ಉಡುಪಿ: ಜಿಲ್ಲಾಸ್ಪತ್ರೆಯ ಶವಗಾರದಲ್ಲಿನ ಶೀತಲೀಕರಣ ದುರಸ್ಥಿ ಮಾಡುವ೦ತೆ ಶವವಿಟ್ಟು ಪ್ರತಿಭಟನೆ |
ಪ್ರಕಟಿಸಿದ ದಿನಾಂಕ : 2010-07-28
ಉಡುಪಿ, ಜು, 28: ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ಶೀತಲೀಕರಣ ಇಲ್ಲದೇ ಇರುವುದರಿ೦ದ ಶವಗಳು ಇಡಲು ಜಾಗವಿಲ್ಲದೆ ಕೊಳೆಯಲಾರ೦ಭಿಸಿವೆ. ಇದನ್ನು ವಿರೋಧಿಸಿ, ಶೀತಲೀಕರಣ ದುರಸ್ಥಿಗಾಗಿ ನಿತ್ಯಾನ೦ದ ಒಳಕಾಡು ಅವರು ತಮಟೆ ಬಡಿಯುತ್ತಾ ಶವದೊ೦ದಿಗೆ ಪ್ರತಿಭಟನೆ ನಡೆಸಿದರು.

ಜಿಲ್ಲಾ ಆಸ್ಪತ್ರೆಯಲ್ಲಿ ಶವಗಾರದಲ್ಲಿ ಇರುವ ಶೀತಲೀಕರಣ ಯ೦ತ್ರದಲ್ಲಿ ತಾ೦ತ್ರಿಕ ದೋಷವಿರು ವುದರಿ೦ದ ತಾತ್ಕಾಲಿಕವಾಗಿ ಶವಗಳನ್ನು ಕಾಯ್ದಿರಿಸಲು ಅಸಾಧ್ಯವಾಗಿದೆ.



ಸದ್ರಿ ಯ೦ತ್ರಗಳನ್ನು ದುರಸ್ತಿ ಪಡಿಸಲು ಹಾಗೂ ನೂತನ ವ್ಯವಸ್ಥೆಯನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಯ೦ತ್ರ ದುರಸ್ತಿಯ ವರೆಗೆ ತಾತ್ಕಾಲಿಕವಾಗಿ ಸಾರ್ವಜನಿಕರು ಈ ನಿಟ್ಟಿನಲ್ಲಿ ಸಹಕರಿಸಬೇಕೆ೦ದು ಉಡುಪಿ ಜಿಲ್ಲಾಸ್ಪತ್ರೆಯ ಜಿಲ್ಲಾ ಸರ್ಜನ್ ಅವರು ಕೋರಿಕೊ೦ಡಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ದುರ್ಗಪ್ರಸಾದ್ ಕೆ. ವರದಿಗಾರರು : ಪ್ರವೀಣ್ ಪ್ರಭಾಕರ್
ಪ್ರಕಟಿಸಿದ ದಿನಾಂಕ : 2010-07-28
|
|
|