ಆದಿತ್ಯವಾರ, 05-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಜನತಾ ನ್ಯಾಯಾಲಯದ ಮೂಲಕ 5154 ಪ್ರಕರಣ ಇತ್ಯರ್ಥ : ಲೋಕ್ ಅದಾಲತ್ ಸಮಾರೋಪದಲ್ಲಿ ನರೇಂದ್ರ ಕುಮಾರ್ ಗುಣಕಿ
Latest news item ಸೃಜನ ಶೀಲತೆ ಇಲ್ಲದಿದ್ದಾಗ ಶಿಕ್ಷಣದ ಬೆಳವಣಿಗೆಗೆ ಕೊರತೆ | ಅಶೋಕ್ ಕುಮಾರ್ ಶೆಟ್ಟಿ, ಎಂ.ಎಸ್.ನಾಗರಾಜ್ ರಾವ್ ಹಾಗೂ ಡಾ.ಚಂದ್ರಶೇಖರ್ ದಾಂಬ್ಲೆಯವರಿಗೆ ಸನ್ಮಾನ
Latest news item ದುಬಾಯಿಯಲ್ಲಿ ’ಗಮ್ಮತ್ ಕಲಾವಿದೇರ್’ ಪ್ರಥಮ ಪ್ರದರ್ಶನ: ನಟನಾ ಚಾತುರ್ಯದಲ್ಲಿ ಮಿಂಚಿದ ’ಈ ಪೊರ್ಲು ದಾಯೇ’ ತುಳು ನಾಟಕ
Latest news item ಸುಶಿಕ್ಷಿತರ ಸಂಖ್ಯೆ ಹೆಚ್ಚಾದಂತೆ ಕೃಷಿಯತ್ತ ಒಲವು ಕಡಿಮೆ : ಉಡುಪಿ ರೈತ ಸಮಾವೇಶದಲ್ಲಿ ಶಾಸಕ ರಘುಪತಿ ಭಟ್
Latest news item ಉಡುಪಿ ಲಯನ್ಸ್ ಗೆ ಜಿಲ್ಲಾ ಲಯನ್ಸ್ ಗವರ್ನರ್ ಇಂದ್ರಾಳಿ ಜಯಕರ್ ಶೆಟ್ಟಿ ಅಧಿಕೃತ ಭೇಟಿ
Latest news item ಸುಬ್ರಮಣಿಯನ್ ಸ್ವಾಮಿ ಅರ್ಜಿ ವಜಾ: ಚಿದಂಬರಂ ನಿರಾಳ
Latest news item ಇಲ್ರಿ.. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿಲ್ಲ: ಯಡ್ಡಿ
Latest news item ಚೆನ್ನೈ ತೆಕ್ಕೆಗೆ ಜಡೇಜಾ; 9.70 ಕೋಟಿಗೆ ಖರೀದಿ; ವಿನಯ ಕುಮಾರ್ ಗೆ 4.86ಕೋಟಿ ಕೊಟ್ಟ ರೋಯಲ್ ಚ್ಯಾಲೇಂಜರ್ಸ್ | ಯಾವ ಯಾವ ಫ್ರಾಂಚೈಸಿ ತೆಕ್ಕೆಗೆ?
Latest news item ಗೂಳಿ ಹೊರಕ್ಕೆ: ಕಳಂಕಿತ ಸಭಾಧ್ಯಕ್ಷರೇ ಎಂದಿದ್ದಕ್ಕೆ ಸದನದಿಂದ ಒಂದು ದಿನ ಅಮಾನತು (Updated)
Latest news item ಜೈನ ಸಾಹಿತಿಗಳಿಂದ ಕನ್ನಡ ಸಾಹಿತ್ಯದ ಬೆಳವಣಿಗೆ: ಡಾ.ಶಾಂತಿನಾಥ ದಿಬ್ಬದ
Latest news item ವೈದ್ಯರಲ್ಲಿ ಮಾನವೀಯತೆ ಮುಖ್ಯ: ನ್ಯಾ. ಸಂತೋಷ್ ಹೆಗ್ಡೆ
Latest news item ಪಡುಬಿದ್ರೆಯಲ್ಲಿ ಎಸಿಸಿ ಸಿಮೆಂಟ್ ಕಂಪೆನಿ ಸ್ಥಾಪನೆ: ರಸ್ತೆ ಕಾಮಗಾರಿಗೆ ಬೂದಿ ಬಳಸಬಹದು : ಡಿಸಿ | ಫೆ. 4ರಂದು ಪ್ರತಿಭಟನೆ
Latest news item ಉಡುಪಿ ಶೇಮ್, ಶೇಮ್ !: ಸೈಂಟ್ ಮೇರೀಸ್ ದ್ವೀಪದಲ್ಲಿ ಜಿಲ್ಲಾಡಳಿತ ಕೃಪಕಟಾಕ್ಷದಲ್ಲಿ ರೇವ್ ಪಾರ್ಟಿ: ವಿದೇಶಿ ಸಂಸ್ಕೃತಿ ಆನಾವರಣ, ಮದ್ಯ, ಡ್ರಗ್ಸ್ ಗಳದ್ದೇ ಕಾರುಬಾರು
Latest news item ಅಪಘಾತಕ್ಕೆ ತುತ್ತಾಗಿ ಕಾಮಿಡಿ ನಟ ಕರಿ ಬಸವಯ್ಯ ಅಕಾಲಿಕ ಮರಣ { VIEW VIDEO of HIS EMOTIONAL LIFE STORY }.
Latest news item ಬಯಲುಸೀಮೆ ಆರು ಜಿಲ್ಲೆಗಳಿಗೆ ಕುಡಿಯುವ ನೀರು; ತಿಂಗಳಲ್ಲಿ ಎತ್ತಿನಹೊಳೆ ನಿರ್ಧಾರ. ನೇತ್ರಾವತಿ ತಿರುವು ಇಲ್ಲ..ಹೆಚ್ಚಿನ ನೀರನ್ನು ಬಳಸಿಕೊಳ್ಳುವ ಯೋಜನೆ
Latest news item ಕುಸಿಯುವ ಭೀತಿಯಲ್ಲಿ ಕುದಿ ಗ್ರಾಮದ ಕೋಂಟು ಸೇತುವೆ : ಆತಂಕದಲ್ಲಿ ಗ್ರಾಮಸ್ಥರು : ಸೂಕ್ತ ಪರಿಹಾರಕ್ಕೆ ಒತ್ತಾಯ
Latest news item ಡಿವಿಜಿಯವರ ಕಾವ್ಯಗಳು ಜನಸ್ವಾರ್ಥ : ಡಾ. ಹೆಚ್. ಶಾಂತರಾಮ್
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ದುಬೈ: ಗಲ್ಫ್ ಕರ್ನಾಟಕ ವೇದಿಕೆಯ ಐತಿಹಾಸಿಕ ವಿಶೇಷ ಸಭೆ: ಗಲ್ಫ್ ರಾಷ್ಟ್ರಗಳ ವಿವಿಧ ಸಂಘಟನೆಗಳ ಮುಖ್ಯಸ್ತರ ಸಮಾವೇಶ- ಅನಿವಾಸಿ ಕನ್ನಡಿಗರ ಧ್ವನಿಗೆ ಸ್ಪಂದಿಸಿದ ಸರ್ಕಾರ {Updated Photos}

{ Kindly view more pictures in the above ALBUM}

CONTACT: Email: mail@gulfkarnatakaforum.com

ದುಬೈ, ಜೂನ್ 26: ಗಲ್ಫ್ ರಾಷ್ಟ್ರಗಳಲ್ಲಿ ವಾಸವಾಗಿರುವ ಕನ್ನಡಿಗರ ಪಾಲಿಗೆ ಹೊಸ ಸುದ್ದಿ ಸಂತಸವನ್ನು ತಂದಿದೆ. ಈಗ ಅನಿವಾಸಿ ಗಲ್ಫ ಕನ್ನಡಿಗ (ಎನ್.ಆರ್.ಕೆ)ರ ಸಮಸ್ಯೆಗಳ ಹಾಗೂ ಅಗತ್ಯವಿರುವ ಸವಲತ್ತುಗಳನ್ನು ಹೊಂದುವ ಬಗ್ಗೆ ಗಮನ ಹರಿಸಲು ಗಲ್ಫ್ ಕರ್ನಾಟಕ ವೇದಿಕೆ (Gulf Karnataka forum)  ಈಗಾಗಲೇ ಅಸ್ಥಿತ್ವಕ್ಕೆ ಬಂದಿದ್ದು  ನಿನ್ನೆ ನಡೆದ ಸಮಾರಂಭದಲ್ಲಿ ಈ ಸಂಘಟನೆಗೆ ಅಧಿಕೃತ ಮನ್ನಣೆ ನೀಡಲಾಯಿತು.

ದುಬಾಯಿ ದೇರಾದಲ್ಲಿ ಯೂನಿಯನ್ ಮೆಟ್ರೋ ಸ್ಟೇಶನ್ ಎದುರಿನಲ್ಲಿರುವ ಲೋಟಸ್ ಡೌನ್ ಟೌನ್ ಮೆಟ್ರೋ ಹೊಟೇಲ್ ಅಪಾರ್ಟ್ಮೆಂಟಿನ ಭವ್ಯ ಸಭಾಂಗಣದಲ್ಲಿ ಅರಬ್ ಸಂಯುಕ್ತ ಸಂಸ್ಥಾನ ಮತ್ತು ಬಹೆರೈನ್, ಕುವೈಟ್, ಒಮಾನ್ ನಿಂದ ಆಗಮಿಸಿದ ಕರ್ನಾಟಕದ ಕನ್ನಡ, ತುಳು, ಕೊಂಕಣಿ, ಬ್ಯಾರಿ, ಕೊಡವ ಭಾಷೆಯ ಮತ್ತು ಇತರ ಜಾತಿ ಮತ ಸಮುದಾಯ ಸಂಘಟನೆಗಳ ಮುಖ್ಯಸ್ತರು, ಅದ್ಯಕ್ಷರು, ಪದಾಧಿಕಾರಿಗಳ ಸಮಾವೇಶಗೊಂಡಿದ್ದು, ಯು. ಎ. ಇ. ಗೆ -ಪ್ರಥಮ ಕನ್ನಡಿಗ ಭಾರತದ ರಾಯಬಾರಿ ಯಾಗಿರುವ ಮಾನ್ಯ ಶ್ರೀ ಎಂ. ಕೆ. ಲೋಕೇಶ್ ರವರು ಉದ್ಘಾಟಿಸಿದರು. 

ರಾಜ್ಯಸಭಾ ಸದಸ್ಯ ಹಾಗೂ ಮಾಜಿ ಸಚಿವ ಮಾನ್ಯ ಡಾ. ಆಸ್ಕರ್ ಫೆರ್ನಾಂಡಿಸ್,  ಕರ್ನಾಟಕ ಸರಕಾರದ ಅನಿವಾಸಿ ಭಾರತೀಯ ಸೆಲ್ ನ ಉಪಾಧ್ಯಕ್ಷರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಗಲ್ಫ್ ಕರ್ನಾಟಕ ವೇದಿಕೆಯ ಮಹಾ ಪೋಷಕರಾದ  ಪದ್ಮಶ್ರೀ ಪುರಸ್ಕೃತ ಡಾ. ಬಿ. ಆರ್. ಶೆಟ್ಟಿ ಯವರು, ಹಿರಿಯ ಮುಂದಾಳು ಎಸ್. ಎಂ. ಸೈಯದ್ ಖಲೀಲುರ್ರಹ್ಮಾನ್ ಹಾಗೂ  ಐ.ಸಿ.ಡಬ್ಲ್ಯು.ಸಿ. ದುಬಾಯಿ ಸಂಚಾಲಕರಾದ ಶ್ರೀ ಕುಮಾರ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕಾರ್ಯಕ್ರಮ ಮೋನಿಶ್ ಗಣೇಶ್ ರೈಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು.  ಶ್ರೀ ಗಣೇಶ್ ರೈಯವರು ಸರ್ವರನ್ನು ಸ್ವಾಗತಿಸಿ, ಗಲ್ಪ್ ಕರ್ನಾಟಕ ವೇದಿಕೆಯ ಸ್ಥಾಪನೆಯ ಬಗ್ಗೆ ವಿವರಣೆ ನೀಡಿದರು. ಗಲ್ಫ್ ಕರ್ನಾಟಕ ವೇದಿಕೆಯ ಕಾರ್ಯಚಟು ವಟಿಕೆಗಳು, ಕಾರ್ಯ ಯೋಜನೆಗಳ ಬಗ್ಗೆ ಶ್ರೀ ಹರ್ಮನ್ ಲೂವೀಸ್ ರವರು ಸಭೆಯ ಮುಂದಿಟ್ಟರು.

ಇದುವರೆಗೆ ಗಲ್ಫ್ ರಾಷ್ಟ್ರಗಳಿಗೆ ಆಗಮಿಸಿದ ಗಣ್ಯರು ಅನಿವಾಸಿ ಕನ್ನಡಿಗರ ಸಮಸ್ಯೆಗಳನ್ನು ಆಲಿಸಿ ತಾಯ್ನಾಡಿಗೆ ಮರಳಿದ ಬಳಿಕ ಮರೆಯುವುದು ಸಾಮಾನ್ಯವಾಗಿತ್ತು, ನಮ್ಮ ಸಮಸ್ಯೆಗಳು ಹಾಗೇ ಉಳಿದಿವೆ, ಈ ವೇದಿಕೆಯ ಮೂಲಕ ಅನಿವಾಸಿ ಗಲ್ಫ್ ಕನ್ನಡಿಗರ ಅಹವಾಲುಗಳನ್ನು ಸ್ವೀಕರಿಸುವುದು ಅತ್ಯಗತ್ಯವಾಗಿದೆ ಎಂದು ಶ್ರೀ ಹರ್ಮನ್ ಲೂವಿಸ್ ರವರು ತಿಳಿಸಿದರು

ಸಭೆಯಲ್ಲಿ ’ಉಧ್ಯಮದಲ್ಲಿ ಬಂಡವಾಳ ಹೂಡಿಕೆ, ಸವಾಲು ಮತ್ತು ಅಭಿವೃದ್ದಿ ಬಗ್ಗೆ’ ಐವನ್ ಫೆರ್ನಾಂಡಿಸ್ ರವರು ಬಹಳ ಪರಿಣಮಕಾರಿಯಾಗಿ ತಮ್ಮ ಅನಿಸಿಕೆಗಳನ್ನು ಮಂಡಿಸಿ ಸಭಿಕರ ಮತ್ತು ಗಣ್ಯರ ಮೆಚ್ಚುಗೆ ಪಡೆದರು.

ಬಿ. ಜಿ. ಮೋಹನ್ ದಾಸ್ ರವರು ’ಮಾಧ್ಯಮಗಳ ಸದುಪಯೋಗ” ಯದ ಬಗ್ಗೆ ಮಾತಾಡಿ ಗಲ್ಫ್ ಕನ್ನಡಿಗ ಒಗ್ಗೂಟ ಬಹಳ ನಿರೀಕ್ಷೆಯಿಂದ ಸ್ಥಾಪನೆಗೊಂಡಿದ್ದು ಗಲ್ಫ್ ನ  ಎಲ್ಲಾ ಅಂತರ್ಜಾಲ  ಮಾದ್ಯಮಗಳು ಈ ನಿಟ್ಟಿನಿಲ್ಲಿ ಸಕಾರಾತ್ಮಕವಾಗಿ ಕೈ ಜೋಡಿಸುವದಾಗಿ ಅಶ್ವಾಸನೆ ನೀಡಿದರು.

ಸಿ, ಆರ್. ಶೆಟ್ಟಿಯವರು ಮಾತನಾಡಿ ಹಿರಿಯ ಅಣ್ಣ ಡಾ.ಬಿ.ಆರ್.ಶೆಟ್ಟರ ನೇತ್ರತ್ವದಲ್ಲಿ ಕನ್ನಡಿಗರ ಏಳ್ಗೆಗೆ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೆ ತಮ್ಮ ಹ್ರತ್ಪೂರ್ವಕ ಬೆಂಬಲ ಯಾವಾಗಲೂ ಇದೆ ಎಂದು ಘೋಷಿಸಿದರು

ಕರ್ನಾಟಕ ಸರಕಾರದ ಅಧಿಕ್ರತ ನಿಯೋಗಿ ಕರ್ನಾಟಕ ಅನಿವಾಸಿ ಭಾರತೀಯ ಸೆಲ್ ಉಪಾಧ್ಯಕ್ಷ ಹಾಗೂ ಶಾಸಕ ಕ್ಯಾ| ಗಣೇಶ್ ಕಾರ್ಣಿಕ್ ರವರು ಸ್ಪಂದಿಸಿ ಅನಿವಾಸಿ ಭಾರತೀಯ ಕರ್ನಾಟಕ ವಿಭಾಗದ ಕಾರ್ಯ ಚಟುವಟಿಕೆಗಳನ್ನು ವಿವರಿಸಿ ಅನಿವಾಸಿ ಕನ್ನಡಿಗರಿಗೆ ಎಲ್ಲ ರೀತಿಯ ಸಹಾಯವನ್ನು ನೀಡಲು ಕರ್ನಾಟಕ ಸರ್ಕಾರ ಬದ್ಧವಾಗಿದ್ದು ಗಲ್ಫ್ ಕರ್ನಾಟಕ ವೇದಿಕೆಯ ಸ್ಥಾಪನೆಗೆ ಅನುಮೋದನೆ ನೀಡಿದೆ ಎಂದು ಈ ಸುಸಂದರ್ಭದಲ್ಲಿ ಘೋಷಿಸಿದರು .

ಸರ್ವೋತ್ತಮ ಶೆಟ್ಟಿಯವರು ಗಲ್ಫ ಕನ್ನಡಿಗರು ಪಡುತ್ತಿರುವ ತೊಡಕು, ತೊಂದರೆ,  ಕಿರುಕುಳ  ನೋವು ಅನುಭವಗಳನ್ನು ಸಭಿಕರಲ್ಲಿ ಹಾಗೂ ನೆರೆದ ಗಣ್ಣ್ಯರಲ್ಲಿ ಹಂಚಿಕೊಂಡು, ಗ.ಕ.ವೇದಿಕೆ ಈ ನಿಟ್ಟಿನಲ್ಲಿ ಯೋಜನೆಗಳನ್ನು ನಿರೋಪಿಸಿ ಸರಕಾರದ ಗಮನಕ್ಕೆ ತಂದು ಪರಿಹಾರ ಒದಗಿಸಲು ಸದಾ ಪ್ರಯತ್ನಿಸಬೇಕೆಂದು ಕಳಿಕಳಿಯಿಂದ ವಿನಂತಿಸಿದರು.

ಬಹ್ರೈನ್ ನ ರಾಜ್ ಕುಮಾರ್, ಕುವೈಟ್ ನ ಎಲಿಯಾಸ್ ಸಾನ್ಕಟಸ್ ಮತ್ತು ಪಾಸ್ಕಲ್ ಪಿಂಟೋ,  ಒಮಾನ್ ನ ಪ್ರಕಾಶ್ ನಾಯ್ಕ್  ಹಾಗೂ ಸಂತೋಷ್ ನಜರೆತ್, ಡಾ. ಬಿ. ಕೆ. ಯೂಸುಫ್ ಶುಭ ಹಾರೈಸಿ ತಮ್ಮ ಸಹಕಾರವನ್ನು ಪ್ರಕಟಿಸಿದರು.

ಎಸ್. ಎಂ. ಸೈಯದ್ ಖಲೀಲುರ್ರಹ್ಮಾನ್ ರವರು ಗಲ್ಫ್ ಕರ್ನಾಟಕ ಸಂಘಟನೆ ಒಂದು ಅಗತ್ಯ ವಾದ ಸಾಧನೆ ಎದರಿಂದ ಎಲ್ಲಾ ಕರ್ನಾಟಕದ ಅನಿವಾಸಿಗಳಿಗೆ ಉಪಯೋಗ ಆಗಲಿದೆ ಎಂದು ಹಾರೈಸಿದರು.

 

ರಾಜ್ಯಸಭಾ ಸದಸ್ಯರಾದ ಮಾನ್ಯ ಶ್ರೀ ಆಸ್ಕರ್ ಫೆರ್ನಾಂಡಿಸ್ ಮಾತಾಡಿ ಈಗ ಕೇಂದ್ರ ಮಂತ್ರಿಮಂಡಲದಲ್ಲಿ ಕರ್ನಾಟಕದ ಘಟಾನುಘಟಿಗಳು ಸ್ಥಾನ ಹೊಂದಿದ್ದು ಗಲ್ಫ್ ಕನ್ನಡಿಗರ ಮತ್ತು ಅನಿವಾಸಿ ಕನ್ನಡಿಗರ ಬವಣೆಗಳಿಗೆ ತ್ರಪ್ತಿಕರ ಪರಿಹಾರ ಪಡೆದು ಕೊಳ್ಳಲು ಇದು ಸುಸಂಧರ್ಭ ಎಂದು ಕಿವಿಮಾತಾಡಿದರು ಹಾಗೆಯೇ ತಾವು ಈ ನಿಟ್ಟಿನಲ್ಲಿ ಅತಿತವಕದಿಂದ ಕಾರ್ಯೋನ್ಮಕರಾಗಿ ಪರಿಹಾರಕ್ಕೆ ಬಹಳ ಪ್ರಯತ್ನ ಪಡುವುದಾಗಿ ಸೂಚಿಸಿದರು.

ಗೌರವಾನ್ವಿತ ಮಾನ್ಯಶ್ರೀ ರಾಯಬಾರಿಯಾಗಿರುವ ಮಾನ್ಯ ಶ್ರೀ ಎಂ. ಕೆ. ಲೋಕೇಶ್ ರವರು ಗ.ಕ ಫೊರಮ್ ಗೆ ಶುಭವನ್ನು ಹಾರೈಸಿದರು

ಮತ್ತು ಐ.ಸಿ.ಡಬ್ಲ್ಯು.ಸಿ. ದುಬಾಯಿ ಸಂಚಾಲಕರಾದ ಶ್ರೀ ಕುಮಾರ್ ರವರು ತಮ್ಮ ಮೆಚ್ಚುಗೆ ಯನ್ನು ವ್ಯಕ್ತ ಪಡಿಸಿದರು. 

ಗಲ್ಫ್ ಕರ್ನಾಟಕ ವೇದಿಕೆಯ ಮಹಾ ಪೋಷಕರಾದ  ಪದ್ಮಶ್ರೀ ಪುರಸ್ಕೃತ ಡಾ. ಬಿ. ಆರ್. ಶೆಟ್ಟಿಯವರು, ಸಭೆಯಲ್ಲಿ ಮಾತನಾಡಿ ಗಲ್ಫ್ ರಾಷ್ಟ್ರಗಳಲ್ಲಿರುವ ಎಲ್ಲಾ ಸಂಘಟನೆ ಗಳು ಈ ವೇದಿಕೆಯಲ್ಲಿ ಒಮ್ಮತದಿಂದ ಸೇರ್ಪಡೆಗೊಂಡು ಒಂದಾಗಿ ಕಾರ್ಯನಿ ರ್ವಹಿಸುವ ಮೂಲಕ ಯಾವುದೇ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸಿ ಕೊಳ್ಳಬಹುದು ಎಂದು ಕರೆ ನೀಡಿ ದರು ಹಾಗೆಯೇ ಗಲ್ಫ್ ಕರ್ನಾಟಕ ವೇದಿಕೆಯ ಕಾರ್ಯ ಯೋಜನೆ ಮತ್ತು ಜವಬ್ಧಾರಿಯ ಬಗ್ಗೆ ಸರ್ವರಲ್ಲಿ ಜಾಗೃತಿ ಮೂಡಿಸಿ ಕೊಳ್ಳಲು ವಿನಂತಿಸಿದರು.

ಅನಿವಾಸಿ ಕನ್ನಡಿಗರ ಹಲವು ಬೇಡಿಕೆಗಳಾದ ಮಕ್ಕಳ ಉನ್ನತ ವ್ಯಾಸಾಂಗ, ವಿಮೆ, ಗೃಹ, ರೇಶನ್ ಕಾರ್ಡ್, ನ್ಯಾಶನಲ್ ಐಡಿ, ವಾಣಿಜ್ಯೋದ್ಯಮ ಅವಕಾಶಗಳು, ಉದ್ಯೋಗಾವಕಾಶಗಳು, ಕುಟುಂಬ ಕಲ್ಯಾಣ ಯೋಜನೆ, ಸಹಾಯವಾಣಿ, ಸರ್ಕಾರಿ ವಲಯಗಳಲ್ಲಿ ಪ್ರತಿನಿಧಿಗಳು ಮೊದ ಲಾದ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಭವಿಷ್ಯದಲ್ಲಿ ಈ ಎಲ್ಲಾ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ಶ್ರೀ ಗಣೇಶ್ ಕಾರ್ಣಿಕ್ ರವರು ಆಶ್ವಾಸನೆ ನೀಡಿ ದರು.

ಸನ್ಮಾನಿತ  ಶ್ರೀ ಎಂ. ಕೆ. ಲೋಕೇಶ್, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಶ್ರೀ ಆಸ್ಕರ್ ಫೆರ್ನಾಂಡಿಸ್ ರವರನ್ನು ಡಾ. ಬಿ. ಆರ್. ಶೆಟ್ಟಿಯರು ಶಾಲು ಹೊದಿಸಿ, ಸನ್ಮಾನ ಪತ್ರವನ್ನು ನೀಡಿ ಸನ್ಮಾನಿಸಿ ಗೌರವಿಸಿದರು

 

ನವೀನ್ ಸಿಕ್ವೇರಾ ನಿರ್ಮಿಸಿದ http://www.gulfkarnatakaforum.com ಅಂತರ್ಜಾಲಕ್ಕೆ ಚಾಲನೆ ನೀಡಲಾಯಿತು.

ಸ್ಥಳೀಯ ಗಣ್ಯ ಮುಂದಾಳುಗಳು ಹಾಗೂ ಕರ್ನಾಟಕ ಸರ್ಕಾರದ ಇತರ ಅಧಿಕಾರಿಗಳು ಸಭೆ ಯಲ್ಲಿ ಉಪಸ್ಥಿತರಿದ್ದರು.

ಸಂಚಾಲಕ ಶ್ರೀ ಜೇಮ್ಸ್ ಮೆಂಡೋನ್ಸಾ ರವರು ಧನ್ಯವಾದ ಸಮರ್ಪಿಸಿದರು.

ಉಭಯ ಕುಶಲೋಪರಿಯೊಂದಿಗೆ ಮದ್ಯಾಹ್ನದ ಊಟದ ನಂತರ ಪ್ರಶ್ನೋತ್ತರ ಸಭೆ ನಡೆಯಿತು. 

ಬಹಳ ಮೆಚ್ಚುಗೆಯಾದ ಕರ್ನಾಟಕದ ವೈವಿದ್ಯಮಯ ಚರಿತ್ರೆಯನ್ನು ಸಾರುವ ಈ ವೇದಿಕೆಯ ವಿನ್ಯಾಸ ಮಾಡಿ ಜನ ಮನ್ನಡೆ ಪಡೆದವರು ಕನ್ನಡಿಗ ಕಾಸ್ಮಿಕ್ ನ ಮೂರ್ತಿಯವರು.  

ಈ ಬರ್ಜರಿ ಕಾರ್ಯಕ್ರಮದ  ಸಫಲತೆ ಮತ್ತು ಯಶಸ್ಸಿಗೆ ಮಹಾಪೋಷಕ ಪದ್ಮಶ್ರೀ ಪುರಸ್ಕೃತ ಡಾ.ಬಿ.ಆರ್.ಶೆಟ್ಟಿಯವರ ನಾಯಕತ್ವ ಕಾರಣರಾದರೆ, ಅವರೊಡನೆ  ಭುಜಕ್ಕೆ ಭುಜ ಕೊಟ್ಟು ಕಾರ್ಯನಿರ್ವಹಿಸಿದ ಕ್ಯಾ.ಗಣೇಶ್ ಕಾರ್ಣಿಕ್, ಜೇಮ್ಸ್ ಮೆನ್ಡೊನ್ಸಾ, ಅಫ್ರೋಜ್ ಅಸಾದಿ, ಗಣೇಶ್ ರೈ ಹಾಗೂ ಸಂಚಾಲಕ ಹರ್ಮನ್ ಲೂಯಿಸ್ ರವರ ಅವಿರತ ನಿಷ್ಟೆ  ಮತ್ತು ಕಾರ್ಯನಿರ್ವಹಿಸುವಿಕೆಯೇ ಕಾರಣವೆಂದು ಗಲ್ಫ್ ಕನ್ನಡಿಗರ ಅನಿಸಿಕೆ ಹಾಗೂ ಅಭಿಮತ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-06-27 00:00:00

Tell a Friend
ಇತರ ಸಂಭಂದಪಟ್ಟ ವರದಿಗಳು
»
»ಜಾಗತಿಕ ಹೂಡಿಕೆದಾರರ ಸಮಾವೇಶದ೦ದು ಯಡ್ಯೂರಪ್ಪರವರನ್ನು ಭೇಟಿ ಮಾಡಿದ ಗಲ್ಫ್ ಕರ್ನಾಟಕ ಫೋರ೦ ನಿಯೋಗ; ಸ್ಪಂದಿಸಿದ ಸರಕಾರ; ಜೂ 25 ರಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ದುಬೈಗೆ ಭೇಟಿ, ವಿಶೇಷ ಸಭೆ
»ಗಲ್ಫ್ ಕನ್ನಡಿಗರ ಹಕ್ಕು ಮತ್ತು ಬೇಡಿಕೆಗಳಿಗೆ ಒಗ್ಗಟ್ಟಿನ ಸ್ಪಂದನೆ- ’ಗಲ್ಫ್ ಕರ್ನಾಟಕ ವೇದಿಕೆ’; ಪದ್ಮಶ್ರೀ ಡಾ, ಬಿ. ಆರ್. ಶೆಟ್ಟಿಯವರಿಂದ ಅಧಿಕೃತ ಉದ್ಘಾಟನೆ

ಪ್ರತಿಸ್ಪಂದನ
Koni Prakash Naik, Kundapur - Oman
2010-06-29
Congratulations to the organizers of GKF, especially Padmashri Dr. B. R. Shetty and Mr. Herman Lewis, for taking the initiative to form GKF.

I attended the meeting from Oman and had an opportunity to address the gathering. I hope the concerns and difficulties expressed by me as regards children's higher education, passport related issues and lack of facilities at Bangalore Passport Office, and the property registration /curruption related issues will be taken up seriously by the authorities concerned.

As mentioned in my address, I do hope the other associations in Gulf countries will spread awarness about Karnataka's history, art & culture and language to the younger generation.

I was glad to note that UAE Kannada Koota will be starting Kannada classes for young children soon. My best wishes to each and every one who have been instrumental in the formation of GKF and who have shown interest in pursing the desired goals for the welfare of Kannada community residing in various gulf countries.

Santosh Kevin Nazareth, Dubai / Mangalore
2010-06-28
This kick-off meeting is not just a call to action for all Karnataka-affiliated associations in the Gulf but a call to action for each one us, as Kannadigas and as Indian citizens to not just talk the talk, but walk the walk.

The GKF represents a golden step in building our civic and political participation in Karnataka. By building bridges between NRI Kannadigas here and the government authorities there, the GKF will also promote the development of strong, fruitful relationships between our various associations, where the goal is to work for the betterment of all NRI Kannadigas, casting aside any personal agendas, egos and power play.

I believe it is also important to include young people / ladies or a youth / lady representative in the GKF as this would allow for diversity of views and also build the leadership of our youth.

There will be teething troubles as the GKF takes form but I have no doubt that its leadership will set up the executive and governing bodies in an efficient and transparent fashion and our unstinted support and constructive criticism will see us through to a smooth start.

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಯುಎಇ]

»ದುಬಾಯಿಯಲ್ಲಿ ’ಗಮ್ಮತ್ ಕಲಾವಿದೇರ್’ ಪ್ರಥಮ ಪ್ರದರ್ಶನ: ನಟನಾ ಚಾತುರ್ಯದಲ್ಲಿ ಮಿಂಚಿದ ’ಈ ಪೊರ್ಲು ದಾಯೇ’ ತುಳು ನಾಟಕ
»ದುಬೈಯಲ್ಲಿ ಹೊಸ ಗುರುದ್ವಾರ: ದುಬೈ ಆಡಳಿತಗಾರರಿಗೆ ಸಿಖ್ ಸಮುದಾಯದ ಕೃತಜ್ಞತೆ
»ಪೆ.10ರಂದು ಪಾಂಬೂರು ಕ್ರಿಕೆಟ್ ಟೂರ್ನಮೆಂಟ್: 26 ತಂಡಗಳು ಸರದಿಯಲ್ಲಿ
»ಫೆ.10: ಬಹು ನಿರೀಕ್ಷಿತ 8ನೇ ಜೆ.ಎಮ್.ಸಿ ಅಜ್ಮಾನ್ ಫನ್ ರನ್; ಈ ಪ್ರಸಿದ್ಧ ಓಟದಲ್ಲಿ ಭಾಗವಹಿಸಿ ಬಹುಮಾನ ಪಡೆಯಿರಿ...!
»ಅಬುಧಾಬಿಯಲ್ಲಿ ಕುವೆಂಪು ಕಲಾಉತ್ಸವ ಮತ್ತು ವಿಶ್ವ ಕನ್ನಡ ಸಮ್ಮೇಳನ - ಕೊಲ್ಲಿ ನಾಡಿನಲ್ಲಿ ಪ್ರತಿಧ್ವನಿಸಿದ ಕನ್ನಡ ದಿಂಡಿಮ....
»ಅಬುಧಾಬಿಯಲ್ಲಿ 'ವಿಶ್ವಮಾನವ ಕುವೆಂಪು ಕಲಾ ಉತ್ಸವ 'ಮತ್ತು ೨ನೇ ವಿಶ್ವಕನ್ನಡ ಸಮ್ಮೇಳನ: ಭರ್ಜರಿ ಸಾಂಪ್ರದಾಯಿಕ ಉದ್ಘಾಟನೆ....ಸಮ್ಮೇಳನಕ್ಕೆ ಚಾಲನೆ
»ಜನವರಿ ೨೭: ಅಬುಧಾಬಿಯಲ್ಲಿ ' ವಿಶ್ವಮಾನವ ಕುವೆಂಪು ಕಲಾ ಉತ್ಸವ 'ಮತ್ತು ೨ನೇ ವಿಶ್ವಕನ್ನಡ ಸಮ್ಮೇಳನ: ಕರ್ನಾಟಕದ ಮಾನ್ಯ ಮುಖ್ಯಮಂತ್ರಿ ಸನ್ಮಾನ್ಯ ಡಿ.ವಿ.ಸದಾನಂದ ಗೌಡರಿಂದ ಉದ್ಘಾಟನೆ....
»ಯು.ಎ.ಇ ಒಕ್ಕಲಿಗರ ಸಂಘದ ಆಶ್ರಯದಲ್ಲಿ ಮಕರ ಸಂಕ್ರಾತಿ ಸಂಭ್ರಮ
»ದುಬೈ ದೇವಾಡಿಗ ಸಂಘ ೨೦ನೇ ವಷಕ್ಕೆ ಪಾದಾರ್ಪಣೆ : ಹೊಸ ಕಾರ್ಯಕಾರೀ ಸಮಿತಿ ರಚನೆ; ಹರೀಶ್ ಶೇರಿಗಾರ್ ಅದ್ಯಕ್ಷ
»Death toll from scaffolding collapse in UAE rises to three
»ಯು ಎ ಇ ಹವಾಮಾನ ವರದಿ: ಹೆಚ್ಚಿದ ಶೀತಗಾಳಿ ... ತಾಪಮಾನ ಶೂನ್ಯಕ್ಕೆ?
»ಪೆ.3 ರಂದು ದುಬಾಯಿಯಲ್ಲಿ ತುಳು ಸಾಮಾಜಿಕ ನಾಟಕ ಈ..ಪೊರ್ಲು.....ದಾಯೆ....?
»ಅಬುಧಾಬಿ: ಮಂಗಳೂರು ಕೊಂಕಣ್ಸ್ ಗೆ ಕೂಸಮ್ಮ ಶಂಬು ಶೆಟ್ಟಿ ಸ್ಮಾರಕ ಸಮಗ್ರ ಥ್ರೋ ಬಾಲ್ ಟ್ರೋಫಿ
»ಉಮಲ್ ಮೌಮಿನಿನ್ ಆಸೋಸಿಯೇಶನ್ ಮತ್ತು ಗಲ್ಪ್ ಮೆಡಿಕಲ್ ಯುನಿರ್ವಸಿಟಿ ಅಜ್ಮಾನ್ ವತಿಯಿಂದ ಜೀವನ ಪದ್ದತಿ ಮತ್ತು ಕೌಟುಂಬಿಕ ಆರೋಗ್ಯ ಕುರಿತ ಕಾರ್ಯಗಾರ
»ದುಬೈ: ಕನ್ನಡ ಕೂಟ ಯು.ಎ.ಇ. ಯಿಂದ ಸಂಭ್ರಮದ ಸಂಕ್ರಾಂತಿ ಆಚರಣೆ: ಲೇಖಕಿ ಸುಧಾ ಸರಣೋಮತ್ ಉಪಸ್ಥಿತಿ - ಹಲವು ಆಟೋಟಗಳಲ್ಲಿ ಮಕ್ಕಳಾದ ಹಿರಿಯರು
»ದುಬಾಯಿ: ನಾರಾಯಣ ಸೇವಾ ಸಮಿತಿಯ ವತಿಯಿಂದ ನಡೆದ ಅಖಂಡಾ ಭಜನಾ ಮಹೋತ್ಸವ
»Divine intervention: 'An angel saved my life'
»Dubai: How genuine are DSF discounts?
»Police deny woman confessed to helping kill her daughter; Suicide survivor suffers from amnesia, moved to psychiatric ward
»ಜ.೨೭. ಕುವೆಂಪು ಕಲಾ ಉತ್ಸವ ಮತ್ತು ಎರಡನೇ ವಿಶ್ವ ಕನ್ನಡ ಸಮ್ಮೇಳನ,ಅಬುಧಾಬಿ-೨೦೧೨: ಮುಖ್ಯ ಅತಿಥಿಯಾಗಿ ಮಾನ್ಯ ಮುಖ್ಯಮಂತ್ರಿ ಶ್ರೀ.ಡಿ.ವಿ.ಸದಾನಂದ ಗೌಡ
»ಉತ್ಸುಕರಾಗಿ ನಿರೀಕ್ಷಿಸಿರಿ.....! ದುಬೈಯಲ್ಲಿ 'ಆಷಾಡದ ಒಂದು ದಿನ'.....
»ಜ.20: ಕ್ರೀಡಾಭಿಮಾನಿಗಳು ಉತ್ಸುಕರಾಗಿ ನಿರೀಕ್ಷಿಸುತ್ತಿರುವ ಪ್ರಖ್ಯಾತ ಕೂಸಮ್ಮ ಶಂಬುಶೆಟ್ಟಿ ಸ್ಮಾರಕ ಥ್ರೋಬಾಲ್ ಪಂದ್ಯಾವಳಿ
»ಯು.ಎ.ಇ ಒಕ್ಕಲಿಗರ ಸಂಘ ಇದರ ವತಿಯಿಂದ ಜನವರಿ 20ರಂದು ಮಕರ ಸಂಕ್ರಾತಿ ಆಚರಣೆ
»ಉತ್ತೇಜನದಿಂದ ಜರುಗಿದ ಬ್ಯಾರಿಸ್ ಕಲ್ಚರಲ್ ಪೊರಂ ನ 2012 ರ ವಾರ್ಷಿಕ ಕ್ರೀಡೋತ್ಸವ
»ದುಬೈ: ಗಾಳಿಪಟ ಹಾರಿಸುವ ಸ್ಪರ್ದೆ: ಜನಪ್ರಿಯತೆ ಪಡೆದ ಟೀಂ ಮಂಗಳೂರಿನ ಬಣ್ನ ಬಣ್ನದ ಸಾಂಸ್ಕೃತಿಕ ವಿನ್ಯಾಸದ ಗಾಳೀ ಪಟಗಳು
»ನಿರ್ದೇಶನದಲ್ಲಿ ಹೊಸತನ ಹಾಗೂ ಮತ್ತು ಪನ್ಚಿಂಗ್ ಹಾಸ್ಯ ಸಂವಾದ - ನಟನೆಗಳಿಂದ ಮನಸೆಳೆದ ತುಳುನಾಟಕ ’ಆಯೆ ಸುಬಗ”; ನಕ್ಕು ನಲಿದ ಪ್ರೇಕ್ಷಕ ವರ್ಗ, ನಮ ತುಳುವೆರ್ ದಾಖಲೆ
»ದುಬೈ: ಜ 20 ರಂದು ಕನ್ನಡ ಕೂಟ ಯು.ಎ.ಇ. ಆಚರಿಸಲಿರುವ ಸಂಕ್ರಾಂತಿ - 2012 ಕಾರ್ಯಕ್ರಮ
»ನಮ ತುಳುವೆರ್ ಸಂಘಟನೆ ವತಿಯಿಂದ ನಾಳೆ ಜನವರಿ 13ರಂದು ನಡೆಯಲಿರುವ ’ಅಯೆ ಸುಬಗೆ’ ತುಳು ನಾಟಕ: ರಂಗತರಂಗ ತಂಡದ ಕಲಾವಿದರ ಆಗಮನ
» ಶಾರ್ಜಾ ಕರ್ನಾಟಕ ಸಂಘದ 2012 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿ : ಅಧ್ಯಕ್ಷರಾಗಿ ಶ್ರೀ ಸತೀಶ್ ಪೂಜಾರಿ ಆಯ್ಕೆ
»ಸಮಸ್ತ ಸಮ್ಮೇಳನದ ಪ್ರಚಾರ ಹಾಗೂ C M ಉಸ್ತಾದರ ಅನುಸ್ಮರಣಾ ಸಮಾರಂಭ
»ಯು.ಎ.ಇ ಪೋಲಿಸ್ ವರದಿಗಳು...
»Sharjah: Indian woman murdered, government to bring back body
»ಪೆ.10ರಂದು ಪಾಂಬೂರು ಕ್ರಿಕೆಟ್ ಟೂರ್ನಮೆಂಟ್
»ದುಬಾಯಿಯಲ್ಲಿ ಜನವರಿ13ರಂದು ಅಖಂಡ ಭಜನಾ ಮಹೋತ್ಸವ
»ನಮ್ಮ ತುಳುವೆರ್ ಸಂಘಟನೆ ವತಿಯಿಂದ ಜನವರಿ 13ರಂದು ದುಬಾಯಿಯಲ್ಲಿ ಅಯೆ ಸುಬಗೆ ನಾಟಕ ಪ್ರದರ್ಶನ
»ಕುಂದಾಪುರ ದೇವಾಡಿಗ ಮಿತ್ರರ ವೇದಿಕೆ ’ಕದಮ್’ ತನ್ನ ಪ್ರಥಮ ವರ್ಷಾಚರಣೆಯ ಸಂಭ್ರಮದಲ್ಲಿ...’ದೇವಾಡಿಗ ಸಾಧಕ ಪ್ರಶಸ್ತಿ’ ಶ್ರೀ ಬಿ. ಜಿ. ಮೋಹನ್ ದಾಸ್ ರವರ ಮಡಿಲಿಗೆ
»Govt clears proposal for providing insurance, pension benefits to overseas Indian workers
»ದುಬೈಗೆ ಬೇಟಿ ನೀಡಿದ ಎಸ್ಸೆಸ್ಸೆಫ್ ದಕ್ಷಿಣ ಭಾರತ ಅಧ್ಯಕ್ಷ ಅಬ್ದುರ್ರಶೀದ್ ಝೈನಿ ಕಾಮಿಲ್ ರವರಿಗೆ ದುಬೈ ವಿಮಾನ ನಿಲ್ಧಾಣದಲ್ಲಿ ಭವ್ಯ ಸ್ವಾಗತ
»ಯು.ಎ.ಇ.ಬಂಟ್ಸ್ ವಿಹಾರ ಕೂಟ: ಸಫಾ ಉಧ್ಯಾನವನದ ಆಹ್ಲಾದಕರ ವಾತವರಣದಲ್ಲಿ ನಕ್ಕು ನಲಿದಾಡಿದ ಬಂಟ ಬಾಂಧವರು.
»ಬಾಲಕನಿಂದ ಕಾರು ಚಾಲನೆ: ಇಬ್ಬರು ಮೃತ್ಯು
»ರಾಮಕ್ಷತ್ರೀಯ ಸಂಘ ಯು.ಎ.ಇ.ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿಪೂರ್ವಕವಾಗಿ ನಡೆದ 7ನೇ ವರ್ಷದ ಶ್ರೀ ಸತ್ಯನಾರಾಯಣ ಪೂಜೆ
»ಫೆ 10: ಪಂಬೂರ್ ಸೆವೆನ್ ಕ್ರಿಕೆಟ್ ಟೂರ್ನಮೆಂಟ್: ವಿನ್ನಿ’ಸ್ ಟ್ರೋಫಿ ಗೆಲ್ಲಲು ತಂಡಗಳ ಸಜ್ಜು
»ಮೊಗವೀರ್ ಯುಏಯಿ ಅವರ ನಾಲ್ಕನೇ ವಾರ್ಷಿಕೋತ್ಸವ ಮತ್ತು ಕ್ರೀಡಾಕೂಟ
»ಅಬುದಾಬಿ ಕರ್ನಾಟಕ ಸಂಘದ ವತಿಯಿಂದ ವಾರ್ಷಿಕ ಪ್ರವಾಸ
»ನಮ್ಮ ತುಳುವೆರ್ ಸಂಘಟನೆ ವತಿಯಿಂದ ಜನವರಿ 13ರಂದು ದುಬಾಯಿಯಲ್ಲಿ ಅಯೆ ಸುಬಗೆ ನಾಟಕ ಪ್ರದರ್ಶನ
»ಮೊಗವೀರ ಸಂಘಟನೆಯು 4ನೇ ವಾರ್ಷಿಕೋತ್ಸವ: ಡಿ.23ರಂದು ಶಾರ್ಜಾದ ವಂಡರರ್ಸ್ ಸ್ಪೋಟ್ಸ್ ಕ್ಲಬ್ ನಲ್ಲಿ ಕ್ರೀಡಾಕೂಟ
»ಅರಬ್ ಉಡುಪಿ ರೆಸ್ಟೊರೆಂಟ್ ಅಜ್ಮಾನ್; ಗೌ| ಶೇಖ್ ಡಾ. ಮಜಿದ್ ಬಿನ್ ಸಹೀದ್ ಅಲ್ ನುವೈಮಿ ಯವರಿಂದ ಉದ್ಘಾಟನೆ
»ಕಾಞಂಗಾಡ್ ಯುವಕ ಅಬುಧಾಬಿಯಲ್ಲಿ ಸಾವು
»ಯು.ಎ.ಇ ಯ 40ನೇ ವಾರ್ಷಿಕೋತ್ಸವ : ಬ್ಯಾರೀಸ್ ವೆಲ್ ಫೇರ್ ಫೋರಂ ವತಿಯಿಂದ ಪಿಕ್ ನಿಕ್ ಆಯೋಜನೆ
»ಅಬುಧಾಬಿ: ಸುರಂಗದಲ್ಲಿ ಸಿಲುಕಿ ಕಾಞಂಗಾಡ್ ಯುವಕನ ಸಾವು

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri