ದುಬೈ: 'ಮೂರು ಮುತ್ತು' ಕಲಾವಿದರ ಆಗಮನ: ಆತ್ಮೀಯ ಸ್ವಾಗತ. ಶುಕ್ರವಾರ ಪ್ರದರ್ಶನಕ್ಕೆ ರಂಗ ಸಜ್ಜು |
ಪ್ರಕಟಿಸಿದ ದಿನಾಂಕ : 2010-06-24
( ಚಿತ್ರ: ಅಶೋಕ್ ಬೆಳ್ಮಣ್)
ದುಬೈ: ಅಪಾರ ಜನಮನ್ನಣೆಯ, ಅದ್ಭುತ ಯಶಸ್ಸಿನ ನಾಟಕ ದುಬಾಯಿನಲ್ಲಿ ಇದೇ ಶುಕ್ರವಾರ ಜೂನ್ 25 ರಂದು ಪ್ರದರ್ಶಿತ ಗೊಳ್ಳುಲಿದೆ. ರಂಗ ಸಜ್ಜುಗೊಳ್ಳುತ್ತಿದೆ. ಬಹಳ ಕಾತುರದಿಂದ ನಿರೀಕ್ಷಿಸುತ್ತಿರುವ ಈ ಪ್ರದರ್ಶನಕ್ಕೆ ಈಗಾಗಲೇ ಬಹಳ ಬೇಡಿಕೆ ಮತ್ತು ಬೆಂಬಲ ಸಿಕ್ಕಿವೆ. ಸಭಾಂಗಣ ನಾಟಕ ಆಸಕ್ತರಿಂದ ಕಿಕ್ಕಿರಿದು ತುಂಬಲಿರುವ ಎಲ್ಲಾ ಲಕ್ಸಣ ಕಾಣಬರುತ್ತಿದೆ.
ದುಬಾಯಿಯ ಎಮಿರೇಟ್ಸ್ ಇಂಗ್ಲೀಷ್ ಸ್ಕೂಲ್‍ನ ಸಭಾಂಗಣದಲ್ಲಿ ಶುಕ್ರವಾರ ಸಂಜೆ 4.30 ಕ್ಕೆ ಪ್ರದರ್ಶಿತಗೊಳ್ಳುವ ಈ ಹಾಸ್ಯಮಯ ನಾಟಕದಲ್ಲಿ ಬಾಗವಹಿಸಲಿರುವ ಎಲ್ಲಾ ಕಲಾವಿದರು ಬುದವಾರ ರಾತ್ರೆ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಅವರುಗಳನ್ನು ಆತ್ಮೀಯವಾಗೆ ಸ್ವಾಗತಿಸಲಾಯಿತು..
ನಾಟಕದ ನಿರ್ದೇಶಕ ನಟ ಸತೀಶ್ ಪೈ ಕಲಾವಿದರಾದ ಅಶೋಕ್ ಶ್ಯಾನ್‍ಭಾಗ್, ಸತೀಶ್ ಪೈ, ಸಂತೋಷ್ ಪೈ ತಂಡದೊಟ್ಟಿಗೆ ಕರಾವಳಿಯ ಹೆಸರಾಂತ ಸಂಗೀತ ನಿರ್ದೇಶಕ ರವಿಂದ್ರ ಪ್ರಭು ಅವರು ಸಹ ಆಹ್ವಾನಿತರಾಗಿ ಅಗಮಿಸಿದ್ದು ಈ ಪ್ರದರ್ಶನಕ್ಕೆ ಸಂಗೀತ ಕೊಡಲಿದ್ದಾರೆ.

ಕುಂದಾಪುರದವರೇ ಆದ, ದುಬಾಯಿಯ ಹೆಸರಾಂತ ಹೊಟೇಲ್ ಉದ್ಯಮಿ, ಹಲವಾರು ಕನ್ನಡ - ಕೊಂಕಣಿ - ತುಳು ಕಾರ್ಯಕ್ರಮಗಳ ಪೋಷಕರಾದ ಶ್ರೀ ಪ್ರವೀಣ್ ಶೆಟ್ಟಿರವರ FORTUNE ಬಳಗ ಈ ನಾಟಕದ ಹೊಣೆಯನ್ನು ಹೊತ್ತಿದ್ದಾರೆ.
ಕಲಾಭಿಮಾನಿಗಳ ಅನುಕೂಲಗಾಗಿ ಪ್ರವೇಶ ಉಚಿತವಾಗಿದೆ, ಆದರೂ ಮೊದಲು ಬಂದವರಿಗೆ ಪ್ರಥಮ ಪ್ರಾಶಸ್ತ್ಯವನ್ನು ನೀಡಲಾಗುವುದು ಎಂದು ಪ್ರಾಯೋಜಕರು ತಿಳಿಸಿದ್ದಾರೆ.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ದಿ| ಕೆ. ಬಾಲಕೃಷ್ಣ ಪೈ (ಕುಳ್ಳಪ್ಪು) ಈ ನಾಟಕದ ನಿರ್ಮಾಪಕರು. ಕನ್ನಡ ರಂಗಭೂಮಿ ಅವನತಿ ಅಂಚಿನಲ್ಲಿರುವ ಸಂದರ್ಭದಲ್ಲಿ ದಿ| ಬಾಲಕೃಷ್ಣ ಪೈ ತನ್ನ ಜಾಣ್ಮೆಯಿಂದ, ಸಾಮಾಜಿಕ ನಾಟಕಕ್ಕೆ, ಹಾಸ್ಯದ ಪ್ರಾಧಾನ್ಯತೆ ಕೊಟ್ಟು ರಚಿಸಿದ "ಮೂರು ಮುತ್ತು" ನಾಟಕದಿಂದ ಪುನಃ ಪ್ರೇಕ್ಷಕರು ರಂಗಭೂಮಿಯತ್ತ ಒಲವು ತೋರಿಸಿದ್ದಾರೆ.
ರೂಪಕಲಾತಂಡದ ಪ್ರತೀ ನಾಟಕವನ್ನೂ ಕಲಾರಸಿಕರು ಒಂದಲ್ಲ... ನಾಲ್ಕಾರು ಬಾರಿ ನೋಡಿ ಆನಂದಿಸಿದ್ದಾರೆ. ಎಂತೆಂತಹ ಗಣ್ಯಾತೀತಾ ಮಹನೀಯರು ಇವರ ನಟನೆಗೆ ಮೆಚ್ಚಿ ಬೆನ್ನು ತಟ್ಟಿದ್ದಾರೆ. ಊರ - ಪರವೂರ - ಪರರಾಜ್ಯದ ಕನ್ನಡಿಗರು ಇವರ ಸಾಧನೆಗೆ ಮೆಚ್ಚಿ ಹರಿಸಿದ್ದಾರೆ. ದೇಶದಾದ್ಯಂತ 'ರೂಪಕಲಾ' ಬಳಗ ನಿರಂತರವಾಗಿ ಹಾಸ್ಯ ನಾಟಕವನ್ನು ಪ್ರದರ್ಶಿಸುತ್ತಾ ನಗೆಯ ಹೊನಲನ್ನು ಹರಿಸುತ್ತಿದ್ದಾರೆ.
ಹಾಗಾಗಿ ನಮ್ಮ ಎಮಿರೇಟ್ಸ್ ನ ಕಲಾರಸಿಕರು ’ಮೂರು ಮುತ್ತು” ನೋಡಲು ಬಹಳ ಹುಮ್ಮಸಿಗರಾಗಿದ್ದರೆ ಹಾಗೆಯೇ ಈ ಪ್ರದರ್ಶನವನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಡಿ ಕಲಾವಿದರ ಬೆನ್ನುತಟ್ಟಿ ಮೆಚ್ಹುಗೆ ತೋರಿಸುವದರಲ್ಲಿ ಸಂದೇಹವೇ ಇಲ್ಲ.
ವರದಿಯ ವಿವರಗಳು |
 |
ಕೃಪೆ : ಚಿತ್ರ: ಅಶೋಕ್ ಬೆಲ್ಮಣ್ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-06-24 00:00:00
|
|
|