ತನ್ನ 800ನೇ ಪ್ರಯೋಗದತ್ತ ಭರ್ಜರಿ ದಾಪುಗಾಲು: ದುಬಾಯಿನಲ್ಲಿ ಜೂನ್ 25 ರಂದು ಹಾಸ್ಯ ಪ್ರಧಾನ ಸಾಮಾಜಿಕ ಕಥಾನಕದ 'ಮೂರು ಮುತ್ತು' ನಾಟಕ ಪ್ರದರ್ಶನ |
ಪ್ರಕಟಿಸಿದ ದಿನಾಂಕ : 2010-06-06
ನೋವನ್ನು ನೀಡಿ ಅಳುತರಿಸುವವರ ನಡುವೆ, ತಮ್ಮ ನೋವುಗಳನ್ನು, ಸಮಸ್ಯೆಗಳನ್ನು ಮೂಟೆ ಕಟ್ಟಿ ಬದಿಯಲ್ಲಿರಿಸಿ, ಮೂರು ತಾಸುಗಳ ತನಕ ಒಂದೇ ಸಮನೆ ಜನರ ಕಣ್ಣಲ್ಲಿ ನೀರು ಬರೋ ತನಕ ಅಯ್ಯಯಮ್ಮ... ಸಾಕಪ್ಪ ಸಾಕು... ಎನ್ನುವವರೆಗೂ ಬಿಡದೇ ನಗುತರಿಸುವ, ಹಾಸ್ಯ ಪ್ರಧಾನ ಸಾಮಾಜಿಕ ಕಥಾನಕದ, ಶ್ರೇಷ್ಟ ನಟನೆಯ, ಕುಂದಾಪುರ ಕನ್ನಡದ ಲೇಪವಿರುವ, ಅತ್ಯಂತ ಸುಂದರ ನಾಟಕವೇ "ಮೂರು ಮುತ್ತು".
ತನ್ನ 800ನೇ ಪ್ರಯೋಗದತ್ತ ಭರ್ಜರಿ ದಾಪುಗಾಲು ಹಾಕುತ್ತಿರುವ ಈ ನಾಟಕ, ಈಗಾಗಲೇ ಪ್ರದರ್ಶನಗೊಂಡಿರುವ ಎಲ್ಲಾ ಪ್ರದೇಶ ಗಳಲ್ಲಿಯೂ, ಅಪಾರ ಜನ್ನಮನ್ನಣೆಯನ್ನು ಪಡೆದಿರುವ, ಅತ್ಯಂತ ಲೋಕಪ್ರಿಯ ನಾಟಕ.
"ಮೂರು ಮುತ್ತು" ಖಂಡಿತವಾಗಿಯೂ ಎವರ್‍ಗ್ರೀನ್ ಸೂಪರ್ ಹಿಟ್ ನಾಟಕ. ದೇಶದೆಲ್ಲೆಡೆ ಪ್ರಯೋಗ ಕಂಡ ಈ ನಾಟಕ ತನ್ನ ನವಿರಾದ ಹಾಸ್ಯ, ಸೊಗಸಾದ ಹಾಡು-ಸಂಗೀತ, ಮನ ಮೋಹಕವಾದ ಕ್ಯಾಸ್ಟೂಮ್ಸ್ ಜೊತೆಗೆ ಹೃದಯಕ್ಕೆ ಲಗ್ಗೆಯಿಡುವ ಕಚಗುಳಿಯ ಸಂಭಾಷಣೆ, ಒಬ್ಬರಿಗಿಂತ ಒಬ್ಬರನ್ನು ಮೀರಿಸುವಂತಹ ಅಭಿನಯದ ಪೈಪೋಟಿಯ ಮಿಶ್ರಿತ ರಸಪಾಕದ ಪಂಚಾಮೃತದೊಂದಿಗೆ ಇತಿಹಾಸದ ಪುಟದಲ್ಲಿ ದಾಖಲಾಗಿದೆ.

