ಮು೦ಬೈ: ವಿಜ್ಞಾನ ವೈಜಯಂತಿ ರಾಷ್ಟ್ರೀಯ ಸಮ್ಮೇಳನ |
ಪ್ರಕಟಿಸಿದ ದಿನಾಂಕ : 2010-07-28
ಮುಂಬೈ: ಕರ್ನಾಟಕದ ಹರಿದಾಸ ಸೈಂಟಿಫಿಕ್ ರಿಸರ್ಚ್ ಸೆಂಟರ್ ವತಿಯಿಂದ ಹರಿದಾಸ ಸಾಹಿತ್ಯದ ವಿಚಾರ ಸಂಕಿರಣವನ್ನು ಇಲ್ಲಿಯ ವಿಜಯನಗರದಲ್ಲಿ ಏರ್ಪಡಿಸಲಾಗಿತ್ತು. ಹರಿದಾಸ ಸಾಹಿತ್ಯದ ವೈಜ್ಞಾನಿಕ ದೃಷ್ಟಿಕೋನ ಈ ವಿಚಾರಸಂಕಿರಣದಲ್ಲಿ ಚರ್ಚೆಯಾಯಿತು. ನೂರಾರು ತಜ್ಞರು ಹಾಗೂ ಕಲಾವಿದರು ಭಾಗವಹಿಸಿದ್ದರು. ಹರಿದಾಸ ಸಾಹಿತ್ಯ ಆಧರಿತ ಭರತ ನಾಟ್ಯ ವನ್ನು ಸೌಖ್ಯ ಐತಾಳ, ಅಕ್ಷರ ಭಾರದ್ವಾಜ್ ಪ್ರದರ್ಶಿಸಿದರು.
೨೦ನೇ ಶತಮಾನದ ಹರಿದಾಸರಾದ ಶ್ರೀ ಪ್ರದ್ಯುಮ್ನ ತೀರ್ಥ ಶ್ರೀಗಳ ಆರಾಧನಾ ಮಹೋತ್ಸವ ಕೂಡ ವಿಜೃಂಭಣೆಯಲ್ಲಿ ಜರುಗಿತು. ಜೀವ ಪ್ರಕರಣ ಎಂಬ ಗೋಷ್ಠಿಯನ್ನು ಪ್ರಾ.ರಂಗನಾಥ್ ಭಾರದ್ವಾಜ್ ಅವರ ನಿರ್ವಹಣೆಯಲ್ಲಿ ನಡೆಸಲಾಯಿತು. ಭಾರದ್ವಾಜ್ ಅವರು ದಿ ಸ್ಕೂಲ್ ಆಫ್ ಫೈನ್ ಆರ್ಟ್ಸ್‌ನವರ ಡಿಪ್ಲೋಮ ಇನ್ ಅಡ್‌ವಾನ್ಸಡ್ ಭರತನಾಟ್ಯ ತರಗತಿಯನ್ನು ಉದ್ಘಾಟಿಸಿ ದರು.
ಸಾಯಂಕಾಲ ಕಾರ್ಯಕ್ರಮದಲ್ಲಿ ‘ಬಡಾಯ್ನೋರ ಬಡ್ದಾಟದಲ್ಲಿ ಬೊಕ್ಸ ಬೋಳಾಯ್ತು’ ಎಂಬ ನಾಟಕದ ಪ್ರಯೋಗ ಹಾಸ್ಯದ ಹೋಳೆಯನ್ನು ಹರಿಸಿತು. ಹಿರಿಯ ರಂಗನಟರಾದ ಸುಬ್ರಾಯ ಭಟ್, ರಾಮು, ಅರುಣಕುಮಾರ ಹಾಗು ಭವಾನಿ ಸಿಂಘ ಅಮೋಘ ಅಭಿನಯವು ಮೆರಗು ತಂದಿತು. ಹಾಸ್ಯ ಲೇಖಕಿ ಶ್ರೀಮತಿ ಸಾಯಿ ಲಕ್ಷ್ಮಿಯವರು ಮಾತನಾಡಿದರು. ಕೊನೆಯ ದಿನ ಸುಮಾರು ೬೫ ಕಲಾವಿದರು ವೈವಿಧ್ಯಮವಾದ ನೃತ್ಯಗಳ ಮುಖಾಂತರ ತಮ್ಮ ಕಲೆಯನ್ನು ಪ್ರದರ್ಶಿಸಿದರು.
ಶಿಕ್ಷಕಿ ಉಷರಾಣಿ ಕೆ., ವಿಶಾಲಾಕ್ಷಿಭಟ್ಟ ಅವರಿಗೆ ಡಿಪ್ಲೋಮ ಇನ್ ಇಂಟಗ್ರೇಟೆಡ್ ಹರಿದಾಸ್ ಪದವಿಯನ್ನು ಪ್ರದಾನ ಮಾಡಲಾಯಿತು. ಡಾ.ಮಾದನೂರು ಪಿ., ಹೊಳವನಹಳ್ಳಿ ಶ್ರೀನಿವಾಸಾ ಚಾರ್ಯ, ಮೈಸೂರು ಗಮಕಿ ಪಿ.ಎ.ಗಿರಿಧರ್, ರಾಘವೇಂದ್ರಚಾರ್, ಶ್ರೀರಾಮ ವಿಠಲಾಚಾರ್ಯ ಮೊದಲಾದ ವಿದ್ವಾಂಸರು ಹರಿದಾಸ ಸಾಹಿತ್ಯದ ಆಧಾರದ ಮೇಲೆ ಪ್ರವಚನ ನೀಡಿದರು. ಹರಿದಾಸ ಸಾಹಿತ್ಯ ಸಮ್ಮೇಳದಲ್ಲಿ ಪರ ರಾಜ್ಯದ ವತಿಯಿಂದ ಮುಂಬೈ ಪುಣೆ ಮೈಸೂರು ಧಾರವಾಡ ಮುಂತಾದ ನಗರಗಳಿಂದ ಜನರು ಭಾಗವಹಿಸಿ ಸಮ್ಮೇಳನ ಯಶಸ್ವಿಗೊಳಿಸಿದರು.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-07-28 00:00:00
|
|
|