ಸೌದಿ : ಹೊಟ್ಟೆಗೆ ಹೊಡೆದ ಮುಸ್ಲಿಂ ಮೌಲ್ವಿಗಳು: ಮನೆಕೆಲಸಕ್ಕೆ ಮುಸ್ಲಿ೦ರನ್ನು ಬಿಟ್ಟು ಹಿ೦ದೂ, ಕ್ರಿಶ್ಚಿಯನ್ನರನ್ನು ನೇಮಿಸಕೊಳ್ಳಬಾರದು |
ಪ್ರಕಟಿಸಿದ ದಿನಾಂಕ : 2010-07-28
ದುಬೈ, ಜು. 27 : ದಕ್ಷಿಣ ಕನ್ನಡ ಮತ್ತು ಕೇರಳದ ಬಹುಭಾಗದ ಜನರ ನಿದ್ದೆಗೆಡಿಸುವ ನಿರ್ಧಾರ ವನ್ನು ಸೌದಿ ಅರೇಬಿಯಾದ ಮುಸ್ಲಿಂ ಮೌಲ್ವಿಗಳು ತೆಗೆದುಕೊಂಡಿದ್ದಾರೆ. ಸೌದಿಯಲ್ಲಿ ಮನೆಗೆಲಸ ಕ್ಕೆ ಮುಸ್ಲಿಂ ಮಹಿಳೆಯರನ್ನು ಮಾತ್ರ ನೇಮಿಸಿಕೊಳ್ಳಬೇಕು. ಹಿಂದೂ ಇಲ್ಲವೇ ಕ್ರಿಶ್ಚಿಯನ್ನರನ್ನು ನೇಮಿಸಿಕೊಳ್ಳಬಾರದು ಎಂಬ ಸಂದೇಶವನ್ನು ಮುಸ್ಲಿಂ ಮುಖಂಡರು ಹೊರಡಿಸಿದ್ದು ಇದಕ್ಕೆ ಕಾರಣವಾಗಿದೆ.
ಸೌದಿಯಲ್ಲಿ ಮುಸ್ಲಿಂ ಹೆಣ್ಣುಮಕ್ಕಳನ್ನು ಮಾತ್ರ ಮನೆಗೆಲಸಕ್ಕೆ ನೇಮಕ ಮಾಡಿಕೊಳ್ಳಬೇಕು. ವಿದೇಶಿ ಹೆಣ್ಣುಮಕ್ಕಳನ್ನು ಮನೆಗೆಲಸಕ್ಕೆ ಸೇರಿಸಿಕೊಳ್ಳಬಹುದು. ಆದರೆ, ಅವರು ಮುಸ್ಲಿಮರಾಗಿ ರಬೇಕು. ಯಾವ ಕಾರಣಕ್ಕೂ ಹಿಂದೂ ಇಲ್ಲವೇ ಕ್ರಿಶ್ಚಿಯನ್ ಮಹಿಳೆಯನ್ನು ಮನೆಗೆಲಸಕ್ಕೆ ನೇಮಿಸಿಕೊಳ್ಳಬಾರದು ಎಂದು ಸೌದಿ ಅರೇಬಿಯಾದ ಮುಸ್ಲಿಂ ಮೌಲ್ವಿಗಳ ಮುಖಂಡ ಶೇಖ್ ಯೂಸೆಫ್ ಆಲ್ ಅಹ್ಮದ್ ಹೇಳಿದ್ದಾರೆ ಎಂದು sabq.org ವೆಬ್ ಸೈಟ್ ವರದಿ ಮಾಡಿದೆ.
ಮನೆಗೆಲಸಕ್ಕೆ ಸೇರುವ ವಿದೇಶಿ ಮಹಿಳೆಯರು ಸೌದಿ ಅರೇಬಿಯಾದ ಮುಖ್ಯವಾಗಿ ಇಸ್ಲಾಂ ಧರ್ಮಕ್ಕೆ ಅನುಗುಣವಾಗಿ ಕಾನೂನು ಕಟ್ಟಳೆಯ ಮಿತಿಯೊಳಗೆ ಮನೆಗೆಲಸ ಮಾಡಿಕೊಂಡು ಇರಬೇಕು. ಇದರ ಜೊತೆಗೆ ಮನೆಗೆಲಸಕ್ಕೆ ಸೇರುವ ಮಹಿಳೆಯರು ತಮ್ಮ ರಕ್ಷಣೆಗೆ ಗಂಡ ಅಥವಾ ಪೋಷಕರು ಇರುವುದು ಅವಶ್ಯಕ ಎಂದು ಅಹ್ಮದ್ ಹೇಳಿದ್ದಾರೆ.
ಸೌದಿಯಲ್ಲಿ ದಿನಗೂಲಿಗಳಾಗಿ ಕೆಲಸ ಮಾಡುತ್ತಿರುವ ಕನ್ನಡಿಗರು ಮತ್ತು ಮಲೆಯಾಳಿಗಳಿಗೆ ಮೌಲ್ವಿಗಳು ತೆಗೆದುಕೊಂಡಿರುವ ನಿಲುವು ಚಿಂತೆಗೀಡು ಮಾಡಿದೆ. ದಕ್ಷಿಣ ಕನ್ನಡದಿಂದ ಸಾವಿ ರಾರು ಕನ್ನಡಿಗರು ಹೊಟ್ಟೆಪಾಡಿಗಾಗಿ ಉದ್ಯೋಗ ಅರಸಿ ಸೌದಿಗೆ ತೆರಳಿದ್ದಾರೆ. ಮಹಿಳೆಯರಿ ಗಿಂತ ಪುರುಷರೆ ಹೆಚ್ಚಾಗಿ ಮನೆಗೆಲಸ ಮಾಡುತ್ತಿದ್ದಾರೆ. ಜೊತೆಗೆ ಕೇರಳದ ಬಹುಭಾಗದ ಜನ ನಂಬಿರುವುದು ಈ ತೈಲ ರಾಷ್ಟ್ರವನ್ನ.
ಕೇರಳದಲ್ಲಿ ಪ್ರತಿ ಮನೆಗೂ ಒಬ್ಬರಂತೆ ಸೌದಿಯಲ್ಲಿ ಕೆಲಸ ಮಾಡಿ ಮರಳಿ ಬಂದವರೆ, ವಿದ್ಯಾಭ್ಯಾ ಸ ಕಡಿಮೆಯಿದ್ದರೂ ಪರವಾಗಿಲ್ಲ. ಸೌದಿಯಲ್ಲಿ ಕೆಲಸ ಸಿಗಲಿದೆ ಎಂಬ ಮಾತಿದೆ. ಇದೀಗ ಮನೆ ಗೆಲಸದವರ ತುತ್ತಿಗೆ ಕೈಹಾಕಿರುವ ಮೌಲ್ವಿಗಳು, ನಾಳೆಗೆ ಸೌದಿಯಲ್ಲಿ ಮುಸ್ಲಿಮರಿಗೆ ಮಾತ್ರ ಉದ್ಯೋಗ, ಹಿಂದೂ, ಕ್ರಿಶ್ಚಿಯನ್ನರಿಗೆ ಇಲ್ಲ ಎಂಬ ಸಂದೇಶವನ್ನು ರವಾನಿಸಬಹುದು.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-07-28 00:00:00
|
|
|