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ದಿ| ಕೆ. ಬಾಲಕೃಷ್ಣ ಪೈ (ಕುಳ್ಳಪ್ಪು) ಈ ನಾಟಕದ ನಿರ್ಮಾಪಕರು. ಕನ್ನಡ ರಂಗಭೂಮಿ ಅವನತಿ ಅಂಚಿನಲ್ಲಿರುವ ಸಂದರ್ಭದಲ್ಲಿ ದಿ| ಬಾಲಕೃಷ್ಣ ಪೈ ತನ್ನ ಜಾಣ್ಮೆಯಿಂದ, ಸಾಮಾಜಿಕ ನಾಟಕಕ್ಕೆ, ಹಾಸ್ಯದ ಪ್ರಾಧಾನ್ಯತೆ ಕೊಟ್ಟು ರಚಿಸಿದ "ಮೂರು ಮುತ್ತು" ನಾಟಕದಿಂದ ಪುನಃ ಪ್ರೇಕ್ಷಕರು ರಂಗಭೂಮಿಯತ್ತ ಒಲವು ತೋರಿ ಸಿದರು.
ಅವರು ಸಾಕಿ ಬೆಳೆಸಿದ ನಾಟಕ ಕಂಪನಿ, ರೂಪಕಲಾ ನಾಟಕ ಮಂಡಳಿ. ಇಂದು ನಶಿಸಿ ಹೋಗು ತ್ತಿರುವ ನಾಟಕ ಕಂಪೆನಿಗಳಿಗೆ ಸವಾಲಾಗಿ ಬೆಳೆಯುತ್ತಿದೆ ಕುಂದಾಪುರದ ರೂಪಕಲಾ ನಾಟಕ ಮಂಡಳಿ. ಟಿ.ವಿ. ಸಿನೇಮಾ ಮಾದ್ಯಮದ ಪ್ರಭಾವದಿಂದ, ನಾಟಕದಿಂದ ಬಹು ದೂರವೇ ಉಳಿದಿ ದ್ದ ಜನರು, ಈಗ ಅದೇ ಜನ ಕುಳ್ಳಪ್ಪರವರ ಅಥವಾ ರೂಪಕಲಾ ನಾಟಕ ಮಂಡಳಿಯ ನಾಟಕ ಎಂದಾಕ್ಷಣ ಸಾವಿರ ಸಾವಿರ ಸಂಖ್ಯೆಯಲ್ಲಿ ಸೇರುತ್ತಾರೆ, ನಾಟಕದ ಆನಂದವನ್ನು ಸವಿಯುತ್ತಾರೆ.
ರೂಪಕಲಾತಂಡದ ಅದ್ಭುತ ಕೊಡುಗೆ "ಮೂರು ಮುತ್ತು" ನಾಟಕ ಮಾತ್ರವಲ್ಲ, ಅವುಗಳ ಪಾತ್ರ ಧಾರಿ ಅಶೋಕ್ ಶ್ಯಾನ್‍ಭಾಗ್, ಸತೀಶ್ ಪೈ, ಸಂತೋಷ್ ಪೈ ಕೂಡ. ರೂಪಕಲಾತಂಡದಿಂದ 'ಅವನಲ್ಲ ಇವನು', 'ನಗುವುದೋ ಅಳುವುದೋ', 'ರಾಮ ಲಕ್ಷ್ಮಣ', 'ಸುಸೈಡ್ ಸುಂದರ', 'ದತ್ತು ಪುತ್ರ', 'ಪಾಪ ಪಾಂಡು' ಮುಂತಾದ ನಾಟಕಗಳು ಪ್ರಯೋಗಕಂಡಿದೆ. ಆದರೆ, ಹೆಚ್ಚಿನ ಯಶಸ್ಸು - ಪ್ರತಿಷ್ಠೆ ತಂದು ಕೊಟ್ಟ ನಾಟಕ "ಮೂರು ಮುತ್ತು".

ಈ ಯಶಸ್ಸು, ಜನರ ಪ್ರೀತಿ ಮುಂದಿನ ನಾಟಕಗಳ ಅಭೂತಪೂರ್ವ ಯಶಸ್ಸಿಗೂ ನಾಂದಿಯಾ ಯಿತು. ಜನರು ಈ ಅದ್ಭುತ ಪ್ರತಿಭೆಗಳನ್ನು ರಾತ್ರಿ ಬೆಳಗಾಗುವುದರ ಒಳಗೆ ಹೃದಯದ ಮೂಲೆ ಯಲ್ಲಿ ಪ್ರೀತಿಯಿಂದ ಬಚ್ಚಿಟ್ಟುಕೊಂಡು ಪ್ರೀತಿಯ ಮಳೆ ಸುರಿದರು. ಆ ಪ್ರೀತಿಯ ಮಳೆಗೆ "ಮೂರು ಮುತ್ತು" ಹೆಮ್ಮರವಾಗಿ ಬೆಳೆಯಿತು. ತೊಡೆತಟ್ಟಿ ಹಾಸ್ಯಕ್ಕೆ ನಿಂತು ಬಿಟ್ಟರೆ ಈ ದೈತ್ಯ ಪ್ರತಿಭೆ ಗಳನ್ನು ಯಾರಿಂದಲೂ ಅಲ್ಲಾಡಿಸಲು ಸಾಧ್ಯವಿಲ್ಲ. ದಟ್ ಈಸ್ "ಮೂರು ಮುತ್ತು".
ಅಭಿನಯದಲ್ಲಿ ಹಾಸ್ಯರಸ ತುಂಬಾ ಕಷ್ಟ. ಅದಕ್ಕೆ ಪರಿಶ್ರಮದೊಂದಿಗೆ ಸಮಯಪ್ರಜ್ಞೆ ಬೇಕು. ಮೈಯೆಲ್ಲಾ ಹುಷಾರಿರಬೇಕು. ಒಂದು ಪಂಚಿಂಗ್ ಡೈಲಾಗ್ ಆ ಸಮಯದೊಳಗೇನೆ ಪಂಚ್ ಆಗದಿದ್ದಲ್ಲಿ ಹಾಸ್ಯಕ್ಕೆ ಬೆಲೇನೆ ಇರಲ್ಲ. ಆದರೆ ಈ ಬಗ್ಗೆ ಈ ಮೂರುರತ್ನಗಳ ಸಾಧನೆಗೆ ಹ್ಯಾ ಟ್ಸ್‍ಫ್ ಅನ್ನಲೇಬೇಕು. ಇಲ್ಲಿ ಅಶ್ಲೀಲತೆಯಿಲ್ಲ, ದ್ವಂದ್ವಾರ್ಥದ ಸಂಭಾಷಣೆಯಿಲ್ಲ, ರುಂಡವನ್ನೇ ಚೆಲ್ಲಾಡುವ ಕಠೋರತೆಯಿಲ್ಲ...
ಆದರೂ ಇಲ್ಲಿ ಗಂಟಲ ನಾಡಿ ಉಬ್ಬಿಸುವ ನಗೆ ಇದೆ. ಮೈಯ ರೋಮಗಳನ್ನು ಸೆಟೆದೆಬ್ಬಿಸುವ ಕುತೂಹಲವಿದೆ. ಜಾರಿ ಹೋಗಲಾರದ ಆಕರ್ಷಣೆಯಿದೆ. ಅದು ಹೇಗೆಂದು ಅಚ್ಚರಿಯೇ? ತಿಳಿಯ ಬೇಕಾದರೆ ಈ ನಾಟಕವನ್ನು ನೋಡಲೇಬೇಕು.

ರೂಪಕಲಾತಂಡದ ಪ್ರತೀ ನಾಟಕವನ್ನೂ ಕಲಾರಸಿಕರು ಒಂದಲ್ಲ... ನಾಲ್ಕಾರು ಬಾರಿ ನೋಡಿ ಆನಂದಿಸಿದ್ದಾರೆ. ಎಂತೆಂತಹ ಗಣ್ಯಾತೀತಾ ಮಹನೀಯರು ಇವರ ನಟನೆಗೆ ಮೆಚ್ಚಿ ಬೆನ್ನು ತಟ್ಟಿದ್ದಾರೆ. ಊರ - ಪರವೂರ - ಪರರಾಜ್ಯದ ಕನ್ನಡಿಗರು ಇವರ ಸಾಧನೆಗೆ ಮೆಚ್ಚಿ ಹರಿಸಿದ್ದಾರೆ. ದೇಶದಾದ್ಯಂತ 'ರೂಪಕಲಾ' ಬಳಗ ನಿರಂತರವಾಗಿ ಹಾಸ್ಯ ನಾಟಕವನ್ನು ಪ್ರದರ್ಶಿಸುತ್ತಾ ನಗೆಯ ಹೊನಲನ್ನು ಹರಿಸುತ್ತಿದ್ದಾರೆ.
'ನಮ್ಮನ್ನು ಪ್ರೀತಿಯಿಂದ ಬೆಳೆಸಿದ ಈ ಜನರ ನಗುವೇ ನಮ್ಮ ಶಕ್ತಿ. ಪ್ರೀತಿಯ ಜನರು, ಕಲಾರ ಸಿಕರು ಸದಾ ನಗುತ್ತಲೇ ನೆಮ್ಮದಿಯಾಗಿ ಬದುಕಲಿ. ಅವರ ಜೀವನದಲ್ಲಿ ನಗು ಸದಾ ತುಂಬಿರಲಿ' ಎನ್ನುವುದು ಈ ಮೂರುಮುತ್ತುಗಳ ಶುಭಹಾರೈಕೆ...
ಇಂತಹ ಅಪಾರ ಜನಮನ್ನಣೆಯ, ಅದ್ಭುತ ಯಶಸ್ಸಿನ ನಾಟಕ ಯುಎಇ - ದುಬಾಯಿ ನಲ್ಲಿ ಇದೇ ಜೂನ್ 25 ರಂದು ಪ್ರದರ್ಶಿತಗೊಳ್ಳುತ್ತಿದೆ. ಪ್ರಥಮವಾಗಿ ರೂಪಕಲಾ ತಂಡ ಗಲ್ಫ್ ನಾಡಿನ ಲ್ಲೊಂದು ಪ್ರದರ್ಶನ ನೀಡಲು ಬರುತ್ತಿದೆ. ದುಬಾಯಿಯ ಎಮಿರೇಟ್ಸ್ ಇಂಗ್ಲೀಷ್ ಸ್ಕೂಲ್‍ನ ಸಭಾಂಗಣದಲ್ಲಿ ಈ ನಾಟಕ ಶುಕ್ರವಾರ ಸಂಜೆ 4.30 ಕ್ಕೆ ಪ್ರದರ್ಶಿತಗೊಳ್ಳುತ್ತಿದೆ.
ಕುಂದಾಪುರದವರೇ ಆದ, ದುಬಾಯಿಯ ಹೆಸರಾಂತ ಹೊಟೇಲ್ ಉದ್ಯಮಿ, ಹಲವಾರು ಕನ್ನಡ - ಕೊಂಕಣಿ - ತುಳು ಕಾರ್‍ಯಕ್ರಮಗಳ ಪೋಷಕರಾದ ಶ್ರೀ ಪ್ರವೀಣ್ ಶೆಟ್ಟಿರವರ FORTUNE ಬಳಗ ಈ ನಾಟಕದ ಹೊಣೆಯನ್ನು ಹೊತ್ತಿದ್ದಾರೆ. ಕಲಾಭಿಮಾನಿಗಳ ಅನುಕೂಲಗಾಗಿ ಪ್ರವೇಶ ಉಚಿತವಾಗಿದೆ, ಆದರೂ ಮೊದಲು ಬಂದವರಿಗೆ ಪ್ರಥಮ ಪ್ರಾಶಸ್ತ್ಯವನ್ನು ನೀಡಲಾಗುವುದು ಎಂದು ಪ್ರಾಯೋಜಕರು ತಿಳಿಸಿದ್ದಾರೆ.

ಗಮನಿಸಿ: ನಗುವವರಿಗೆ ವಿಶೇಷ ಆಮಂತ್ರಣ, ನಗದವರಿಗೆ ನಗದು ಬಹುಮಾನ.
ವರದಿಯ ವಿವರಗಳು |
 |
ಕೃಪೆ : ನವೀನ್ ಸಿಕ್ವೇರಾ (ವಿವಿಧ ಮೂಲಗಳಿಂದ) ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-06-06 00:00:00
|
|
| M.E.Moolur, UDUPI/DUBAI | 2010-06-21 | | On behalf of all UAE Kannadigas I congratulate and express my heartfelt gratitude to Mr.Praveen Shetty of Fortune Group for venturing to Show the the Kannada Drama " Mooru Muthu ". It is an exceptionally hilarious drama with unique Kundapura Kannada touch by the renowed dramatist and poet late Mr.Balakrishna Pai.
I am eagerly looking forward to enjoy this drama.-M.E.Moolur |
| Raveendra, Kota (dubai) | 2010-06-18 | | WOW its really Good news for Kannadigas. really nice drama. i have seen many times when i was in back home. i use to see their all dramas. even i have their Mooru Muthu video CD with me now. |
| venugopal, california USA | 2010-06-07 | | We have seen \'Mooru muthu\' nataka several times and enjoyed a lot. Whenever we have a party, get-together this is the first choice of our friends. Great comedy drama.
Hats off to all the artists. |
|