ಪುಣೆಯಲ್ಲಿ ಡಾ| ಪೂನಂ'ಸ್ ಇಎನ್‌ಟಿ ಕ್ಲಿನಿಕ್ ಪ್ರಾರಂಭೋತ್ಸವ: ವೈದ್ಯಕೀಯ ಸೇವೆಯು ಪಾವಿತ್ರತೆಯ ಕಾಯಕ : ಡಾ| ಜೀವನ್‌ರಾಮ್ ಶೆಟ್ಟಿ |
ಪ್ರಕಟಿಸಿದ ದಿನಾಂಕ : 2010-07-05
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಪುಣೆ, ಜುಲೈ. ೦೪ : ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕಾಪು ಇಲ್ಲಿನ ವೈದ್ಯಕೀಯ ರಂಗದ ಸಾಧಕಿ, ಎಂಬಿಬಿಎಸ್‌ನ ಸರ್ಜರಿ ಶಿಕ್ಷಣದಲ್ಲಿ ಸ್ವರ್ಣ ಪದಕ ವಿಜೇತೆ, ಕಿವಿ-ಮೂಗು-ಗಂಟಲು ಶಸ್ತ್ರ ಚಿಕಿತ್ಸೆಯ (ಇಎನ್‌ಟಿ) ವೈದ್ಯಕೀಯ ಶಿಕ್ಷಣದ ಮಾಸ್ಟರ್ ಆಫ್ ಸರ್ಜರಿ (ಎಂಎಸ್) ಅಭ್ಯಾಸದಲ್ಲಿ ಎಂಟನೇ ರ್‍ಯಾಂಕ್ ಗಿಟ್ಟಿಸಿಕೊಂಡ ಪ್ರತಿಭಾಹ್ವಾನಿತ ಯುವ ವೈದ್ಯಾಧಿಕಾರಿ ಡಾ| ಪೂನಂ ರಾಹುಲ್ ಶೇರಿಗಾರ್ ಇವರು ಪುಣೆಯಲ್ಲಿ ರಚಿಸಿರುವ ತಮ್ಮ ಸ್ವಂತಿಕೆಯ ಡಾ| ಪೂನಂ'ಸ್ ಇಎನ್‌ಟಿ ಕ್ಲಿನಿಕ್ ಇಂದಿಲ್ಲಿ ಆದಿತ್ಯವಾರ ಪೂರ್ವಾಹ್ನ ಪುಣೆಯ ಬಲೆವಾಡಿ ಇಲ್ಲಿನ ಎಲೈಟ್ ಪ್ರಿಮಿಯೋ ಕಟ್ಟಡದಲ್ಲಿ ಉದ್ಘಾಟಿಸಲ್ಪಟ್ಟಿತು.

ಮುಂಬಯಿ ಮಹಾನಗರದ ಪ್ರಸಿದ್ಧ ಇಎನ್‌ಟಿ ಶಸ್ತ್ರ ಚಿಕಿತ್ಸಕ ಹಾಗೂ ವೈದ್ಯಾಧಿಕಾರಿ ಡಾ| ಎಸ್. ಜೀವನ್‌ರಾಮ್ ಶೆಟ್ಟಿ ಇವರು ರಿಬ್ಬನ್ ಕತ್ತರಿಸಿ ಡಾ| ಪೂನಂ'ಸ್ ಇಎನ್‌ಟಿ ಕ್ಲಿನಿಕ್‌ನ್ನು ಉದ್ಘಾಟಿ ಸಿದರು.
``ಆರೋಗ್ಯದಾಯಕ ಸಾಮಾಜಿಕ ಸ್ವಸ್ಥ ಸಮಾಜ ನಿರ್ಮಾಣದಲ್ಲಿ ವೈದ್ಯರ ಪಾತ್ರವೂ ಹಿರಿದಾ ಗಿದೆ. ವೈದ್ಯಕೀಯ ಸೇವೆಯು ಪಾವಿತ್ರ್ಯತೆಯ ಕಾಯಕವಾಗಿದ್ದು, ಸಮಗ್ರ ಜನತೆಯ ಆರೋಗ್ಯ ಕಾಪಾಡುವ ವೈದ್ಯಕೀಯ ವೃತ್ತಿಯಲ್ಲಿ ಪೈಪೋಟಿ, ಸ್ಪರ್ಧೆ ಸಲ್ಲದು. ಇಂತಹ ಕೀಳರಿಮೆಯಿಂದ ಸಮಾಜದಲ್ಲಿ ಅನಾರೋಗ್ಯಕರ ಧೋರಣಾ ಸೃಷ್ಠಿ ಅವಿಶ್ವಾಸಕ್ಕೆ ಅವಕಾಶ ಕಲ್ಪಿಸುತ್ತದೆ. ಇದನ್ನು ತಡೆಯುವಲ್ಲಿ ಇಂತಹ ಪ್ರತಿಭಾಹ್ವಾನಿತ ಯುವ ವೈದ್ಯಾಧಿಕಾರಿ ಡಾ| ಪೂನಂ ರಾಹುಲ್ ಇವರಂ ತಹ ಆರೋಗ್ಯದ ಕಾಳಜಿಯುಳ್ಳ ವೈದ್ಯರ ಶ್ರಮ ಅವಶ್ಯ.

ವೈದ್ಯಕೀಯ ರಂಗದಲ್ಲಿನ ಕ್ರಾಂತಿ ಮನುಜ ಸಮೂದಾಯಕ್ಕೆ ನೆಮ್ಮದಿಯ ಬಾಳಿನ ಕೊಡುಗೆ ಆಗಬೇಕೇ ಹೊರತು ದುರಾಶೆಯ ಕೆಡುಕು ಆಗಬಾರದು. ಎಲ್ಲಾ ವೈದ್ಯರು ವೈದ್ಯಕೀಯ ನೀತಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುವುದರೊಂದಿಗೆ ಮಾನವನ ಸುಖೀ ಜೀವನಕ್ಕೆ ಬದ್ಧರಾಗುವಂತಾಗಲಿ'' ಎಂದು ಡಾ| ಜೀವನ್‌ರಾಮ್ ಹಾರೈಸಿದರು.
ಹೆಸರಾಂತ ಪುರೋಹಿತರಾದ ಹರೀಶ್ ಐತಾಳ್ ಇವರು ವಾಸ್ತುಪೂಜೆ, ಸತ್ಯನಾರಯಣ ಮಹಾಪೂಜೆಯೊಂದಿಗೆ ವೈಧಿಕವಾಗಿ ಪ್ರಾರಂಭೋತ್ಸವಗೈದರು. ಡಾ| ಪೂನಂ ಶೇರಿಗಾರ್ ಮತ್ತು ರಾಹುಲ್ ಶೇರಿಗಾರ್ ದಂಪತಿ ಪೂಜಾಧಿಗಳಲ್ಲಿ ಸಹಭಾಗಿಗಳಾಗಿದ್ದರು. ಸಮಾರಂಭದಲ್ಲಿ ಡಾ| ರವೀಂದ್ರ ಸರ್‌ದೇಸಾಯಿ, ಡಾ|ಸುರೇಂದ್ರ ಪಾಟೀಲ್, ಡಾ| ಕೆ.ಅನುರಾಧ, ಡಾ| (ಶ್ರೀಮತಿ) ರಶ್ಮಿ ಚವ್ಹಾಣ್, ಡಾ| ವಿವೇಕ್ ಚವ್ಹಾಣ್ ಮುಂತಾದ ವೈದ್ಯಾಧಿಕಾರಿಗಳು ಅತಿಥಿವರ್ಯರಾಗಿ ಸುಪಸ್ಥಿತರಿದ್ದು ಶುಭಾರೈಕೆಗೈದರು.

ಸಮಾರಂಭದಲ್ಲಿ ಡಾ| ಪೂನಂ ಇವರ ಮಾತಾಪಿತರಾದ ಹೆಸರಾಂತ ಉದ್ಯಮಿ, ಧರ್ಮಪಾಲ್ ಯು. ದೇವಾಡಿಗ ಮತ್ತು ಶ್ರೀಮತಿ ಸುಜಾತಾ ಧರ್ಮಪಾಲ್ ದೇವಾಡಿಗ ದಂಪತಿ ಹಾಗೂ ಪವನ್ ಡಿ.ದೇವಾಡಿಗ, ಶ್ರೀಮತಿ ಚಿತ್ರ ಶೇರಿಗಾರ್, ಪತಿ ರಾಹುಲ್ ಶೇರಿಗಾರ್, ತೀಯಾ ಸಮಾಜ ಮುಂಬಯಿ ಇದರ ಅಧ್ಯಕ್ಷ ಚಂದ್ರಶೇಖರ್ ಬೆಳ್ಚಡ, ಸಂತೋಷ್ ಶೆಟ್ಟಿ ಸುಧಾಮ, ಸದಾನಂದ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದು ಶುಭಹಾರೈಸಿದರು.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-07-05 00:00:00
|
|
|