ಆದಿತ್ಯವಾರ, 05-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಜನತಾ ನ್ಯಾಯಾಲಯದ ಮೂಲಕ 5154 ಪ್ರಕರಣ ಇತ್ಯರ್ಥ : ಲೋಕ್ ಅದಾಲತ್ ಸಮಾರೋಪದಲ್ಲಿ ನರೇಂದ್ರ ಕುಮಾರ್ ಗುಣಕಿ
Latest news item ಸೃಜನ ಶೀಲತೆ ಇಲ್ಲದಿದ್ದಾಗ ಶಿಕ್ಷಣದ ಬೆಳವಣಿಗೆಗೆ ಕೊರತೆ | ಅಶೋಕ್ ಕುಮಾರ್ ಶೆಟ್ಟಿ, ಎಂ.ಎಸ್.ನಾಗರಾಜ್ ರಾವ್ ಹಾಗೂ ಡಾ.ಚಂದ್ರಶೇಖರ್ ದಾಂಬ್ಲೆಯವರಿಗೆ ಸನ್ಮಾನ
Latest news item ದುಬಾಯಿಯಲ್ಲಿ ’ಗಮ್ಮತ್ ಕಲಾವಿದೇರ್’ ಪ್ರಥಮ ಪ್ರದರ್ಶನ: ನಟನಾ ಚಾತುರ್ಯದಲ್ಲಿ ಮಿಂಚಿದ ’ಈ ಪೊರ್ಲು ದಾಯೇ’ ತುಳು ನಾಟಕ
Latest news item ಸುಶಿಕ್ಷಿತರ ಸಂಖ್ಯೆ ಹೆಚ್ಚಾದಂತೆ ಕೃಷಿಯತ್ತ ಒಲವು ಕಡಿಮೆ : ಉಡುಪಿ ರೈತ ಸಮಾವೇಶದಲ್ಲಿ ಶಾಸಕ ರಘುಪತಿ ಭಟ್
Latest news item ಉಡುಪಿ ಲಯನ್ಸ್ ಗೆ ಜಿಲ್ಲಾ ಲಯನ್ಸ್ ಗವರ್ನರ್ ಇಂದ್ರಾಳಿ ಜಯಕರ್ ಶೆಟ್ಟಿ ಅಧಿಕೃತ ಭೇಟಿ
Latest news item ಸುಬ್ರಮಣಿಯನ್ ಸ್ವಾಮಿ ಅರ್ಜಿ ವಜಾ: ಚಿದಂಬರಂ ನಿರಾಳ
Latest news item ಇಲ್ರಿ.. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿಲ್ಲ: ಯಡ್ಡಿ
Latest news item ಚೆನ್ನೈ ತೆಕ್ಕೆಗೆ ಜಡೇಜಾ; 9.70 ಕೋಟಿಗೆ ಖರೀದಿ; ವಿನಯ ಕುಮಾರ್ ಗೆ 4.86ಕೋಟಿ ಕೊಟ್ಟ ರೋಯಲ್ ಚ್ಯಾಲೇಂಜರ್ಸ್ | ಯಾವ ಯಾವ ಫ್ರಾಂಚೈಸಿ ತೆಕ್ಕೆಗೆ?
Latest news item ಗೂಳಿ ಹೊರಕ್ಕೆ: ಕಳಂಕಿತ ಸಭಾಧ್ಯಕ್ಷರೇ ಎಂದಿದ್ದಕ್ಕೆ ಸದನದಿಂದ ಒಂದು ದಿನ ಅಮಾನತು (Updated)
Latest news item ಜೈನ ಸಾಹಿತಿಗಳಿಂದ ಕನ್ನಡ ಸಾಹಿತ್ಯದ ಬೆಳವಣಿಗೆ: ಡಾ.ಶಾಂತಿನಾಥ ದಿಬ್ಬದ
Latest news item ವೈದ್ಯರಲ್ಲಿ ಮಾನವೀಯತೆ ಮುಖ್ಯ: ನ್ಯಾ. ಸಂತೋಷ್ ಹೆಗ್ಡೆ
Latest news item ಪಡುಬಿದ್ರೆಯಲ್ಲಿ ಎಸಿಸಿ ಸಿಮೆಂಟ್ ಕಂಪೆನಿ ಸ್ಥಾಪನೆ: ರಸ್ತೆ ಕಾಮಗಾರಿಗೆ ಬೂದಿ ಬಳಸಬಹದು : ಡಿಸಿ | ಫೆ. 4ರಂದು ಪ್ರತಿಭಟನೆ
Latest news item ಉಡುಪಿ ಶೇಮ್, ಶೇಮ್ !: ಸೈಂಟ್ ಮೇರೀಸ್ ದ್ವೀಪದಲ್ಲಿ ಜಿಲ್ಲಾಡಳಿತ ಕೃಪಕಟಾಕ್ಷದಲ್ಲಿ ರೇವ್ ಪಾರ್ಟಿ: ವಿದೇಶಿ ಸಂಸ್ಕೃತಿ ಆನಾವರಣ, ಮದ್ಯ, ಡ್ರಗ್ಸ್ ಗಳದ್ದೇ ಕಾರುಬಾರು
Latest news item ಅಪಘಾತಕ್ಕೆ ತುತ್ತಾಗಿ ಕಾಮಿಡಿ ನಟ ಕರಿ ಬಸವಯ್ಯ ಅಕಾಲಿಕ ಮರಣ { VIEW VIDEO of HIS EMOTIONAL LIFE STORY }.
Latest news item ಬಯಲುಸೀಮೆ ಆರು ಜಿಲ್ಲೆಗಳಿಗೆ ಕುಡಿಯುವ ನೀರು; ತಿಂಗಳಲ್ಲಿ ಎತ್ತಿನಹೊಳೆ ನಿರ್ಧಾರ. ನೇತ್ರಾವತಿ ತಿರುವು ಇಲ್ಲ..ಹೆಚ್ಚಿನ ನೀರನ್ನು ಬಳಸಿಕೊಳ್ಳುವ ಯೋಜನೆ
Latest news item ಕುಸಿಯುವ ಭೀತಿಯಲ್ಲಿ ಕುದಿ ಗ್ರಾಮದ ಕೋಂಟು ಸೇತುವೆ : ಆತಂಕದಲ್ಲಿ ಗ್ರಾಮಸ್ಥರು : ಸೂಕ್ತ ಪರಿಹಾರಕ್ಕೆ ಒತ್ತಾಯ
Latest news item ಡಿವಿಜಿಯವರ ಕಾವ್ಯಗಳು ಜನಸ್ವಾರ್ಥ : ಡಾ. ಹೆಚ್. ಶಾಂತರಾಮ್
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ಜಾಗತಿಕ ಸವಾಲು: ಭಾರತ, ಬ್ರಿಟನ್ ಜವಾಬ್ದಾರಿ | ಭದ್ರತಾ ಮಂಡಳಿ ಸ್ಥಾನ ಪಡೆಯಲು ಭಾರತಕ್ಕೆ ಸಕಾಲ

‘ಆರ್ಥಿಕ ಹಿಂಜರಿತದಿಂದ ಉಳಿದ ರಾಷ್ಟ್ರಗಳಂತೆ ಬ್ರಿಟನ್ ಕೂಡ ತತ್ತರಿಸಿದೆ. ಯುದ್ಧ ಪರಿಣಾಮಗಳ ನಂತರದ ಅತಿದೊಡ್ಡ ಹೊಡೆತ ಈ ಹಿಂಜರಿತ. ಇದರಿಂದ ಈಗಷ್ಟೇ ಹೊರಬರುತ್ತಿದ್ದೇವೆ. - ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರಾನ್ 

 ಬೆಂಗಳೂರು:  ಮೂರು ಪ್ರಮುಖ ಜಾಗತಿಕ ಸವಾಲುಗಳನ್ನು ಕೂಡಿ ಎದುರಿಸುವ ಮೂಲಕ ಭಾರತ ಮತ್ತು ಬ್ರಿಟನ್ ನಡುವಣ ಬಾಂಧವ್ಯವನ್ನು ಹೊಸ ಎತ್ತರಕ್ಕೆ ಒಯ್ಯಬಹುದು ಎಂದು ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರಾನ್ ಅಭಿಪ್ರಾಯಪಟ್ಟರು.

ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ಭಾರತಕ್ಕೆ ಬೃಹತ್ ನಿಯೋಗದೊಂದಿಗೆ ಭೇಟಿ ನೀಡಿರುವ ಅವರು, ಬುಧವಾರ ಇಲ್ಲಿನ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಆಯ್ದ ಮಾಹಿತಿ ತಂತ್ರಜ್ಞರನ್ನು ಉದ್ದೇಶಿಸಿ ಮಾತನಾಡಿದರು.

ಆರ್ಥಿಕ ಹಿಂಜರಿತ, ಭದ್ರತೆಗೆ ಬೆದರಿಕೆ ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳು ಇಡೀ ಜಗತ್ತನ್ನು ಕಾಡುತ್ತಿವೆ. ಇವುಗಳನ್ನು ಕೂಡಿ ಎದುರಿಸಬೇಕಾದ ಜವಾಬ್ದಾರಿ ಉಭಯ ರಾಷ್ಟ್ರಗಳಿಗೂ ಇದೆ ಎಂದು ಅವರು ಪ್ರತಿಪಾದಿಸಿದರು.

‘ಆರ್ಥಿಕ ಹಿಂಜರಿತದಿಂದ ಉಳಿದ ರಾಷ್ಟ್ರಗಳಂತೆ ಬ್ರಿಟನ್ ಕೂಡ ತತ್ತರಿಸಿದೆ. ಯುದ್ಧ ಪರಿಣಾಮಗಳ ನಂತರದ ಅತಿದೊಡ್ಡ ಹೊಡೆತ ಈ ಹಿಂಜರಿತ. ಇದರಿಂದ ಈಗಷ್ಟೇ ಹೊರಬರುತ್ತಿದ್ದೇವೆ. ಭಾರತದ ಅಭಿವೃದ್ಧಿ ದರ ಕೂಡ ಇದರಿಂದ ಮಂದಗೊಂಡಿದೆ. ಹೀಗಾಗಿ ಅರ್ಥವ್ಯವಸ್ಥೆಯನ್ನು ಸಾಧ್ಯವಾದ ಮಟ್ಟಿಗೆ ಮುಕ್ತಗೊಳಿಸಬೇಕಾಗಿದೆ. ಕೆಂಪು ಪಟ್ಟಿಯಿಂದ ಬಿಡುಗಡೆ, ಕಾರ್ಪೊರೇಟ್ ತೆರಿಗೆ ದರದಲ್ಲಿ ಇಳಿಕೆ ಮತ್ತು ಮೂಲ ಸೌಕರ್ಯ ವೃದ್ಧಿ ಮೂಲಮಂತ್ರ ಆಗಬೇಕಾಗಿದೆ’ ಎಂದರು.

‘ಮೂಲಸೌಕರ್ಯ ಕ್ಷೇತ್ರದಲ್ಲಿ ಮುಂಬರುವ ದಿನಗಳಲ್ಲಿ ಉಭಯ ರಾಷ್ಟ್ರಗಳ ನಡುವೆ ಸಹಕಾರ ಇನ್ನಷ್ಟು ವಿಸ್ತರಿಸಬೇಕಾಗಿದೆ. ಸಾರಿಗೆ ಮತ್ತು ಇಂಧನ ಕ್ಷೇತ್ರದಲ್ಲಿ ಪರಿಣತಿಯ ವಿನಿಮಯ ಆಗಬೇಕಾಗಿದೆ. ಎರಡೂ ರಾಷ್ಟ್ರಗಳಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ ಶಿಕ್ಷಣ, ಸಂಶೋಧನಾ ಕ್ಷೇತ್ರದಲ್ಲಿನ ಅನುಕೂಲಕರ ಅಂಶಗಳು ಮಿಳಿತವಾಗಬೇಕು. ಈ ಎಲ್ಲದರ ಕುರಿತು ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರೊಂದಿಗೆ ಸಮಾಲೋಚಿಸಲಿದ್ದೇನೆ’ ಎಂದು ಅವರು ಹೇಳಿದರು.

ಬ್ರಿಟನ್‌ನಲ್ಲಿ ಭಾರತದ ಹೂಡಿಕೆ ಹಾಗೂ ಭಾರತದಲ್ಲಿ ಬ್ರಿಟನ್ ಹೂಡಿಕೆ ಹೆಚ್ಚಬೇಕು. ವ್ಯಾಪಾರ ಸಂಬಂಧಗಳು ಮತ್ತಷ್ಟು ಗಟ್ಟಿಕೊಳ್ಳಬೇಕು. ಬ್ಯಾಂಕಿಂಗ್, ವಿಮೆ, ರಕ್ಷಣೆ, ಕಾನೂನು ಸೇವೆ ಮತ್ತು ಉತ್ಪಾದನಾ ವಲಯದಲ್ಲಿ ವಿದೇಶಿ ಹೂಡಿಕೆಗೆ ಭಾರತದಲ್ಲಿ ಇರುವ ಅಡೆತಡೆಗಳು ನಿವಾರಣೆ ಆಗಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಭದ್ರತೆಗೆ ಒತ್ತು: ಭಯೋತ್ಪಾದಕರು ಗಡಿಗಳನ್ನು ದಾಟಿ ಬರುತ್ತಿದ್ದಾರೆ. ಉಭಯ ರಾಷ್ಟ್ರಗಳು ಕೂಡಿ ಕೆಲಸ ಮಾಡಿದರೆ ಮಾತ್ರ ಇವರ ಉಪಟಳ ನಿಗ್ರಹಿಸಲು ಸಾಧ್ಯ. ಈ ವರ್ಷ ದೆಹಲಿಯಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟ ನಡೆಯಲಿದೆ.

ಎರಡು ವರ್ಷಗಳಲ್ಲಿ ಲಂಡನ್‌ನಲ್ಲಿ ಒಲಿಂಪಿಕ್ ಕ್ರೀಡಾಕೂಟ ಜರುಗಲಿದೆ. ಈ ಹಿನ್ನೆಲೆಯಲ್ಲಿ ಭದ್ರತೆಗೆ ಸಂಬಂಧಿಸಿದಂತೆ ಎರಡೂ ರಾಷ್ಟ್ರಗಳ ನಡುವೆ ಮೈತ್ರಿ ಇನ್ನಷ್ಟು ಗಟ್ಟಿಗೊಳ್ಳಬೇಕು ಎಂದರು.

ಹವಾಮಾನ ಬದಲಾವಣೆಯ ಪರಿಣಾಮಗಳು ಕೂಡ ಭೀಕರವಾಗಿರುತ್ತವೆ. ಈಗಲೇ ಈ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳದಿದ್ದರೆ ಪ್ರವಾಹ, ಬರ ಅಂತಹ ವಿಕೋಪಗಳನ್ನು ಎದುರಿಸಬೇಕಾಗುತ್ತದೆ.

 ವಲಸೆ, ಬಡತನ ಮತ್ತು ಹಸಿವಿನ ತಾಂಡವವನ್ನು ನೋಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಒಪ್ಪಂದ ಇಂದಿನ ತುರ್ತು ಅಗತ್ಯ ಎಂದು ಕ್ಯಾಮರಾನ್ ಹೇಳಿದರು.

ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಅವರು ಬ್ರಿಟನ್ ಪ್ರಧಾನಿಯ ಪರಿಚಯ ಮಾಡಿಕೊಟ್ಟರು.
‘ವಿಪ್ರೊ’ ಮುಖ್ಯಸ್ಥ ಅಜೀಂ ಪ್ರೇಮ್‌ಜಿ, ಬಯೋಕಾನ್ ಸಂಸ್ಥೆಯ ಕಿರಣ್ ಮಜುಂದಾರ್ ಷಾ, ನಾರಾಯಣ ಹೃದಯಾಲಯದ ದೇವಿಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಸಮಾನ ಆಸಕ್ತಿ

ಬೆಂಗಳೂರು: ಕ್ರಿಕೆಟ್ ಕುರಿತ ಆಸಕ್ತಿ, ತಿಂಡಿ-ತಿನಿಸು ಒಳಗೊಂಡಂತೆ ಭಾರತ ಮತ್ತು ಬ್ರಿಟನ್ ಜನರು ಅನೇಕ ಸಮಾನ ಆಸಕ್ತಿಗಳನ್ನು ಹೊಂದಿದ್ದಾರೆ ಎಂದು ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರಾನ್ ಹೇಳಿದರು.

ಸಚಿನ್ ತೆಂಡೂಲ್ಕರ್ ಶತಕ ಯಾರಲ್ಲಿ ಕುತೂಹಲ ಕೆರಳಿಸುವುದಿಲ್ಲ ಎಂದು ಕೇಳಿದ ಅವರು, ಭಾರತೀಯ ಮೂಲದ 20 ಲಕ್ಷ ಜನರು ಬ್ರಿಟನ್‌ನಲ್ಲಿ ನೆಲೆಸಿದ್ದಾರೆ. ಬ್ರಿಟನ್‌ಗೆ ಅವರ ಕೊಡುಗೆ ಬಹಳ ದೊಡ್ಡದು. ಅವರಿಗೆಲ್ಲ ಶಾರೂಖ್‌ಖಾನ್ ಅಭಿನಯದ ಸಿನಿಮಾ ಅಚ್ಚುಮೆಚ್ಚು ಎಂದರು.

‘ನನ್ನ ತಲೆಮಾರಿನ ಭಾರತೀಯರು ಕಪಿಲ್ ದೇವ್ ಅವರ ಆಟ ನೋಡುತ್ತಾ ಬೆಳೆದರು. ನಾನು ಇಯಾನ್ ಬಾಥಮ್ ಆಟ ನೋಡುತ್ತಾ ಕ್ರಿಕೆಟ್ ಕುರಿತು ಆಸಕ್ತಿ ರೂಪಿಸಿಕೊಂಡೆ’ ಎಂದರು.

‘ಎರಡು ದೇಶಗಳ ನಡುವಣ ಸಂಬಂಧ ರೂಪಿಸುವಲ್ಲಿ ಸಂಸ್ಕೃತಿಯ ಪಾತ್ರ ಮಹತ್ವದ್ದು. ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರೊಂದಿಗಿನ ನನ್ನ ಮಾತುಕತೆಯಲ್ಲಿ ಇದು ಕೂಡ ಪ್ರಧಾನ ಅಂಶ ಆಗಲಿದೆ’ ಎಂದು ಕ್ಯಾಮರಾನ್ ಹೇಳಿದರು.

ಭದ್ರತಾ ಮಂಡಳಿ ಸ್ಥಾನ ಪಡೆಯಲು ಭಾರತಕ್ಕೆ ಸಕಾಲ 

ಭಾರತ, ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ತನಗೆ ನ್ಯಾಯಯುತವಾಗಿ ಸಿಗಬೇಕಾಗಿರುವ ಸ್ಥಾನ ಪಡೆಯಲು ಈಗ ಕಾಲ ಪಕ್ವವಾಗಿದೆ ಎಂದು ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರಾನ್ ಅಭಿಪ್ರಾಯಪಟ್ಟರು.  

ಬೆಂಗಳೂರು: ಜವಾಬ್ದಾರಿಯುತ ಜಾಗತಿಕ ಶಕ್ತಿಯಾಗಿ ರೂಪುಗೊಂಡಿರುವ ಭಾರತ, ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ತನಗೆ ನ್ಯಾಯಯುತವಾಗಿ ಸಿಗಬೇಕಾಗಿರುವ ಸ್ಥಾನ ಪಡೆಯಲು ಈಗ ಕಾಲ ಪಕ್ವವಾಗಿದೆ ಎಂದು ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರಾನ್ ಅಭಿಪ್ರಾಯಪಟ್ಟರು.

ಸಂಪುಟ ಸಹೋದ್ಯೋಗಿಗಳು, ವಿವಿಧ ಕಂಪೆನಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ವಿಶ್ವವಿದ್ಯಾಲಯಗಳ ಕುಲಪತಿಗಳು ಮತ್ತಿತರರನ್ನು ಒಳಗೊಂಡ ಬೃಹತ್ ನಿಯೋಗದೊಂದಿಗೆ ಭಾರತಕ್ಕೆ ಭೇಟಿ ನೀಡಿರುವ ಅವರು ಬುಧವಾರ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮಾಹಿತಿ ತಂತ್ರಜ್ಞರನ್ನು ಉದ್ದೇಶಿಸಿ ಮಾತನಾಡಿದರು.

‘ಆಫ್ಘಾನಿಸ್ತಾನಕ್ಕೆ ಭಾರತ ನೀಡಿರುವ ಬೆಂಬಲವನ್ನು ನಾವು ಸ್ವಾಗತಿಸಿದ್ದೇವೆ. ನೇಪಾಳ, ಭೂತಾನ್‌ಗೂ ಭಾರತ ನೆರವಿನಹಸ್ತ ಚಾಚಿದೆ. ‘ಜಿ-20’ ರಾಷ್ಟ್ರಗಳ ಸಮಾವೇಶದಲ್ಲಿ ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದಂತೆ ಭಾರತದ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಬೌದ್ಧಿಕ ನಾಯಕತ್ವ ಒದಗಿಸಿದ್ದನ್ನು ನಾನೇ ಕಂಡಿದ್ದೇನೆ. ಹೀಗಾಗಿ ಭಾರತ, ಭದ್ರತಾ ಮಂಡಳಿಯಲ್ಲಿ ಸ್ಥಾನ ಪಡೆಯಲು ಇದು ಸಕಾಲ’ ಎಂದು ಅವರು ವಿಶ್ಲೇಷಿಸಿದರು.

‘ಭಯೋತ್ಪಾದನೆಯನ್ನು ರಫ್ತು ಮಾಡುವ ಪಾಕಿಸ್ತಾನದ ಹುನ್ನಾರಗಳನ್ನು ಬ್ರಿಟನ್ ಸಹಿಸುವುದಿಲ್ಲ. ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವದ ಬೇರುಗಳು ಗಟ್ಟಿಗೊಳ್ಳಬೇಕು ಎಂಬುದು ನಮ್ಮ ಆಶಯ. ಭಯೋತ್ಪಾದಕ ಚಟುವಟಿಕೆಗಳಿಗೆ ಉತ್ತೇಜನ ನೀಡುವುದನ್ನು ನಾವು ಸಹಿಸುವುದಿಲ್ಲ’ ಎಂದು ಖಡಾಖಂಡಿತವಾಗಿ ನುಡಿದರು. ‘ಭಾರತಕ್ಕೆ ಆಗಿರಲಿ, ಆಫ್ಘಾನಿಸ್ತಾನಕ್ಕೆ ಆಗಿರಲಿ ಭಯೋತ್ಪಾದಕರನ್ನು ನುಸುಳಿಸುವುದನ್ನು ಸಹಿಸಲು ಆಗದು. ವಿದೇಶಿ ನೆರವನ್ನು ಇಂತಹ ಚಟುವಟಿಕೆಗಳಿಗೆ ಬಳಸುವುದಕ್ಕೆ ನಮ್ಮ ವಿರೋಧ ಇದೆ. ಈ ವಿಚಾರದಲ್ಲಿ ನಮ್ಮ ನಿಲುವು, ಸಂದೇಶ ಸ್ಪಷ್ಟವಾಗಿದೆ’ ಎಂದು ಅವರು ಪ್ರತಿಕ್ರಿಯಿಸಿದರು. 

ಎಚ್ಎಎಲ್­ಗೆ ಕ್ಯಾಮರಾನ್ ಭೇಟಿ

ಬೆಂಗಳೂರು, ಜು. 28 : ರಾಜ್ಯಕ್ಕೆ ಭೇಟಿ ನೀಡಿರುವ ಇಂಗ್ಲೆಂಡ್ ಪ್ರಧಾನಿ ಡೇವಿಡ್ ಕ್ಯಾಮರಾನ್ ಇಂದು ಹಿಂದುಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಭೇಟಿ ನೀಡಿದ್ದರು.

ಎಚ್ಎಎಲ್­ಗೆ ಭೇಟಿ ನೀಡಿದ ಇಂಗ್ಲೆಂಡ್ ಪ್ರಧಾನಿಗೆ ಎಚ್ಎಎಲ್ ನ ಅಧ್ಯಕ್ಷರಾದ ಅಶೋಕ್ ನಾಯಕ್, ಎಚ್ಎಎಲ್­ನ ಹಾಕ್ 132, ಲಘು ಯುದ್ಧ ವಿಮಾನ (ಎಲ್ಸಿಎ), ಇಂಟರ್ಮೀಡಿಯೇಟ್ ಜೆಟ್ ಟ್ರೈನರ್, ಹಗುರ ಯುದ್ಧ ಹೆಲಿಕಾಪ್ಟರ್, ಎಎಲ್ಎಚ್ ಹೆಲಿಕಾಪ್ಟರ್­ಗಳ ಬಗ್ಗೆ ವಿವರ ನೀಡಿದರು.

 

ಏರ್ಕ್ರಾಫ್ಟ್, ಇಂಜಿನ್ಸ್ ಹಾಗೂ ಸರ್ವಿàಸ್­ನ ವಿಷಯದಲ್ಲಿ ಪರಸ್ಪೆರ ಸಹಕರಿಸುವ ಒಪ್ಪಂದಕ್ಕೆ ಇದೇ ಸಂದರ್ಭದಲ್ಲಿ ಇಂಗ್ಲೆಂಡ್ ಮೂಲದ ಬಿಎಇ ಸಿಸ್ಟಮ್ಸ್, ರೋಲ್ಸ್ ರೈಸ್ ಜೊತೆಗೆ ಎಚ್ಎಎಲ್ ಸಹಿ ಮಾಡಿತು.

ಇಂಗ್ಲೆಂಡ್ ಪ್ರಧಾನಿ ಡೇವಿಡ್ ಕ್ಯಾಮರಾನ್ ಅವರು ಇನ್ಫೋಸಿಸ್ ಕಾರ್ಯಕ್ರಮಕ್ಕೆ ತೆರಳುವ­ ಮುನ್ನ ಬೆಳಿಗ್ಗೆ ರಾಜಭವನಕ್ಕೆ ಭೇಟಿ ನೀಡಿ ರಾಜ್ಯಪಾಲರೊಂದಿಗೆ ಚರ್ಚಿಸಿದರು.

ಇದೇ ವೇಳೆ ಇಂಗ್ಲೆಂಡ್ ಪ್ರಧಾನಿ ನೇತೃತ್ವದ ನಿಯೋಗದ ಸದಸ್ಯರಲ್ಲಿ ಒಬ್ಬರಾದ ನ್ಯಾನ್ಸಿ ನೋಬಲ್ ಅವರು ನಾರಾಯಣ ಹೃದಯಾಲಯ ಹಾಗೂ ಸ್ಪೆರ್ಶ ಆಸ್ಪೆತ್ರೆ ಹಾಗೂ ಡಾ ಕಿರಣ್ ಮಜುಂದಾರ್ ಅವರ ಕ್ಯಾನ್ಸರ್ ಆಸ್ಪೆತ್ರೆಗೆ ಭೇಟಿ ನೀಡಿದರು. ಡಾ. ದೇವಿ ಶೆಟ್ಟಿ , ಡಾ ಶರಣ್ ಪಾಟೀಲ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-07-29 00:00:00

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರ್ನಾಟಕ]

»ಕನ್ನಡ ಭಾಷೆ, ಸಾಹಿತ್ಯ ಪರಂಪರೆಗೆ ಐತಿಹಾಸಿಕ ಹಿನ್ನೆಲೆಗಳಿವೆ: ಮೂಡಿಗೆರೆ: 3ನೆ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪದಲ್ಲಿ ಸಮ್ಮೇಳನಾಧ್ಯಕ್ಷ ಡಿ.ಬಿ.ಸುಬ್ಬೇಗೌಡ
»ಶಂಕಿತ ಮಂಗನ ಕಾಯಿಲೆ ಪ್ರಕರಣ ಪತ್ತೆ: ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ವ್ಯಕ್ತಿ ದಾಖಲು; ಡಿಎಚ್‌ಓ-ಜಿ.ಪಂ. ಸದಸ್ಯರ ಭೇಟಿ
»ಗುಜರಿ ಅಂಗಡಿಯಲ್ಲಿ ಗಿಲೆಟಿನ್ ಸ್ಫೋಟ: ಮಾಲಕನ ಸಾವು
»ಸರಕಾರಕ್ಕೆ ಆರು ತಿಂಗಳ ಆನಂದ: ಭ್ರಷ್ಟಾಚಾರ ಮುಕ್ತ ಆಡಳಿತವೇ ನನ್ನ ಗುರಿ: ಸದಾನಂದ ಗೌಡ
»ಎತ್ತಿನಹೊಳೆ ಯೋಜನೆಯಿಂದ ಪರಮಶಿವಯ್ಯ ವರದಿಗೆ ಹಿನ್ನಡೆಯಾದರೆ ಹೋರಾಟ: ಸಂಸದ ಬಸವರಾಜು ಎಚ್ಚರಿಕೆ
»ಹಾಸ್ಯನಟನ ಅಂತಿಮಯಾತ್ರೆಯುದ್ದಕ್ಕೂ ಕಣ್ಣೀರು: ಹುಟ್ಟೂರು ಕೊಡಿಗೆಹಳ್ಳಿಯಲ್ಲಿ ಕರಿಬಸವಯ್ಯ ಅಂತ್ಯ ಕ್ರಿಯೆ
»ಸ್ಥಾನ ನೀಡಿ, ಇಲ್ಲವೇ ಪರಿಣಾಮ ಎದುರಿಸಿ: ಹೈಕಮಾಂಡ್‌ಗೆ ಬಿಎಸ್‌ವೈ ಎಚ್ಚರಿಕೆ
»ಬಿಎಸ್‌ವೈ ಕುಟುಂಬವನ್ನು ಮತ್ತೆ ಬೆಂಬತ್ತಿದ ಸಮನ್ಸ್: ಲೋಕಾಯುಕ್ತ ಕೋರ್ಟ್ ಆದೇಶ, ಮಾ.3ಕ್ಕೆ ಮುಂದಿನ ವಿಚಾರಣೆ
»ಶಿಕ್ಷಕರಿಗೆ ಅನುದಾನ ನೀಡದಿದ್ದರೆ ಸತ್ಯಾಗ್ರಹ: ಬಸವರಾಜ್
»ನಾನು ಘೋಷಣೆ ಮಾಡುವ ಮುಖ್ಯಮಂತ್ರಿಯಲ್ಲ: ಸದಾನಂದಗೌಡ
»ಇಲ್ರಿ.. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿಲ್ಲ: ಯಡ್ಡಿ
»`ಐಷಾರಾಮಿ ಜೀವನ: ನಾಗರಿಕತೆ ನಾಶ’: ಸುರೇಶ್ ಹೆಬ್ಳೀಕರ್
»ಸುವರ್ಣ ರಂಗ ಸಮ್ಮಾನ್ ಪ್ರಶಸ್ತಿ: ಮಾಹಿತಿ ಆಹ್ವಾನ
»ಒಳಮೀಸಲಾತಿ ವಿರುದ್ಧ ಒಗ್ಗಟ್ಟು:ಬಿಜೆಪಿ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶ(Updated)
»ಮಾಡು ಇಲ್ಲವೇ ಮಡಿ ಸ್ಥಿತಿ: ಯಡಿಯೂರಪ್ಪ ದಿಢೀರ್ ದೆಹಲಿಗೆ ದೌಡು
»ಜೈಲು ಗೋಡೆ ಎರಡು ಕೋಟಿ ನುಂಗಿತ್ತಾ..!
»ಗೂಳಿ ಹೊರಕ್ಕೆ: ಕಳಂಕಿತ ಸಭಾಧ್ಯಕ್ಷರೇ ಎಂದಿದ್ದಕ್ಕೆ ಸದನದಿಂದ ಒಂದು ದಿನ ಅಮಾನತು (Updated)
»ಮಡೆಸ್ನಾನ ನಿಷೇಧಕ್ಕೆ ಯತ್ನ: ಡಾ.ಆಚಾರ್ಯ
»ಹೈಕಮಾಂಡ್ ತುರ್ತು ಬುಲಾವ್: ದಿಲ್ಲಿಗೆ ದೌಡಾಯಿಸಿದ ಬಿಎಸ್‌ವೈ
»ಶಾಲಾ ಮಕ್ಕಳ ಮೇಲೆ ಲಾಠಿ ಪ್ರಹಾರ: ಬಜ್ಪೆ ಇನ್ಸ್‌ಪೆಕ್ಟರ್ ಮೇಲೆ ಕ್ರಮದ ಭರವಸೆ
»ಹಿಂದುಳಿದವರ ಅಭಿವೃದ್ಧಿಗೆ ಬಜೆಟ್‌ನಲ್ಲಿ ಸಾವಿರ ಕೋಟಿ ರೂ. ಮೀಸಲು: ಸಿಎಂ
»ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ: ತಾಯಿ-ಮಗು ಮೃತ್ಯು
»ವಿರೋಧದ ಮಧ್ಯೆ ಧಾರ್ಮಿಕ ದತ್ತಿ ವಿಧೇಯಕ ಅಂಗೀಕಾರ: ಮಹಿಳಾ ವಿವಿಗೆ ಎಲ್ಲ ಜಿಲ್ಲೆಗಳನ್ನು ಸೇರಿಸಿ: ಮಾತಿನ ಚಕಮಕಿ
»ಭದ್ರಾ, ಕುದುರೆಮುಖ ಆದಿವಾಸಿಗಳನ್ನು ಒಕ್ಕಲೆಬ್ಬಿಸುವುದಿಲ್ಲ: ಸಿಎಂ
»ಕೆಜಿಎಫ್ ತಾಲೂಕು ಕೇಂದ್ರಕ್ಕೆ ಆಗ್ರಹ: ಬಂದ್ ಯಶಸ್ವಿ
»ಕಳಪೆ ಬಿತ್ತನೆ ಬೀಜ ಪೂರೈಕೆ: ಕೈಗೆ ಬಂದ ತುತ್ತು ಬಾಯಿಗಿಲ್ಲ
»ರಾಜ್ಯದ ಆರ್ಥಿಕ ಸ್ಥಿತಿಯ ‘ಶ್ವೇತಪತ್ರ’ಕ್ಕೆ ಡಾ.ಜಿ.ಪರಮೇಶ್ವರ್ ಆಗ್ರಹ
»ಸುಬ್ರಹ್ಮಣ್ಯ ಸ್ವಾಮಿಗೆ ಡಾಕ್ಟರೇಟ್
»ಬಯಲುಸೀಮೆ ಆರು ಜಿಲ್ಲೆಗಳಿಗೆ ಕುಡಿಯುವ ನೀರು; ತಿಂಗಳಲ್ಲಿ ಎತ್ತಿನಹೊಳೆ ನಿರ್ಧಾರ. ನೇತ್ರಾವತಿ ತಿರುವು ಇಲ್ಲ..ಹೆಚ್ಚಿನ ನೀರನ್ನು ಬಳಸಿಕೊಳ್ಳುವ ಯೋಜನೆ
»`ಕೆನೆಪದರ' ಮಿತಿ ರೂ 3.5 ಲಕ್ಷಕ್ಕೆ ಹೆಚ್ಚಳ: ರಾಜ್ಯ ಸರ್ಕಾರ ತೀರ್ಮಾನ
»ಹಂಪಿ:ನಿಧಿ ಶೋಧ, ವಿಗ್ರಹಕ್ಕೆ ಕುತ್ತು
»ಡಿನೋಟಿಫಿಕೇಶನ್: ಮತ್ತೆ ಬಂಧನದ ಭೀತಿಯತ್ತ ಬಿ‌ಎಸ್‌ವೈ
»ಬೆಂಗಳೂರಿನಲ್ಲಿ ಸೀಟ್ ಬೆಲ್ಟ್ ನಿಯಮ ಜಾರಿ ...
»ಮೂಡಿಗೆರೆ ತಾಲೂಕು ಮೂರನೆ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ: ಆಡಳಿತ ಭಾಷೆಯಾಗಿ ಕನ್ನಡ ಜಾರಿಗೊಳಿಸುವಲ್ಲಿ ಸರಕಾರ ವಿಫಲ; ಸಮ್ಮೇಳನಾಧ್ಯಕ್ಷ ಡಿ.ಬಿ.ಸುಬ್ಬೇಗೌಡ
»ಅಕ್ರಮ ನಿವೇಶನ ಆರೋಪ: ಉ.ಲೋಕಾಯುಕ್ತರ ರಾಜೀನಾಮೆಗೆ ನಿವೃತ್ತ ನ್ಯಾ. ಸಲ್ಡಾನಾ ಆಗ್ರಹ
»ಗಣಿ ವರದಿ ಚರ್ಚೆಗೆ ಪಟ್ಟು: ಕೊನೆಗೂ ಮಣಿದ ಸ್ಪೀಕರ್
» ‘ಸ್ಪೀಕರ್’ ಗದ್ದಲ: ಪಕ್ಷೇತರರಿಂದ ಸಭಾತ್ಯಾಗ; ಮೇಲ್ಮನೆಯಲ್ಲಿ ಎರಡನೆ ದಿನವೂ ಪ್ರತಿಧ್ವನಿಸಿದ ‘ಲೋಕ’ ಗದ್ದಲ
»ಸಿದ್ದಗಂಗಾ ಶ್ರೀಗಳು ಸಾಯಿಬಾಬಾರ ಪ್ರತಿರೂಪ: ಬಿಎಸ್‌ವೈ
»ಆರೆಸ್ಸೆಸ್ ಕಪಿಮುಷ್ಟಿಯಲ್ಲಿ ರಾಜ್ಯ ಸರಕಾರ; ಆರೆಸ್ಸೆಸ್ ದೇಶದ್ರೋಹಿ ಸಂಘಟನೆ: ಸಂಸದ ವಿಶ್ವನಾಥ್ ಆತಂಕ
»ಕಳೆದ ಬಜೆಟ್ ಯೋಜನೆಗಳು ಇನ್ನೂ ಅನುಷ್ಠಾನಗೊಂಡಿಲ್ಲ: ಕುವಾರಸ್ವಾಮಿ
»ದಲಿತ ಶಾಸಕರಿಗೆ ರಕ್ಷಣೆ ಇಲ್ಲ: ನಮ್ಮ ಬೇಡಿಕೆಯನ್ನು ಕಡೆಗಣಿಸಲಾಗುತ್ತಿದೆ: ಗೂಳಿಹಟ್ಟಿ
»ಕೆಜಿಎಫ್: ಕಾನೂನು ಸಾಕ್ಷರತಾ ರಥಕ್ಕೆ ಚಾಲನೆ
»ಬಿಳಿಗಿರಿರಂಗನಬೆಟ್ಟದಲ್ಲಿ ಹೆಚ್ಚುವರಿ ಯಾತ್ರಿ ನಿವಾಸಕ್ಕೆ 77ಲಕ್ಷ ರೂ. ಮಂಜೂರು: ಜಿ.ಎನ್.ನಂಜುಂಡಸ್ವಾಮಿ
»ಹಿಂದೂ ವಿರೋಧಿ ಮತಾಂತರವಾದಿಗಳನ್ನು ಸದೆಬಡೆಯಿರಿ: ಪೇಜಾವರ ಶ್ರೀ ಕರೆ
»‘ನಿಜವಾದ ಸ್ವಾತಂತ್ರ್ಯ ಇನ್ನೂ ಸಿಕ್ಕಿಲ್ಲ’: ಅಣ್ಣಾ ಹಜಾರೆ
»ಅಗತ್ಯ ಬಿದ್ದಲ್ಲಿ ಬಿಎಸ್‌ವೈ ಮತ್ತೆ ಮುಖ್ಯಮಂತ್ರಿ: ನಾಯ್ಡು
»ವಿಧಾನ ಸಭೆ ಕಲಾಪಕ್ಕೆ ಆಗಮಿಸಿದ ಬೋಪಯ್ಯ: ರಾಜೀನಾಮೆಗೆ ಒತ್ತಾಯಿಸಿ ಅನರ್ಹ ಶಾಸಕರಿಂದ ಸಭಾತ್ಯಾಗ
»ಹರಪನಹಳ್ಳಿ: ಪೇಜಾವರ ಶ್ರೀಗಳಿಗೆ ಕಪ್ಪು ಬಟ್ಟೆ ಪ್ರದರ್ಶನ
»ಬಿಎಸ್‌ವೈ ಬೆಂಬಲಿಗರ ಹೊಸ ಗೇಮ್‌: ಶಾಸಕರ ಸಹಿ ಸಂಗ್ರಹ...
»ಹಿಂದೂ ಸಮಾವೇಶದ ನೆಲದಲ್ಲಿ ತಲೆ ಎತ್ತಲಿದೆ ಟೌನ್‌ಶಿಪ್: ಹಿಂದೂಗಳನ್ನು ಒಗ್ಗೂಡಿಸಿದ ಶಕ್ತಿ ಸ್ಥಳದ ಭಾವನಾತ್ಮಕತೆ ಉಳಿಸುವ ಯತ್ನ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri