ಶನಿವಾರ, 19-05-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಅತ್ಯಾಚಾರ ಆರೋಪ: ಆರ್‌ಸಿಬಿ ಆಟಗಾರ ಲ್ಯೂಕ್ ಪೊಮರ್ಸ್‌ಬಾಚ್‌ ಬಂಧನ: ನಾಳೆಯವರೆಗೆ ಜಾಮೀನು
Latest news item ನಟ ಶಾರುಖ್ ಖಾನ್ ಗೆ 5 ವರ್ಷ ವಾಂಖೇಡೆ ಕ್ರೀಡಾಂಗಣ ಪ್ರವೇಶ ನಿಷೇಧ
Latest news item ಅಕ್ಷರಗಳ ಕಲಿತು ಕವಿತೆ ಬರೆದ ಗಂಗಾಧರ್ ಡಿವಾಟರ
Latest news item ನೀರು ಪೂರೈಕೆಯಲ್ಲಿ ನಗರ ಸಭೆಯಿಂದ ಅವಮಾನೀಯ ವರ್ತನೆ : ಹರೀಶ್ ಕಿಣಿ ಆರೋಪ
Latest news item ಉಡುಪಿಯಲ್ಲಿ ಮಾಜಿ ಪ್ರಧಾನಿ ದೇವೆಗೌಡರ 80ನೇ ಹುಟ್ಟುಹಬ್ಬ ವಿಶೇಷ ರೀತಿಯಲ್ಲಿ ಆಚರಣೆ
Latest news item ಕೌಟುಂಬಿಕ ಗೊಂದಲ: ಅನಿವಾಸಿ ಭಾರತೀಯ ತಾಯಿ ಆತ್ಮಹತ್ಯೆಗೆ ಶರಣು !.
Latest news item ಮಂಗಳೂರು: ರಾಜ್ಯ ಸರಕಾರದ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ
Latest news item ಕನ್ನಡ ಮಾಧ್ಯಮದಲ್ಲಿ ಪ್ರಜ್ವಲ್ ಎಸ್. ರಾಜ್ಯಕ್ಕೆ ಪ್ರಥಮ: ಆಳ್ವಾಸ್ ಪ್ರೌಢ ಶಾಲೆಗಳಿಗೆ ಶೇ.100 ಫಲಿತಾಂಶ
Latest news item ಎಮಿರೇಟ್ ಐಡಿ ನವೀಕರಣಕ್ಕೆ ಕಿಕ್ಕಿರಿದ ಅನಿವಾಸಿಗಳು: ಪಾಸ್ಪೋರ್ಟು ಕಳೆದುಕೊಳ್ಳುವ ಭೀತಿ !
Latest news item ಶೋಕಸಾಗರದ ನಡುವೆ ರಸ್ನಾ ಹುಡುಗಿ ತರುಣಿ ಅಂತ್ಯಕ್ರಿಯೆ | ‘ನಿಮ್ಮನ್ನೆಲ್ಲ ಕೊನೆಯ ಬಾರಿ ಭೇಟಿಯಾಗುತ್ತಿದ್ದೇನೆ’ ಎಂದು ಹೇಳಿದ್ದ ತಾರುಣಿ: ನೇಪಾಳ ಪ್ರವಾಸಕ್ಕೆ ಮುನ್ನ ಎಲ್ಲರಿಗೂ ‘ಗುಡ್‌ಬೈ’ ಸಂದೇಶ ರವಾನಿಸಿದ್ದ ಬಾಲ ನಟಿ
Latest news item ತಾವೇ ತೋಡಿದ ಹೊಂಡಕ್ಕೆ ಬಿದ್ದ ಕಥೆ: ನೀರಿಗೆ ಬಿದ್ದು ನಾಪತ್ತೆ ಪ್ರಕರಣ ಒಂದು ನಾಟಕ
Latest news item ಉಡುಪಿ ನಗರ ವ್ಯಾಪ್ತಿಯಲ್ಲಿ 2 ದಿನಕ್ಕೊಮ್ಮೆ ನೀರು ಪೂರೈಕೆ : ಶಾಸಕ ಭಟ್
Latest news item ಎಸೆಸೆಲ್ಸಿ ಫಲಿತಾಂಶದಲ್ಲಿ ನವ್ಯ ಶೆಟ್ಟಿ ಮತ್ತು ಪಲ್ಲವಿ ರಾವ್ ಪ್ರಥಮ ಹಾಗೂ ದ್ವಿತೀಯ ರ್ಯಾಂಕ್
