ಶುಕ್ರವಾರ, 09-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ಮಸ್ಕತ್ ವಾಲಿಬಾಲ್ ಮತ್ತು ಥ್ರೋಬಾಲ್ ಪಂದ್ಯಾವಳಿ : ರಂಗೇರಿದ ಸಂಭ್ರಮ

ಸಂಭ್ರಮದ ವಾರ್ಷಿಕ ಕ್ರೀಡಾಕೂಟ - ಮಂಗಳೂರಿನ ಸೆಂಟ್ ಪೀಟರ್ ಮತ್ತು ಪೌಲ್ ಚರ್ಚಿನ ರೆ.ಫಾ.ಆಲ್ಬರ್ಟ್ ಡಿ’ಸಿಲ್ವಾರಿಂದ ಉದ್ಘಾಟನೆ

ಮಸ್ಕತ್, ಜನವರಿ ೨೨:   ಮಸ್ಕತ್ ನ ಮಂಗಳೂರು ಕ್ಯಾಥೋಲಿಕ್ ಸೆಂಟರ್ ಆಫ್ ಪಾರಿಶ್ ಮತ್ತು ರುವಿಯ ಸೆ. ಪೀಟರ್ ಮತ್ತು ಪೌಲ್ ಚರ್ಚ್ ಸಂಘಗಳು ತಮ್ಮ ಸದಸ್ಯರಿಗೆಂದು ಆಯೋಜಿಸಿದ್ದ ವಾರ್ಷಿಕ ವಾಲಿಬಾಲ್ ಮತ್ತು ಥ್ರೋಬಾಲ್ ಕ್ರೀಡಾಕೂಟ ಜನವರಿ ೧೮ರಂದು ರುವಿಯ ಅಲ್ ವಾದಿ ಅಲ್ ಖೈರ್ ನಲ್ಲಿರುವ ಸಿಟಿ ಸ್ಪೋರ್ಟ್ಸ್ ಗ್ರೌಂಡ್ಸ್ ಕ್ರೀಡಾಂಗಣದಲ್ಲಿ ಸಂಭ್ರಮದಲ್ಲಿ ನಡೆಯಿತು.

ಸಮಾರಂಭದ ಉದ್ಘಾಟನೆಯನ್ನು ರುವಿಯ  ಸೆಂಟ್ ಪೀಟರ್ಸ್ ಮತ್ತು ಪೌಲ್ ಚರ್ಚಿನ  ರೆ.ಫಾ. ಆಲ್ಬರ್ಟ್ ಡಿ’ಸಿಲ್ವಾರವರಿಂದ ಪ್ರಾರ್ಥನೆಯ ಬಳಿಕ ನಡೆಯಿತು. ಎಮ್.ಸಿ.ಸಿ.ಪಿ. ಯ ಅಧ್ಯಕ್ಷರಾದ ಸ್ಟ್ಯಾನ್ಲಿ ಟಿ.ಹೆಚ್. ಫೆರ್ನಾಂಡಿಸ್, ಕ್ರೀಡಾಕೂಟದ ಪ್ರಧಾನ ನಿರೂಪಕರಾದ ವಲೇರಿಯನ್ ದಾಂತಿಸ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿರುವ ದಿಲಿಪ್ ಕೋರಿಯ, ಇತರ ಕಾರ್ಯದರ್ಶಿಗಳಾಗಿರುವ ಸುನೀತಾ ನಾಜೆರೆತ್, ನೋರಾ ವಾಜ್, ಕ್ರೀಡಾ ಸಮಿತಿಯ ಸದಸ್ಯರು, ಸೂರಜ್ ರೆಬೆಲ್ಲೋ ಹಾಗೂ ಸಂಘದ ಇತರ ಸದಸ್ಯರು ಪ್ರಸ್ತುತರಿದ್ದರು.

ರೋಮಾಂಚಕ ವಾಲಿಬಾಲ್ ಪಂದ್ಯವನ್ನು ದಿಲಿಪ್ ಕೋರಿಯಾ ಹಾಗೂ ತಂಡ ಗೆದ್ದುಕೊಂಡಿತು. ವಲೇರಿಯನ್ ದಾಂತಿಸ್ ಹಾಗೂ ತಂಡದವರು ಎರಡನೆಯ ಸ್ಥಾನ ಪಡೆದರು. ಟೆರಿಲ್ ಸಲ್ಡಾನಾ ಕ್ರೀಡೋತ್ಸವದ ಅತ್ಯುತ್ತಮ ಆಟಗಾರನೆಂಬ ಖ್ಯಾತಿಗೆ ಪಾತ್ರರಾದರು.

ಮಹಿಳೆಯರ ಥ್ರೋಬಾಲ್ ಪಂದ್ಯಗಳೂ ವಾಲಿಬಾಲ್ ನಷ್ಟೇ ರೋಮಾಂಚಕಾರಿಯಾಗಿತ್ತು.  ಸುನೀತಾ ನಾಜೆರೆತ್ ಹಾಗೂ ತಂಡದವರು ಉತ್ತಮ ಪ್ರದರ್ಶನ ನೀಡಿ ಅರ್ಹ ಪ್ರಥಮ ಸ್ಥಾನವನ್ನು ಪಡೆದರು. ನೋರಾ ವಾಜ್ ಹಾಗೂ ತಂಡದವರು ಎರಡನೆಯ ಸ್ಥಾನ ಪಡೆದರು.

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಎಮ್.ಸಿ.ಸಿ.ಪಿ. ಮಸ್ಕತ್
ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-01-22


ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಒಮಾನ್]

 

 

 

©2007 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri