ಸದ್ದಾಂ ಗೂಢಚಾರನಿಗೆ ಕುವೈಟ್ ಪೌರತ್ವ |
ಪ್ರಕಟಿಸಿದ ದಿನಾಂಕ : 2010-07-05
ದುಬೈ, ಜು. ೪: ಇರಾಕ್‌ನ ಸರ್ವಾಧಿಕಾರಿಯಾಗಿದ್ದ ಸದ್ದಾಂ ಹುಸೇನ್ ಪರ ಬೇಹುಗಾರಿಕೆಯಲ್ಲಿ ತೊಡಗಿದ್ದ ಇರಾಕಿ ಪ್ರಜೆ ಮತ್ತವನ ಕುಟುಂಬವು ಇತ್ತೀಚೆಗೆ ಕುವೈಟ್ ಪೌರತ್ವವನ್ನು ಪಡೆದು ಕೊಂಡಿದೆ.
ಇನ್ನು ಕೂಡ ಗುರುತು ಬಹಿರಂಗಗೊಳಿಸದೇ ಇರುವ ಈ ವ್ಯಕ್ತಿ ೧೯೯೦ರ ದಾಳಿಯಲ್ಲಿ ಇರಾಕೀ ಸೇನೆಯ ಸಾರಥ್ಯವನ್ನು ವಹಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಎನ್ನಲಾಗಿದೆ.
ದಾಳಿಯ ಸಂದರ್ಭ ಈ ವ್ಯಕ್ತಿ ಸದ್ದಾಂ ಹುತಾತ್ಮರ ಬ್ರಿಗೇಡ್‌ನ ಮುಖ್ಯಸ್ಥನಾಗಿದ್ದ ಮಾತ್ರವಲ್ಲದೇ ಇದೇ ಸಂದರ್ಭದಲ್ಲಿ ಬಾಸ್ರಾದಲ್ಲಿನ ಸದ್ದಾಂ ಆಡಳಿತದಲ್ಲಿ ಉದ್ಯೋಗಿಯಾಗಿದ್ದ ಎಂದು ಅರೇಬಿ ಕ್ ನಿಯತಕಾಲಿಕೆ ‘ಅಲ್-ವಾಟನ್ ಡೈಲಿ’ ವರದಿ ಮಾಡಿದೆ.
ಕುವೈಟ್‌ನಲ್ಲಿ ಬಾತ್ ಪಕ್ಷದ ಪರವಾಗಿ ಆತ ಮತ್ತಾತನ ಕುಟುಂಬ ಗೂಢಚಾರಿಕೆಯಲ್ಲಿ ತೊಡಗಿ ತ್ತು ಹಾಗೂ ೨೦೦೧ರ ತನಕ ಈ ಸಂಬಂಧ ಇರಾಕಿ ಆಡಳಿತದಿಂದ ಹಲವು ಪತ್ರಗಳನ್ನೂ ಕುಟುಂ ಬ ವರ್ಗ ಸ್ವೀಕರಿಸಿತ್ತು ಎಂದು ಅದು ಹೇಳಿದೆ. ೧೯೯೦ರ ಸೆಪ್ಟಂಬರ್ ೧ರಂದು ಕುಟುಂಬವರ್ಗ ಸ್ವೀಕರಿಸಿದ್ದ ಇರಾಕ್ ಸರಕಾರ ಬರೆದಿದ್ದ ಪತ್ರದಲ್ಲಿ ಅಂದಿನ ಅಧ್ಯಕ್ಷರಾಗಿದ್ದ ಸದ್ದಾಂ ಹುಸೇನ್ ಅವರು ಕುವೈಟ್ ಮೇಲಿನ ದಾಳಿಯಲ್ಲಿ ಈ ವ್ಯಕ್ತಿಯ ಸಹೋದರ ಸಾವನ್ನಪ್ಪಿದುದಕ್ಕೆ ಸಂತಾಪ ಸೂಚಿಸಿದ್ದರು.
ಕುವೈಟ್ ಮೇಲಿನ ದಾಳಿ ವೇಳೆ ಇರಾಕಿ ಸೇನೆಯನ್ನು ಮುನ್ನಡೆಸಿದ್ದಕ್ಕಾಗಿ ಈ ವ್ಯಕ್ತಿಯನ್ನು ಅಭಿ ನಂದಿಸಿ ಸದ್ದಾಂ ಹುಸೇನ್ ಬರೆದಿರುವ ಪತ್ರ ತನ್ನ ಬಳಿ ಇದೆ ಎಂದು ನಿಯತಕಾಲಿಕೆ ತನ್ನ ವರದಿಯಲ್ಲಿ ಹೇಳಿಕೊಂಡಿದೆ.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-07-05 00:00:00
|
|
|