ಕುವೈಟ್ : ದುರುದ್ದೇಶಪೂರಿತ ಅಪಪ್ರಚಾರದಿಂದ ಮರ್ದಿತರ ಪರ ಮತ್ತು ನ್ಯಾಯಕ್ಕಾಗಿನ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಹೋರಾಟವನ್ನು ತಡೆಯಲು ಸಾಧ್ಯವಿಲ್ಲ – ಪ್ರೊ. ಪಿ. ಕೋಯಾ |
ಪ್ರಕಟಿಸಿದ ದಿನಾಂಕ : 2010-07-13
ಕುವೈತ್ : ಫ್ಯಾಸಿಸ್ಟ್ ಮಾಧ್ಯಮಗಳು ದುರುದ್ದೇಶಪೂರಿತ ಮತ್ತು ತಮ್ಮ ಸ್ವ ಹಿತಾಸಕ್ತಿಗಳಿಂದ ತಯಾರಿಸಿದ ಆಧಾರರಹಿತ ವರದಿಗಳನ್ನು ಬಿತ್ತರಿಸುವುದರ ಮೂಲಕ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ನ್ಯಾಯಕ್ಕಾಗಿನ ಮತ್ತು ಮರ್ದಿತರ ಪರವಾದ ಹೋರಾಟವನ್ನು ತಡೆಯಲು ಸಾ ಧ್ಯವಿಲ್ಲ ಎಂದು ತೇಜಸ್ ದಿನ ಪತ್ರಿಕೆಯ ಸಂಪಾದಕರೂ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿ ಯಾದ ರಾಷ್ಟ್ರೀಯ ಕಾರ್ಯಕಾರಿಣಿಯ ಸದಸ್ಯರೂ ಆದ ಪ್ರೊಫೆಸರ್ ಪಿ. ಕೋಯಾ ಹೇಳಿದರು.
ಕುವೈತಿನ ಅಬ್ಬಾಸಿಯಾದಲ್ಲಿ ಕುವೈತ್ ಇಂಡಿಯಾ ಫ್ರಟೆರ್ನಿಟಿ ಫೋರಮ್ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ಭಾರತದಲ್ಲಿ ಶೋಷಿತರ ಮತ್ತು ಮರ್ದಿತರ ಪರ ಧ್ವನಿ ಎತ್ತುವುದರ ಜೊತೆಗೆ ಅವರ ಸಾಮಾಜಿಕ ಬೆಳವಣಿಗೆಗಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಶ್ರಮಿಸುತ್ತಿದೆ. ಜೊತೆಗೆ ಈ ಸಮುದಾಯದ ರಾಜಕೀಯ ಸಬಲೀಕರಣ ಕ್ಕಾಗಿ ಸೋಶಿಯಲ್ ಡೆಮಾಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ ರೂಪುಗೊಂಡಿದ್ದು ದೇಶದ ಮರ್ದಿತರ ಕಲ್ಯಾಣಕ್ಕಾಗಿ ಜನತೆ ಈ ಪಕ್ಷದಡಿ ಸಂಘಟಿತರಾಗಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.

ಭಾರತದಲ್ಲಿ ಭಯೋತ್ಪಾದನೆಯ ಹೆಸರಿನಲ್ಲಿ ಮುಸ್ಲಿಮರನ್ನು ಬೇಟೆಯಾಡುವ ಅಧಿಕಾರಿಗಳು ಕೇಸರಿ ಭಯೋತ್ಪಾದನೆಯನ್ನು ಕಂಡೂ ಕಾಣದಂತೆ ಸುಮ್ಮನೆ ಕುಳಿತಿದ್ದಾರೆ. ಕೇಸರಿ ಭಯೋ ತ್ಪಾದಕರು ನಡೆಸಿದ ಅನೇಕ ಪ್ರಕರಣಗಳಲ್ಲಿ ಮುಗ್ಧ ಮುಸ್ಲಿಮರನ್ನು ಅಪರಾಧಿಗಳನ್ನಾಗಿಸ ಲಾಗಿದೆ. ಈ ಮೂಲಕ ಮುಸ್ಲಿಮರನ್ನು ಬಲಿಪಶು ಮಾಡಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೈಫುದ್ದೀನ್ ಕುಟ್ಟಿಕತೂರ್ ವಹಿಸಿದ್ದರು. ನೌಶಾದ್ ಪಿ. ಸ್ವಾಗತಿಸಿದರೆ ತಾಯಿಫ್ ಅಹಮದ್ ಧನ್ಯವಾದ ಸಮರ್ಪಿಸಿದರು.
ವರದಿಯ ವಿವರಗಳು |
 |
ಕೃಪೆ : ವಿಕನ್ಯೂ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-07-13 00:00:00
|
|
|