ಆದಿತ್ಯವಾರ, 05-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಜನತಾ ನ್ಯಾಯಾಲಯದ ಮೂಲಕ 5154 ಪ್ರಕರಣ ಇತ್ಯರ್ಥ : ಲೋಕ್ ಅದಾಲತ್ ಸಮಾರೋಪದಲ್ಲಿ ನರೇಂದ್ರ ಕುಮಾರ್ ಗುಣಕಿ
Latest news item ಸೃಜನ ಶೀಲತೆ ಇಲ್ಲದಿದ್ದಾಗ ಶಿಕ್ಷಣದ ಬೆಳವಣಿಗೆಗೆ ಕೊರತೆ | ಅಶೋಕ್ ಕುಮಾರ್ ಶೆಟ್ಟಿ, ಎಂ.ಎಸ್.ನಾಗರಾಜ್ ರಾವ್ ಹಾಗೂ ಡಾ.ಚಂದ್ರಶೇಖರ್ ದಾಂಬ್ಲೆಯವರಿಗೆ ಸನ್ಮಾನ
Latest news item ದುಬಾಯಿಯಲ್ಲಿ ’ಗಮ್ಮತ್ ಕಲಾವಿದೇರ್’ ಪ್ರಥಮ ಪ್ರದರ್ಶನ: ನಟನಾ ಚಾತುರ್ಯದಲ್ಲಿ ಮಿಂಚಿದ ’ಈ ಪೊರ್ಲು ದಾಯೇ’ ತುಳು ನಾಟಕ
Latest news item ಸುಶಿಕ್ಷಿತರ ಸಂಖ್ಯೆ ಹೆಚ್ಚಾದಂತೆ ಕೃಷಿಯತ್ತ ಒಲವು ಕಡಿಮೆ : ಉಡುಪಿ ರೈತ ಸಮಾವೇಶದಲ್ಲಿ ಶಾಸಕ ರಘುಪತಿ ಭಟ್
Latest news item ಉಡುಪಿ ಲಯನ್ಸ್ ಗೆ ಜಿಲ್ಲಾ ಲಯನ್ಸ್ ಗವರ್ನರ್ ಇಂದ್ರಾಳಿ ಜಯಕರ್ ಶೆಟ್ಟಿ ಅಧಿಕೃತ ಭೇಟಿ
Latest news item ಸುಬ್ರಮಣಿಯನ್ ಸ್ವಾಮಿ ಅರ್ಜಿ ವಜಾ: ಚಿದಂಬರಂ ನಿರಾಳ
Latest news item ಇಲ್ರಿ.. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿಲ್ಲ: ಯಡ್ಡಿ
Latest news item ಚೆನ್ನೈ ತೆಕ್ಕೆಗೆ ಜಡೇಜಾ; 9.70 ಕೋಟಿಗೆ ಖರೀದಿ; ವಿನಯ ಕುಮಾರ್ ಗೆ 4.86ಕೋಟಿ ಕೊಟ್ಟ ರೋಯಲ್ ಚ್ಯಾಲೇಂಜರ್ಸ್ | ಯಾವ ಯಾವ ಫ್ರಾಂಚೈಸಿ ತೆಕ್ಕೆಗೆ?
Latest news item ಗೂಳಿ ಹೊರಕ್ಕೆ: ಕಳಂಕಿತ ಸಭಾಧ್ಯಕ್ಷರೇ ಎಂದಿದ್ದಕ್ಕೆ ಸದನದಿಂದ ಒಂದು ದಿನ ಅಮಾನತು (Updated)
Latest news item ಜೈನ ಸಾಹಿತಿಗಳಿಂದ ಕನ್ನಡ ಸಾಹಿತ್ಯದ ಬೆಳವಣಿಗೆ: ಡಾ.ಶಾಂತಿನಾಥ ದಿಬ್ಬದ
Latest news item ವೈದ್ಯರಲ್ಲಿ ಮಾನವೀಯತೆ ಮುಖ್ಯ: ನ್ಯಾ. ಸಂತೋಷ್ ಹೆಗ್ಡೆ
Latest news item ಪಡುಬಿದ್ರೆಯಲ್ಲಿ ಎಸಿಸಿ ಸಿಮೆಂಟ್ ಕಂಪೆನಿ ಸ್ಥಾಪನೆ: ರಸ್ತೆ ಕಾಮಗಾರಿಗೆ ಬೂದಿ ಬಳಸಬಹದು : ಡಿಸಿ | ಫೆ. 4ರಂದು ಪ್ರತಿಭಟನೆ
Latest news item ಉಡುಪಿ ಶೇಮ್, ಶೇಮ್ !: ಸೈಂಟ್ ಮೇರೀಸ್ ದ್ವೀಪದಲ್ಲಿ ಜಿಲ್ಲಾಡಳಿತ ಕೃಪಕಟಾಕ್ಷದಲ್ಲಿ ರೇವ್ ಪಾರ್ಟಿ: ವಿದೇಶಿ ಸಂಸ್ಕೃತಿ ಆನಾವರಣ, ಮದ್ಯ, ಡ್ರಗ್ಸ್ ಗಳದ್ದೇ ಕಾರುಬಾರು
Latest news item ಅಪಘಾತಕ್ಕೆ ತುತ್ತಾಗಿ ಕಾಮಿಡಿ ನಟ ಕರಿ ಬಸವಯ್ಯ ಅಕಾಲಿಕ ಮರಣ { VIEW VIDEO of HIS EMOTIONAL LIFE STORY }.
Latest news item ಬಯಲುಸೀಮೆ ಆರು ಜಿಲ್ಲೆಗಳಿಗೆ ಕುಡಿಯುವ ನೀರು; ತಿಂಗಳಲ್ಲಿ ಎತ್ತಿನಹೊಳೆ ನಿರ್ಧಾರ. ನೇತ್ರಾವತಿ ತಿರುವು ಇಲ್ಲ..ಹೆಚ್ಚಿನ ನೀರನ್ನು ಬಳಸಿಕೊಳ್ಳುವ ಯೋಜನೆ
Latest news item ಕುಸಿಯುವ ಭೀತಿಯಲ್ಲಿ ಕುದಿ ಗ್ರಾಮದ ಕೋಂಟು ಸೇತುವೆ : ಆತಂಕದಲ್ಲಿ ಗ್ರಾಮಸ್ಥರು : ಸೂಕ್ತ ಪರಿಹಾರಕ್ಕೆ ಒತ್ತಾಯ
Latest news item ಡಿವಿಜಿಯವರ ಕಾವ್ಯಗಳು ಜನಸ್ವಾರ್ಥ : ಡಾ. ಹೆಚ್. ಶಾಂತರಾಮ್
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
‘ನಾಡ ರಕ್ಷಣಾ ನಡಿಗೆ’: 3ನೇ ದಿನವೂ ಕುಗ್ಗದ ಉತ್ಸಾಹ; ಜನಬೆಂಬಲದ ಹಿಗ್ಗಿನಲ್ಲಿ ಮರೆಯಾದ ‘ನೋವು’

ಪಾದಯಾತ್ರೆ ಸುದ್ದಿ ಪತ್ರಿಕೆಗಳಲ್ಲಿ ಪ್ರಮುಖವಾಗಿ ಪ್ರಕಟವಾಗಿದ್ದರಿಂದ ಮುಖಂಡರ ಹುಮ್ಮಸ್ಸು ಇಮ್ಮಡಿ ಯಾಯಿತು. ಪತ್ರಿಕೆಗಳಲ್ಲಿನ ವರದಿಗಳ ಬಗ್ಗೆಯೂ ವಿಶ್ಲೇಷಣೆ ನಡೆಯಿತು.  

ಬೆಂಗಳೂರು: ಪಾದಯಾತ್ರೆಯ ಮೂರನೇ ದಿನವೂ ಅದೇ ಉತ್ಸಾಹ, ಅದೇ ಹುಮ್ಮಸ್ಸು. ಮಂಗಳವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಟಿ.ಬೇಗೂರಿನಿಂದ ಆರಂಭವಾದ ‘ನಾಡ ರಕ್ಷಣಾ ನಡಿಗೆ’ಗೆ ಉತ್ತಮ ಜನಬೆಂಬಲ ವ್ಯಕ್ತವಾಯಿತು. ಇದರಿಂದ ಪುಳಕಗೊಂಡ ಕಾಂಗ್ರೆಸ್ ಮುಖಂಡರು ಹಿಂದಿಗಿಂತ ಹೆಚ್ಚು ಜೋಷ್‌ನಲ್ಲಿದ್ದರು.

ರಾಜ್ಯ ಸರ್ಕಾರದ ವಿರುದ್ಧ ಹಮ್ಮಿಕೊಂಡಿರುವ ಬೆಂಗಳೂರಿನಿಂದ ಬಳ್ಳಾರಿವರೆಗಿನ ಎರಡನೇ ದಿನದ ಪಾದಯಾತ್ರೆ ಸೋಮವಾರ ಟಿ.ಬೇಗೂರಿನಲ್ಲಿ ಕೊನೆಗೊಂಡಿತ್ತು. ಅಲ್ಲೇ ಕಲ್ಯಾಣ ಮಂಟಪವೊಂದರಲ್ಲಿ ತಂಗಿದ್ದ ಮುಖಂಡರು ಮಂಗಳವಾರ ಬೆಳಿಗ್ಗೆ ಎದ್ದ ತಕ್ಷಣ ಕಾಫಿ ಸೇವಿಸುತ್ತಲೇ ದಿನಪತ್ರಿಕೆಗಳ ಮೇಲೆ ಕಣ್ಣಾಡಿಸಿದರು.

ಪಾದಯಾತ್ರೆ ಸುದ್ದಿ ಪತ್ರಿಕೆಗಳಲ್ಲಿ ಪ್ರಮುಖವಾಗಿ ಪ್ರಕಟವಾಗಿದ್ದರಿಂದ ಮುಖಂಡರ ಹುಮ್ಮಸ್ಸು ಇಮ್ಮಡಿಯಾಯಿತು. ಪತ್ರಿಕೆಗಳಲ್ಲಿನ ವರದಿಗಳ ಬಗ್ಗೆಯೂ ವಿಶ್ಲೇಷಣೆ ನಡೆಯಿತು. ಕಾರ್ಯಕರ್ತರು ಕೂಡ ಪತ್ರಿಕೆಗಳಲ್ಲಿನ ಸುದ್ದಿಗಳ ಬಗ್ಗೆ ಮುಖಂಡರಿಗೆ ಮಾಹಿತಿ ನೀಡಿದರು.

ಇವೆಲ್ಲವನ್ನೂ ಆಲಿಸಿದ ಮುಖಂಡರು, ಪಾದಯಾತ್ರೆಗೆ ನಿರೀಕ್ಷೆಗೂ ಮೀರಿದ ಜನ ಬೆಂಬಲ ಸಿಗುತ್ತಿದೆ ಎಂದು ಹಿಗ್ಗಿದರು. ಕಾಲು ನೋವು ಲೆಕ್ಕಿಸದೆ ಪಾದಯಾತ್ರೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು.

ಮೂರನೇ ದಿನದ ಪಾದಯಾತ್ರೆಗೆ 18 ಕಿ.ಮೀ. ನಿಗದಿ ಮಾಡಿದ್ದು, ಮಧ್ಯಾಹ್ನ ಕುಲುವನಹಳ್ಳಿಯಲ್ಲಿ ಊಟ ಸೇವಿಸಿದರು. ವಿಶ್ರಾಂತಿ ಪಡೆದರು. ಸಂಜೆ 4ಕ್ಕೆ ಪುನಃ ಆರಂಭವಾದ ಯಾತ್ರೆ 5.45ಕ್ಕೆ ದಾಬಸ್‌ಪೇಟೆ ತಲುಪಿತು. ಅಲ್ಲಿ ಸಾರ್ವಜನಿಕ ಸಮಾರಂಭ. ನಂತರ ರಾತ್ರಿ ಅಲ್ಲೇ ವಾಸ್ತವ್ಯ.

ಮುಖಂಡರಿಗೆ ಹಳ್ಳಿಗಳಲ್ಲಿ ಜನರು ಭವ್ಯ ಸ್ವಾಗತ ಕೋರಿದರು. ದೊಡ್ಡೇರಿಯಲ್ಲಿ ಶಾಲಾ ಮಕ್ಕಳು ಸೇರಿದಂತೆ ಎಲ್ಲರೂ ಗುಲಾಬಿ ಹಿಡಿದು ಮುಖಂಡರನ್ನು ಸ್ವಾಗತಿಸಿದರು. ಮಹಿಳೆಯರು ಆರತಿ ಬೆಳಗಿದರು.

ಸಿದ್ದುಗೆ ವಿಶೇಷ:

ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಮಂಗಳವಾರದ ವಾಕಿಂಗ್ ವಿಶೇಷವಾಗಿತ್ತು. ಬೆಳಗಿನ ತಿಂಡಿ ತಿನ್ನುವಷ್ಟರಲ್ಲಿ ತಮ್ಮ ತವರು ಜಿಲ್ಲೆ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಿಂದ ನೂರಾರು ಜನರು ಪಾದಯಾತ್ರೆಯಲ್ಲಿ ಭಾಗವಹಿಸಲು ಆಗಮಿಸಿದ್ದರು. ಅವರೆಲ್ಲರೂ ಪಾದಯಾತ್ರೆಯಲ್ಲಿ ಸಿದ್ದರಾಮಯ್ಯ ಅವರಿಗೆ ಸಾಥ್ ನೀಡಿದರು. ಇದು ಸಹಜವಾಗಿಯೇ ಅವರ ನಡಿಗೆಯ ವೇಗ ಹೆಚ್ಚಿಸಿತು. ಮೈಸೂರು ಕಡೆಯಿಂದ ಬಂದವರ ಕುಶಲೋಪರಿ ವಿಚಾರಿಸಿದರು. ಅವರೊಂದಿಗೆ ಪ್ರತ್ಯೇಕವಾಗಿ ಹರಟಿದರು.

ಮೈಸೂರು ಭಾಗದ ಶಾಸಕರಾದ ಡಾ.ಎಚ್.ಸಿ.ಮಹದೇವಪ್ಪ, ಎಚ್.ಎಸ್.ಮಹದೇವ ಪ್ರಸಾದ್, ಮಂಜುನಾಥ ಸೇರಿದಂತೆ ಇತರರು ಮೈಸೂರು ಭಾಗದ ಜನರ ನೇತೃತ್ವವನ್ನು ವಹಿಸಿದ್ದರು.

ಹಳೆ ಶೂ:

ಪಾದಯಾತ್ರೆ ಸಲುವಾಗಿ ಸಿದ್ದರಾಮಯ್ಯ ಭರ್ಜರಿ ತಯಾರಿ ನಡೆಸಿದ್ದರು. ಹೊಸ ಶೂ ಖರೀದಿಸಿದ್ದರು. ಆದರೆ, ಹೊಸ ಶೂ ಅಡ್ಜೆಸ್ಟ್ ಆಗಲಿಲ್ಲವಂತೆ. ‘ಯಾಕೊ ಅದನ್ನು ಹಾಕಿಕೊಂಡ್ರೆ ಕಾಲು ನೋವು ಬರುತ್ತಿತ್ತು.

ಹೀಗಾಗಿ ಮನೆಯಿಂದ ಹಳೆ ಶೂ ತರಿಸಿಕೊಂಡೆ. ಅದನ್ನೇ ಹಾಕಿಕೊಂಡು ಇವತ್ತು ವಾಕ್ ಮಾಡುತ್ತಿದ್ದೇನೆ. ಚೆನ್ನಾಗಿದೆ. ನಿನ್ನೆ ಸ್ವಲ್ಪ ಸಮಸ್ಯೆ ಇತ್ತು. ಇವತ್ತಿನಿಂದ ಅಂತಹ ಸಮಸ್ಯೆ ಏನೂ ಇರುವುದಿಲ್ಲ’ ಎಂದು ಸಿದ್ದರಾಮಯ್ಯ ವಿವರಣೆ ನೀಡಿದರು.

ಎಲ್ಲಿವರೆಗೊ ಗೊತ್ತಿಲ್ಲ:

ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಮೂರನೇ ದಿನದ ಪಾದಯಾತ್ರೆಯಲ್ಲೂ ಸಕ್ರಿಯವಾಗಿದ್ದರು. ‘ಕಾಲು ನೋವಿದ್ದರೂ ಅಭೂತಪೂರ್ವ ಜನ ಬೆಂಬಲದಿಂದ ಅದೆಲ್ಲವೂ ಮಾಯವಾಗಿದೆ. ಹೀಗಾಗಿ ಖುಷಿಯಿಂದ ವಾಕ್ ಮಾಡುತ್ತಿದ್ದು, ಎಲ್ಲಿಯವರೆಗೆ ಸಾಧ್ಯನೊ ಅಲ್ಲಿಯವರೆಗೂ ನಡೆಯುತ್ತೇನೆ. ದೇವರ ಇಚ್ಛೆ ಇದ್ದರೆ, ಬಳ್ಳಾರಿವರೆಗೂ ನಡೆಯಬಹುದು. ನೋಡೋಣ ಪರಿಸ್ಥಿತಿಗೆ ಹೇಗಿರುತ್ತದೊ’ ಎಂದು ಹೇಳಿದರು.

ಡಿಕೆಶಿಗೆ ಗಾಯ:

 ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಎಡಗಾಲಿನ ಹೆಬ್ಬೆಟ್ಟಿಗೆ ಗಾಯ ಆಗಿದ್ದು, ಬ್ಯಾಂಡೇಜ್ ಸುತ್ತಿಕೊಂಡೇ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಷೂ ಹಾಕಿಕೊಂಡು ನಡೆದಿದ್ದಕ್ಕೆ ಹೆಬ್ಬೆಟ್ಟಿನಲ್ಲಿ ಬೊಬ್ಬೆ ಬಂದು ಗಾಯ ಆಗಿದೆ. ಇದಕ್ಕೆ ಔಷಧಿ ಹಚ್ಚಿಕೊಂಡು ಪಾದಯಾತ್ರೆ ಮುಂದುವರಿಸಿದ್ದಾರೆ. ಒಂದೆರಡು ದಿನ ಈ ರೀತಿಯ ಸಮಸ್ಯೆ ಇರುತ್ತೆ. ನಂತರ ಎಲ್ಲವೂ ಸರಿಯಾಗುತ್ತೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಉಳಿದಂತೆ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕಿ ಮೋಟಮ್ಮ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ನಾಯ್ಡು, ಮಾಜಿ ಶಾಸಕಿ ಮಲ್ಲಾಜಮ್ಮ ಸೇರಿದಂತೆ ಇನ್ನೂ ಅನೇಕರು ಸಕ್ರಿಯವಾಗಿ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

ಟಿ-ಷರ್ಟ್ ತೊಟ್ಟಿದ್ದ ವಿ.ಎಸ್.ಉಗ್ರಪ್ಪ ಅವರು ತಲೆಗೆ ಪೇಟ ಸುತ್ತಿಕೊಂಡು ರಭಸವಾಗಿ ನಡೆಯುತ್ತಿದ್ದರು. ಶೂ ಬದಲಿಗೆ, ಚಪ್ಪಲಿ ಹಾಕಿಕೊಂಡಿದ್ದ ಅವರು ಚಪ್ಪಲಿಯೇ ಕಂಫರ್ಟ್ ಎಂದರು.

ಕೃಷ್ಣಬೈರೇಗೌಡರ ಪಡೆ:

ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಬೈರೇಗೌಡ ನೇತೃತ್ವದಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ಎಲ್ಲರ ಗಮನ ಸೆಳೆದರು.

ಶಾಸಕರು ವಿರಳ:

ಮೊದಲ ಎರಡು ದಿನ ಹೆಚ್ಚಿನ ಸಂಖ್ಯೆಯಲ್ಲಿದ್ದ ಶಾಸಕರು ಮೂರನೇ ದಿನ ಸ್ವಲ್ಪ ಕಡಿಮೆಯಾಗಿದ್ದರು. ಅನೇಕ ಯುವ ಶಾಸಕರು ಕೂಡ ಮಂಗಳವಾರದ ಪಾದಯಾತ್ರೆಯಲ್ಲಿ ‘ಮಿಸ್’ ಆಗಿದ್ದು ವಿಶೇಷ.

ಸಂಚಾರ ದಟ್ಟಣೆ:

 ಪಾದಯಾತ್ರೆಯಿಂದ ಬೆಂಗಳೂರು- ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಒಂದು ಭಾಗದ ರಸ್ತೆಯಲ್ಲಿ ಎರಡೂ ಕಡೆಯ ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದರಿಂದ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಇದರಿಂದ ಸಾರ್ವಜನಿಕರು ಕಿರಿಕಿರಿ ಅನುಭವಿಸಿದರು.

ಪಾದಯಾತ್ರೆಯಲ್ಲಿ ನಡೆಯುತ್ತಿದ್ದ ಜನ ಪ್ರತ್ಯೇಕವಾಗಿ ಒಂದು ರಸ್ತೆಯಲ್ಲಿ ನಡೆದಿದ್ದು ಸಮಸ್ಯೆಗೆ ಕಾರಣವಾಯಿತು.

‘ಅಕ್ರಮ ಅದಿರು ಸಾಗಣೆ ನಿಷೇಧಿಸಿ’: - ಸರಕಾರಕ್ಕೆ ಕಾಂಗ್ರೆಸ್ ಆಗ್ರಹ - ಹೈಕೋರ್ಟ್ ಮೆಟ್ಟಿಲೇರಲು ನಿರ್ಧಾರ - ಮುಂದುವರಿದ ಪಾದಯಾತ್ರೆ

ಬೆಂಗಳೂರು, ಜು.27:ಸಣ್ಣಪುಟ್ಟ ಬಂದರುಗಳಲ್ಲಿ ಅದಿರು, ಗ್ರಾನೈಟ್ ರಫ್ತು ನಿಷೇಧ ಮಾಡಿರುವ ಸರಕಾರದ ಕ್ರಮದಿಂದ ಮೀನುಗಾರಿಕೆಗೆ ತೊಂದರೆಯಾಗಲಿದೆ. ಮೊದಲು ಹೊರ ರಾಜ್ಯಗಳಿಗೆ ಅಕ್ರಮವಾಗಿ ಸಾಗಣೆಯಾಗುತ್ತಿರುವ ಅದಿರನ್ನು ನಿಷೇಧಿಸಿ, ಅಕ್ರಮ ಗಣಿಗಾರಿಕೆಯನ್ನು ತಡೆಯುವ ಬದ್ಧತೆಯನ್ನು ತೋರಲಿ ಎಂದು ಕಾಂಗ್ರೆಸ್ ಆಗ್ರಹಿಸಿದೆ.

ಅಕ್ರಮ ಗಣಿಗಾರಿಕೆ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಸರಕಾರವನ್ನು ಒತ್ತಾಯಿಸಿ ಕಾಂಗ್ರೆಸ್ ನಡೆಸುತ್ತಿರುವ ಬೆಂಗಳೂರು-ಬಳ್ಳಾರಿ ಪಾದಯಾತ್ರೆಯು ಮಂಗಳವಾರ ಮೂರನೆ ದಿನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.


ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್, ಮುಖಂಡ ವಿ.ಎಸ್.ಉಗ್ರಪ್ಪ, ಶಾಸಕ ಸಂತೋಷ್ ಲಾಡ್ ಮುಂತಾದವರು, ಸರಕಾರ ಮಂಗಳೂರು, ಕಾರವಾರ ಮತ್ತು ಬೇಲೆಕೇರಿ ಬಂದರುಗಳಲ್ಲಿ ಅದಿರು ಮತ್ತು ಗ್ರಾನೈಟ್ ಬ್ಲಾಕ್‌ಗಳ ರಫ್ತು ನಿಷೇಧಿಸಿರುವ ಕುರಿತು ಪ್ರತಿಕ್ರಿಯೆ ನೀಡಿದರು.

ಮನೆಯಲ್ಲಿರುವ ಅದಿರು ಕಳ್ಳರನ್ನು ಮೊದಲು ಶಿಕ್ಷಿಸಲಿ:

ಮೀನುಗಾರರಿಗೆ ತೊಂದರೆಯಾಗುವ ರೀತಿಯಲ್ಲಿ ಸರಕಾರ ಅದಿರು ರಫ್ತು ನಿಷೇಧಿಸಿದರೆ ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸಲು ಸಾಧ್ಯವೇ?, ಸರಕಾರ ಭ್ರಮೆಯಲ್ಲಿದೆ. ಅದಿರು ಕಳ್ಳರು ಯಡಿಯೂರಪ್ಪ ನವರ ಮನೆಯ(ಸರಕಾರ)ಲ್ಲೇ ಇದ್ದಾರೆ. ಅವರನ್ನು ಹಿಡಿದು ಮೊದಲು ಶಿಕ್ಷಿಸಲಿ. ಅದನ್ನು ಬಿಟ್ಟು, ಮೀನುಗಾರಿಕೆಗೆ ತೊಂದರೆಯಾಗುವ ರೀತಿಯಲ್ಲಿ ರಫ್ತು ನಿಷೇಧ ಮಾಡುವುದು ಸರಿಯಲ್ಲ.               -ಸಿದ್ದರಾಮಯ್ಯ.

ಯಡಿಯೂರಪ್ಪನವರಿಗೆ ತಾಕತ್ತಿದ್ದರೆ ಅಕ್ರಮ ಗಣಿಗಾರಿಕೆ ತಡೆಯಲಿ:

ತಮಿಳುನಾಡು, ಆಂಧ್ರಪ್ರದೇಶ, ಗೋವಾ ಮುಂತಾದ ರಾಜ್ಯಗಳಿಗೆ ಅಕ್ರಮವಾಗಿ ಅದಿರು ಸಾಗಣೆ ಯಾಗುತ್ತಿದೆ. ಇದನ್ನು ಸರಕಾರ ಏಕೆ ನಿಷೇಧಿಸಿಲ್ಲ?.  ರಾಜ್ಯದ 10 ಸಣ್ಣ ಪುಟ್ಟ ಬಂದರುಗಳಲ್ಲಿ ಸರಕಾರ ಅದಿರು ರಫ್ತು ನಿಷೇಧಿಸುವ ಮೂಲಕ ಮೀನುಗಾರಿಕೆಗೆ ತೊಂದರೆ ಮಾಡಿದೆ. ಬೇಲೆಕೇರಿ, ಕಾರವಾರ, ಮಂಗಳೂರು ಬಂದರುಗಳಲ್ಲಿ ಏಕೆ ರಫ್ತು ನಿಷೇಧ ಮಾಡಲಿಲ್ಲ. ಇದಕ್ಕೆ ಸರಕಾರ ಉತ್ತರ ನೀಡಬೇಕು.

ಸರಕಾರ ಅದಿರು ರಫ್ತು ನಿಷೇಧದ ಹೆಸರಿನಲ್ಲಿ ರಾಜ್ಯದ ಜನತೆಯನ್ನು ತಪ್ಪು ದಾರಿಗೆ ಎಳೆಯುತ್ತಿದೆ. ಗಣಿ ಹಾಗೂ ಅರಣ್ಯ ಖಾತೆಗಳನ್ನು ಹೊಂದಿರುವ ಯಡಿಯೂರಪ್ಪನವರಿಗೆ ತಾಕತ್ತಿದ್ದರೆ, ಸಂಪೂರ್ಣವಾಗಿ ರಫ್ತುನ್ನು ನಿಷೇಧಿಸಿ, ಅಕ್ರಮ ಗಣಿಗಾರಿಕೆಯ ತನಿಖೆಯನ್ನು ಸಿಬಿಐಗೆ ವಹಿಸಲಿ              -.ಆರ್.ವಿ.ದೇಶಪಾಂಡೆ.

ಹೇಡಿತನದ ಕ್ರಮ:

ಅದಿರು ರಫ್ತು ನಿಷೇಧ ಮಾಡಿರುವುದು ಸರಕಾರದ ಹೇಡಿತನದ ಕ್ರಮವಾಗಿದೆ. ಕಳ್ಳರನ್ನು ಹಿಡಿಯಿರಿ ಎಂದರೆ, ಕಳ್ಳ ವ್ಯವಹಾರವನ್ನು ನಿಲ್ಲಿಸಲು ಹೊರಟಿದ್ದಾರೆ. ರಾಜ್ಯದ ಜನತೆಯೇ ಗಣಿ ಲೂಟಿ ಮಾಡುತ್ತಿರುವ ಭ್ರಷ್ಟ ಬಿಜೆಪಿ ಸರಕಾರವನ್ನು ಅಧಿಕಾರದಿಂದ ಶೀಘ್ರದಲ್ಲೇ ಕಿತ್ತೊಗೆಯಲಿದೆ.             - ಡಿ.ಕೆ.ಶಿವಕುಮಾರ್.

 ರೆಡ್ಡಿಗಳಿಗೆ ಅನುಕೂಲ:

ಯಡಿಯೂರಪ್ಪ 10 ಬಂದರುಗಳಲ್ಲಿ ಮಾತ್ರ ಅದಿರು ರಫ್ತು ನಿಷೇಧ ಮಾಡಿರುವುದರಿಂದ, ದೊಡ್ಡ ಪ್ರಮಾಣದಲ್ಲಿ ಅಕ್ರಮವಾಗಿ ಅದಿರು ಸಾಗಣೆಯಾಗುತ್ತಿರುವುದನ್ನು ತಡೆಯಲು ಸಾಧ್ಯವಿಲ್ಲ. ಆಂಧ್ರಪ್ರದೇಶದಲ್ಲಿರುವ ರೆಡ್ಡಿಗಳ ಒಡೆತನದ ಎಎಂಸಿ, ಒಎಂಸಿ ಮುಂತಾದ ಗಣಿಗಾರಿಕೆ ಕಂಪನಿಗಳಿಂದ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆದು, ಅಕ್ರಮವಾಗಿ ಅದಿರು ಹೊರ ರಾಜ್ಯಗಳ ಮೂಲಕ ರಫ್ತಾಗುತ್ತಿದೆ.

ಇದನ್ನು ತಡೆಯುವುದನ್ನು ಬಿಟ್ಟು, ಸಣ್ಣ ಬಂದರುಗಳಲ್ಲಿ ಅದಿರು ರಫ್ತು ನಿಷೇಧ ಮಾಡಿರುವ ಯಡಿಯೂರಪ್ಪ ಕ್ರಮ ಕೇವಲ ರಾಜ್ಯದ ಜನತೆಯನ್ನು ದಾರಿ ತಪ್ಪಿಸುವ ತಂತ್ರವಾಗಿದೆ.               -ವಿ.ಎಸ್.ಉಗ್ರಪ್ಪ.

ನ್ಯಾಯಾಲಯಕ್ಕೆ ಹೋಗುತ್ತೇನೆ:

10 ಬಂದರುಗಳಲ್ಲಿ ಅದಿರು ರಫ್ತು ನಿಷೇಧ ಮಾಡಿರುವ ಸರಕಾರದ ಆದೇಶದ ವಿರುದ್ಧ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುತ್ತೇನೆ. ಈ ಆದೇಶದಿಂದ ಸಕ್ರಮವಾಗಿ ಗಣಿಗಾರಿಕೆ ನಡೆಸಿ, ಅದಿರು ರಫ್ತು ಮಾಡುತ್ತಿರುವವ ಗಣಿ ಮಾಲಕರಿಗೆ ತೊಂದರೆಯಾಗಲಿದೆ. ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರಿಗೆ ಅನುಕೂಲವಾಗಲಿದೆ.

ಹೀಗಾಗಿ ಸರಕಾರದ ಆದೇಶದ ವಿರುದ್ಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವುದರ ಜೊತೆಗೆ, ಪ್ರಧಾನಮಂತ್ರಿಗೂ ದೂರು ನೀಡುತ್ತೇನೆ. ಸರಕಾರದ ಆದೇಶದ ವಿರುದ್ಧ ನಾನು ನಡೆಸಲಿರುವ ಕಾನೂನು ಹೋರಾಟಕ್ಕೆ ರೆಡ್ಡಿಗಳನ್ನು ಹೊರತುಪಡಿಸಿ ಬಳ್ಳಾರಿಯಲ್ಲಿನ ಇತರ ಗಣಿಮಾಲಕರ ಸಹಕಾರ ಪಡೆಯುತ್ತೇನೆ.

ಅಕ್ರಮ ಗಣಿಗಾರಿಕೆ ನಡೆಸದ ನನ್ನಂತಹ ಗಣಿಮಾಲಕರನ್ನು ಸರಕಾರದ ಈ ಆದೇಶದಿಂದ ಅನುಮಾನದಿಂದ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಅಕ್ರಮ ಗಣಿಗಾರಿಕೆ ಬಗ್ಗೆ ತನಿಖೆಗೆ ಸಿಬಿಐಗೆ ವಹಿಸಲೇಬೇಕೆಂದು ಸರಕಾರಕ್ಕೆ ಒತ್ತಾಯಿಸಲಾಗುವುದು.         -ಸಂತೋಷ್ ಲಾಡ್.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಪ್ರಜಾವಾಣಿ
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-07-28 00:00:00

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರ್ನಾಟಕ]

»ಕನ್ನಡ ಭಾಷೆ, ಸಾಹಿತ್ಯ ಪರಂಪರೆಗೆ ಐತಿಹಾಸಿಕ ಹಿನ್ನೆಲೆಗಳಿವೆ: ಮೂಡಿಗೆರೆ: 3ನೆ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪದಲ್ಲಿ ಸಮ್ಮೇಳನಾಧ್ಯಕ್ಷ ಡಿ.ಬಿ.ಸುಬ್ಬೇಗೌಡ
»ಶಂಕಿತ ಮಂಗನ ಕಾಯಿಲೆ ಪ್ರಕರಣ ಪತ್ತೆ: ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ವ್ಯಕ್ತಿ ದಾಖಲು; ಡಿಎಚ್‌ಓ-ಜಿ.ಪಂ. ಸದಸ್ಯರ ಭೇಟಿ
»ಗುಜರಿ ಅಂಗಡಿಯಲ್ಲಿ ಗಿಲೆಟಿನ್ ಸ್ಫೋಟ: ಮಾಲಕನ ಸಾವು
»ಸರಕಾರಕ್ಕೆ ಆರು ತಿಂಗಳ ಆನಂದ: ಭ್ರಷ್ಟಾಚಾರ ಮುಕ್ತ ಆಡಳಿತವೇ ನನ್ನ ಗುರಿ: ಸದಾನಂದ ಗೌಡ
»ಎತ್ತಿನಹೊಳೆ ಯೋಜನೆಯಿಂದ ಪರಮಶಿವಯ್ಯ ವರದಿಗೆ ಹಿನ್ನಡೆಯಾದರೆ ಹೋರಾಟ: ಸಂಸದ ಬಸವರಾಜು ಎಚ್ಚರಿಕೆ
»ಹಾಸ್ಯನಟನ ಅಂತಿಮಯಾತ್ರೆಯುದ್ದಕ್ಕೂ ಕಣ್ಣೀರು: ಹುಟ್ಟೂರು ಕೊಡಿಗೆಹಳ್ಳಿಯಲ್ಲಿ ಕರಿಬಸವಯ್ಯ ಅಂತ್ಯ ಕ್ರಿಯೆ
»ಸ್ಥಾನ ನೀಡಿ, ಇಲ್ಲವೇ ಪರಿಣಾಮ ಎದುರಿಸಿ: ಹೈಕಮಾಂಡ್‌ಗೆ ಬಿಎಸ್‌ವೈ ಎಚ್ಚರಿಕೆ
»ಬಿಎಸ್‌ವೈ ಕುಟುಂಬವನ್ನು ಮತ್ತೆ ಬೆಂಬತ್ತಿದ ಸಮನ್ಸ್: ಲೋಕಾಯುಕ್ತ ಕೋರ್ಟ್ ಆದೇಶ, ಮಾ.3ಕ್ಕೆ ಮುಂದಿನ ವಿಚಾರಣೆ
»ಶಿಕ್ಷಕರಿಗೆ ಅನುದಾನ ನೀಡದಿದ್ದರೆ ಸತ್ಯಾಗ್ರಹ: ಬಸವರಾಜ್
»ನಾನು ಘೋಷಣೆ ಮಾಡುವ ಮುಖ್ಯಮಂತ್ರಿಯಲ್ಲ: ಸದಾನಂದಗೌಡ
»ಇಲ್ರಿ.. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿಲ್ಲ: ಯಡ್ಡಿ
»`ಐಷಾರಾಮಿ ಜೀವನ: ನಾಗರಿಕತೆ ನಾಶ’: ಸುರೇಶ್ ಹೆಬ್ಳೀಕರ್
»ಸುವರ್ಣ ರಂಗ ಸಮ್ಮಾನ್ ಪ್ರಶಸ್ತಿ: ಮಾಹಿತಿ ಆಹ್ವಾನ
»ಒಳಮೀಸಲಾತಿ ವಿರುದ್ಧ ಒಗ್ಗಟ್ಟು:ಬಿಜೆಪಿ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶ(Updated)
»ಮಾಡು ಇಲ್ಲವೇ ಮಡಿ ಸ್ಥಿತಿ: ಯಡಿಯೂರಪ್ಪ ದಿಢೀರ್ ದೆಹಲಿಗೆ ದೌಡು
»ಜೈಲು ಗೋಡೆ ಎರಡು ಕೋಟಿ ನುಂಗಿತ್ತಾ..!
»ಗೂಳಿ ಹೊರಕ್ಕೆ: ಕಳಂಕಿತ ಸಭಾಧ್ಯಕ್ಷರೇ ಎಂದಿದ್ದಕ್ಕೆ ಸದನದಿಂದ ಒಂದು ದಿನ ಅಮಾನತು (Updated)
»ಮಡೆಸ್ನಾನ ನಿಷೇಧಕ್ಕೆ ಯತ್ನ: ಡಾ.ಆಚಾರ್ಯ
»ಹೈಕಮಾಂಡ್ ತುರ್ತು ಬುಲಾವ್: ದಿಲ್ಲಿಗೆ ದೌಡಾಯಿಸಿದ ಬಿಎಸ್‌ವೈ
»ಶಾಲಾ ಮಕ್ಕಳ ಮೇಲೆ ಲಾಠಿ ಪ್ರಹಾರ: ಬಜ್ಪೆ ಇನ್ಸ್‌ಪೆಕ್ಟರ್ ಮೇಲೆ ಕ್ರಮದ ಭರವಸೆ
»ಹಿಂದುಳಿದವರ ಅಭಿವೃದ್ಧಿಗೆ ಬಜೆಟ್‌ನಲ್ಲಿ ಸಾವಿರ ಕೋಟಿ ರೂ. ಮೀಸಲು: ಸಿಎಂ
»ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ: ತಾಯಿ-ಮಗು ಮೃತ್ಯು
»ವಿರೋಧದ ಮಧ್ಯೆ ಧಾರ್ಮಿಕ ದತ್ತಿ ವಿಧೇಯಕ ಅಂಗೀಕಾರ: ಮಹಿಳಾ ವಿವಿಗೆ ಎಲ್ಲ ಜಿಲ್ಲೆಗಳನ್ನು ಸೇರಿಸಿ: ಮಾತಿನ ಚಕಮಕಿ
»ಭದ್ರಾ, ಕುದುರೆಮುಖ ಆದಿವಾಸಿಗಳನ್ನು ಒಕ್ಕಲೆಬ್ಬಿಸುವುದಿಲ್ಲ: ಸಿಎಂ
»ಕೆಜಿಎಫ್ ತಾಲೂಕು ಕೇಂದ್ರಕ್ಕೆ ಆಗ್ರಹ: ಬಂದ್ ಯಶಸ್ವಿ
»ಕಳಪೆ ಬಿತ್ತನೆ ಬೀಜ ಪೂರೈಕೆ: ಕೈಗೆ ಬಂದ ತುತ್ತು ಬಾಯಿಗಿಲ್ಲ
»ರಾಜ್ಯದ ಆರ್ಥಿಕ ಸ್ಥಿತಿಯ ‘ಶ್ವೇತಪತ್ರ’ಕ್ಕೆ ಡಾ.ಜಿ.ಪರಮೇಶ್ವರ್ ಆಗ್ರಹ
»ಸುಬ್ರಹ್ಮಣ್ಯ ಸ್ವಾಮಿಗೆ ಡಾಕ್ಟರೇಟ್
»ಬಯಲುಸೀಮೆ ಆರು ಜಿಲ್ಲೆಗಳಿಗೆ ಕುಡಿಯುವ ನೀರು; ತಿಂಗಳಲ್ಲಿ ಎತ್ತಿನಹೊಳೆ ನಿರ್ಧಾರ. ನೇತ್ರಾವತಿ ತಿರುವು ಇಲ್ಲ..ಹೆಚ್ಚಿನ ನೀರನ್ನು ಬಳಸಿಕೊಳ್ಳುವ ಯೋಜನೆ
»`ಕೆನೆಪದರ' ಮಿತಿ ರೂ 3.5 ಲಕ್ಷಕ್ಕೆ ಹೆಚ್ಚಳ: ರಾಜ್ಯ ಸರ್ಕಾರ ತೀರ್ಮಾನ
»ಹಂಪಿ:ನಿಧಿ ಶೋಧ, ವಿಗ್ರಹಕ್ಕೆ ಕುತ್ತು
»ಡಿನೋಟಿಫಿಕೇಶನ್: ಮತ್ತೆ ಬಂಧನದ ಭೀತಿಯತ್ತ ಬಿ‌ಎಸ್‌ವೈ
»ಬೆಂಗಳೂರಿನಲ್ಲಿ ಸೀಟ್ ಬೆಲ್ಟ್ ನಿಯಮ ಜಾರಿ ...
»ಮೂಡಿಗೆರೆ ತಾಲೂಕು ಮೂರನೆ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ: ಆಡಳಿತ ಭಾಷೆಯಾಗಿ ಕನ್ನಡ ಜಾರಿಗೊಳಿಸುವಲ್ಲಿ ಸರಕಾರ ವಿಫಲ; ಸಮ್ಮೇಳನಾಧ್ಯಕ್ಷ ಡಿ.ಬಿ.ಸುಬ್ಬೇಗೌಡ
»ಅಕ್ರಮ ನಿವೇಶನ ಆರೋಪ: ಉ.ಲೋಕಾಯುಕ್ತರ ರಾಜೀನಾಮೆಗೆ ನಿವೃತ್ತ ನ್ಯಾ. ಸಲ್ಡಾನಾ ಆಗ್ರಹ
»ಗಣಿ ವರದಿ ಚರ್ಚೆಗೆ ಪಟ್ಟು: ಕೊನೆಗೂ ಮಣಿದ ಸ್ಪೀಕರ್
» ‘ಸ್ಪೀಕರ್’ ಗದ್ದಲ: ಪಕ್ಷೇತರರಿಂದ ಸಭಾತ್ಯಾಗ; ಮೇಲ್ಮನೆಯಲ್ಲಿ ಎರಡನೆ ದಿನವೂ ಪ್ರತಿಧ್ವನಿಸಿದ ‘ಲೋಕ’ ಗದ್ದಲ
»ಸಿದ್ದಗಂಗಾ ಶ್ರೀಗಳು ಸಾಯಿಬಾಬಾರ ಪ್ರತಿರೂಪ: ಬಿಎಸ್‌ವೈ
»ಆರೆಸ್ಸೆಸ್ ಕಪಿಮುಷ್ಟಿಯಲ್ಲಿ ರಾಜ್ಯ ಸರಕಾರ; ಆರೆಸ್ಸೆಸ್ ದೇಶದ್ರೋಹಿ ಸಂಘಟನೆ: ಸಂಸದ ವಿಶ್ವನಾಥ್ ಆತಂಕ
»ಕಳೆದ ಬಜೆಟ್ ಯೋಜನೆಗಳು ಇನ್ನೂ ಅನುಷ್ಠಾನಗೊಂಡಿಲ್ಲ: ಕುವಾರಸ್ವಾಮಿ
»ದಲಿತ ಶಾಸಕರಿಗೆ ರಕ್ಷಣೆ ಇಲ್ಲ: ನಮ್ಮ ಬೇಡಿಕೆಯನ್ನು ಕಡೆಗಣಿಸಲಾಗುತ್ತಿದೆ: ಗೂಳಿಹಟ್ಟಿ
»ಕೆಜಿಎಫ್: ಕಾನೂನು ಸಾಕ್ಷರತಾ ರಥಕ್ಕೆ ಚಾಲನೆ
»ಬಿಳಿಗಿರಿರಂಗನಬೆಟ್ಟದಲ್ಲಿ ಹೆಚ್ಚುವರಿ ಯಾತ್ರಿ ನಿವಾಸಕ್ಕೆ 77ಲಕ್ಷ ರೂ. ಮಂಜೂರು: ಜಿ.ಎನ್.ನಂಜುಂಡಸ್ವಾಮಿ
»ಹಿಂದೂ ವಿರೋಧಿ ಮತಾಂತರವಾದಿಗಳನ್ನು ಸದೆಬಡೆಯಿರಿ: ಪೇಜಾವರ ಶ್ರೀ ಕರೆ
»‘ನಿಜವಾದ ಸ್ವಾತಂತ್ರ್ಯ ಇನ್ನೂ ಸಿಕ್ಕಿಲ್ಲ’: ಅಣ್ಣಾ ಹಜಾರೆ
»ಅಗತ್ಯ ಬಿದ್ದಲ್ಲಿ ಬಿಎಸ್‌ವೈ ಮತ್ತೆ ಮುಖ್ಯಮಂತ್ರಿ: ನಾಯ್ಡು
»ವಿಧಾನ ಸಭೆ ಕಲಾಪಕ್ಕೆ ಆಗಮಿಸಿದ ಬೋಪಯ್ಯ: ರಾಜೀನಾಮೆಗೆ ಒತ್ತಾಯಿಸಿ ಅನರ್ಹ ಶಾಸಕರಿಂದ ಸಭಾತ್ಯಾಗ
»ಹರಪನಹಳ್ಳಿ: ಪೇಜಾವರ ಶ್ರೀಗಳಿಗೆ ಕಪ್ಪು ಬಟ್ಟೆ ಪ್ರದರ್ಶನ
»ಬಿಎಸ್‌ವೈ ಬೆಂಬಲಿಗರ ಹೊಸ ಗೇಮ್‌: ಶಾಸಕರ ಸಹಿ ಸಂಗ್ರಹ...
»ಹಿಂದೂ ಸಮಾವೇಶದ ನೆಲದಲ್ಲಿ ತಲೆ ಎತ್ತಲಿದೆ ಟೌನ್‌ಶಿಪ್: ಹಿಂದೂಗಳನ್ನು ಒಗ್ಗೂಡಿಸಿದ ಶಕ್ತಿ ಸ್ಥಳದ ಭಾವನಾತ್ಮಕತೆ ಉಳಿಸುವ ಯತ್ನ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri