಾಹ ಸ್ಥಿತಿ ಕಂಡುಬಂದಿದೆ. ಭಾಗಮಂಡಲದಿಂದ ಅಯ್ಯಂಗೇರಿಗೆ ತೆರಳುವ ರಸ್ತೆಯಲ್ಲಿ ನೀರು ಹರಿದು ಸಂಪರ್ಕ ಕಡಿತಗೊಂಡಿದೆ. ಭಾಗಮಂಡಲ- ಮಡಿಕೇರಿ ರಸ್ತೆಯಲ್ಲೂ ನೀರು ಹರಿಯುತ್ತಿದೆ. ಹಾರಂಗಿ ಜಲಾಶಯ ಬಹುತೇಕ ಭರ್ತಿಯಾಗಿದೆ.

ದ.ಕ, ಉಡುಪಿಯಲ್ಲಿ ವ್ಯಾಪಕ ಮಳೆ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಾದ್ಯಂತ ಮುಂಗಾರು ಮತ್ತೆ ಚುರುಕುಗೊಂಡಿದ್ದು, ಬುಧವಾರ ಉತ್ತಮ ಮಳೆಯಾಗಿದೆ. ನೇತ್ರಾವತಿ, ಕುಮಾರಧಾರಾ ನದಿ ತುಂಬಿ ಹರಿಯುತ್ತಿದೆ. ಕುಮಾರಧಾರ ಸೇತುವೆ ಜಲಾವೃತವಾಗಿದೆ. ಕಡಬ ಸಮೀಪ ಹೊಸ್ಮಠ ಸೇತುವೆ ಸನಿಹಕ್ಕೆ ಗುಂಡ್ಯ ಹೊಳೆ ಹರಿಯುತ್ತಿದೆ.

ಜಲಾಶಯದಿಂದ ನೀರು ಹೊರಕ್ಕೆ: ರಾಜಾಪುರ ಪ್ರದೇಶದಿಂದ ಜಿಲ್ಲೆಯ ನದಿಗಳಿಗೆ ೧.೩೪ಲಕ್ಷ ಕ್ಯುಸೆಕ್ ನೀರು ಹರಿದು ಬರುತ್ತಿದ್ದು ನದಿಗಳ ನೀರಿನ ಪ್ರಮಾಣ ಹೆಚ್ಚಿದೆ. ಅಥಣಿ ಬಳಿಯ ಹಿಪ್ಪರಗಿ ಜಲಾಶಯದ ೨೨ ಗೇಟುಗಳನ್ನು ತೆರೆದು ನೀರನ್ನು ಹೊರಗೆ ಬಿಡಲಾಗಿದೆ. ಆಲಮಟ್ಟಿ ಜಲಾಶ ಯದ ೧೯ ಗೇಟುಗಳನ್ನು ತೆರೆದು ಸುಮಾರು ೯೦ ಸಾವಿರ ಕ್ಯುಸೆಕ್ ನೀರು ಬಿಡಲಾಗಿದೆ. ಆದರೆ ಜಲಾನಯನದ ಕೆಳ ಪ್ರದೇಶದಲ್ಲಿರುವ ಜನರಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜನಜೀವನ ಅಸ್ತವ್ಯಸ್ತ: ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರದಲ್ಲಿ ಸುರಿದ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ.

ತುಂಬಿದ ಕಬಿನಿ: ಮೈಸೂರಲ್ಲಿ ಬುಧವಾರ ಮುಂಜಾನೆಯಿಂದ ಬೆಳಗ್ಗೆ ೧೧ ರವರೆಗೂ ಭರ್ಜರಿ ಮಳೆ ಬಿದ್ದಿತು. ಇದರಿಂದಾಗಿ ಜನಜೀವನ ಅಸ್ತವ್ಯಸ್ತವಾಗಿತ್ತು. ಕೇರಳದ ವೈನಾಡು ಪ್ರದೇಶದಲ್ಲಿ ಧಾರಾಕಾರ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಕಬಿನಿ ಜಲಾಶಯ ಭರ್ತಿಯಾಗುತ್ತಿದೆ.

ಈಗಾಗಲೇ ೪ ಕ್ರೆಸ್ಟ್ ಗೇಟ್‌ಗಳ ಮೂಲಕ ೧೫ ಸಾವಿರ ಕ್ಯುಸೆಕ್ ನೀರನ್ನು ಹೊರಬಿಡ ಲಾಗುತ್ತಿದೆ. ಕೆ‌ಆರ್‌ಎಸ್‌ಗೆ ಒಳ ಹರಿವಿನ ಪ್ರಮಾಣ ೧೫,೦೨೭ ಕ್ಯುಸೆಕ್‌ನಷ್ಟಿದೆ. ಗುರುವಾರದ ಹೊತ್ತಿಗೆ ಒಳ ಹರಿವಿನ ಪ್ರಮಾಣ ೨೫ ಸಾವಿರ ಕ್ಯುಸೆಕ್ ದಾಟುವ ಸಾಧ್ಯತೆ ಇದೆ ಎಂದು ನೀರಾವರಿ ಇಲಾಖೆ ಯ ಮೂಲಗಳು ತಿಳಿಸಿವೆ.

ಸಂಪರ್ಕ ಕಡಿತ: ಕಳೆದೆರಡು ದಿನಗಳಿಂದ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪ್ರದೇಶದಲ್ಲಿ ಸುರಿದ ಮಳೆಯಿಂದ ಹಿನ್ನೀರು ಪ್ರಮಾಣ ಹೆಚ್ಚಾಗಿದ್ದರಿಂದ ಬಾಗಲಕೋಟೆ ನಗರ ಹಾಗೂ ವಿದ್ಯಾಗಿರಿ ಸಂಪರ್ಕ ಕಲ್ಪಿಸುವ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಸಂಚಾರ ವ್ಯತ್ಯಯ: ರಾಯಚೂರು ಜಿಲ್ಲೆಯ ಬಹುತೇಕ ಕಡೆ ಮಂಗಳವಾರ ರಾತ್ರಿಯಿಂದೀ ಚೆಗೆ ಮಳೆಯಾಗುತ್ತಿದ್ದು ಸಂಚಾರಕ್ಕೆ ವ್ಯತ್ಯಯವಾಗಿದೆ.

ಹೆಚ್ಚಿದ ಒಳಹರಿವು: ಶಿವಮೊಗ್ಗ ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿದೆ.ಲಿಂಗನಮಕ್ಕಿ ಜಲಾಶಯ ಭರ್ತಿಯಾಗಲು ಸುಮಾರು ೫೦ ಅಡಿ ನೀರು ಬರಬೇಕಿದೆ. ಭದ್ರಾ ಜಲಾಶಯದ ಒಳಹರಿವಿನಲ್ಲಿಯೂ ಹೆಚ್ಚಳವಾಗಿದ್ದು, ೧೨,೩೨೭ ಕ್ಯೂಸೆಕ್ ಇತ್ತು. ತುಂಗಾ ಜಲಾಶಯದ ಒಳಹರಿ ವು ಹೆಚ್ಚುತ್ತಲೇ ಇದ್ದು, ಬುಧವಾರ ೩೩,೮೯೨ ಕ್ಯೂಸೆಕ್ ತಲುಪಿತ್ತು. ಈಗಾಗಲೇ ಜಲಾಶಯ ಭರ್ತಿಯಾಗಿರುವುದರಿಂದ ಇಷ್ಟೇ ಪ್ರಮಾಣದ ನೀರನ್ನು ನದಿ ಪಾತ್ರಕ್ಕೆ ಹಾಗೂ ತುಂಗಾ ಮೇಲ್ದಂಡೆಗೆ ಬಿಡಲಾಗುತ್ತಿದೆ.

ಗುಲ್ಬರ್ಗ, ಬಳ್ಳಾರಿ, ಹಾವೇರಿ, ಗದಗ ಹಾಗೂ ಧಾರವಾಡ ಜಿಲ್ಲೆಯಲ್ಲಿ ವರ್ಷಧಾರೆ ಮುಂದುವ ರೆದಿದೆ. ಉತ್ತರ ಕನ್ನಡ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ತುಂತುರು ಮಳೆ ಬಿದ್ದಿದೆ.

ಭಾರಿ ಮಳೆ ಮುನ್ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಮಳೆ ಚುರುಕು ಪಡೆದಿದೆ. ಮುಂದಿನ ೩೬ ಗಂಟೆಗಳಲ್ಲಿ ರಾಜ್ಯದ ಬಹುತೇಕ ಕಡೆ ಉತ್ತಮ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಒಳನಾಡು, ಕರಾವಳಿ ಮತ್ತು ಘಟ್ಟ ಪ್ರದೇಶ ಹಾಗೂ ರಾಜ್ಯದ ಒಳನಾಡಿನಲ್ಲಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇತ್ತ ಬೆಂಗಳೂರಿನಲ್ಲಿ ಕಳೆದೆರೆಡು ದಿನಗಳಿಂದಲೂ ಸೂರ್ಯನ ದರ್ಶನ ಪಡೆಯದ ಜನರಿಗೆ ಇನ್ನೆರಡು ದಿನ ಮೋಡ ಮುಸುಕಿದ ವಾತಾವರಣವನ್ನೇ ಕಾಣಬೇಕಿದೆ ಎಂದು ಇಲಾಖೆ ತಿಳಿಸಿದೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-07-29 00:00:00

Tell a Friend
ಇತರ ಸಂಭಂದಪಟ್ಟ ವರದಿಗಳು
»ಬಾಗಲಕೋಟೆ: ಆಲಮಟ್ಟಿ ಜಲಾಶಯದ 14 ಗೇಟ್ಗಳ ಮೂಲಕ 91000 ಕ್ಯೂಸೆಕ್ಸ್ ನೀರು ಹೊರಕ್ಕೆ : ವಿದ್ಯುತ್ ಉತ್ಪಾದನೆಯೂ ಆರಂಭ

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರ್ನಾಟಕ]

»ಕನ್ನಡ ಭಾಷೆ, ಸಾಹಿತ್ಯ ಪರಂಪರೆಗೆ ಐತಿಹಾಸಿಕ ಹಿನ್ನೆಲೆಗಳಿವೆ: ಮೂಡಿಗೆರೆ: 3ನೆ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪದಲ್ಲಿ ಸಮ್ಮೇಳನಾಧ್ಯಕ್ಷ ಡಿ.ಬಿ.ಸುಬ್ಬೇಗೌಡ
»ಶಂಕಿತ ಮಂಗನ ಕಾಯಿಲೆ ಪ್ರಕರಣ ಪತ್ತೆ: ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ವ್ಯಕ್ತಿ ದಾಖಲು; ಡಿಎಚ್‌ಓ-ಜಿ.ಪಂ. ಸದಸ್ಯರ ಭೇಟಿ
»ಗುಜರಿ ಅಂಗಡಿಯಲ್ಲಿ ಗಿಲೆಟಿನ್ ಸ್ಫೋಟ: ಮಾಲಕನ ಸಾವು
»ಸರಕಾರಕ್ಕೆ ಆರು ತಿಂಗಳ ಆನಂದ: ಭ್ರಷ್ಟಾಚಾರ ಮುಕ್ತ ಆಡಳಿತವೇ ನನ್ನ ಗುರಿ: ಸದಾನಂದ ಗೌಡ
»ಎತ್ತಿನಹೊಳೆ ಯೋಜನೆಯಿಂದ ಪರಮಶಿವಯ್ಯ ವರದಿಗೆ ಹಿನ್ನಡೆಯಾದರೆ ಹೋರಾಟ: ಸಂಸದ ಬಸವರಾಜು ಎಚ್ಚರಿಕೆ
»ಹಾಸ್ಯನಟನ ಅಂತಿಮಯಾತ್ರೆಯುದ್ದಕ್ಕೂ ಕಣ್ಣೀರು: ಹುಟ್ಟೂರು ಕೊಡಿಗೆಹಳ್ಳಿಯಲ್ಲಿ ಕರಿಬಸವಯ್ಯ ಅಂತ್ಯ ಕ್ರಿಯೆ
»ಸ್ಥಾನ ನೀಡಿ, ಇಲ್ಲವೇ ಪರಿಣಾಮ ಎದುರಿಸಿ: ಹೈಕಮಾಂಡ್‌ಗೆ ಬಿಎಸ್‌ವೈ ಎಚ್ಚರಿಕೆ
»ಬಿಎಸ್‌ವೈ ಕುಟುಂಬವನ್ನು ಮತ್ತೆ ಬೆಂಬತ್ತಿದ ಸಮನ್ಸ್: ಲೋಕಾಯುಕ್ತ ಕೋರ್ಟ್ ಆದೇಶ, ಮಾ.3ಕ್ಕೆ ಮುಂದಿನ ವಿಚಾರಣೆ
»ಶಿಕ್ಷಕರಿಗೆ ಅನುದಾನ ನೀಡದಿದ್ದರೆ ಸತ್ಯಾಗ್ರಹ: ಬಸವರಾಜ್
»ನಾನು ಘೋಷಣೆ ಮಾಡುವ ಮುಖ್ಯಮಂತ್ರಿಯಲ್ಲ: ಸದಾನಂದಗೌಡ
»ಇಲ್ರಿ.. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿಲ್ಲ: ಯಡ್ಡಿ
»`ಐಷಾರಾಮಿ ಜೀವನ: ನಾಗರಿಕತೆ ನಾಶ’: ಸುರೇಶ್ ಹೆಬ್ಳೀಕರ್
»ಸುವರ್ಣ ರಂಗ ಸಮ್ಮಾನ್ ಪ್ರಶಸ್ತಿ: ಮಾಹಿತಿ ಆಹ್ವಾನ
»ಒಳಮೀಸಲಾತಿ ವಿರುದ್ಧ ಒಗ್ಗಟ್ಟು:ಬಿಜೆಪಿ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶ(Updated)
»ಮಾಡು ಇಲ್ಲವೇ ಮಡಿ ಸ್ಥಿತಿ: ಯಡಿಯೂರಪ್ಪ ದಿಢೀರ್ ದೆಹಲಿಗೆ ದೌಡು
»ಜೈಲು ಗೋಡೆ ಎರಡು ಕೋಟಿ ನುಂಗಿತ್ತಾ..!
»ಗೂಳಿ ಹೊರಕ್ಕೆ: ಕಳಂಕಿತ ಸಭಾಧ್ಯಕ್ಷರೇ ಎಂದಿದ್ದಕ್ಕೆ ಸದನದಿಂದ ಒಂದು ದಿನ ಅಮಾನತು (Updated)
»ಮಡೆಸ್ನಾನ ನಿಷೇಧಕ್ಕೆ ಯತ್ನ: ಡಾ.ಆಚಾರ್ಯ
»ಹೈಕಮಾಂಡ್ ತುರ್ತು ಬುಲಾವ್: ದಿಲ್ಲಿಗೆ ದೌಡಾಯಿಸಿದ ಬಿಎಸ್‌ವೈ
»ಶಾಲಾ ಮಕ್ಕಳ ಮೇಲೆ ಲಾಠಿ ಪ್ರಹಾರ: ಬಜ್ಪೆ ಇನ್ಸ್‌ಪೆಕ್ಟರ್ ಮೇಲೆ ಕ್ರಮದ ಭರವಸೆ
»ಹಿಂದುಳಿದವರ ಅಭಿವೃದ್ಧಿಗೆ ಬಜೆಟ್‌ನಲ್ಲಿ ಸಾವಿರ ಕೋಟಿ ರೂ. ಮೀಸಲು: ಸಿಎಂ
»ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ: ತಾಯಿ-ಮಗು ಮೃತ್ಯು
»ವಿರೋಧದ ಮಧ್ಯೆ ಧಾರ್ಮಿಕ ದತ್ತಿ ವಿಧೇಯಕ ಅಂಗೀಕಾರ: ಮಹಿಳಾ ವಿವಿಗೆ ಎಲ್ಲ ಜಿಲ್ಲೆಗಳನ್ನು ಸೇರಿಸಿ: ಮಾತಿನ ಚಕಮಕಿ
»ಭದ್ರಾ, ಕುದುರೆಮುಖ ಆದಿವಾಸಿಗಳನ್ನು ಒಕ್ಕಲೆಬ್ಬಿಸುವುದಿಲ್ಲ: ಸಿಎಂ
»ಕೆಜಿಎಫ್ ತಾಲೂಕು ಕೇಂದ್ರಕ್ಕೆ ಆಗ್ರಹ: ಬಂದ್ ಯಶಸ್ವಿ
»ಕಳಪೆ ಬಿತ್ತನೆ ಬೀಜ ಪೂರೈಕೆ: ಕೈಗೆ ಬಂದ ತುತ್ತು ಬಾಯಿಗಿಲ್ಲ
»ರಾಜ್ಯದ ಆರ್ಥಿಕ ಸ್ಥಿತಿಯ ‘ಶ್ವೇತಪತ್ರ’ಕ್ಕೆ ಡಾ.ಜಿ.ಪರಮೇಶ್ವರ್ ಆಗ್ರಹ
»ಸುಬ್ರಹ್ಮಣ್ಯ ಸ್ವಾಮಿಗೆ ಡಾಕ್ಟರೇಟ್
»ಬಯಲುಸೀಮೆ ಆರು ಜಿಲ್ಲೆಗಳಿಗೆ ಕುಡಿಯುವ ನೀರು; ತಿಂಗಳಲ್ಲಿ ಎತ್ತಿನಹೊಳೆ ನಿರ್ಧಾರ. ನೇತ್ರಾವತಿ ತಿರುವು ಇಲ್ಲ..ಹೆಚ್ಚಿನ ನೀರನ್ನು ಬಳಸಿಕೊಳ್ಳುವ ಯೋಜನೆ
»`ಕೆನೆಪದರ' ಮಿತಿ ರೂ 3.5 ಲಕ್ಷಕ್ಕೆ ಹೆಚ್ಚಳ: ರಾಜ್ಯ ಸರ್ಕಾರ ತೀರ್ಮಾನ
»ಹಂಪಿ:ನಿಧಿ ಶೋಧ, ವಿಗ್ರಹಕ್ಕೆ ಕುತ್ತು
»ಡಿನೋಟಿಫಿಕೇಶನ್: ಮತ್ತೆ ಬಂಧನದ ಭೀತಿಯತ್ತ ಬಿ‌ಎಸ್‌ವೈ
»ಬೆಂಗಳೂರಿನಲ್ಲಿ ಸೀಟ್ ಬೆಲ್ಟ್ ನಿಯಮ ಜಾರಿ ...
»ಮೂಡಿಗೆರೆ ತಾಲೂಕು ಮೂರನೆ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ: ಆಡಳಿತ ಭಾಷೆಯಾಗಿ ಕನ್ನಡ ಜಾರಿಗೊಳಿಸುವಲ್ಲಿ ಸರಕಾರ ವಿಫಲ; ಸಮ್ಮೇಳನಾಧ್ಯಕ್ಷ ಡಿ.ಬಿ.ಸುಬ್ಬೇಗೌಡ
»ಅಕ್ರಮ ನಿವೇಶನ ಆರೋಪ: ಉ.ಲೋಕಾಯುಕ್ತರ ರಾಜೀನಾಮೆಗೆ ನಿವೃತ್ತ ನ್ಯಾ. ಸಲ್ಡಾನಾ ಆಗ್ರಹ
»ಗಣಿ ವರದಿ ಚರ್ಚೆಗೆ ಪಟ್ಟು: ಕೊನೆಗೂ ಮಣಿದ ಸ್ಪೀಕರ್
» ‘ಸ್ಪೀಕರ್’ ಗದ್ದಲ: ಪಕ್ಷೇತರರಿಂದ ಸಭಾತ್ಯಾಗ; ಮೇಲ್ಮನೆಯಲ್ಲಿ ಎರಡನೆ ದಿನವೂ ಪ್ರತಿಧ್ವನಿಸಿದ ‘ಲೋಕ’ ಗದ್ದಲ
»ಸಿದ್ದಗಂಗಾ ಶ್ರೀಗಳು ಸಾಯಿಬಾಬಾರ ಪ್ರತಿರೂಪ: ಬಿಎಸ್‌ವೈ
»ಆರೆಸ್ಸೆಸ್ ಕಪಿಮುಷ್ಟಿಯಲ್ಲಿ ರಾಜ್ಯ ಸರಕಾರ; ಆರೆಸ್ಸೆಸ್ ದೇಶದ್ರೋಹಿ ಸಂಘಟನೆ: ಸಂಸದ ವಿಶ್ವನಾಥ್ ಆತಂಕ
»ಕಳೆದ ಬಜೆಟ್ ಯೋಜನೆಗಳು ಇನ್ನೂ ಅನುಷ್ಠಾನಗೊಂಡಿಲ್ಲ: ಕುವಾರಸ್ವಾಮಿ
»ದಲಿತ ಶಾಸಕರಿಗೆ ರಕ್ಷಣೆ ಇಲ್ಲ: ನಮ್ಮ ಬೇಡಿಕೆಯನ್ನು ಕಡೆಗಣಿಸಲಾಗುತ್ತಿದೆ: ಗೂಳಿಹಟ್ಟಿ
»ಕೆಜಿಎಫ್: ಕಾನೂನು ಸಾಕ್ಷರತಾ ರಥಕ್ಕೆ ಚಾಲನೆ
»ಬಿಳಿಗಿರಿರಂಗನಬೆಟ್ಟದಲ್ಲಿ ಹೆಚ್ಚುವರಿ ಯಾತ್ರಿ ನಿವಾಸಕ್ಕೆ 77ಲಕ್ಷ ರೂ. ಮಂಜೂರು: ಜಿ.ಎನ್.ನಂಜುಂಡಸ್ವಾಮಿ
»ಹಿಂದೂ ವಿರೋಧಿ ಮತಾಂತರವಾದಿಗಳನ್ನು ಸದೆಬಡೆಯಿರಿ: ಪೇಜಾವರ ಶ್ರೀ ಕರೆ
»‘ನಿಜವಾದ ಸ್ವಾತಂತ್ರ್ಯ ಇನ್ನೂ ಸಿಕ್ಕಿಲ್ಲ’: ಅಣ್ಣಾ ಹಜಾರೆ
»ಅಗತ್ಯ ಬಿದ್ದಲ್ಲಿ ಬಿಎಸ್‌ವೈ ಮತ್ತೆ ಮುಖ್ಯಮಂತ್ರಿ: ನಾಯ್ಡು
»ವಿಧಾನ ಸಭೆ ಕಲಾಪಕ್ಕೆ ಆಗಮಿಸಿದ ಬೋಪಯ್ಯ: ರಾಜೀನಾಮೆಗೆ ಒತ್ತಾಯಿಸಿ ಅನರ್ಹ ಶಾಸಕರಿಂದ ಸಭಾತ್ಯಾಗ
»ಹರಪನಹಳ್ಳಿ: ಪೇಜಾವರ ಶ್ರೀಗಳಿಗೆ ಕಪ್ಪು ಬಟ್ಟೆ ಪ್ರದರ್ಶನ
»ಬಿಎಸ್‌ವೈ ಬೆಂಬಲಿಗರ ಹೊಸ ಗೇಮ್‌: ಶಾಸಕರ ಸಹಿ ಸಂಗ್ರಹ...
»ಹಿಂದೂ ಸಮಾವೇಶದ ನೆಲದಲ್ಲಿ ತಲೆ ಎತ್ತಲಿದೆ ಟೌನ್‌ಶಿಪ್: ಹಿಂದೂಗಳನ್ನು ಒಗ್ಗೂಡಿಸಿದ ಶಕ್ತಿ ಸ್ಥಳದ ಭಾವನಾತ್ಮಕತೆ ಉಳಿಸುವ ಯತ್ನ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri