ಆದಿತ್ಯವಾರ, 05-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಜನತಾ ನ್ಯಾಯಾಲಯದ ಮೂಲಕ 5154 ಪ್ರಕರಣ ಇತ್ಯರ್ಥ : ಲೋಕ್ ಅದಾಲತ್ ಸಮಾರೋಪದಲ್ಲಿ ನರೇಂದ್ರ ಕುಮಾರ್ ಗುಣಕಿ
Latest news item ಸೃಜನ ಶೀಲತೆ ಇಲ್ಲದಿದ್ದಾಗ ಶಿಕ್ಷಣದ ಬೆಳವಣಿಗೆಗೆ ಕೊರತೆ | ಅಶೋಕ್ ಕುಮಾರ್ ಶೆಟ್ಟಿ, ಎಂ.ಎಸ್.ನಾಗರಾಜ್ ರಾವ್ ಹಾಗೂ ಡಾ.ಚಂದ್ರಶೇಖರ್ ದಾಂಬ್ಲೆಯವರಿಗೆ ಸನ್ಮಾನ
Latest news item ದುಬಾಯಿಯಲ್ಲಿ ’ಗಮ್ಮತ್ ಕಲಾವಿದೇರ್’ ಪ್ರಥಮ ಪ್ರದರ್ಶನ: ನಟನಾ ಚಾತುರ್ಯದಲ್ಲಿ ಮಿಂಚಿದ ’ಈ ಪೊರ್ಲು ದಾಯೇ’ ತುಳು ನಾಟಕ
Latest news item ಸುಶಿಕ್ಷಿತರ ಸಂಖ್ಯೆ ಹೆಚ್ಚಾದಂತೆ ಕೃಷಿಯತ್ತ ಒಲವು ಕಡಿಮೆ : ಉಡುಪಿ ರೈತ ಸಮಾವೇಶದಲ್ಲಿ ಶಾಸಕ ರಘುಪತಿ ಭಟ್
Latest news item ಉಡುಪಿ ಲಯನ್ಸ್ ಗೆ ಜಿಲ್ಲಾ ಲಯನ್ಸ್ ಗವರ್ನರ್ ಇಂದ್ರಾಳಿ ಜಯಕರ್ ಶೆಟ್ಟಿ ಅಧಿಕೃತ ಭೇಟಿ
Latest news item ಸುಬ್ರಮಣಿಯನ್ ಸ್ವಾಮಿ ಅರ್ಜಿ ವಜಾ: ಚಿದಂಬರಂ ನಿರಾಳ
Latest news item ಇಲ್ರಿ.. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿಲ್ಲ: ಯಡ್ಡಿ
Latest news item ಚೆನ್ನೈ ತೆಕ್ಕೆಗೆ ಜಡೇಜಾ; 9.70 ಕೋಟಿಗೆ ಖರೀದಿ; ವಿನಯ ಕುಮಾರ್ ಗೆ 4.86ಕೋಟಿ ಕೊಟ್ಟ ರೋಯಲ್ ಚ್ಯಾಲೇಂಜರ್ಸ್ | ಯಾವ ಯಾವ ಫ್ರಾಂಚೈಸಿ ತೆಕ್ಕೆಗೆ?
Latest news item ಗೂಳಿ ಹೊರಕ್ಕೆ: ಕಳಂಕಿತ ಸಭಾಧ್ಯಕ್ಷರೇ ಎಂದಿದ್ದಕ್ಕೆ ಸದನದಿಂದ ಒಂದು ದಿನ ಅಮಾನತು (Updated)
Latest news item ಜೈನ ಸಾಹಿತಿಗಳಿಂದ ಕನ್ನಡ ಸಾಹಿತ್ಯದ ಬೆಳವಣಿಗೆ: ಡಾ.ಶಾಂತಿನಾಥ ದಿಬ್ಬದ
Latest news item ವೈದ್ಯರಲ್ಲಿ ಮಾನವೀಯತೆ ಮುಖ್ಯ: ನ್ಯಾ. ಸಂತೋಷ್ ಹೆಗ್ಡೆ
Latest news item ಪಡುಬಿದ್ರೆಯಲ್ಲಿ ಎಸಿಸಿ ಸಿಮೆಂಟ್ ಕಂಪೆನಿ ಸ್ಥಾಪನೆ: ರಸ್ತೆ ಕಾಮಗಾರಿಗೆ ಬೂದಿ ಬಳಸಬಹದು : ಡಿಸಿ | ಫೆ. 4ರಂದು ಪ್ರತಿಭಟನೆ
Latest news item ಉಡುಪಿ ಶೇಮ್, ಶೇಮ್ !: ಸೈಂಟ್ ಮೇರೀಸ್ ದ್ವೀಪದಲ್ಲಿ ಜಿಲ್ಲಾಡಳಿತ ಕೃಪಕಟಾಕ್ಷದಲ್ಲಿ ರೇವ್ ಪಾರ್ಟಿ: ವಿದೇಶಿ ಸಂಸ್ಕೃತಿ ಆನಾವರಣ, ಮದ್ಯ, ಡ್ರಗ್ಸ್ ಗಳದ್ದೇ ಕಾರುಬಾರು
Latest news item ಅಪಘಾತಕ್ಕೆ ತುತ್ತಾಗಿ ಕಾಮಿಡಿ ನಟ ಕರಿ ಬಸವಯ್ಯ ಅಕಾಲಿಕ ಮರಣ { VIEW VIDEO of HIS EMOTIONAL LIFE STORY }.
Latest news item ಬಯಲುಸೀಮೆ ಆರು ಜಿಲ್ಲೆಗಳಿಗೆ ಕುಡಿಯುವ ನೀರು; ತಿಂಗಳಲ್ಲಿ ಎತ್ತಿನಹೊಳೆ ನಿರ್ಧಾರ. ನೇತ್ರಾವತಿ ತಿರುವು ಇಲ್ಲ..ಹೆಚ್ಚಿನ ನೀರನ್ನು ಬಳಸಿಕೊಳ್ಳುವ ಯೋಜನೆ
Latest news item ಕುಸಿಯುವ ಭೀತಿಯಲ್ಲಿ ಕುದಿ ಗ್ರಾಮದ ಕೋಂಟು ಸೇತುವೆ : ಆತಂಕದಲ್ಲಿ ಗ್ರಾಮಸ್ಥರು : ಸೂಕ್ತ ಪರಿಹಾರಕ್ಕೆ ಒತ್ತಾಯ
Latest news item ಡಿವಿಜಿಯವರ ಕಾವ್ಯಗಳು ಜನಸ್ವಾರ್ಥ : ಡಾ. ಹೆಚ್. ಶಾಂತರಾಮ್
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ರಾಜಕೀಯ, ಹಣಕ್ಕಾಗಿ ಸೊಹ್ರಾಬುದ್ದೀನ್‌ನನ್ನು ಬರ್ಬರವಾಗಿ ಕೊಂದರು: ಸಿಬಿಐ | ಈ ಸೊಹ್ರಾಬುದ್ದೀನ್ ಯಾರು?

ಸೊಹ್ರಾಬುದ್ದೀನ್‌ನನ್ನು ಬರ್ಬರವಾಗಿ ಕೊಂದರು: ಸಿಬಿಐ ಆರೋಪ

ಅಹ್ಮದಾಬಾದ್, ಜು.28: ಕಳೆದ 2005ರ ನವೆಂಬರ್‌ನಲ್ಲಿ ಗುಜರಾತ್ ಹಾಗೂ ರಾಜಸ್ಥಾನ ಪೊಲೀಸರು ‘ಆಯೋಜಿಸಿದ್ದ ಎನ್‌ಕೌಂಟರ್ ನಲ್ಲಿ’ ಸೊಹ್ರಾಬುದ್ದೀನ್ ಶೇಖ್‌ನನ್ನು ‘ಬರ್ಬರವಾಗಿ’ ಹತ್ಯೆ ನಡೆಸಲಾಗಿದೆಯೆಂದು ಸಿಬಿಐ ಆರೋಪಿಸಿದೆ.

ಗುಜರಾತ್ ಎಟಿಎಸ್ ಹಾಗೂ ರಾಜಸ್ಥಾನದ ವಿಶೇಷ ಕಾರ್ಯಪಡೆಯ ಅಧಿಕಾರಿಗಳು ಅಹ್ಮದಾಬಾದ್‌ನಲ್ಲಿ ಸೊಹ್ರಾಬುದ್ದೀನ್‌ನ ನಕಲಿ ಎನ್‌ಕೌಂಟರ್‌ರನ್ನು ‘ಆಯೋಜಿಸಿದ್ದ ರೆಂಬುದು’ ತನಿಖೆಯಿಂದ ತಿಳಿದುಬಂದಿದೆಯೆಂದು ಅದು ಹೇಳಿದೆ.

ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣದ ಆರೋಪಿ ಮಾಜಿ ಪೊಲೀಸ್ ಅಧಿಕಾರಿ ಎನ್.ಕೆ. ಅಮೀನ್ ಬುಧವಾರ ಅಹ್ಮದಾಬಾದ್‌ನ ಸಿಬಿಐ ನ್ಯಾಯಾಲಯದಿಂದ ಹೊರಬರುತ್ತಿರುವುದು. 

ಸೊಹ್ರಾಬುದ್ದೀನ್‌ನನ್ನು ಅರ್ಹಂ ಫಾರ್ಮ್‌ನಿಂದ ಎನ್‌ಕೌಂಟರ್ ಸ್ಥಳಕ್ಕೆ ಕರೆದೊಯ್ದು ಕ್ರೂರವಾಗಿ ಕೊಲ್ಲಲಾಯಿತು. ಸೊಹ್ರಾಬುದ್ದೀನ್‌ನ ದೇಹದಿಂದ ಹೊರತೆಗೆದ ಗುಂಡುಗಳು ಆರೋಪಿಗಳಲ್ಲಿ ಒಬ್ಬರಾಗಿರುವ ಇನ್ಸ್‌ಪೆಕ್ಟರ್ ಎನ್.ಎಚ್. ದಾಭಿ ಎಂಬವರ ಸರ್ವೀಸ್ ರಿವಾಲ್ವರ್‌ನಿಂದ ಹಾರಿಸಿದವು ಗಳಾಗಿವೆಯೆಂದು ಬಂದೂಕು ತಜ್ಞರು ಅಭಿಪ್ರಾಯಿಸಿದ್ದಾರೆನ್ನಲಾಗಿದೆ.

ಗುಜರಾತ್‌ನ ಪ್ರಮುಖ ರಾಜಕೀಯ ನಾಯಕನೊಬ್ಬನ ಹತ್ಯೆ ನಡೆಸುವುದಕ್ಕಾಗಿ ಸೊಹ್ರಾಬುದ್ದೀನ್ ಸೂರತ್‌ನಿಂದ ಅಹ್ಮದಾಬಾದ್‌ಗೆ ರೈಲಿನಲ್ಲಿ ಬಂದಿದ್ದನೆಂದು ಪೊಲೀಸರು ಪ್ರತಿಪಾದಿಸಿದ್ದರೆಂದು ಜು.23ರಂದು ವಿಶೇಷ ನ್ಯಾಯಾಲಯವೊಂದಕ್ಕೆ ಸಿಬಿಐ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ.

ಸಂಚಿನ ಪ್ರಕಾರ, ಆರೋಪಿಗಳಾದ ಡಿ.ಜಿ. ವಂಝಾರ, ದಿನೇಶ್ ಎಂ.ಎನ್. ಹಾಗೂ ರಾಜಕುಮಾರ್ ಪಾಂಡ್ಯನ್ ಇತರ ಆರೋಪಿ ಪೊಲೀಸರೊಂದಿಗೆ ತಂಡವೊಂದನ್ನು ರಚಿಸಿ, ಅಹ್ಮದಾಬಾದ್‌ನ ವಿಶಾಲಾ ವೃತ್ತದ ಬಳಿ ಹೋಗಿದ್ದರು ಎಂದು ಸಿಬಿಐ ಆರೋಪಿಸಿದೆ. ಸೊಹ್ರಾಬುದ್ದೀನ್ ಮೋಟಾರ್ ಬೈಕೊಂ ದರ ಮೇಲೆ ಬಂದನೆಂದೂ, ಪೊಲೀಸರು ನಿಲ್ಲುವಂತೆ ಸೂಚಿಸಿದಾಗ ಆತ ಅವರತ್ತ ಗುಂಡು ಹಾರಿಸಿದನೆಂದೂ ಆರೋಪಿಗಳು ಪ್ರತಿಪಾದಿಸಿದ್ದರು. ಪ್ರತಿ ದಾಳಿಯಲ್ಲಿ ಆತ ಸಾವಿಗೀಡಾದನೆಂದು ಅವರು ಹೇಳಿದ್ದರು.

ಆದರೆ, ನಕಲಿ ಎನ್‌ಕೌಂಟರ್‌ರನ್ನು ಅಸಲಿ ಎಂದು ಬಿಂಬಿಸಲು ಆರೋಪಿಗಳೇ ಮೋಟಾರ್ ಬೈಕನ್ನು ಅಲ್ಲಿ ಇರಿಸಿದ್ದರೆಂಬುದು ತನಿಖೆಯಿಂದ ಬಹಿರಂಗವಾಗಿದೆಯೆಂದು ಸಿಬಿಐ ಹೇಳಿದೆ. ಸೊಹ್ರಾಬುದ್ದೀನ್‌ನ ಪತ್ನಿ ಕೌಸರ್‌ಬೀ ತನ್ನ ಗಂಡನ ಅಪಹರಣಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದ್ದಳು. ಗುಜರಾತ್ ಹಾಗೂ ರಾಜಸ್ಥಾನ ಪೊಲೀಸರ ದೃಷ್ಟಿಯಲ್ಲಿ ಆಕೆ ‘ಅಪಾಯಕಾರಿ ಸಾಕ್ಷಿ’ ಎನಿಸಿದ್ದಳು.

ಆಕೆಯನ್ನು ಆರೋಪಿಗಳು ಕೊಂದು, ಶವವನ್ನು ವಂಝಾರರ ತವರಾದ ಇಲ್ಲೋಳ ಗ್ರಾಮದಲ್ಲಿ ಸುಟ್ಟು ಬೂದಿಯನ್ನು ನದಿಗೆಸೆ ದರೆಂದು ಸಿಬಿಐ ಆಪಾದಿಸಿದೆ.

‘ಶಾ ನಿರ್ದೇಶನದಂತೆ ಸೊಹ್ರಾಬುದ್ದೀನ್ ಹತ್ಯೆ’

ಅಹ್ಮದಾಬಾದ್, ಜು.27: ಸೊಹ್ರಾಬುದ್ದೀನ್ ಶೇಕ್‌ನನ್ನು ಮುಗಿಸುವ ಹೊಣೆಗಾರಿಕೆಯನ್ನು ಗುಜರಾತ್‌ನ ಬಂಧಿತ ಮಾಜಿ ಸಚಿವ ಅಮಿತ್ ಶಾ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳಿಗೊಪ್ಪಿಸಿದ್ದರೆಂದು ಸಿಬಿಐ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ. ಸೊಹ್ರಾಬುದ್ದೀನ್‌ನ ಕೊಲೆಯ ಮೂಲಕ ವ್ಯಾಪಾರಿಗಳು ಹಾಗೂ ಇತರರ ಮನಸ್ಸಿನಲ್ಲಿ ಭೀತಿ ಹುಟ್ಟಿಸಿ ಹಣ ಸುಲಿಗೆ ಮಾಡುವ ಉದ್ದೇಶವನ್ನು ಆರೋಪಿಗಳು ಹೊಂದಿದ್ದರೆಂದು ಅದು ಆರೋಪಿಸಿದೆ.

ಸೊಹ್ರಾಬುದ್ದೀನ್ ರಾಜಸ್ಥಾನದ ಮಾರ್ಬಲ್ ಲಾಬಿಗೆ ಬೆದರಿಕೆಯೊಡ್ಡುತ್ತಿದ್ದುದರಿಂದ ಅಲ್ಲಿನ ಪೊಲೀಸರು ಆತನ ಹತ್ಯಾ ಪಿತೂರಿಯಲ್ಲಿ ಭಾಗವಹಿಸಿದ್ದರೆಂದು ಸಿಬಿಐ ಆಪಾದಿಸಿದೆ.  ಶಾ, ಸೊಹ್ರಾಬುದ್ದೀನ್‌ನನ್ನು ಮುಗಿಸುವ ಕೆಲಸವನ್ನು ಐಪಿಎಸ್ ಅಧಿಕಾರಿಗಳಾದ ಡಿ.ಜಿ. ವಂಝಾರ, ರಾಜಕುಮಾರ್ ಪಾಂಡ್ಯನ್ ಹಾಗೂ ಅಹ್ಮದಾಬಾದ್ ನಗರ ಕ್ರೈಂ ಬ್ರಾಂಚ್‌ನ ಮಾಜಿ ಡಿಸಿಪಿ ಅಭಯ ಚೂಡಾಸಮರಿಗೆ ಒಪ್ಪಿಸಿದ್ದರು.

ಸೊಹ್ರಾಬುದ್ದೀನ್ ಹಾಗೂ ಆತನ ಪತ್ನಿ ಕೌಸರ್‌ಬೀ ಗುಜರಾತ್ ಪೊಲೀಸರ ವಶದಲ್ಲಿದ್ದ ವೇಳೆ ಶಾ ಪೊಲೀಸ್ ಅಧಿಕಾರಿಗಳ ಸತತ ಸಂಪರ್ಕದಲ್ಲಿದ್ದರೆಂದು ಜು.23ರಂದು ದಾಖಲಿಸಲಾಗಿರುವ ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ. ಮಾಫಿ ಸಾಕ್ಷಿಯಾಗಿ ಪರಿವರ್ತಿತರಾಗಿರುವ ಗುಜರಾತ್‌ನ ಮಾಜಿ ಪೊಲೀಸ್ ಅಧಿಕಾರಿ ಎನ್.ಕೆ. ಅಮೀನ್ ದೂರವಾಣಿಯ ಮೂಲಕ ಶಾರ ಸತತ ಸಂಪರ್ಕದಲ್ಲಿದ್ದರೆಂಬುದು ಅವರ ವಿಚಾರಣೆಯಿಂದ ಬಹಿರಂಗಗೊಂಡಿದೆಯೆಂದು ಸಿಬಿಐ ನುಡಿದಿದೆ. 2005ರ ನ.21ರಿಂದ 30ರ ನಡುವೆ ಶಾ ಹಾಗೂ ಅಮೀನ್‌ರ ನಡುವೆ ಸುಮಾರು 25 ಕರೆಗಳ ವಿನಿಮಯವಾಗಿತ್ತೆಂದು ಅದು ಹೇಳಿದೆ.

ಸಬರಮತಿ ಬಂದಿಖಾನೆಯಲ್ಲಿ ಅಮಿತ್ ಶಾರ ವಿಚಾರಣೆ

ಅಹ್ಮದಾಬಾದ್, ಜು.28: ಸೊಹ್ರಾಬುದ್ದೀನ್ ಶೇಕ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಗುಜ ರಾತ್‌ನ ಮಾಜಿ ಸಹಾಯಕ ಗೃಹ ಸಚಿವ ಅಮಿತ್ ಶಾರ ವಿಚಾರಣೆಯನ್ನಿಂದು ಸಿಬಿಐ ಸಬರಮತಿ ಬಂದಿಖಾನೆಯಲ್ಲಿ ನ್ಯಾಯಾಲಯವೊಂದರ ಆದೇಶದನ್ವಯ ನಡೆಸಿದೆ. ಸಿಬಿಐಯ ಮನವಿಯೊಂದರ ಹಿನ್ನೆಲೆಯಲ್ಲಿ ಅದಕ್ಕೆ ಜು.28ರಿಂದ 30ರ ತನಕ ಶಾರ ವಿಚಾರಣೆ ನಡೆಸಲು ನ್ಯಾಯಾಲಯ ಅನುಮತಿ ನೀಡಿದೆ.

ಸಿಬಿಐ ಅಧಿಕಾರಿ ಅಮಿತಾಭ್ ಠಾರೂಕ್, ಇತರ ಅಧಿಕಾರಿಗಳು ಹಾಗೂ ವಕೀಲರು ವಿಚಾರಣಾ ತಂಡದಲ್ಲಿದ್ದರು. ಶಾರ ವಿನಂತಿಯಂತೆ ನ್ಯಾಯಾಲಯವು ವಿಚಾರಣೆಯ ದೃಶ್ಯ-ಶ್ರವಣ ದಾಖಲೆಗೆ ಆದೇಶ ನೀಡಿದೆ. ಸಿಬಿಐ ಅಧಿಕಾರಿಗಳು ತಮ್ಮ ಜತೆ ಸಬರಮತಿ ಬಂದಿಖಾನೆಯೊಳಗೆ ವಿಡಿಯೊ ಗ್ರಾಫರನ್ನು ಕರೆದೊಯ್ದಿದ್ದರು. ಶಾರನ್ನು ಬಂದಿಖಾನೆಯ ತಿಲಕ್ ಬರಾಕ್‌ನಲ್ಲಿರಿಸಲಾಗಿದೆ.

ರಾಜಕೀಯ, ಹಣಕ್ಕಾಗಿ ಸೊಹ್ರಾಬುದ್ದೀನ್ ಹತ್ಯೆ

ಅಹಮದಾಬಾದ್, ಬುಧವಾರ, 28 ಜುಲೈ 2010

ಶಂಕಿತ ಉಗ್ರ ಸೊಹ್ರಾಬುದ್ದೀನ್ ಶೇಖ್ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗುಜರಾತ್ ಮಾಜಿ ಗೃಹಸಚಿವ ಅಮಿತ್ ಶಾ ಕೊರಳಿನ ಸಿಬಿಐ ಉರುಳು ದಿನಗಳು ಕಳೆಯುತ್ತಿದ್ದಂತೆ ಬಿಗಿಯಾಗುತ್ತಿದೆ. ಇತ್ತೀಚೆಗಷ್ಟೇ ಸಿಬಿಐ ಸಲ್ಲಿಸಿರುವ ಆರೋಪಪಟ್ಟಿಯ ಪ್ರಕಾರ ಸೊಹ್ರಾಬುದ್ದೀನ್‌ನನ್ನು ಹಣಕಾಸು ಮತ್ತು ರಾಜಕೀಯ ಉದ್ದೇಶಗಳಿಗಾಗಿ ಕೊಲೆಗೈಯಲಾಗಿತ್ತು.

ಆರೋಪಪಟ್ಟಿಯ ಮುಖ್ಯಾಂಶಗಳು...

* ರಾಜಕೀಯ ಸಂಬಂಧ ಹೊಂದಿರುವ ಮಾರ್ಬಲ್ ವ್ಯಾಪಾರಿಗಳಿಂದ ಸೊಹ್ರಾಬುದ್ದೀನ್ ಹಣ ವಸೂಲಿ ಆರಂಭಿಸಿದ್ದ.
* ಇದರಿಂದ ಕುಪಿತಗೊಂಡ ಮಾರ್ಬಲ್ ವ್ಯಾಪಾರಿಗಳು ರಾಜಸ್ತಾನದ ರಾಜಕಾರಣಿಗಳನ್ನು ಸಂಪರ್ಕಿಸಿದ್ದರು.
* ರಾಜಸ್ತಾನ ಪೊಲೀಸರು ನೀಡಿದ ಮಾಹಿತಿಯಂತೆ, ಗುಜರಾತ್ ಪೊಲೀಸರು ಸೊಹ್ರಾಬುದ್ದೀನ್ ವಿರುದ್ಧ ಪ್ರಕರಣ ದಾಖಲಿಸಿದ್ದರು.
* ಸೊಹ್ರಾಬುದ್ದೀನ್‌ನನ್ನು ಮುಗಿಸುವ ಹೊಣೆಗಾರಿಕೆಯನ್ನು ಡಿಜಿಪಿ ವಂಜಾರಾ ಮತ್ತು ಅಭಯ್ ಚೂಡಾಸಾಮಾ ಅವರಿಗೆ ಅಮಿತ್ ಶಾ ನೀಡಿದ್ದರು.
* ರಾಜಕೀಯ ಮತ್ತು ಹಣಕಾಸು -- ಈ ಎರಡು ಉದ್ದೇಶಗಳಿಗಾಗಿ ಸೊಹ್ರಾಬುದ್ದೀನ್‌ನನ್ನು ನಕಲಿ ಎನ್‌ಕೌಂಟರ್ ಮಾಡಲಾಗಿತ್ತು.

ಗುಜರಾತ್ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಜುಲೈ 25ರಂದು ಶರಣಾಗಿದ್ದ ಅಮಿತ್ ಶಾರನ್ನು ಸಿಬಿಐ ಬಂಧಿಸಿತ್ತು. ನಂತರ ಅವರಿಗೆ 13 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಪ್ರಸಕ್ತ ಸಾಬರಮತಿ ಜೈಲಿನಲ್ಲಿದ್ದಾರೆ.

ಸಿಬಿಐಯಿಂದ ವಿಚಾರಣೆ...

ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡಿರುವಂತೆ ಇಂದು ಸಿಬಿಐ ಅಧಿಕಾರಿಗಳು ಮಾಜಿ ಸಚಿವ ಅಮಿತ್ ಶಾ ಅವರನ್ನು ಸಾಬರಮತಿ ಜೈಲಿನಲ್ಲಿ ವಿಚಾರಣೆ ನಡೆಸಿದೆ.

ಸೂಪರಿಂಟೆಂಡೆಂಟ್ ಅಮಿತಾಬ್ ಠಾಕೂರ್ ನೇತೃತ್ವದ ಮೂರು ಸದಸ್ಯರ ಸಿಬಿಐ ತಂಡವು ಬುಧವಾರ ಬೆಳಿಗ್ಗೆ ಭಾರೀ ಭದ್ರತೆಯನ್ನು ಒದಗಿಸಲಾಗಿರುವ ಸಾಬರಮತಿ ಜೈಲಿಗೆ ತೆರಳಿದ್ದು, ಮುಖ್ಯಮಂತ್ರಿ ನರೇಂದ್ರ ಮೋದಿಯವರ ನಿಕಟವರ್ತಿಯ ವಿಚಾರಣೆ ನಡೆಸಿದ್ದಾರೆ ಎಂದು ವರದಿಗಳು ಹೇಳಿವೆ.

ಅಧಿಕಾರಿಗಳ ಜತೆ ಇಬ್ಬರು ವೀಡಿಯೋಗ್ರಾಫರುಗಳು, ಓರ್ವ ವಕೀಲರು ವಿಚಾರಣೆಗೆ ತೆರಳಿದ್ದರು.

ಜುಲೈ 28ರಿಂದ 30ರ ನಡುವೆ ಬೆಳಿಗ್ಗೆ 9.30ರಿಂದ ಸಂಜೆ 5.30ರ ನಡುವೆ ಅಮಿತ್ ಅವರನ್ನು ವಿಚಾರಣೆ ನಡೆಸಬಹುದು. ಆದರೆ ವಿಚಾರಣೆಯ ಆಡಿಯೋ ಮತ್ತು ವೀಡಿಯೋ ದೃಶ್ಯಗಳನ್ನು ದಾಖಲು ಮಾಡಿಕೊಳ್ಳಬೇಕು ಎಂದು ಸಿಬಿಐ ನ್ಯಾಯಾಲಯವು ಸೂಚನೆ ನೀಡಿತ್ತು.

ಸಿಬಿಐ ತಂತ್ರಕ್ಕೆ ವಿರೋಧ...

ಡಿಎಸ್‌ಪಿ ಎನ್.ಕೆ. ಅಮೀನ್ ಅವರನ್ನು ಪ್ರಕರಣದಲ್ಲಿ ಮಾಫಿ ಸಾಕ್ಷಿಯನ್ನಾಗಿ ಬಳಸುವ ಮೂಲಕ ಅಮಿತ್ ಶಾ ವಿರುದ್ಧ ಕಠಿಣ ತಂತ್ರಗಳನ್ನು ಹೆಣೆದಿರುವ ಸಿಬಿಐ ನಿರ್ಧಾರವನ್ನು ಇತರ ಆರೋಪಿ ಅಧಿಕಾರಿಗಳು ತೀವ್ರವಾಗಿ ವಿರೋಧಿಸಿದ್ದಾರೆ.

ಡಿಐಜಿ ಡಿ.ಜಿ. ವಂಜಾರಾ, ಎಸ್‌ಪಿ ರಾಜ್‌ಕುಮಾರ್ ಪಾಂಡ್ಯನ್, ದಿನೇಶ್ ಎಂ.ಎನ್. ಸೇರಿದಂತೆ ಪ್ರಕರಣ ಸಂಬಂಧ ಆರೋಪ ಎದುರಿಸುತ್ತಾ ಜೈಲಿನಲ್ಲಿರುವ ಹಲವು ಪೊಲೀಸ್ ಅಧಿಕಾರಿಗಳು ಸಿಬಿಐ ನಿಲುವನ್ನು ಪ್ರತಿಭಟಿಸಿದ್ದಾರೆ ಎಂದು ವರದಿಗಳು ಹೇಳಿವೆ.

ಸೊಹ್ರಾಬುದ್ದೀನ್ ಹತ್ಯೆ ಪ್ರಕರಣದಲ್ಲಿ ಸ್ವತಃ ಆರೋಪಿಯಾಗಿರುವ ಅಮೀನ್, ತಾನು ಮಾಫಿ ಸಾಕ್ಷಿಯಾಗುವ ಮೂಲಕ ಶಿಕ್ಷೆಯಿಂದ ವಿನಾಯಿತಿ ಪಡೆದುಕೊಳ್ಳಲು ಬಯಸಿದ್ದರು. 

Who was Sohrabuddin Sheikh?

Ahmedabad:  Who was Sohrabuddin Sheikh, the man whose death five years ago is threatening to blow up into a political storm of enormous proportions?

The answer is likely to depend on who is talking. Some say he was a police informer turned rogue. Others say he was an extortionist who had angered influential people in the builder lobby in Gujarat and the marble lobby in Rajasthan. Some still say he was a terrorist.

What is not in dispute is that Sohrabuddin was in his mid-thirties, belonged to Jharnia village in Madhya Pradesh and was an established criminal. He operated in Udaipur, Ahmedabad and Ujjain.

What is also not in dispute is that on November 23, 2005, Sohrabuddin was travelling with his wife Kauser Bi from Hyderabad to Sangli in Maharashtra. Mid-way, the Anti-Terror Squad (ATS) of the Gujarat police stopped the bus and took them away.

The couple was kept locked at a farmhouse outside Ahmedabad. Three days later, a police team led by the ATS Chief DG Vanzara took Sohrabuddin away and killed him, claiming he was a terrorist trying to attack Gujarat Chief Minister Narendra Modi.

Sohrabuddin's wife Kausar Bi went missing. A state CID report said she was last seen a white Maruti car with Gujarat policemen in plain clothes. The Gujarat government later said Kausar had been killed and her body burnt.

A year later, on December 28, 2006, Sohrabuddin's partner in crime, Tulsiram Prajapati, was also killed by the Gujarat police in an encounter in Banaskantha. Investigations reveal that he knew about the Sohrabuddin encounter.

Since then it has been established that policemen of three states, Andhra Pradesh, Rajasthan and Gujarat carried out the killings at the behest of political bosses to silence men who knew too much.

After the arrest of senior IPS officer Abhay Chudasama in the case a few months ago, the CBI alleged that the policeman ran an extortion racket with Sohrabuddin Sheikh and was the prime conspirator in his abduction and murder. The investigative agency said Chudasama had been using Sohrabuddin since 2001 in to extort money from traders.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ವಾ ಭಾ | ವೆಬ್ ದುನಿಯ
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-07-28 00:00:00

Tell a Friend
ಇತರ ಸಂಭಂದಪಟ್ಟ ವರದಿಗಳು
»ಸೊಹ್ರಾಬುದ್ದೀನ್ ಪ್ರಕರಣ: ಅರ್ಹಂ ಮಾಲೀಕನಿಗೆ ಬುಲಾವ್
»ಸೊಹ್ರಾಬುದ್ದೀನ್ ಪ್ರಕರಣ: ಮಾಫಿ ಸಾಕ್ಷಿಯಾಗಲು ಅಮೀನ್ ನಿರ್ಧಾರ; ಅಮಿತ್ ಷಾಗೆ ಇನ್ನಷ್ಟು ಕಷ್ಟ
»ಅಮಿತ್ ಷಾ ಬಂಧನ, ನ್ಯಾಯಾಂಗ ವಶಕ್ಕೆ
» ಅಮಿತ್ ಎಲ್ಲಿ ಅಡಗಿದ್ದಾರೆ?: 'ಕಾಂ' | ಎಲ್ಲಾ ನಾಟಕ: ಚಿದು
»ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್; ಗುಜರಾತ್ ಗೃಹಸಚಿವ ಅಮಿತ್ ಶಾಹ್ ರಾಜೀನಾಮೆ
»ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣ: ಅಮಿತ್ ಶಾ ಬಂಧನ್ಕೆ ಕ್ಷಣಗಣನೆ; ನಿರೀಕ್ಷಣಾ ಜಾಮೀನು ಹಾಗೂ ಕಾಲಾವಕಾಶ ಕೋರಿದ ಶಾ: ಮನವಿ ತಿರಸ್ಕರಿಸಿದ ಸಿಬಿಐ ಕೋರ್ಟ್ | ‘ಇದು ರಾಜಕೀಯ ಹಗೆತನ - ಬಿಜೆಪಿ; ದುರದೃಷ್ಟಕರ- ಕಾಂಗ್ರೆಸ್
»ಕಾಲಾವಕಾಶ ಕೋರಿದ ಶಾ, ಮನವಿ ತಿರಸ್ಕರಿಸಿದ ಸಿಬಿಐ
»ಸಿಬಿಐ ಸಮನ್ಸ್: ಪ್ರಧಾನಿ ಔತಣ ಆಹ್ವಾನ ನಿರಾಕರಿಸಿದ ಬಿಜೆಪಿ
»ಸೊಹ್ರಬುದ್ದೀನ್ ಶೇಕ್ ನಕಲಿ ಎನ್‌ಕೌಂಟರ್; ಮೋದಿ ಸರಕಾರದ ಗೃಹಸಚಿವ ಅಮಿತ್ ಶಾಹ್ ರವರಿಗೆ ಸಿಬಿಐ ಸಮನ್ಸ್

ಪ್ರತಿಸ್ಪಂದನ
s.kumar@yahoo.com, manglore
2010-07-30
this sohrabuddin your father ( whose..? Guess - Editor)
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಭಾರತ]

»ಗುಜರಾತ್ ನರಮೇಧ: ಬಾಲಾಪರಾಧಿ ಆರೋಪಿಗಳ ವಿರುದ್ಧದ ಪ್ರಕರಣ ಕೈಬಿಡಲು ನಿರಾಕರಿಸಿದ ನ್ಯಾಯಾಲಯ
»ಪಥ್ರಿಬಾಲ್ ನಕಲಿ ಎನ್‌ಕೌಂಟರ್ ಪ್ರಕರಣ: ಉತ್ತರ ನೀಡುವಂತೆ ಸಿಬಿಐಗೆ ಸುಪ್ರೀಂ ಕೋರ್ಟ್ ಆದೇಶ
»‘ತಪ್ಪಾದ ದೇಶದಲ್ಲಿ, ತಪ್ಪಾದ ಕಾಲದಲ್ಲಿ ಹುಟ್ಟಿದ್ದೇವೆ’!: 8ನೆ ತರಗತಿಯ ವಿದ್ಯಾರ್ಥಿ ಜೋಡಿಯ ಆತ್ಮಹತ್ಯಾ ಪತ್ರದ ಆಘಾತಕಾರಿ ಸಾಲುಗಳು
»ಮದ್ಯಮುಕ್ತ ಗ್ರಾಮಸ್ಥರ ‘ಭೇಟಿ’ಯಾದ ಆಮಿರ್ ಖಾನ್
»ಪತ್ನಿಯ ಮೃತದೇಹ ಕತ್ತರಿಸಿ, ಸುಟ್ಟ ಪತಿ
»ಡ್ಯಾನಿಶ್ ಪತ್ರಕರ್ತನಿಗೆ ವೀಸಾ ನಿರಾಕರಿಸಿದ ಭಾರತ
»ಎಸ್ಪಿ ಜೊತೆ ಚುನಾವಣೋತ್ತರ ಮೈತ್ರಿಯಿಲ್ಲ: ರಾಹುಲ್
»ಕಾಶ್ಮೀರದ ವಿವಿಧೆಡೆ ಹಿಮಪಾತದ ಭೀತಿ
»ಪ.ಬಂಗಾಳದಿಂದ ‘ಕೋಬ್ರಾ’ ಪಡೆಗಳ ನಿರ್ಗಮನ
»ಅಚ್ಚರಿ ಆಗಿದೆ, ಭ್ರಮನಿರಸನ ಇಲ್ಲ, ಹೈಕೋರ್ಟಿಗೆ ಹೋಗುವೆ: ಸುಬ್ರಮಣಿಯನ್ ಸ್ವಾಮಿ
»ಅಸೆಂಬ್ಲಿಯಲ್ಲಿ ಕನ್ನಡದಲ್ಲೇ ಉತ್ತರಿಸಿದ ಜಯಲಲಿತಾ
»ಸುಬ್ರಮಣಿಯನ್ ಸ್ವಾಮಿ ಅರ್ಜಿ ವಜಾ: ಚಿದಂಬರಂ ನಿರಾಳ
»ಅಣ್ಣಾ ಟೀಮ್‌ನಿಂದ ಮುಸ್ಲಿಂ ನಾಯಕರಿಗೆ ಆಹ್ವಾನ
»ಅಮೆರಿಕ ವೀಸಾ ನೀತಿ ಬದಲು...
»ಕೇಂದ್ರಕ್ಕೆ ಮತ್ತೆ ತಪರಾಕಿ: ಸೇನಾ ಮುಖ್ಯಸ್ಥ ವಿ.ಕೆ.ಸಿಂಗ್ ಜನ್ಮದಿನ ವಿವಾದ
»ಏರ್ ಇಂಡಿಯಾ ಗುತ್ತಿಗೆ ಹಗರಣ: ಪ್ರಫುಲ್ ಪಟೇಲ್ ಲಂಚಾವತಾರ?; 10 ಕೋಟಿ ಡಾಲರ್ ಲಂಚ ಪಡೆದ ಆರೋಪ; ಯುಪಿಎಗೆ ಇನ್ನೊಂದು ಮುಖಭಂಗ
»ಮೋದಿ ವಿರುದ್ಧದ ತನಿಖೆಯ ಮುಕ್ತಾಯ ವರದಿ ಸಲ್ಲಿಸಲು ಸಿಟ್ ಯೋಜನೆ: ಶ್ರೀಕುಮಾರ್
»ಚೆನ್ನೈ: ಶಶಿಕಲಾ ಸಹೋದರ ದಿವಾಕರನ್ ಬಂಧನ
»ಆರುಷಿ ಹತ್ಯೆ ಪ್ರಕರಣ: ವಿಚಾರಣೆ ವರ್ಗಾವಣೆಗೆ ತಲ್ವಾರ್ ದಂಪತಿ ಮನವಿ: ಸಿಬಿಐಗೆ ಸುಪ್ರೀಂ ಕೋರ್ಟ್ ನೋಟಿಸ್
»ಗುಜರಾತ್ ಲೋಕಾಯುಕ್ತ ವಿವಾದ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್
»ಉತ್ತರ ಪ್ರದೇಶ: ಬಿರುಸುಗೊಂಡ ಪ್ರಚಾರ: ಮಾಯಾವತಿ-ಸೋನಿಯಾ ವಾಗ್ಯುದ್ಧ
»2ಜಿ ಸ್ಪೆಕ್ಟ್ರಂ ಹಗರಣ: ಪರವಾನಿಗೆ ರದ್ದತಿಯ ವಿರುದ್ಧ ಮೇಲ್ಮನವಿ: ದಿಗ್ವಿಜಯ್ ಸಿಂಗ್
»ಭೂಸೇನಾ ವರಿಷ್ಠನ ಜನ್ಮ ದಿನಾಂಕ ವಿವಾದ: ಸರಕಾರದ ನಿಲುವು ಅನುಮಾನಾಸ್ಪದ: ಸುಪ್ರೀಂ ಕೋರ್ಟ್ ತರಾಟೆ
»ಸೇನಾ ಮುಖ್ಯಸ್ಥರ ವಯೋವಿವಾದ: ಸರ್ಕಾರಕ್ಕೆ ಸುಪ್ರೀಂ ಪ್ರಶ್ನೆಗಳ ಸುರಿಮಳೆ
»ದೀಪಿಕಾ ವಿಶ್ವ ರ‌್ಯಾಂಕಿಂಗ್‌ನಲ್ಲಿ 14ನೇ ಸ್ಥಾನಕ್ಕೆ ನೆಗೆತ
»ಮ.ಪ್ರ.: ಗಣರಾಜ್ಯೋತ್ಸವ ಪಥ ಸಂಚಲನದ ಸ್ತಬ್ಧಚಿತ್ರಕ್ಕೆ 5 ರೂ. ಆಮಿಷವೊಡ್ಡಿ ಪುಟಾಣಿಯ ಬಳಕೆ
»ನರೇಂದ್ರ ಮೋದಿಯ ರಕ್ಷಣೆಗೆ ರಾಘವನ್ ಯತ್ನ: ಕಾಂಗ್ರೆಸ್
»ಶಸ್ತ್ರಾಸ್ತ್ರ ಕಾಯ್ದೆಯನ್ವಯದ ಮರಣ ದಂಡನೆ ರದ್ದುಗೊಳಿಸಿದ ಸುಪ್ರೀಂ ಕೋರ್ಟ್
»ಕಠಿಣ ಮೊಬೈಲ್ ಫೋನ್ ವಿಕಿರಣ ನೀತಿ ಜಾರಿಗೆ ನಿರ್ಧಾರ
»ಇಸ್ರೊ ವಿವಾದ: ಅಂತರಿಕ್ಷ್-ದೇವಾಸ್ ಸಮಿತಿಯ ವರದಿ ಬಹಿರಂಗಕ್ಕೆ ಪ್ರಧಾನಿ ಕಚೇರಿಯ ಚಿಂತನೆ
»ಕಬ್ಬಿಣದ ಅದಿರು ಸಾಗಾಟ ಹಗರಣ: ಇಬ್ಬರು ಐಎಎಸ್ ಅಧಿಕಾರಿಗಳ ಬಂಧನ
»ಒಡಿಶಾ: ಚುನಾವಣಾ ಕಣಕ್ಕಿಳಿದ ಅತ್ಯಾಚಾರ ಸಂತ್ರಸ್ತೆ
»ಪಂಜಾಬ್: ಉಪ ಪೊಲೀಸ್ ವರಿಷ್ಠಾಧಿಕಾರಿಯ ಹತ್ಯೆ
»ನಾಲ್ಕು ತೈಲ ಸಂಸ್ಥೆಗಳಿಂದ ಏರ್‌ಇಂಡಿಯಾಗೆ ತೈಲ ಪೂರೈಕೆ ಸ್ಥಗಿತ
»ಪುಣೆ ಭೇಟಿಗೆ ಕಲ್ಮಾಡಿಗೆ ಕೋರ್ಟ್ ನಕಾರ
»ವರ್ಷ ತುಂಬಿದ ರಾಜಾ ಜೈಲು ವಾಸ
»ತಮಿಳುನಾಡು: ವಿಧಾನಸಭೆಯಿಂದ ವಿಜಯ್‌ಕಾಂತ್ ಅಮಾನತು
»2ಜಿ ಸ್ಪೆಕ್ಟ್ರಂ ಹಗರಣಕ್ಕೆ ಎನ್‌ಡಿಎ, ರಾಜಾ ಹೊಣೆ: ಕಪಿಲ್ ಸಿಬಲ್
»2 ಜಿ. ರೇಡಿಯೊ ತರಂಗಾಂತರದ 122 ಲೈಸೆನ್ಸ್ ರದ್ದು, ಕೇಂದ್ರಕ್ಕೆ ಗುದ್ದು (ಪರಿಷ್ಕೃತ ವರದಿ)
»ನರೇಂದ್ರ ಮೋದಿ ಹಿಟ್ಲರ್ ಸಂತತಿಯಿದ್ದಂತೆ: ಕಾಂಗ್ರೆಸ್ ಟೀಕೆ
»2 ಜಿ ಹಗರಣದಲ್ಲಿ ಚಿದು ಪಾತ್ರ: ಸಿಬಿ‌ಐ ತನಿಖೆಗೆ ಸುಪ್ರೀಂ ಕೋರ್ಟ್ ನಕಾರ
»ಸುಬ್ರಮಣ್ಯಸ್ವಾಮಿ ಕೊಲೆಗೆ ಸೋನಿಯಾ ಗಾಂಧಿ ಯತ್ನ?
» 2ಜಿ ಹಗರಣ: 122 ಲೈಸನ್ಸ್ ರದ್ದುಗೊಳಿಸಿದ ಸುಪ್ರೀಂ ಕೋರ್ಟ್
»2ಜಿ ತರಂಗಾಂತರ ಹಂಚಿಕೆ ಹಗರಣ: ಇಂದು ಚಿದು ಭವಿಷ್ಯ ನಿರ್ಧಾರ
»ವಾಹನ ಚಾಲನಾ ನಿಯಮ ಉಲ್ಲಂಘನೆ: ಯೋಧರಿಂದ ದಾಂಧಲೆ
»371 ಕಲಂ ತಿದ್ದುಪಡಿಗೆ ಒತ್ತಾಯಿಸಿ ಕೇಂದ್ರ ಅಂಚೆ ಕಚೇರಿಗೆ ಮುತ್ತಿಗೆ
»ಭಾರತದ ವಾಯು ಜಗತ್ತಿನಲ್ಲೇ ಅತ್ಯಂತ ಮಾಲಿನ್ಯಯುತವಾದುದು: ವರದಿ
»ಬಡತನ ಮತ್ತು ಅಪರಾಧಕ್ಕೆ ನೇರ ಸಂಬಂಧ: ವರದಿ
»ಟಿಕೆಟ್ ನಿರಾಕರಣೆ: ಆತ್ಮಹತ್ಯೆಗೆ ಯತ್ನಿಸಿದ ಬಿಎಸ್ಪಿ ಶಾಸಕ
»ನನಗೂ ಖಾಸಗಿ ಜೀವನವಿದೆ; ಮಾಧ್ಯಮಗಳು ಅದನ್ನು ಉಲ್ಲಂಘಿಸಕೂಡದು: ರತನ್ ಟಾಟಾ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri