ಶುಕ್ರವಾರ, 10-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಕಿದಿಯೂರ್ ಹೋಟೆಲ್ ರಜತ ಸಂಭ್ರಮ: ವೈಭವದಿಂದ ನಡೆದ ನಾಗಮಂಡಲೋತ್ಸವ
Latest news item ಕರಾವಳಿ ಕಾಲೇಜು ಕ್ರೀಡೋತ್ಸವ - ವಿಧ್ಯಾರ್ಥಿಗಳಿಗೆ ತಂತ್ರಜ್ಞಾನ ಸೌಲಭ್ಯಗಳ ಸದುಪಯೋಗಕ್ಕೆ ಎಸ್.ಗಣೇಶ್ ರಾವ್ ಕರೆ.
Latest news item ಸಚಿವರ ನೀಲಿ ಖಯಾಲಿಗೆ ಆಕ್ರೋಶ : ಉಡುಪಿಯಲ್ಲಿ ಕಾಂಗ್ರೆಸ್ ವಿನೂತನ ಪ್ರತಿಭಟನೆ
Latest news item ಸಂವಿಧಾನವನ್ನು ಅಪಮಾನಿಸಿರುವ ಇಂತಹವರನ್ನು ಜೈಲಿಗಟ್ಟಿ’: ಅಣ್ಣಾ ಹಜಾರೆ
Latest news item ಸಚಿವರ ಸೆಕ್ಸ್ ಫಿಲಂ ವೀಕ್ಷಣೆ: 'ತ್ರಿ ಡರ್ಟಿ' ಮಂತ್ರಿಗಳ ಬಗ್ಗೆ ಬಾಲಿವುಡ್ ಪ್ರತಿಕ್ರಿಯೆ
Latest news item "ಛಲಪತ್ತಿನ ಕಿತಾಪತಿ" ನಾಟಕ ಮುಹೂರ್ತ
Latest news item ಹೆಸರಾಂತ ಬ್ಯಾಂಕರ್ ಟಿ.ಜೆ.ಎ ಗಾಣಿಗ ದುಬಾಯಿಗೆ ಭೇಟಿ
Latest news item ಮತ್ತೊಂದು ಮುಜುಗರ!: ಅಡ್ವೊಕೇಟ್ ಜನರಲ್ ಬಿ.ವಿ. ಆಚಾರ್ಯ ಪದತ್ಯಾಗ..
Latest news item ಚರ್ಚೆಯೊಂದನ್ನು ಬಿಟ್ಟು ಇನ್ನೆಲ್ಲಕ್ಕೂ ವೇದಿಕೆಯಾಗುತ್ತಿರುವ ವಿಧಾನಸಭೆ!
Latest news item ‘ಎಲ್‌ಡಿ‌ಎಸ್’ ಅರ್ಥಾತ್‘ ಲವ್- ದೋಖಾ ಔರ್ ಸೆಕ್ಸ್’
Latest news item ‘ಮಹಾಧವಳ’ದ ಕನ್ನಡಾನುವಾದ ಲೋಕಾರ್ಪೆಣೆ...
Latest news item ಸದನದಲ್ಲಿ ಬ್ಲೂಫಿಲಂ ವೀಕ್ಷಣೆ ಪ್ರಕರಣ: ನೈತಿಕತೆ ಇದ್ದಲ್ಲಿ ವಜಾಗೊಳಿಸಿ: ಬಿಜೆಪಿಗೆ ಮೊಯ್ಲಿ ಸವಾಲು
Latest news item ಸದನದಲ್ಲಿ ಸಚಿವರಿಂದ ಬ್ಲೂ ಫಿಲಂ ವೀಕ್ಷಣೆ ಪ್ರಕರಣ: ಕರಾವಳಿಯಾದ್ಯಂತ ಕಾವು ಪಡೆದ ಪ್ರತಿಭಟನೆ; ಶಾಸಕ ಸ್ಥಾನ ಅನರ್ಹಗೊಳಿಸಿ ಜೈಲಿಗೆ ತಳ್ಳಿ: ಸಿಪಿಎಂ
Latest news item ಹೊನ್ನಾವರ ಬಳಿ ಮರಕ್ಕೆ ಕಾರು ಢಿಕ್ಕಿ: ಉಡುಪಿ ಡಿಸಿಐಬಿ ನಿರೀಕ್ಷಕರಿಗೆ ತೀವ್ರ ಗಾಯ
Latest news item ನೀಲಿ ಕಮಲ:.ಕಳಂಕಿತರಿಗೆ ಸದನ ಪ್ರವೇಶ ನಿರ್ಬಂಧ : ಬ್ಲೂಫಿಲಂ ವೀಕ್ಷಣೆ ಪ್ರಕರಣದಿಂದ ತಪ್ಪಿಸಿಕೊಳ್ಳಲು ಸರಕಾರದ ಹುನ್ನಾರ: ಎಂಟೇ ದಿನಕ್ಕೆ ಮೊಟಕುಗೊಂಡ ಅಧಿವೇಶನ
Latest news item ಜಿಲ್ಲೆಯನ್ನು ಮುಜುಗರಕ್ಕೀಡು ಮಾಡಿದ ಪಾಲೆಮಾರ್ ; ಯಾಕಿಂಥ ಕೆಲಸ ಮಾಡಿದರು? | ಬಿಜೆಪಿಯ ಹಗರಣಗಳು ಮತ್ತು ಕಳಂಕಿತ ಮಿನಿಸ್ಟರುಗಳು | ವಾಜಪೇಯಿ, ಅಡ್ವಾಣಿ ಬೆಳೆಸಿದ ಪಕ್ಷ ಇದೇನಾ?
Latest news item ಯು. ಎ. ಇ. ಬಂಟ್ಸ್ ಡೈರೆಕ್ಟರಿ - 2012 | UAE BUNTS DIRECTORY -2012
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ಸೊಹ್ರಾಬುದ್ದೀನ್ ಪ್ರಕರಣ: ಮಾಫಿ ಸಾಕ್ಷಿಯಾಗಲು ಅಮೀನ್ ನಿರ್ಧಾರ; ಅಮಿತ್ ಷಾಗೆ ಇನ್ನಷ್ಟು ಕಷ್ಟ

ಸೊಹ್ರಾಬುದ್ದೀನ್ ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಪೊಲೀಸ್ ಅಧಿಕಾರಿ ಎನ್.ಕೆ. ಅಮೀನ್ ಸೋಮವಾರ ಮಾಫಿ ಸಾಕ್ಷಿದಾರನಾಗಲು ನಿರ್ಧರಿಸಿದ್ದಾರೆ.  

ಅಹ್ಮದಾಬಾದ್, ಜು.26: ಸೊಹ್ರಾಬು ದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣದ ಆರೋಪಿ, ಮಾಜಿ ಪೊಲೀಸ್ ಅಧಿಕಾರಿ ಎನ್.ಕೆ. ಅಮೀನ್ ಸಿಬಿಐ ಪರ ಮಾಫಿ ಸಾಕ್ಷಿಯಾಗಲು ಸೋಮವಾರ ನಿರ್ಧರಿಸಿರುವುದರೊಂದಿಗೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐಗೆ ಇನ್ನೂ ಹೆಚ್ಚಿನ ಬಲ ಬಂದಿದೆ. ಇದರೊಂದಿಗೆ ಪ್ರಕರಣದ ಮುಖ್ಯ ಆರೋಪಿ,ಬಂಧಿತ ಮಾಜಿ ಸಚಿವ ಅಮಿತ್ ಶಾ ಇನ್ನೂ ಹೆಚ್ಚಿನ ತೊಂದರೆಗೆ ಸಿಲುಕುವ ಸಾಧ್ಯತೆಗಳು ದಟ್ಟವಾಗಿವೆ.

ಗಾಂಧಿನಗರದ ಸಿಬಿಐ ಕಚೇರಿಯಲ್ಲಿ ತನಿಖಾಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅಮೀನ್ ವಕೀಲ ಜಗದೀಶ್ ರಾಮಾನಿ ‘‘ಸೊಹ್ರಾ ಬುದ್ದೀನ್ ಪ್ರಕರಣದಲ್ಲಿ ಅಮೀನ್‌ರನ್ನು ಮಾಫಿ ಸಾಕ್ಷಿದಾರನಾಗಿ ಮಾಡಲು ಅವರ ಪರವಾಗಿ ನಾವು ಸಿಬಿಐ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಿದ್ದೇವೆ’’ ಎಂದು ತಿಳಿಸಿದರು.

ಗುಜರಾತ್‌ನ ಮಾಜಿ ಸಹಾಯಕ ಗೃಹ ಸಚಿವ ಅಮಿತ್ ಶಾರನ್ನು ಸಿಬಿಐ ಬಂಧಿಸಿದ ಮಾರನೆ ದಿನವೇ, ಮಾಜಿ ಉಪ ಪೊಲೀಸ್ ಆಯುಕ್ತ ಅಮೀನ್ ಈ ನಿರ್ಧಾರ ಕೈಗೊಂಡಿರುವುದು ವಿಶೇಷ. ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿ ಜೈಲು ಸೇರಿರುವ ಎಲ್ಲ 15 ಮಂದಿ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಸಂಚು, ಕೊಲೆ, ಅಪಹರಣ ಮತ್ತು ಸುಲಿಗೆ ಆರೋಪಗಳನ್ನು ಹೊರಿಸಲಾಗಿದೆ.

ಅಮೀನ್ ನಿರ್ಧಾರದಿಂದಾಗಿ ಉಂಟಾಗಲಿರುವ ಪರಿಣಾಮದ ಬಗ್ಗೆ ಚರ್ಚಿಸಲು ಗುಜರಾತ್ ಸರಕಾರದ ವಕ್ತಾರ ಜಯನಾರಾಯಣ್ ವ್ಯಾಸ್ ನಿರಾಕರಿಸಿದ್ದು, ನ್ಯಾಯಾಂಗ ಪ್ರಕ್ರಿಯೆಯು ಅದರದೇ ಆದ ಹಾದಿಯಲ್ಲಿ ಸಾಗಲಿದೆ ಎಂದು ತಿಳಿಸಿದರು.

ಈಗ ಜೈಲಿನಲ್ಲಿರುವ ಅಮೀನ್, ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿ 2007ರಲ್ಲಿ ಬಂಧಿತರಾದ ಸಂದರ್ಭದಲ್ಲಿ ಅವರು ನಗರ ಕ್ರೈಂ ಬ್ರಾಂಚ್‌ನಲ್ಲಿ ಸಹಾಯಕ ಪೊಲೀಸ್ ಆಯುಕ್ತ ರಾಗಿದ್ದರು. ಸೊಹ್ರಾಬುದ್ದೀನ್ ಹಾಗೂ ಅವರ ಪತ್ನಿ ಕೌಸರ್‌ಬಿಯ ಅಪಹರಣ ಕಾರ್ಯದಲ್ಲಿ ಭಾಗಿಯಾಗಿದ್ದ ಸಾಕ್ಷಿದಾರನೊಬ್ಬ ನೀಡಿದ ಹೇಳಿಕೆಯನ್ನು ಆಧರಿಸಿ ಅಮೀನ್‌ರನ್ನು ಸಿಬಿಐ ಬಂಧಿಸಿತ್ತು.

ಏತನ್ಮಧ್ಯೆ ಪ್ರಕರಣದ ಇತರ ಆರೋಪಿಗಳಿಂದ ತನ್ನ ಕಕ್ಷಿದಾರನ ಪ್ರಾಣಕ್ಕೆ ಅಪಾಯವಿದೆಯೆಂದು ಅಮೀನ್‌ರ ಇನ್ನೋರ್ವ ವಕೀಲ ರಾಜೇಶ್ ಮೋದಿ ತಿಳಿಸಿದ್ದಾರೆ. ‘‘ಸಬರಮತಿ ಜೈಲಿನಲ್ಲಿ ಒಟ್ಟಿಗೆ ಇರಿಸಲಾಗಿರುವ ಇತರ ಆರೋಪಿಗಳಿಂದ ಅಮೀನ್‌ರ ಜೀವಕ್ಕೆ ಅಪಾಯವಿದೆ. ಅಮೀನ್‌ರನ್ನು ಬೇರೆ ಜೈಲಿಗೆ ವರ್ಗಾಯಿಸಲು ಕೋರಿ ಅರ್ಜಿಯೊಂದನ್ನು ಸಲ್ಲಿಸಲು ನಾವು ನಿರ್ಧರಿಸಿದ್ದೇವೆ’’ ಎಂದು ರಾಜೇಶ್ ಮೋದಿ ಹೇಳಿದ್ದಾರೆ.

ಈ ನಡುವೆ ರಾಜ್ಯ ಸಿಐಡಿ ಇಲಾಖೆಯ ವರಿಷ್ಠರಾಗಿದ್ದ ಸಮಯದಲ್ಲಿ ನಕಲಿ ಎನ್‌ಕೌಂಟರ್ ಪ್ರಕರಣದ ತನಿಖೆಯ ನೇತೃತ್ವ ವಹಿಸಿದ್ದ ಇಬ್ಬರು ನಿವೃತ್ತ ಐಪಿಎಸ್ ಅಧಿಕಾರಿಗಳಿಗೆ ಸಿಬಿಐ ಇಂದು ಸಮನ್ಸ್ ಜಾರಿಗೊಳಿಸಿದೆ.

ಜಿ.ಸಿ.ರಾಯ್‌ಘರ್ ಮತ್ತು ಓ.ಪಿ. ಮಾಥುರ್ ಸಿಬಿಐನಿಂದ ಸಮನ್ಸ್ ಪಡೆದವರು. ಅವರನ್ನು ಈ ಮೊದಲು ಸಹ ಸಿಬಿಐ ಪ್ರಶ್ನಿಸಿತ್ತಾದರೂ, ಇನ್ನೂ ಹೆಚ್ಚಿನ ವಿಚಾರಣೆಗಾಗಿ ಸಮನ್ಸ್ ನೀಡಲಾಗಿದೆ ಯೆಂದು ಅಧಿಕೃತ ಮೂಲಗಳು ತಿಳಿಸಿವೆ. ಸುಪ್ರೀಂಕೋರ್ಟ್ ಪ್ರಕರಣದ ವಿಚಾರಣೆಯನ್ನು ಈ ವರ್ಷದ ಜನವರಿಯಲ್ಲಿ ಸಿಬಿಐಗೆ ಹಸ್ತಾಂತರಿಸುವುದಕ್ಕೆ ಮುನ್ನ ಇವರಿಬ್ಬರು ರಾಜ್ಯ ಸಿಐಡಿಯ ವರಿಷ್ಠಾಧಿಕಾರಿಗಳಾಗಿದ್ದರು.

ಜೈಲಿನಲ್ಲಿ ಅಮಿತ್ ವಿಚಾರಣೆಗೆ ಅನುಮತಿ

 ಅಹ್ಮದಾಬಾದ್, ಜು.26: ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂ ಧಿಸಿ ನ್ಯಾಯಾಂಗ ಬಂಧನದಲ್ಲಿರುವ ಗುಜರಾತ್‌ನ ಮಾಜಿ ಸಹಾಯಕ ಗೃಹ ಸಚಿವ ಅಮಿತ್ ಶಾರನ್ನು ಜೈಲಿನಲ್ಲಿ ಮೂರು ದಿನಗಳವರೆಗೆ ಪ್ರಶ್ನಿಸುವುದಕ್ಕೆ ಸಿಬಿಐ ನ್ಯಾಯಾಲಯವು ಸೋಮ ವಾರ ಕೇಂ ದ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳಿಗೆ ಅನುಮತಿ ನೀಡಿದೆ.

ಜುಲೈ 28, 29,30ರಂದು ಬೆಳಗ್ಗೆ 9:00ರಿಂದ ಸಂಜೆ 5:00 ಗಂಟೆಯ ನಡುವೆ ಶಾರನ್ನು ಸಬರ ಮತಿ ಜೈಲಿನಲ್ಲಿ ವಿಚಾರಣೆಗೊಳಪಡಿಸಲು ಸಿಬಿಐಗೆ ಅನುಮತಿ ದೊರೆತಿದೆ. ಮಾತ್ರವಲ್ಲದೆ ವಿಚಾರಣೆಯನ್ನು ಆಡಿಯೋ ಮತ್ತು ವಿಡಿಯೋದಲ್ಲಿ ದಾಖಲಿಸಿಕೊಳ್ಳಬೇಕೆಂದು ಸಿಬಿಐ ನ್ಯಾಯಾಧೀಶ ಎ.ವೈ. ದಾವೆ ಆದೇಶಿಸಿದ್ದಾರೆ. ಶಾರನ್ನು ಪ್ರಶ್ನಿಸಲು ಅನುಮತಿ ನೀಡಬೇಕೆಂದು ಕೋರಿ ಕೇಂದ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳು ಇಂದು ಬೆಳಗ್ಗೆ ಸಿಬಿಐ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಶಾ ಪರವಾಗಿ ವಾದಿಸಿದ ಖ್ಯಾತ ನ್ಯಾಯವಾದಿ ರಾಮ್‌ಜೇಠ್ಮಲಾನಿ, ಸಿಬಿಐ ಮನವಿಯನ್ನು ವಿರೋಧಿಸಿದರು. ತನ್ನ ಕಕ್ಷಿದಾರನಿಗೆ ದೋಷಾರೋಪ ಪಟ್ಟಿಯ ಪ್ರತಿಯನ್ನು ಸಿಬಿಐ ನೀಡಿದ ಬಳಿಕವಷ್ಟೇ ಅದಕ್ಕೆ ವಿಚಾರಣೆ ನಡೆಸುವುದು ಸಾಧ್ಯವೆಂದು ಅವರು ಪ್ರತಿಪಾದಿಸಿದರು. ಶಾ ಅವರ ವಿಚಾರಣೆಯನ್ನು ವಿಡಿಯೋದಲ್ಲಿ ಚಿತ್ರೀಕರಿಸಬೇಕೆಂದು ಅವರು ಆಗ್ರಹಿಸಿದರು.

ಈ ಮಧ್ಯೆ ಜಾಮೀನು ಬಿಡುಗಡೆ ಕೋರಿ ಅಮಿತ್ ಶಾ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸಿಬಿಐ ನ್ಯಾಯಾಲಯವು ಆಗಸ್ಟ್ 2ಕ್ಕೆ ಮುಂದೂಡಿದೆ.ಇದರೊಂದಿಗೆ ಶಾ ಕನಿಷ್ಠ ಪಕ್ಷ ಅಲ್ಲಿಯವ ರೆಗಾದರೂ ಜೈಲಿನಲ್ಲಿರುವುದು ಖಚಿತಪಟ್ಟಿದೆ.

ಈ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಕೊಲೆ ಮತ್ತು ಸುಲಿಗೆ ಆರೋಪಗಳನ್ನು ಎದುರಿಸುತ್ತಿರುವ ಶಾರನ್ನು ರವಿವಾರ ಸಿಬಿಐ ಬಂಧಿಸಿದ್ದು, ಅವರಿಗೆ ವಿಶೇಷ ಸಿಬಿಐ ಮ್ಯಾಜಿಸ್ಟ್ರೇಟ್ ಎ.ವೈ. ದಾವೆ ಆಗಸ್ಟ್ 7ರವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

ಶಾರನ್ನು ಜೈಲಿನ ಆವರಣದಲ್ಲಿ ಪ್ರಶ್ನಿಸುವುದಕ್ಕೆ ಅನುಮತಿ ನೀಡಬೇಕೆಂದು ಇಲ್ಲಿನ ಸಿಬಿಐ ನ್ಯಾಯಾಲಯಕ್ಕೆ ಸಿಬಿಐ ಸಲ್ಲಿಸಿದ ಅರ್ಜಿಯಲ್ಲಿ ಕೋರಲಾಗಿದೆ.

ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣದ ಬಗ್ಗೆ ಸಿಬಿಐ ಸಲ್ಲಿಸಿದ ದೋಷಾರೋಪ ಪಟ್ಟಿ ಯಲ್ಲಿ ಅಮಿತ್ ಶಾರನ್ನು ಹಾಗೂ ಐಪಿಎಸ್ ಅಧಿಕಾರಿಗಳಾದ ಡಿ.ಜಿ.ವಂಝಾರ, ರಾಜ್‌ಕುಮಾರ್ ಪಾಂಡ್ಯನ್, ಎಂ.ಎನ್.ದಿನೇಶ್ ಮತ್ತು ಅಭಯ್ ಚೂಡಾಸಮಾ ಮುಖ್ಯ ಆರೋಪಿಗಳೆಂದು ಹೆಸರಿಸಿದೆ.

ಸೋಹ್ರಾಬುದ್ದೀನ್ ಶೇಖ್‌ರನ್ನು ಹತ್ಯೆಗೈಯಲು ಅಮಿತ್ ಶಾ, ಪೊಲೀಸ್ ಅಧಿಕಾರಿಗಳಾದ ವಂಝಾರಾ, ಪಾಂಡ್ಯನ್ ಮತ್ತು ಚೂಡಾಸಮಾರಿಗೆ ಸುಪಾರಿ ನೀಡಿದ್ದರೆಂದು ಚಾರ್ಜ್‌ಶೀಟ್ ಆಪಾದಿಸಿದೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ವಾ ಬಾ
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-07-26 00:00:00

Tell a Friend
ಇತರ ಸಂಭಂದಪಟ್ಟ ವರದಿಗಳು
»ಅಮಿತ್ ಷಾ ಬಂಧನ, ನ್ಯಾಯಾಂಗ ವಶಕ್ಕೆ
» ಅಮಿತ್ ಎಲ್ಲಿ ಅಡಗಿದ್ದಾರೆ?: 'ಕಾಂ' | ಎಲ್ಲಾ ನಾಟಕ: ಚಿದು
»ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್; ಗುಜರಾತ್ ಗೃಹಸಚಿವ ಅಮಿತ್ ಶಾಹ್ ರಾಜೀನಾಮೆ
»ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣ: ಅಮಿತ್ ಶಾ ಬಂಧನ್ಕೆ ಕ್ಷಣಗಣನೆ; ನಿರೀಕ್ಷಣಾ ಜಾಮೀನು ಹಾಗೂ ಕಾಲಾವಕಾಶ ಕೋರಿದ ಶಾ: ಮನವಿ ತಿರಸ್ಕರಿಸಿದ ಸಿಬಿಐ ಕೋರ್ಟ್ | ‘ಇದು ರಾಜಕೀಯ ಹಗೆತನ - ಬಿಜೆಪಿ; ದುರದೃಷ್ಟಕರ- ಕಾಂಗ್ರೆಸ್
»ಕಾಲಾವಕಾಶ ಕೋರಿದ ಶಾ, ಮನವಿ ತಿರಸ್ಕರಿಸಿದ ಸಿಬಿಐ
»ಸಿಬಿಐ ಸಮನ್ಸ್: ಪ್ರಧಾನಿ ಔತಣ ಆಹ್ವಾನ ನಿರಾಕರಿಸಿದ ಬಿಜೆಪಿ
»ಸೊಹ್ರಬುದ್ದೀನ್ ಶೇಕ್ ನಕಲಿ ಎನ್‌ಕೌಂಟರ್; ಮೋದಿ ಸರಕಾರದ ಗೃಹಸಚಿವ ಅಮಿತ್ ಶಾಹ್ ರವರಿಗೆ ಸಿಬಿಐ ಸಮನ್ಸ್

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಭಾರತ]

»ಮೇಧಾರಿಂದ ಬಸವ ಪ್ರಶಸ್ತಿ ತಿರಸ್ಕಾರ
»ತುರ್ತು ಪರಿಸ್ಥಿತಿ ಸಂದರ್ಭದ ದಾಖಲೆಗಳು ಪ್ರಧಾನಿ ಕಚೇರಿಯ ಕಡತಗಳಲ್ಲಿ ಇಲ್ಲ: ಪತ್ತೆ ಹಚ್ಚಲು ಮಾಹಿತಿ ಆಯೋಗದ ನಿರ್ದೇಶನ
»ಒಂಬತ್ತು ಸರಕಾರಿ ವೆಬ್‌ಸೈಟ್‌ಗಳಿಗೆ ಕನ್ನ: ಎನ್‌ಐಸಿ
»ದೇವತೆಯ ಒಲಿಸಲು ನಾಲಗೆ ಕತ್ತರಿಸಿಕೊಂಡ ಯುವಕ!
»ಶಿರ್ಡಿ ಸಾಯಿಬಾಬಾಗೆ ರೂ. 401 ಕೋಟಿ ನಗದು, 36 ಕೆ.ಜಿ. ಚಿನ್ನ ದೇಣಿಗೆ
»ಮಕ್ಕಳನ್ನು ಸುಮ್ಮನಾಗಿಸಲು ಅಫೀಮು ನೀಡುವ ಕಾರ್ಮಿಕ ತಾಯಿಂದಿರು
»ಜಯಲಲಿತಾ ಪ್ರಕರಣದಲ್ಲಿ ಬಿಜೆಪಿಯ ಒತ್ತಡ: ಅಡ್ವೊಕೇಟ್ ಜನರಲ್ ಹುದ್ದೆಗೆ ರಾಜೀನಾಮೆ ನೀಡಿದ ಬಿ.ವಿ. ಆಚಾರ್ಯ
»ಬಾಂಬೆ ಹೈಕೋರ್ಟ್‌ನಿಂದ ದೇಶ್‌ಮುಖ್ ತರಾಟೆಗೆ: ಸಿನಿಮಾ ಸಂಸ್ಥೆಯ ಜಾಗ ಹಿಂದಿರುಗಿಸಲು ಘಾಯ್‌ಗೆ ಆದೇಶ
»ಮೋದಿಗೆ ಕ್ಲೀನ್ ಚಿಟ್: ಸಿಟ್ ವರದಿ ಬೇಸರ ತರಿಸಿದೆ: ಝಕಿಯಾ
»ಮುಂದಿನ ಮಹಾ ಚುನಾವಣೆಯಲ್ಲಿ ಮೋದಿ ಪ್ರಧಾನಿ ಅಭ್ಯರ್ಥಿ: ಗಡ್ಕರಿ
»ಗುಜರಾತ್ ದಂಗೆಯಲ್ಲಿ ಧಾರ್ಮಿಕ ಸ್ಥಳಗಳಿಗೆ ಹಾನಿ: ಎನ್‌ಎಚ್‌ಆರ್‌ಸಿ ವರದಿಯನ್ನು ವಿಧಾನ ಸಭೆಯಲ್ಲಿ ಏಕೆ ಮಂಡಿಸಿಲ್ಲ?: ಮೋದಿ ಸರಕಾರಕ್ಕೆ ಹೈಕೋರ್ಟ್ ತರಾಟೆ
»ಚೆನ್ನೈ: ಕ್ಲಾಸ್‌ರೂಂನಲ್ಲೇ ಶಿಕ್ಷಕಿಯನ್ನೇ ಹತ್ಯೆಗೈದ ವಿದ್ಯಾರ್ಥಿ
»ಸಂವಿಧಾನವನ್ನು ಅಪಮಾನಿಸಿರುವ ಇಂತಹವರನ್ನು ಜೈಲಿಗಟ್ಟಿ’: ಅಣ್ಣಾ ಹಜಾರೆ
»ಮಾಜಿ ಸಚಿವರ ವಿರುದ್ಧ ವಿರುದ್ಧ ಸೂಕ್ತ ಕ್ರಮ: ಗಡ್ಕರಿ
»‘ಎಲ್‌ಡಿ‌ಎಸ್’ ಅರ್ಥಾತ್‘ ಲವ್- ದೋಖಾ ಔರ್ ಸೆಕ್ಸ್’
»ಭ್ರಷ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರಗಿಸಲು ಅನುಮತಿ ಕೋರಿ ಸಿವಿಸಿಯಿಂದ ಸರಕಾರಕ್ಕೆ ಮನವಿ
»ವಾರಣಾಸಿ: ಕುಸಿದ ನಿತಿನ್ ಗಡ್ಕರಿ ವೇದಿಕೆ
»ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣ: ಆಂಧ್ರ ಪೊಲೀಸರಿಗೆ ಸಮನ್ಸ್ ಜಾರಿಗೊಳಿಸಿದ ಸಿಬಿಐ
»ಆಂಧ್ರ ಅಬಕಾರಿ ಸಚಿವ ಮದ್ಯ ಲಾಬಿಯ ಕೈಗೊಂಬೆ: ಎಸಿಬಿ ವರದಿ ಆರೋಪ
»ಶೀಘ್ರವೇ ಅಡ್ಡ ಹಾಯ್ಕೆ ಕ್ಷಿಪಣಿಯ ಪುನಃ ಪರೀಕ್ಷೆ
»‘ಲಕ್ಷ-1’ ಪರೀಕ್ಷೆ ಯಶಸ್ವಿ
»ದಯಾನಿಧಿ ಮಾರನ್ ವಿರುದ್ಧ ಇನ್ನೊಂದು ಪ್ರಕರಣ ದಾಖಲು
»ಸಬ್ಸಿಡಿ ಭೂತ ನಿದ್ದೆಗೆಡಿಸುತ್ತಿದೆ: ಪ್ರಣವ್
»ಗೋಧ್ರಾ ಗಲಭೆ: ಧಾರ್ಮಿಕ ಕಟ್ಟಡಗಳ ಹಾನಿ ಬಗ್ಗೆ ನಿರ್ಲಕ್ಷ್ಯ- ಮೋದಿ ಸರ್ಕಾರಕ್ಕೆ ತರಾಟೆ
» ಜೀವವೈವಿಧ್ಯ ತಾಣ: `ಪಶ್ಚಿಮ ಘಟ್ಟದಲ್ಲಿ ಬೇಡ ಗಣಿಗಾರಿಕೆ’
»ರೈಲ್ವೆ ಟಿಕೆಟ್ ಕಾದಿರಿಸುವಿಕೆ ಅವಧಿ 120 ದಿನಗಳವರೆಗೆ ವಿಸ್ತರಣೆ
»ಚುನಾವಣೋತ್ತರ ಸಮೀಕ್ಷೆ, ಅಭಿಪ್ರಾಯ ಸಂಗ್ರಹ ಸಮೀಕ್ಷೆ ನಿಷೇಧಕ್ಕೆ ಚುನಾವಣಾ ಆಯೋಗದ ಸುತ್ತೋಲೆ
»ಚಿಕಿತ್ಸೆ ವೆಚ್ಚ ಭರಿಸಲಾಗದ ತಾಯಿಯಿಂದ ಮಗನಿಗೆ ದಯಾ ಮರಣ ಕೋರಿ ಅರ್ಜಿ
»ಪತ್ರಕರ್ತೆಯ ಮೇಲೆ ದಾಳಿ: ಚುನಾವಣಾಧಿಕಾರಿ, ಪೊಲೀಸರ ವಿರುದ್ಧ ಕ್ರಮಕ್ಕೆ ಶಿಫಾರಸು
»ರಾಬರ್ಟ್ ವಾದ್ರಾರನ್ನು ತಡೆದ ಚುನಾವಣಾಧಿಕಾರಿಯ ವರ್ಗಾವಣೆ
»ಪ್ರಾಥಮಿಕ ಶಾಲೆಗಳ ಕಾರ್ಯ ನಿರ್ವಹಿಸುತ್ತಿರುವ ಅಝಂಗಡದ ಮಸೀದಿಗಳು
»ಆಂಧ್ರ ಪ್ರದೇಶ: ಸಚಿವರ ವಿರುದ್ಧ ಒಂದಾದ ಐಎಎಸ್ ಅಧಿಕಾರಿಗಳು
»ಅಂತರ್ಜಾಲಾಧಾರಿತ ಔಷಧಿ ವ್ಯಾಪಾರ ತಡೆಗೆ ಸಮಿತಿ
»ಮಾನವ ಅಸ್ಥಿಪಂಜರ ಪತ್ತೆ ಪ್ರಕರಣ: ಆರೋಪಿ ಘೋಷ್ ಜಾಮೀನು ಬಿಡುಗಡೆ
»ಮಾ. 16ಕ್ಕೆ ಕೇಂದ್ರ ಬಜೆಟ್
»ಕಚ್ಚಾ ತೈಲ ಆಮದು: ಭಾಗಶಃ ಪಾವತಿ ವ್ಯವಸ್ಥೆಗೆ ಇರಾನ್ ಸಮ್ಮತಿ
»2ಜಿ: ಸೋನಿಯಾ ತಂಗಿಯರಿಗೆ ಸಿಕ್ಕಿದ್ದು 18000ಕೋಟಿ - ಸ್ವಾಮಿ ಆರೋಪ
»ದುಡಿಯದ' ಅಧಿಕಾರಿಗಳಿಗೆ 15 ವರ್ಷದಲ್ಲೇ ನಿವೃತ್ತಿ: ಕೇಂದ್ರದ ಹೊಸ ನಿಯಮಾವಳಿ
»ಕಪ್ಪುಹಣ; ಕೈ, ಬಿಜೆಪಿ ಜನರನ್ನು ತಪ್ಪು ದಾರಿಗೆಳೆಯುತ್ತಿವೆ: ಮಾಯಾವತಿ
»ಆಕ್ಷೇಪಾರ್ಹ ವಿಷಯ ಅಳಿಸಲು ಜಾಲತಾಣಗಳಿಗೆ ಇನ್ನೂ 15 ದಿನ ಕಾಲಾವಕಾಶ
»ಬಜೆಟ್‌ಗೆ ಗಣಿ ಬಂಪರ್: 49 ಕಂಪೆನಿಗಳ ಗುತ್ತಿಗೆ ರದ್ದು. ಗಣಿ ಧಣಿಗಳತ್ತ ಸಿಇಸಿ ಕೆಂಗಣ್ಣು
»ಅಕ್ರಮ ಗಣಿಗಾರಿಕೆ: ಜಾರ್ಖಂಡ್ ಸರಕಾರಕ್ಕೆ ಎನ್‌ಎಚ್‌ಆರ್‌ಸಿ ನೋಟಿಸ್
»3000 ಬೆಲ್ಜಿಯಂ ಶೆಫರ್ಡ್ಸ್‌ಗಳಿಗೆ ತರಬೇತಿಗೆ ಸಿಆರ್‌ಪಿಎಫ್ ನಿರ್ಧಾರ
»ಪೊಲೀಸ್ ಅಧಿಕಾರಿ ಸಹಿತ ಇಬ್ಬರು ಹಿಮಪಾತದಲ್ಲಿ ಸಮಾಧಿ
»ಮಧ್ಯಪ್ರದೇಶದ ಬಿಜೆಪಿ ಸರಕಾರದಿಂದ ರೂ. 250 ಕೋಟಿ ಗೋ ಹಗರಣ: ಕಾಂಗ್ರೆಸ್
»ಜೀವಂತವಾಗಿ ಬಂದ ‘ಸಾವನ್ನಪ್ಪಿದ’ ಮಹಿಳೆ!
»ಹರೇನ್ ಪಾಂಡ್ಯ ಹತ್ಯೆ ಪ್ರಕರಣ: ಮರು ತನಿಖೆಗೆ ಗುಜರಾತ್ ಹೈಕೋರ್ಟ್ ನಕಾರ
»ಮೊಬೈಲ್ ಸಂಪರ್ಕ ಮಾರ್ಗಸೂಚಿ ಟ್ರಾಯ್‌ಗೆ ಕಡೆಯ ಅವಕಾಶ
»ರೂ. 36,900 ಕೋಟಿ ಇಂಧನ ಸಬ್ಸಿಡಿ ನೀಡಲು ಮುಂಚೂಣಿ ತೈಲ ಸಂಸ್ಥೆಗಳಿಗೆ ಕೇಂದ್ರದ ಮನವಿ
»2ಜಿ ಪರವಾನಿಗೆ ರದ್ದತಿ ತೀರ್ಪು ಸರಕಾರಿ ಮಟ್ಟದಲ್ಲಿ ಚರ್ಚಿಸಲು ನಾರ್ವೆಯ ಇಚ್ಛೆ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri