ರೋವಿಟಾ......ಪುತ್ತೂರಿನ ಅಪೂರ್ವ ಮುತ್ತು |
ಪ್ರಕಟಿಸಿದ ದಿನಾಂಕ : 2010-07-23
ರೋವಿಟಾ....ಯಾರೀ ಪ್ರಶಸ್ತಿಗಳ ಮಧ್ಯೆ ಬೀಗುತ್ತಿರುವ ಯಾವ ತಂದೆ-ತಾಯಿಗೂ ಹೆಮ್ಮೆಯಾಗ ಬಲ್ಲ ಕನ್ನಡ ನಾಡಿನ ಕುವರಿ!!... ಎಂದಿರಾ...? ಹೌದು. ಮಂಗಳೂರು ಬಳಿಯ ಪುತ್ತೂರಿನ, ಕರ್ನಾಟಕದ ಅಮೂಲ್ಯ ರತ್ನ ಶ್ರೀ ರಾಬರ್ಟ್ ಮತ್ತು ಶ್ರೀಮತಿ ವಯೋಲೆಟ್ ಡಿಸೋಜಾರ ಹೆಮ್ಮೆಯ ಪುತ್ರಿ ಇವಳು.
ಕುವೈತಿನ ಡಾನ್ ಬಾಸ್ಕೋ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ. ನಾಡು-ದೇಶ ಹೆಮ್ಮೆ ಡಬೇಕಾದ ಪ್ರತಿಭೆಯಾಗಿ ಮರಳಿನಲ್ಲಿ ಅರಳುತ್ತಿರುವ ಅನರ್ಘ್ಯ ರತ್ನ. ಆಟ, ಮಸ್ತಿ ಮತ್ತು ಕಂಪ್ಯೂಟರ್ ವ್ಯಸನಿಗಳಾಗಿ ಮಕ್ಕಳು ಬೆಳೆಯುತ್ತಿರುವ ಈಗಿನ ಯುಗದಲ್ಲಿ ವ್ಯಾಸಂಗ, ಆಟೋಟ ವಲ್ಲದೇ ನೃತ್ಯ ಕಲೆಯಲ್ಲೂ ಉತ್ತಮ ಸಾಧನೆ ತೋರಿತುವ ಈ ಹೆಣ್ಣು ಮಗಳು ಸತತ 8 ವರ್ಷ ಶಾಲೆಯ ಅತ್ಯುತ್ತಮ ವಿದ್ಯಾರ್ಥಿನಿ ಎಂಬ ಪ್ರಶಸ್ತಿಗೆ ಪಾತ್ರವಾಗುತ್ತಿದ್ದಾಳೆ.
ಈಕೆಯ ಸಾಧನೆಗಳ ಪಟ್ಟಿಗೆ ಎಲ್ಲೆಯಿಲ್ಲ. ರೋವಿಟಾ.... ಈ ವರೆಗೆ ಪ್ರಶಸ್ತಿ ಪತ್ರಗಳ ಗಳಿಕೆಯಲ್ಲಿ ಶತಕವನ್ನೇ ಬಾರಿಸಿ ಳೆ ಎಂದರೆ...ಶತಕ ವೀರ ಸಚಿನ ತೆಂಡೂಲ್ಕರ್ ಸಹಾ ತಲೆದೂಗದೇ ಇರಲಾರ..!!! ಈ ವರೆಗೆ ರೋವಿಟಾ.... 117 ಪ್ರಶಸ್ತಿ ಪತ್ರಗಳು, 18 ಪದಕಗಳು, 10 ಟ್ರೋಫಿ ಗಳು ಮತ್ತು 12 ನೆನೆಪಿನ ಕಾಣಿಕೆಗಳನ್ನುಗಳಿಸಿದ್ದಾಳೆಂದರೆ ಈಕೆಯ ಪ್ರತಿಭೆ ಎಂತಹುದೆಂದು ಊಹಿಸಬಹುದು.
ರೋವಿತಾ ಕುವೈತಿನ ಬ್ಯಾಲೆರೈನ್ ಸ್ಕೂಲ್ ಅಫ್ ಡಾನ್ಸ್ ನ ವಿದ್ಯಾರ್ಥಿನಿಯಾಗಿ ನೃತ್ಯದಲ್ಲಿ ಪರಿಣಿತಿ ಹಂತದವರೆಗೂ ಕಲಿತು ಶಾಲೆಯ ವಿದ್ಯಾರ್ಥಿ/ನಿ ಯರಿಗೆ ನೃತ್ಯವನ್ನು ಕಲಿಸುತ್ತಿದ್ದಾಳೆ. ತನ್ನ ಕಾರ್ಯಕ್ರಮಗಳ ಮೂಲಕ ಹೆಸರಾಂತರಾದ ಡಾ. ಕಿರಣ್ ಬೇಡಿ, ಖ್ಯಾತ ಹಿನ್ನೆಲೆ ಗಾಯಕಿ ಅಲ್ಕಾ ಯಾಗ್ನಿಕ್, ನಟರಾದ ಸುರೇಶ್ ಓಬಿರಾಯ್ ಮತ್ತು ವಿಕ್ರಮ್ ರವರ ಶ್ಲಾಘನೆಗೆ ಪಾತ್ರ ಅವರಿಂದ ಪ್ರಶಸ್ತಿಗಳನ್ನೂ ಪಡೆದಿದ್ದಾಳೆ.
ಕುವೈತ್ ತುಳು ಕೂಟ, ವೂಗಿ ವೂಗಿ, ಕೆ.ಸಿ.ಡಬ್ಲ್ಯೂ ಎ., ಮುಂತಾದ ಸಂಘಟನೆಗಳ ಹಲವಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಉತ್ತಮ ಹೆಸರು ಮತ್ತು ನೆನಪಿನ ಕಾಣಿಕೆಗಳನ್ನು ಗಳಿಸಿದ್ದಾಳೆ. ತನ್ನ ಎಲ್ಲ ಯಶಸ್ಸಿಗೆ ತನ್ನ ತಂದೆ-ತಾಯಿರಿಗೆ ಆಭಾರ ವ್ಯಕ್ತಪಡಿಸುವ ರೋವಿಟಾ ಕುಟುಂಬದ ಮಗಳೆನ್ನುವುದೇ ಹೆಮ್ಮೆಯ ವಿಷಯವಾಗಿದೆ.
ಬಹುಮುಖ ಪ್ರತಿಭೆ ಈ ತುಳುನಾಡ-ಕನ್ನಡದ ಮುದ್ದು ಕುವರಿ ರೋವಿಟಾ. ಡಿಸೋಜಾಗೆ ತನ್ನ ಜೀವನದ ಪ್ರತಿ ರಂಗದಲ್ಲೂ ಯಶಸ್ಸು ಸಿಗಲೆಂದು ನಾವೆಲ್ಲಾ ಹಾರೈಸೋಣ
ವರದಿಯ ವಿವರಗಳು |
 |
ಕೃಪೆ : ಮಂಜೇಶ್ವರ ಮೋಹನ್ ದಾಸ್ ಕಾಮತ್ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-07-23 00:00:00
|
|
| a,j nitte, doha qatar | 2010-07-24 | | ರೋವಿಟಾ rovita is not putturdha mutthu shi is all india ..MUTTHU. LET JESUS BLESS YOU & FLY |
| Abdul salam, soorinje | 2010-07-24 | | Putturda Muttu. ROVITA.
Excellent performance in each field.keep it up,GOD BLESS YOU ROVITA.all the best in future also. |
| kanirali, MANGALORE | 2010-07-24 | | OH..MY GOD... WHAT A GREAT ACHIEVMENT..I WISH YOU ALL THE BEST..ROVITA....
GOD BLESS YOU.... |
| Panchajanya, Kuwait | 2010-07-24 | | ಎಷ್ಟೊಂದು ಖುಷಿಯಾಗುತ್ತದೆ ನಮ್ಮೂರಿನ ಹೆಣ್ಣು ಮಗಳೊಬ್ಬಳ ಸಾಧನೆ ಓದಿದಾಗ...ಎಷ್ಟೊಂದು ಅದೃಷ್ಟವಂತರು ಇವಳ ಹೆತ್ತವರು....ಅಬ್ಬಬ್ಬ ಅದೆಷ್ಟು ಟ್ರೋಫಿಗಳ ರಾಶಿ..?ಅದೆಷ್ಟು ಪ್ರಮಾಣ ಪತ್ರಗಳು ....ಅವಳ ಕತ್ತಿನಲ್ಲಿರುವ ಪದಕಗಳನ್ನ ನೋಡಿದಾಗ ತಾಯಿ ಸರಸ್ವತಿಯೇ ಕಣ್ಣೆದುರು ನಿಂತಂತೆ ಭಾಸವಾಗುತ್ತದೆ.ಬಹುಮುಖ ಪ್ರತಿಭೆಯ ಬಾಲೆ ಅದು ಹೇಗೆ ಕೇವಲ ಪುತ್ತೂರಿನ ಮುತ್ತು ಮಾತ್ರ ಆಗುತ್ತದೆ....?ಇವಳು ಕರ್ನಾಟಕದ ಮುತ್ತು,ಅನರ್ಘ್ಯ ರತ್ನ...!
ಭೇಷ್ ಮಗಳೇ...ಅತೀ ಸಣ್ಣ ವಯಸ್ಸಿನಲ್ಲಿಯೇ ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿ ಬಿಟ್ಟಿದ್ದೀಯ ....ಇನ್ನೂ ಹೆಚ್ಚಿನದನ್ನು ಸಾಧಿಸಿ ತೋರಿಸಬೇಕು...ಇಡೀ ಸಮಾಜ ರಾಬರ್ಟ್ ಮತ್ತು ವಯೊಲೆಟ್ ರ ಮಗಳು ಎಂದು ನಿನ್ನನ್ನು ಗುರುತಿಸುವ ಬದಲು ರೋವಿಟಾಳ ಪೋಷಕರು ಎಂದು ನಿನ್ನ ಹೆತ್ತವರನ್ನು ಗುರುತಿಸುವಂತಾಗಬೇಕು .. ನಮ್ಮ ನಾಡಿಗೆ ಇನ್ನೂ ಒಳ್ಳೆಯ ಹೆಸರು ತರಬೇಕು.ಸತತ 8 ವರ್ಷ ಶಾಲೆಯ ಅತ್ಯುತ್ತಮ ವಿದ್ಯಾರ್ಥಿನಿ ಎಂದರೆ ಸಾಮಾನ್ಯವೇ...?ರಿಯಲಿ ಗ್ರೇಟ್ .... ನಿನಗೆ ಶುಭವಾಗಲಿ ಮಗಳೇ......ಜೈ ಹೋ ........ |
|