Latest news item ಬಿಜೆಪಿಗೆ ಬಿ‌ಎಸ್‌ವೈ ಗುಡ್ ಬೈ: ಲಕ್ಷ್ಮೀನಾರಾಯಣ | ಬಿಕ್ಕಟ್ಟು ಹಿನ್ನೆಲೆ, ಜೇಟ್ಲಿ, ಪ್ರಧಾನ ನಾಳೆ ಬೆಂಗಳೂರಿಗೆ
Latest news item ಕನಿಷ್ಟ ವೇತನ ಪರಿಷ್ಕರಿಸುವಂತೆ ಬೀಡಿ ಕಾರ್ಮಿಕರ ಪ್ರತಿಭಟನೆ
Latest news item ರಾಜ್ಯ ಸರ್ಕಾರದ ವೈಫಲ್ಯದ ವಿರುದ್ದ ಉಡುಪಿಯಲ್ಲಿ ಯುವ ಕಾಂಗ್ರೆಸ್ ಪ್ರತಿಭಟನೆ
Latest news item ಮೇ.20 ರಿಂದ ಮಹಾನಗರಿಮುಂಬಯಿಯಲ್ಲಿ ‘ಅದ್ಭುತ ಬಾಲಕಿ’ಯ ನೃತ್ಯ -ಪ್ರತಿಭಾ ಪ್ರದರ್ಶನ ಸಪ್ತಾಹ
Latest news item ದುಬಾಯಿಯಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ: ಶಂಕರ್ ಶಾನ್ ಬಾಗ್ ರವರ ಗಾನ ಸುಧೆಯಲ್ಲಿ ಭಾವ ಪರವಶರಾದ ಭಕ್ತ ಸಮೂಹ
Latest news item ಮನರಂಜಿಸಿದ “ಕಿವುಡನ ಕಿತಾಪತಿ”
Latest news item ಅಗಲಿದ ಸಜ್ಜನ ರಾಜಕಾರಣಿ ಡಾ|ವಿ. ಎಸ್. ಆಚಾರ್ಯರಿಗೆ ದುಬಾಯಿಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಮರ್ಪಣೆ
Latest news item ಅಬುಧಾಬಿಯಲ್ಲಿ ಕುವೆಂಪು ಕಲಾಉತ್ಸವ ಮತ್ತು ವಿಶ್ವ ಕನ್ನಡ ಸಮ್ಮೇಳನ - ಕೊಲ್ಲಿ ನಾಡಿನಲ್ಲಿ ಪ್ರತಿಧ್ವನಿಸಿದ ಕನ್ನಡ ದಿಂಡಿಮ....
Latest news item ಮನಸೂರೆಗೊಂಡ ’ನೆನಪಿನಂಗಳ”! .. ಮೈ ಮರೆತ ಪ್ರೇಕ್ಷಕ ವರ್ಗ!
Latest news item ನಿರ್ದೇಶನದಲ್ಲಿ ಹೊಸತನ ಹಾಗೂ ಮತ್ತು ಪನ್ಚಿಂಗ್ ಹಾಸ್ಯ ಸಂವಾದ - ನಟನೆಗಳಿಂದ ಮನಸೆಳೆದ ತುಳುನಾಟಕ ’ಆಯೆ ಸುಬಗ”; ನಕ್ಕು ನಲಿದ ಪ್ರೇಕ್ಷಕ ವರ್ಗ, ನಮ ತುಳುವೆರ್ ದಾಖಲೆ
Latest news item ನಾಡಿನ ಹೆಸರಾಂತ ಗಾಯಕ,ಗಾಯಕಿಯರುಗಳು ಸ್ರಷ್ಟಿಸಿದ ಸಂಗೀತಲೋಕ; ಜನಮನ ರಂಜಿಸಿದ ರಾಮೀ ರಸ ಸಂಜೆ; ಮಿಮಿಕ್ರಿ ದಯಾನಂದ್ ರವರ ಹಾಸ್ಯ ಲಾಸ್ಯ: ದ್ವೀಪದ ಕನ್ನಡಿಗರಿಗೆ ನಮ್ಮ ಕನ್ನಡ ಬಹರೈನ್ ನ ಹೊಸ ವರುಷದ ಕೊಡುಗೆ
Latest news item ಬಹರೈನ್ ಕನ್ನಡ ಸಂಘದ ಹವ್ಯಾಸಿ ಯಕ್ಷಗಾನ ಕಲಾವಿದರಿಂದ 'ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ' ಯಕ್ಷಗಾನ ಪ್ರದರ್ಶನ



 

 
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: ಡೀವಿ ಖಚಿತ ಕಾಂಗ್ರೆಸ್‌ಗೆ `ತಾರಾ'ಬಲ? (ಸ೦ಗ್ರಹ)

ಉಡುಪಿ, ಜ. ೨೮: ಲೋಕಸಭಾ ಚುನಾವಣೆಗೆ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆ ದಿನದಿಂದ ದಿನಕ್ಕೆ ಹೊಸ ಹೊಸ ತಿರುವನ್ನು ಪಡೆದುಕೊಳ್ಳುತ್ತಿದೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಿಜೆಪಿ ಕೊನೆಗೂ ರಾಜ್ಯ ಬಿಜೆಪಿ ಅಧ್ಯಕ್ಷ ಡಿ.ವಿ. ಸದಾನಂದ ಗೌಡರಿಗೆ ಹಸಿರುನಿಶಾನೆ ತೋರಿಸಿದ್ದು ಹಲವು ದಿನಗಳಿಂದ ಇದ್ದ ಊಹಾಪೋಹಕ್ಕೆ ತೆರೆಬಿದ್ದಿದೆ.

ಜ. ೨೮ರ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸದಾನಂದ ಗೌಡರು ರಾಜ್ಯಾಧ್ಯಕ್ಷರಾದ ಕಾರಣ ಸುರಕ್ಷಿತ ಕ್ಷೇತ್ರವನ್ನೇ ಆರಿಸಬೇಕೆಂಬುದು ಪಕ್ಷದವರ ಅಭಿಪ್ರಾಯವೆನ್ನಲಾಗಿದೆ. ಇದಕ್ಕೆ ಮುಖ್ಯಮಂತ್ರಿಗಳೂ ಒಲವು ತೋರಿದ್ದರೆನ್ನಲಾಗಿದೆ.

ಇದೇ ವೇಳೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿ.ಎಲ್. ಶಂಕರ್‌ಗೋ ಡಿ.ಕೆ.ತಾರಾದೇವಿ ಯವರಿಗೋ ಎಂಬ ಪ್ರಶ್ನೆ ಇನ್ನೂ ಬಗೆಹರಿದಂತಿಲ್ಲ. ಉಡುಪಿ ಜಿಲ್ಲೆಯ ನಾಯಕರಿಗಂತೂ ಸ್ಪರ್ಧಿಸಲು ಮನಸ್ಸಿಲ್ಲ. ಶಂಕರ್‌ಗೆ ಟಿಕೆಟ್ ದೊರಕದೆ ಇರಲು ಸ್ವಪಕ್ಷಕ್ಕಿಂತಲೂ ಪರಪಕ್ಷದ ಸಮಸ್ಯೆ ಹೆಚ್ಚೆಂದು ಸ್ವಪಕ್ಷದ ಮೂಲಗಳೇ ಹೇಳುತ್ತಿವೆ. ರಾಜ್ಯದಲ್ಲಿ ಜೆಡಿ‌ಎಸ್ ಜೊತೆ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆ ಇರುವುದರಿಂದ ಶಂಕರ್‌ಗೆ ಟಿಕೆಟ್ ಕೊಡಲು ಜೆಡಿ‌ಎಸ್ `ಪರಮಾಚಾರ್ಯ' ಯಾನೆ `ಜಗದ್ಗುರು' ಎಚ್.ಡಿ.ದೇವೇ ಗೌಡರು ಕಡು ವಿರೋಧ ವ್ಯಕ್ತಪಡಿಸುತ್ತಿದ್ದಾರಂತೆ. ಶಂಕರ್ ಹಿಂದೆ ಜೆಡಿ‌ಎಸ್ ಗರೋಡಿಯಲ್ಲಿದ್ದು ಬಳಿಕ ಕಾಂಗ್ರೆಸ್‌ಗೆ ಬಂದಿರುವುದರಿಂದ ದೇವೇಗೌಡರು ಶತಾಯಗತಾಯ ವಿರೋಧವಿದ್ದಾರೆ. ಹೀಗೇನಾದರೂ ಆದಲ್ಲಿ ತಾರಾದೇವಿ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ತಾರಾದೇವಿಯವರಿಗೆ ಟಿಕೆಟ್ ನೀಡಿದರೆ ಮಹಿಳಾ ಕೋಟಾ ಈಡೇರಿಸಿದಂತಾಗುತ್ತದೆಂಬುದು ಪಕ್ಷದ ನಾಯಕರ ಚಿಂತನೆ ಎನ್ನಲಾಗಿದೆ. ಇತ್ತೀಚೆಗೆ ಉಡುಪಿಯಲ್ಲಿ ಉಭಯ ಜಿಲ್ಲೆಗಳ ಕಾಂಗ್ರೆಸ್ ನಾಯಕರು ಸಭೆ ನಡೆಸಿದಂತೆ. ಜ.೩೦ರಂದು ಶೃಂಗೇರಿಯಲ್ಲಿ ಸಭೆ ನಡೆಸಲಿದ್ದಾರೆ.

ಹ್ಯಾಟ್ರಿಕ್ ಸೋಲಿನ ಅಡ್ಡಿ?

ಮಂಗಳೂರಿನಲ್ಲಿ ಕಾಂಗ್ರೆಸ್‌ನಿಂದ ಜನಾರ್ದನ ಪೂಜಾರಿ, ವೀರಪ್ಪ ಮೊಯ್ಲಿಯವರ ಹೆಸರು ಕೇಳಿಬರುತ್ತಿದ್ದರೂ ತಲಾ ಮೂರು ಬಾರಿ ಸೋತವರಿಗೆ ಟಿಕೆಟ್ ಕೊಡಬಾರದೆಂಬ ಪಕ್ಷದ ಆಂತರಿಕ ನಿಯಮ ಇವರಿಗೆ ಅಡ್ಡಿ ಎನ್ನಲಾಗುತ್ತಿದೆ. ಉಡುಪಿಯ ಮಾಜಿ ಸಂಸದ ವಿನಯಕುಮಾರ ಸೊರಕೆ ಅವರ ಅದೃಷ್ಟ ಮಂಗಳೂರಿನಲ್ಲಿ ಖುಲಾಯಿಸುವ ಸಾಧ್ಯತೆ ಹೆಚ್ಚಿಗೆ ಇದೆ.

ಉಡುಪಿ ಲೋಕಸಭಾ ಕ್ಷೇತ್ರದಿಂದ ಬೈಂದೂರು, ಸುರತ್ಕಲ್, ಮೂಲ್ಕಿ ಮೂಡಬಿದಿರೆ ಕ್ಷೇತ್ರ ಕೈಬಿಟ್ಟು ಹೋದ ಕಾರಣ ಸೊರಕೆಯವರು ಉಡುಪಿ ಕ್ಷೇತ್ರದಲ್ಲಿ ಮತ್ತೆ ನಿಲ್ಲಲು ಮನಸ್ಸು ಮಾಡುತ್ತಿಲ್ಲ. ಮಂಗಳೂರಿಗೆ ಟಿಕೆಟ್ ಗಿಟ್ಟಿಸಿಕೊಳ್ಳುವ ಪ್ರಯತ್ನದ ಅಂಗವಾಗಿ ಸೊರಕೆಯವರು ಜ.೨೮ರ ಬೆಳಗ್ಗೆ ದಿಲ್ಲಿಗೆ ಹೋಗಿದ್ದಾರೆ. ಹೈಕಮಾಂಡ್ ಪ್ರಭಾವದಲ್ಲಿ ಮೊಯ್ಲಿಯವರ ಕೈ ಮಿಗಿಲಾಗಿದೆ, ಅನಂತರ ಸೊರಕೆಯವರದ್ದು ಎಂಬ ಮಾತೂ ಪಕ್ಷದಲ್ಲಿ ಕೇಳಿಬರುತ್ತಿದೆ.

ಒಟ್ಟಾರೆ ಉಡುಪಿ ಕ್ಷೇತ್ರದ ಟಿಕೆಟ್‌ಗೆ ಕಾಂಗ್ರೆಸ್‌ನಲ್ಲಿ ಚಿಕ್ಕಮಗಳೂರಿನವರದ್ದೇ ಪ್ರಾಬಲ್ಯ, ಮಂಗಳೂರಿನ ಟಿಕೆಟ್ ಗಿಟ್ಟಿಸಿಕೊಳ್ಳಲು ಉಭಯ ಜಿಲ್ಲೆಗಳ ನಾಯಕರು ತೀವ್ರ ಪೈಪೋಟಿಯಲ್ಲಿದ್ದಾರೆ. ಮಂಗಳೂರು ಕ್ಷೇತ್ರದಲ್ಲಿ ಬಂಟ್ವಾಳ, ಮೂಡಬಿದಿರೆ, ಬೆಳ್ತಂಗಡಿಯಂತಹ ಕ್ಷೇತ್ರಗಳು ಸೇರ್ಪಡೆಗೊಂಡಿರುವುದು, ಅಲ್ಪಸಂಖ್ಯಾಕರ ಮತಗಳು ದೊಡ್ಡ ಸಂಖ್ಯೆಯಲ್ಲಿರುವುದು, ಮಂಗಳೂರಿನ ಪಬ್ ದಾಳಿ ಪ್ರಕರಣ ಇತ್ಯಾದಿ ಕಾಂಗ್ರೆಸಿನ ಪೈಪೋಟಿಗೆ ಕಾರಣವೆನ್ನಲಾಗಿದೆ.

ಎರಡೂ ಜಿಲ್ಲೆಗಳಲ್ಲಿ ಒಂದು ಕ್ಷೇತ್ರದಿಂದಂತೂ ಬಿಲ್ಲವ ಅಭ್ಯರ್ಥಿಗಳನ್ನು ನಿಲ್ಲಿಸುವುದು ಬಹುತೇಕ ಖಾತ್ರಿ. ಮಂಗಳೂರಿನಿಂದ ಬಿಜೆಪಿ ಅಭ್ಯರ್ಥಿಗಳಾಗಿ ಕಾರ್ಕಳದ ಮಾಜಿ ಶಾಸಕ ವಿ.ಸುನೀಲ್‌ಕುಮಾರ್, ಕ್ಯಾಂಪ್ಕೊ ಮಾಜಿ ಅಧ್ಯಕ್ಷ ಎಸ್.ಆರ್.ರಂಗಮೂರ್ತಿ ಯವರ ಹೆಸರು ಕೇಳಿಬರುತ್ತಿದೆ.

ಚಿಂತನ ಬೈಠಕ್: ಹೆಬ್ರಿ ಸಮೀಪದ ಸಂತೆಕಟ್ಟೆಯಲ್ಲಿ ಜ.೨೮ರಂದು ನಡೆದ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ೮ ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಪ್ರಮುಖ ನಾಯಕರ `ಚಿಂತನ ಭೈಠಕ್' ಸಭೆಯನ್ನು ಡಿ.ವಿ. ಉದ್ಘಾಟಿಸಿದರು. ಎಂಟೂ ಕ್ಷೇತ್ರಗಳ ಪ್ರಮುಖರು ಡಿ.ವಿ.ಯವರ ಹೆಸರನ್ನು ಅನುಮೋದಿಸಿದರು.

ಡಿ.ವಿ. ಉಮೇದುವಾರಿಕೆ: ಬಿಜೆಪಿ ಸಭೆ ನಿರ್ಣಯ

ಉಡುಪಿ, ಜ. ೨೯: ಕ್ಷೇತ್ರ ಪುನರ್ವಿಂಗಡನೆ ಬಳಿಕ ರೂಪುಗೊಂಡಿರುವ ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಡಿ.ವಿ. ಸದಾನಂದ ಗೌಡರ ಹೆಸರನ್ನು ಅಂತಿಮಗೊಳಿಸಿ ಚುನಾವಣಾ ಸಮಿತಿಗೆ ಕಳುಹಿಸಲಾಗಿದೆ.

ಡಿ.೨೮ ಮತ್ತು ೨೯ರಂದು ಹೆಬ್ರಿ ಸಂತೆಕಟ್ಟೆಯಲ್ಲಿ ನಡೆದ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಬಿಜೆಪಿ ಪ್ರಮುಖರ ಚಿಂತನಾ ಸಭೆಯಲ್ಲಿ ಡಿ.ವಿ. ಹೆಸರನ್ನು ಸರ್ವಾನುಮತದಿಂದ ಆಯ್ಕೆ ಮಾಡಿ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಬಿಜೆಪಿ ವಕ್ತಾರ ಸಿ.ಟಿ.ರವಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

`ಕಾರ್‍ಯಕರ್ತರು ಕರೆದರು': ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಡಿ.ಎಚ್. ಶಂಕರ ಮೂರ್ತಿ ಅವರು, ಉಡುಪಿಯನ್ನು ಹಿಂದೆಯೂ ಬಿಜೆಪಿ ಗೆದ್ದಿತ್ತು. ಉಡುಪಿ - ಚಿಕ್ಕಮಗಳೂರಿನ ಕಾರ್‍ಯ ಕರ್ತರ ಒತ್ತಾಸೆ ಮೇರೆಗೆ ಸದಾನಂದ ಗೌಡರು ಇಲ್ಲಿ ಸ್ಪರ್ಧಿಸಲು ಒಪ್ಪಿಕೊಂಡಿದ್ದಾರೆ ಎಂದರು.

ಡಾ| ಆಚಾರ್ಯ, ಕೆ.ಎಸ್. ಈಶ್ವರಪ್ಪ, ಎ.ಜಿ. ಕೊಡ್ಗಿ, ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಮೂಡಿಗೆರೆ ಶಾಸಕ ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ಭೋಜೇ ಗೌಡ, ಉಡುಪಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್‍ಯದರ್ಶಿ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಉಪಸ್ಥಿತರಿದ್ದರು

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2009-02-19

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಸಂಗ್ರಹ]

»ನವದೆಹಲಿ: ಶಿಲ್ಪಾ ‘ಸಿರಿ’ ಕವನ ಸಂಕಲನ ಬಿಡುಗಡೆ
»ಅನಿವಾಸಿ ಕನ್ನಡಿಗರೆ ನೀವು ಕರ್ನಾಟಕ ಬಿಟ್ಟು ಹೋಗುವಾಗ ನಮ್ಮನ್ನು ಕೇಳಿದ್ದಿರಾ ?-ಮುಖ್ಯಮಂತ್ರಿ ಚಂದ್ರು(ಸ೦ಗ್ರಹ)
»ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: ಡೀವಿ ಖಚಿತ ಕಾಂಗ್ರೆಸ್‌ಗೆ `ತಾರಾ'ಬಲ? (ಸ೦ಗ್ರಹ)
»ಇಂದಿನಿಂದ ಓಬವ್ವನ ನಾಡಲ್ಲಿ ಸಾಹಿತ್ಯ ತೇರು(ಸ೦ಗ್ರಹ)
»ಜನರ ಬಳಿಗೆ ಆಗಮಿಸುತ್ತಿದೆ ಗೂಗಲ್ ಇಂಟರ್ನೆಟ್ ಬಸ್ (ಸ೦ಗ್ರಹ)
»ಬೆಳ್ತಂಗಡಿ:‘ಕುಡಿದು’ ಕಲಿಸುವ ಶಿಕ್ಷಕಿ ಬೇಡವೇ ಬೇಡ...!(ಸ೦ಗ್ರಹ)
»ದುಡ್ಡು ಸಂಪತ್ತಿಗಿ೦ತ ಜನರಿಂದ ಪಡೆಯುವ ಪ್ರೀತಿಯೇ ದೊಡ್ಡದು: ಬನ್ನಂಜೆ (ಸ೦ಗ್ರಹ)
»ಖ್ಯಾತ ಕಾರ್ಯಕರ್ತ ಇಕ್ಬಾಲ್ ಮನ್ನಾ ಅವರಿಗೆ ಸನ್ಮಾನ(ಸ೦ಗ್ರಹ)
»ಕೊಟ್ಟ ಮಾತು ತಪ್ಪದ ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರು : ಅನಿವಾಸಿ ಕನ್ನಡಿಗರ ಸಮಿತಿಗೆ ಬೇಡಿಕೆ -ಆಶ್ವಾಸನಪತ್ರ(ಸ೦ಗ್ರಹ)
»ವಿಜ್ರಂಭಣೆಯಿಂದ ನೆಡೆದ ಕತರ್ ತುಳು ಕೂಟದ 4 ನೇ ವಾರ್ಷಿಕೋತ್ಸವ; ಕಿಕ್ಕಿರಿದ ಸಭೆ,’ದೇವರ್ ನಡಪವೆರ್’ ಯಶಸ್ವಿ ಪ್ರದರ್ಶನ (ಸ೦ಗ್ರಹ)
»ಪತ್ರಿಕೆಗಳ ಮೇಲಿನ ಓದುಗರ ವಿಶ್ವಾಸಾರ್ಹತೆ ಕುಂಠಿತ: ಮಣಿಪಾಲದಲಿ ಮಿಂಟ್ ಸಂಪಾದಕ ರಾಜಾ ನರಶೆಟ್ಟಿ(ಸ೦ಗ್ರಹ)
»ಸಭಿಕರನ್ನು ಬಾವುಕತೆಯಲ್ಲಿ ಪುಳಕಿಸಿದ ’ದೋಹಾ ಕಿ ಶಾಮ್ ರಫಿ ಕಿ ನಾಮ್’(ಸ೦ಗ್ರಹ)
»ಸಿ.ಆರ್.ಶೆಟ್ಟಿ ಅವರಿಗೆ ‘ಇ೦ದಿರಾ ಗಾ೦ಧಿ ಪ್ರಿಯದರ್ಶಿನಿ’ ಪ್ರಶಸ್ತಿ (ಸಂಗ್ರಹ)
»ಅಜ್ಮಾನ್: ನಾಲ್ಕನೆಯ ಪದವಿಪ್ರದಾನ ಸಮಾರಂಭ 2008-ಹಲವು ಗಣ್ಯರ ಉಪಸ್ಥಿತಿ( ಸಂಗ್ರಹ)
»ಮುಂಬೈಯಲ್ಲಿ ಕನ್ನಡ ಯುವತಿಯ ಸಾಧನೆ: ಜ್ಯೋತಿ ಬಿ.ದೇವಾಡಿಗರಿಗೆ ಕನ್ನಡ ಮಾಧ್ಯಮ ಪ್ರಶಸ್ತಿ ( ಸಂಗ್ರಹ)
»ಬಹುಜನ ಹಿತಾಯ ಬಹುಜನ ಸುಖಾಯ : ಹೋರಾಟ ನಿಮ್ಮದು ಬೆಂಬಲ ನಮ್ಮದು
»ಗಲ್ಫ್ ನಾಡಿನಲ್ಲಿ ಕನ್ನಡದ ಕಂಪು ( ಸಂಗ್ರಹ)
»ಸಂಗೀತಮಯ, ನೃತ್ಯ ಸಂಯೋಜಿತ ಹಾಗೂ ಖ್ಯಾತ ತಾರೆಗಳಿಂದ ಪ್ರಜ್ವಲಗೊಂಡ ಶಾರ್ಜಾ ಕರ್ನಾಟಕ ಸಂಘದ ವಾರ್ಷಿಕೋತ್ಸವ (ಸಂಗ್ರಹ)
»ಬ್ಯಾರೀಸ್ ಕಲ್ಚರಲ್ ಫೊರಂನ ವತಿಯಿಂದ ವಿದ್ಯಾರ್ಥಿವೇತನ.. ಸಮುದಾಯದ ಅಭಿವೃದ್ಧಿಯಲ್ಲಿ ಸಹಭಾಗಿತ್ವ : ಜಯಪ್ರಕಾಶ್ ಹೆಗ್ಡೆ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri