ಆದಿತ್ಯವಾರ, 05-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಜನತಾ ನ್ಯಾಯಾಲಯದ ಮೂಲಕ 5154 ಪ್ರಕರಣ ಇತ್ಯರ್ಥ : ಲೋಕ್ ಅದಾಲತ್ ಸಮಾರೋಪದಲ್ಲಿ ನರೇಂದ್ರ ಕುಮಾರ್ ಗುಣಕಿ
Latest news item ಸೃಜನ ಶೀಲತೆ ಇಲ್ಲದಿದ್ದಾಗ ಶಿಕ್ಷಣದ ಬೆಳವಣಿಗೆಗೆ ಕೊರತೆ | ಅಶೋಕ್ ಕುಮಾರ್ ಶೆಟ್ಟಿ, ಎಂ.ಎಸ್.ನಾಗರಾಜ್ ರಾವ್ ಹಾಗೂ ಡಾ.ಚಂದ್ರಶೇಖರ್ ದಾಂಬ್ಲೆಯವರಿಗೆ ಸನ್ಮಾನ
Latest news item ದುಬಾಯಿಯಲ್ಲಿ ’ಗಮ್ಮತ್ ಕಲಾವಿದೇರ್’ ಪ್ರಥಮ ಪ್ರದರ್ಶನ: ನಟನಾ ಚಾತುರ್ಯದಲ್ಲಿ ಮಿಂಚಿದ ’ಈ ಪೊರ್ಲು ದಾಯೇ’ ತುಳು ನಾಟಕ
Latest news item ಸುಶಿಕ್ಷಿತರ ಸಂಖ್ಯೆ ಹೆಚ್ಚಾದಂತೆ ಕೃಷಿಯತ್ತ ಒಲವು ಕಡಿಮೆ : ಉಡುಪಿ ರೈತ ಸಮಾವೇಶದಲ್ಲಿ ಶಾಸಕ ರಘುಪತಿ ಭಟ್
Latest news item ಉಡುಪಿ ಲಯನ್ಸ್ ಗೆ ಜಿಲ್ಲಾ ಲಯನ್ಸ್ ಗವರ್ನರ್ ಇಂದ್ರಾಳಿ ಜಯಕರ್ ಶೆಟ್ಟಿ ಅಧಿಕೃತ ಭೇಟಿ
Latest news item ಸುಬ್ರಮಣಿಯನ್ ಸ್ವಾಮಿ ಅರ್ಜಿ ವಜಾ: ಚಿದಂಬರಂ ನಿರಾಳ
Latest news item ಇಲ್ರಿ.. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿಲ್ಲ: ಯಡ್ಡಿ
Latest news item ಚೆನ್ನೈ ತೆಕ್ಕೆಗೆ ಜಡೇಜಾ; 9.70 ಕೋಟಿಗೆ ಖರೀದಿ; ವಿನಯ ಕುಮಾರ್ ಗೆ 4.86ಕೋಟಿ ಕೊಟ್ಟ ರೋಯಲ್ ಚ್ಯಾಲೇಂಜರ್ಸ್ | ಯಾವ ಯಾವ ಫ್ರಾಂಚೈಸಿ ತೆಕ್ಕೆಗೆ?
Latest news item ಗೂಳಿ ಹೊರಕ್ಕೆ: ಕಳಂಕಿತ ಸಭಾಧ್ಯಕ್ಷರೇ ಎಂದಿದ್ದಕ್ಕೆ ಸದನದಿಂದ ಒಂದು ದಿನ ಅಮಾನತು (Updated)
Latest news item ಜೈನ ಸಾಹಿತಿಗಳಿಂದ ಕನ್ನಡ ಸಾಹಿತ್ಯದ ಬೆಳವಣಿಗೆ: ಡಾ.ಶಾಂತಿನಾಥ ದಿಬ್ಬದ
Latest news item ವೈದ್ಯರಲ್ಲಿ ಮಾನವೀಯತೆ ಮುಖ್ಯ: ನ್ಯಾ. ಸಂತೋಷ್ ಹೆಗ್ಡೆ
Latest news item ಪಡುಬಿದ್ರೆಯಲ್ಲಿ ಎಸಿಸಿ ಸಿಮೆಂಟ್ ಕಂಪೆನಿ ಸ್ಥಾಪನೆ: ರಸ್ತೆ ಕಾಮಗಾರಿಗೆ ಬೂದಿ ಬಳಸಬಹದು : ಡಿಸಿ | ಫೆ. 4ರಂದು ಪ್ರತಿಭಟನೆ
Latest news item ಉಡುಪಿ ಶೇಮ್, ಶೇಮ್ !: ಸೈಂಟ್ ಮೇರೀಸ್ ದ್ವೀಪದಲ್ಲಿ ಜಿಲ್ಲಾಡಳಿತ ಕೃಪಕಟಾಕ್ಷದಲ್ಲಿ ರೇವ್ ಪಾರ್ಟಿ: ವಿದೇಶಿ ಸಂಸ್ಕೃತಿ ಆನಾವರಣ, ಮದ್ಯ, ಡ್ರಗ್ಸ್ ಗಳದ್ದೇ ಕಾರುಬಾರು
Latest news item ಅಪಘಾತಕ್ಕೆ ತುತ್ತಾಗಿ ಕಾಮಿಡಿ ನಟ ಕರಿ ಬಸವಯ್ಯ ಅಕಾಲಿಕ ಮರಣ { VIEW VIDEO of HIS EMOTIONAL LIFE STORY }.
Latest news item ಬಯಲುಸೀಮೆ ಆರು ಜಿಲ್ಲೆಗಳಿಗೆ ಕುಡಿಯುವ ನೀರು; ತಿಂಗಳಲ್ಲಿ ಎತ್ತಿನಹೊಳೆ ನಿರ್ಧಾರ. ನೇತ್ರಾವತಿ ತಿರುವು ಇಲ್ಲ..ಹೆಚ್ಚಿನ ನೀರನ್ನು ಬಳಸಿಕೊಳ್ಳುವ ಯೋಜನೆ
Latest news item ಕುಸಿಯುವ ಭೀತಿಯಲ್ಲಿ ಕುದಿ ಗ್ರಾಮದ ಕೋಂಟು ಸೇತುವೆ : ಆತಂಕದಲ್ಲಿ ಗ್ರಾಮಸ್ಥರು : ಸೂಕ್ತ ಪರಿಹಾರಕ್ಕೆ ಒತ್ತಾಯ
Latest news item ಡಿವಿಜಿಯವರ ಕಾವ್ಯಗಳು ಜನಸ್ವಾರ್ಥ : ಡಾ. ಹೆಚ್. ಶಾಂತರಾಮ್
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ನೋಡ ಬನ್ನಿ ಮಾತನಾಡುವ ಮಂಜುನಾಥನ ದರುಶನ....

ಗಲ್ಫ್ ಕನ್ನಡಿಗದ  ಗೌರವ ಸ೦ಪಾದಕರಾದ ಶ್ರೀಮತಿ ಗೋಪಿಕಾ ಮಯ್ಯರಿಂದ ಡಾ. ವೀರೇ೦ದ್ರ ಹೆಗ್ಗಡೆಯವರೊ೦ದಿಗೆ ವಿಶೇಷ ಸ೦ದರ್ಶನ   

800 ವರ್ಷಗಳ ಇತಿಹಾಸವಿರುವ ಧರ್ಮಸ್ಥಳವೆಂದರೆ ಇಂದು ಜಗ್ಗನೆ ನೆನಪಾಗುವುದು ವೀರೇಂದ್ರ ಹೆಗ್ಗಡೆಯರ ಹಸನ್ಮುಖಿ ಸುಂದರ ವದನ. ಅಂತಹ ಅವಿನಾಭಾವ ಸಂಬಂಧ ಅವರಿಬ್ಬರದು. ಮಾತನಾಡುವ ಮಂಜುನಾಥನೆಂದೇ ಜನರಿಂದ ಪ್ರೀತಿಯಿಂದ ಕರೆಯಿಸಿಕೊಳ್ಳುವ ಧರ್ಮಾಧಿಕಾರಿ ರಾಜರ್ಷಿ ಡಾ.ವೀರೇಂದ್ರ ಹೆಗ್ಗಡೆಯವರ ದಿನಚರಿಯ ಪುಟದ ಒಂದು ನೋಟ ..............

ಬಲ್ಲಿರೇನಯ್ಯ? ಮೂಕವಿಸ್ಮಿತನಾಗುವುದು ಅಂದರೇನೇಂದುಕೊಂಡಿರಿ?

ಅನುಭವಿಸಿದ್ದೀರೇನು? ಇಲ್ಲವಾದರೆ ಇದೀಗ ಹೊರಡಿ ಧರ್ಮಸ್ಥಳಕ್ಕೆ.

ನಿಜ, ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ವ್ಯಕ್ತಿತ್ವ, ಕಾರ್ಯವ್ಯಾಪ್ತಿ, ಕಾರ್ಯಕ್ಷಮತೆ, ದಕ್ಷತೆ, ಸಮತೂಕದ ನಡೆನುಡಿ, ಆಡಂಬರದ ಪ್ರದರ್ಶನವಿಲ್ಲದ ಸರಳ, ಮಮತಾಮಯಿ, ಸ್ವಚ್ಛ ಶುದ್ಧ ಸ್ಫಟಿಕದಂತಿರುವ ಹೆಗ್ಗಡೆಯವರನ್ನು ನೋಡುವಾಗ ಎಂತೆಂತವರೂ ಮೂಕವಿಸ್ಮಿತರಾಗುತ್ತರೆ.

ಸುಮಾರು 800ವರ್ಷಗಳ ಹಿನ್ನೆಲೆಯಿರುವ ಧರ್ಮಸ್ಥಳದಲ್ಲಿ ಅನುಶಾಸನದಂತೆ ಅನ್ನದಾನ ನಡೆಯುತಿತ್ತು. ನ್ಯಾಯದಾನ, ಶಿಕ್ಷಣದಾನ, ಔಷಧ ದಾನ ಹೆಗ್ಗಡೆಯವರ ಹಿರಿಯರಿಂದ ಪ್ರಾರಂಭವಾಯಿತು. ಅಂಥಹ ಮಹಾನುಭಾವ ಹಿರಿಯರಿಂದ ಪ್ರೇರಣೆ ಪಡೆದು ಅದೇ ಮಾರ್ಗದಲ್ಲಿ ಖಾವಂದ ವೀರೇಂದ್ರ ಹೆಗ್ಗಡೆಯವರು ಬೆಳೆದ ರೀತಿ ಅನನ್ಯವಾದದ್ದು. ಕರ್ನಾಟಕದಾದ್ಯಂತ ಹಬ್ಬಿದ ರೀತಿ ಅನಾದೄಶ್ಯವಾದದ್ದು. ನಿಂತ ನೆಲೆಯಲ್ಲಿ ಗ್ರಾಮಾಭಿವೄದ್ಧಿಯ ಯೋಜನೆ ಕೈಗೊಂಡು ಪ್ರಜೆಗಳಿಗೆ ಸ್ವಾವಲಂಬನೆ ಯನ್ನು ಕಲಿಸಿ ಆರ್ಥಿಕ ಪ್ರಗತಿ ಪಥದಲ್ಲಿ ಕೊಂಡೊಯ್ದದ್ದಲ್ಲದೆ ಇದೀಗ ಉತ್ತರ ಕರ್ನಾಟಕ ದಲ್ಲಿಯೂ ಹಬ್ಬಿ ಅಲ್ಲಿಯ ಪ್ರಜೆಗಳಿಗೂ ಸ್ವಾವಲಂಬನೆ ಮತ್ತು ಸ್ವೋದ್ಯೋಗ ಅವಕಾಶ ಗಳನ್ನು ಕಲ್ಪಿಸಿ ಕೊಡುತ್ತಿದ್ದಾರೆ.

ಧರ್ಮಸ್ಥಳದ ನ್ಯಾಯದಾನ ಎಲ್ಲರಿಗೂ ತಿಳಿದದ್ದೇ. ಅದರಲ್ಲುಈ ಮಾತನಾಡುವ ಮಂಜುನಾಥನ ನ್ಯಾಯದಾನಕ್ಕೆ ಜನ ಸಾಲುಗಟ್ಟಿ ನಿಲ್ಲುವುದು ನೋಡುವಾಗ ಮೈ ಜುಂ ಅನ್ನುತ್ತದೆ. ಮಾತು ತೀರ್ಮಾನ, ಸಾರ್ವಜನಿಕ ಅಹವಾಲುಗಳಿರುವ ಸೋಮವಾರ ವಂತೂ ಜನಸಾಗರವೇ ಹರಿದು ಬರುತ್ತದೆ ಈ ಮಂಜುನಾಥನೆಡೆ.

ಕೇವಲ ಮೆಡಿಕಲ್ ಮತ್ತು ಇಂಜಿನೀಯರಿಂಗ್ ಗಳು ಮಾತ್ರವೇ ಶಿಕ್ಷಣವಲ್ಲ, ಕಾನೂನು, ಮ್ಯಾನೇಜ್-ಮೆಂಟ್, ಆಯುರ್ವೇದ ಶಿಕ್ಷಣಗಳೂ ಶಿಕ್ಷಣವೇ ಎಂದು ತೋರಿಸಿದ್ದಲ್ಲದೆ ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಇಂದು ಆಯುರ್ವೇದಕ್ಕಂತೂ ಪುನರ್ಜನ್ಮ ಲಭಿಸಿದೆ ಎಂದರೆ ಉತ್ಪ್ರೇಕ್ಷೆಯಾಗದು. ಎಸ್.ಡಿ.ಎಮ್. ಶಿಕ್ಷಣ ಸಂಸ್ಥೆಯ ಎಂ.ಬಿ.ಏ ಕಾಲೇಜುಗಳು ಪ್ರತಿಷ್ಠಿತ ಕಾಲೇಜುಗಳೆಂದು ಪರಿಗಣಿಸಲ್ಪಡುತ್ತವೆ.

ಡಾ. ವೀರೇಂದ್ರ ಹೆಗ್ಗಡೆಯವರ ಕೈಂಕರ್ಯಗಳಿಗೆ ಸಂದ ಗೌರವಗಳು ಸಮ್ಮಾನಗಳು ಅದೆಷ್ಟೋ!!! ಇಂತಹ ವರ್ಚಸ್ಸಿನ, ಲೋಕ ಕಲ್ಯಾಣ ಮಾಡುವ ವ್ಯಕ್ತಿ ತಮ್ಮ ಪಕ್ಷಕ್ಕೆ ಬರಲಿ ಎಂದು ಪ್ರಯತ್ನಿಸಿದ ರಾಜಕೀಯ ಪಕ್ಷಗಳದೆಷ್ಟೋ!!! ಆದರೂ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಹೊಗಳಿಕೆಗೆ ಉಬ್ಬದೆ, ತೆಗಳಿಕೆಗೆ ಕುಗ್ಗದೆ ತನ್ನ ಕೈಂಕರ್ಯವನ್ನು ಇನೂ ಎಲ್ಲೆಡೆ ಪಸರಿಸುವ ಯೋಜನೆಯಲ್ಲಿ ವಿನೀತಭಾವದಿಂದ ಮಗ್ನರಾಗಿದ್ದಾರೆ.

ಇಂತಿಪ್ಪ ಧರ್ಮಾಧಿಕಾರಿಗಳಿಗೆ ಇದೀಗ ಷಷ್ಟ್ಯಬ್ಧಿ ತುಂಬಿಹುದು.

ಭಾರತೀಯ ಜ್ಯೋತಿಷ್ಯದ ಕಾಲಗಣನೆಯ ಪ್ರಕಾರ ಅರುವತ್ತು ಸಂವತ್ಸರಗಳ(ವರ್ಷಗಳ) ಒಂದು ಚಕ್ರಕ್ಕೆ ಷಷ್ಟ್ಯಬ್ಧ ಎನ್ನುತ್ತಾರೆ. ಒಂದು ಚಕ್ರ ಪೂರ್ತಿಯಾಗುವ ಸಂಕ್ರಮಣ ಕಾಲದಲ್ಲಿ ಷಷ್ಟ್ಯಬ್ಧಿಪೂರ್ತಿ ಆಚರಿಸಿ ವ್ಯಕ್ತಿಗೆ ದೀರ್ಘಾಯಸ್ಸು ಆರೋಗ್ಯವನ್ನು ಹಾರೈಸುತ್ತಾರೆ. ಅಂತೆಯೇ ಧರ್ಮಾಧಿಕಾರಿ ಹೆಗ್ಗಡೆಯವರಿಗೆ ಅರುವತ್ತು ತುಂಬಿದ ಈ ಸಂಕ್ರಮಣ ಕಾಲದಲ್ಲಿ ನಾಡಿಗೆ ನಾಡೇ ಎದ್ದು ನಿಂತು ಗೌರವ ಸಲ್ಲಿಸಿ ಅವರಿಗೆ ದೀರ್ಘಾಯಸ್ಸು ಆರೋಗ್ಯವನ್ನು ಹಾರೈಸುತ್ತಿದ್ದಾರೆ. ಜನರ ಅಭಿಮಾನದ ಮಹಾಪೂರವೇ ಆಶೀರ್ವಾದವಾಗಿ ಹರಿದು ಬರುತ್ತಿದೆ. ಮಮತೆಯ ಸಾಕಾರಮೂರ್ತಿಯಂತಿರುವ ಹೆಗ್ಗಡೆಯವರ ಮೇಲೆ ಜನತೆಯಿಟ್ಟಿರುವ ಮಮತೆಯ ಸಾಕ್ಷಾತ್ಕಾರವಾಗುತ್ತಿದೆ.

1948 ,25 ನವೆಂಬರನಂದು ಜನಿಸಿದ ವೀರೇಂದ್ರ ಹೆಗ್ಗಡೆಯವರು 21-10 1968ಕ್ಕೆ ಪಟ್ಟಾಭಿಷಿಕ್ತರಾದರು. 26-12 1972ರಲ್ಲಿ ಹೇಮಾವತಿ ಹೆಗ್ಗಡೆಯವರೊಂದಿಗೆ ವಿವಾಹವಾದ ಹೆಗ್ಗಡೆಯವರಿಗೆ ಓರ್ವ ಪುತ್ರಿ ಶ್ರದ್ಧಾ. ಇಪ್ಪತ್ತನೇ ವರ್ಷದಲ್ಲಿ ಧರ್ಮಾಧಿ ಕಾರಿಯಾಗಿ ಹೆಗ್ಗಡೆ ಪಟ್ಟಕ್ಕೇರಿದ ಖಾವಂದರ ನಲುವತ್ತು ವರ್ಷಗಳ ಸಾಧನೆ ಅನ್ಯತ್ರ ಕಾಣಲು ಸಿಗದು. ತಮಗೆ ದೊರಕಿದ ಸಂಪನ್ಮೂಲಗಳನ್ನು ಸಮಾಜಮುಖಿಯಾಗಿ ಜನಹಿತಕ್ಕಾಗಿ ಬಳಸುವ ದೂರದರ್ಶಿತ್ವ ಪ್ರಾಯಶಃ ಜನ್ಮಜಾತವಾಗಿಯೆ ಬಂದಿದೆ. ಅನ್ನದಾನ, ಶಿಕ್ಷಣ ದಾನ ಔಷಧ ದಾನ ನ್ಯಾಯದಾನವಲ್ಲದೆ ಸಾಮಾಜಿಕ ಪಿಡುಗು ಗಳಾದ ವರದಕ್ಷಿಣೆ ಹಾಗೂ ಮದ್ಯ ಪಾನ ನಿರ್ಮೂಲನಕ್ಕಾಗಿ ಅನೇಕ ಯೋಜನೆಗಳನ್ನು ಜಾರಿತಂದಿದ್ದಾರೆ. ಸಾಮೂಹಿಕ ವಿವಾಹದ ಯೋಜನೆಯಲ್ಲಿ ಈವರೆಗೆ 10000ಕ್ಕೂ ಹೆಚ್ಚು ಜೋಡಿಗಳು ಸತಿಪತಿಗಳಾಗಿದ್ದಾರೆ. ರುಡ್ ಸೆಟ್ ನಂತಹ ತಾಂತ್ರಿಕ ಶಿಕ್ಷಣದಿಂದ ಅನೇಕರಿಗೆ ಸ್ವಾವಲಂಬನೆಯ ದಾರಿ ತೋರಿಸಿದ್ದಾರೆ.

ಖಾವಂದರ ಸಹೋದರರಾದ ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಡಿ. ರಾಜೇಂದ್ರ ಕುಮಾರ್ ಶ್ರೀರಾಮನೊಂದಿಗೆ ಭರತ ಲಕ್ಷ್ಮಣ ಶತ್ರುಘ್ನನಂತೆ ಸದಾ ಜೊತೆಯಲ್ಲಿದ್ದು ಸಹಯೋಗ ನೀಡಿದ್ದಾರೆ. ಧರ್ಮಪತ್ನಿ ಶ್ರೀಮತಿ ಹೇಮಾವತಿ ಹೆಗ್ಗಡೆಯವರು ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳಲ್ಲದೆ ಸ್ತ್ರೀಯರಿಗಾಗಿ ಜ್ಞಾನವಿಕಾಸ, ಸಿರಿ ಮೊದಲಾದ ಯೋಜನೆಗಳನ್ನ್ಯು ಹಮ್ಮಿಕೊಂಡು ರಾಜರ್ಷಿ ವೀರೇಂದ್ರ ಹೆಗ್ಗಡೆಯವರ ಆದರ್ಶ ಧರ್ಮಪತ್ನಿಯಾಗಿ ರಾರಾಜಿಸುತ್ತಿದ್ದಾರೆ.

ಇವೆಲ್ಲದರ ನಡುವೆ ಹೆಗ್ಗಡೆಯವರ ಪ್ರಿಯವಾದ ಹವ್ಯಾಸಗಳೆಂದರೆ ಅಪರೂಪದ ವಸ್ತುಗಳ ಸಂಗ್ರಹ, ಹಳೆಯ ಕಾರುಗಳ ಸಂಗ್ರಹ ಮತ್ತು ಛಾಯಗ್ರಹಣ. ಮಂಜೂಷಾ ವಸ್ತು ಸಂಗ್ರಹಾಲಯದಲ್ಲಿ ಕಳೆದ ನಲುವತ್ತು ವರ್ಷಗಳಿಂದ ಹೆಗ್ಗಡೆಯವರು ಆಸಕ್ತಿವಹಿಸಿ ಸಂಗ್ರಹಿಸಿದ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.ಇನ್ನು ಹಳೇ ಕಾರುಗಳ ಸಂಗ್ರಹವಂತೂ ಲಕಲಕ ಹೊಳೆಯುತ್ತಿದೆ. ಅಲ್ಲಿಯ ಪ್ರತಿಯೊಂದು ಕಾರುಗಳನ್ನು ಸುಸ್ಥಿತಿಯಲ್ಲಿ ವ್ಯವಸ್ಥಿತವಾಗಿ ಕಾಪಾಡಲಾಗುತ್ತದೆ.

ಇಂತಹ ಬಹುಮುಖೀ ಪ್ರತಿಭೆಯ ಕಾರ್ಯವ್ಯಾಪ್ತಿ ಇಲ್ಲಿಗೆ ಮುಗಿಯದು. ಯಕ್ಷಗಾನ ಮೇಳವನ್ನೂ, ಯಕ್ಷಗಾನ ತರಬೇತಿ ಕೇಂದ್ರವನ್ನೂ ನಡೆಸಿ ಕಲೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಇದೀಗ ಜನರಲ್ಲಿರುವ ಜೀರ್ಣಸ್ಥಿತಿಯ ತಾಡೋಲೆ ಗ್ರಂಥಗಳನ್ನು ಸಂಗ್ರಹಿಸಿ ಜೀರ್ಣೋದ್ಧಾರ ಮಾಡಿಸಿ ಅವುಗಳನ್ನು ಹೊಸದರಂತೆ ಮಾಡಿ ಯಜಮಾನರಿಗೆ ಹಿಂತಿರುಗಿಸುವ ಹೊಸ ಯೋಜನೆ ಯನ್ನು ಹಮ್ಮಿಕೊಳ್ಳುವ ಮೂಲಕ ಪ್ರಾಚೀನ ತಾಡೋಲೆ ಗ್ರಂಥಗಳನ್ನು ಕಾಪಿಡುವ ಕೈಂಕರ್ಯ ಪ್ರಾರಂಭಿಸಿದ್ದಾರೆ. ಲಕ್ಷ ದೀಪೋತ್ಸವದ ಸಂದರ್ಭದಲ್ಲಿ ಸರ್ವಧರ್ಮ ಸಮ್ಮೇಳನ ನಡೆಸಿ ಹೊಸ ಪರಂಪರೆಗೆ ಆಯಾಮ ನೀಡಿದ್ದಾರೆ. ಧರ್ಮಸ್ಥಳದಲ್ಲಿ ಗೋಮಟೇಶ್ವರನನ್ನು ಸ್ಥಾಪಿಸಿ ವರ್ತಮಾನದ ಚಾವುಂಡರಾಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಶತಮಾನದಲ್ಲಿ ನಡಾವಳಿಯನ್ನು ನಡೆಸಿದ ಧೀಮಂತರಿವರು.

ಬದಲಾಗುತ್ತಿರುವ ವರ್ತಮಾನದಲ್ಲಿ ಸೂಕ್ತ ಬದಲಾವಣೆಗಳನ್ನು ಗುರುತಿಸಿ ತತ್ಕ್ಷಣ ಕಾರ್ಯ ರೂಪಕ್ಕೆ ತಂದು ತಮ್ಮ ಶಿಕ್ಷಣ , ಔಷದ ಸಂಸ್ಥೆಗಳ ಉನ್ನತ ಗುಣಮಟ್ಟವನ್ನು ಪರಿಷ್ಕರಿಸಿದ್ದಾರೆ. ಉದಾಹರಣೆಗೆ ಇಂಗ್ಲೀಷ್ ಮಾಧ್ಯಮ ಶಾಲೆಯ ಔಚಿತ್ಯ ಕಂಡ ಕೂಡಲೇ ಎಸ್.ಡಿ.ಎಮ್. ಸಂಸ್ಥೆಯಿಂದ ಇಂಗ್ಲೀಷ್ ಮಾಧ್ಯಮದಲ್ಲಿ ಪ್ರಾಥಮಿಕ ಶಾಲೆಯನ್ನೂ ಪ್ರಾರಂಬಿಸಿದ್ದಾರೆ.

ಎಂಟು ಶತಮಾನಗಳ ಭವ್ಯ ಪರಂಪರೆಯಿರುವ ಧರ್ಮಸ್ಥಳದ ಇಪ್ಪತ್ತೊಂದನೆಯ ಧರ್ಮಾಧಿಕಾರಿಗಳಾಗಿರುವ ಹೆಗ್ಗಡೆಯವರು ಶ್ರೀ ಕ್ಷೇತ್ರದ ಧಾರ್ಮಿಕ ಚಟುವಟಿಕೆಗಳ ಮೂಲಕ ವಾರ್ತಮಾನದಲ್ಲಿಯೂ ಧಾರ್ಮಿಕತೆ ಉತ್ತುಂಗದಲ್ಲಿರಲು ಕಾರಣಕರ್ತರಾಗಿ ದ್ದಾರೆ. ಮಾಮೂಲು ಮಠಾಧಿಪತಿಗಳಂತಲ್ಲದೆ, ರಾಜಕಾರಣದ ಕೆಸರು ಅಂಟಿಸಿಕೊಳ್ಳದೆ, ಶುಭ್ರ ಚಾರಿತ್ರ್ಯದ, ಶುಭ್ರವಸನರಾದ ರಾಜರ್ಷಿ ವೀರೇಂದ್ರ ಹೆಗ್ಗಡೆಯವರ ಮೇಲಿಟ್ಟಿರುವ ಪ್ರೀತಿವಿಶ್ವಾಸದ ದ್ಯೋತಕವೇ ನಾಡಿನಾದ್ಯಂತ ನಡೆಯುತ್ತಿರುವ ಷಷ್ಟ್ಯಬ್ಧಿ ಸಮಾರಂಭ ಗಳು. ಓರ್ವ ವ್ಯಕ್ತಿಯಿಂದ ಇದೆಲ್ಲಾ ಸಾಧ್ಯವೇ ಎಂಬ ಜಿಜ್ಞಾಸೆ ಮೂಡಿದರೆ ಅದಕ್ಕೆ ’ಸಾಧ್ಯ’ ಎಂಬುದನ್ನು ಹೆಗ್ಗಡೆಯವರ ದರ್ಶನದಿಂದಲೇ ತಿಳಿದುಕೊಳ್ಳಬಹುದು.

ಧರ್ಮಾಧಿಕಾರಿಗಳು ಬಹಳ ಹಾಸ್ಯಪ್ರಿಯರು. ತಮ್ಮ ಕಾರ್ಯವ್ಯಾಪ್ತಿಯ ಒತ್ತಡದ ನಡುವೆಯೂ ಅವರ ಹಾಸ್ಯಪ್ರಜ್ಞೆ ಸದಾ ಜಾಗೄತವಾಗಿರುತ್ತದೆ. ಕೆಲಸದ ಒತ್ತಡಗಳೇನಿ ದ್ದರೂ ಮನೆಮಂದಿಯೊಂದಿಗೆ ಮನೆಯವರಂತೇ ವ್ಯವಹಾರ. ಪ್ರಾಯಶಃ ಹಾಸ್ಯಪ್ರಜ್ಞೆ ಮತ್ತು ನಿರ್ಗರ್ವ ಸ್ವಭಾವದಿಂದಾಗಿಯೇ ಅನ್ಯೋನ್ಯವಾಗಿ ಸಂಸಾರ ನಡೆಯಿಸಲು ಸಾಧ್ಯವಾಯಿತು ಎಂದು ಹೇಮಾವತಿ ಹೆಗ್ಗಡೆಯವರ ಅಂಬೋಣ.

ಇಂತಿಪ್ಪ ಧರ್ಮಾಧಿಕಾರಿಗಳನ್ನು ಮುಖಾಮುಖಿ ಭೇಟಿಯಾಗುವ ಸಂದರ್ಭ ಬಂದರೆ.......?    ಬಂದೇಬಿಟ್ಟಿತು!

ಉಡುಪಿಯ ರಾಜಾಂಗಣದಲ್ಲಿ 2009ರ ಜನವರಿ.15ಕ್ಕೆ ಶ್ರಿ ಕೄಷ್ಣ ಮಠದ ಪರ್ಯಾಯ ಪುತ್ತಿಗೆ ಶ್ರೀಪಾದಂಗಳವರಿಂದ ಪ್ರಪ್ರಥಮ ಬಾರಿಗೆ ತುಲಾಭರದ ಸನ್ನಿವೇಶ, ತುಲಾಭಾರ ಮಾಡಿಸಿ ಶ್ರೀಪಾದಂಗಳವರಿಗೆ ಜನಮಾನಸದಲ್ಲಿ ಮಾತನಾಡುವ ಮಂಜುನಾಥನಾಗಿ ಮೆರೆಯುವ ಹೆಗ್ಗಡೆಯವರನ್ನು ಸಮ್ಮಾನಿಸಿದ ಆದರಣೀಯ ಭಾವ, ತೂಗಿಸಿಕೊಂಡ ಹೆಗ್ಗಡೆಯವರಿಗೆ ಜವಾಬ್ದಾರಿಯ ತೂಕ ಹೆಚ್ಚಾದ ಭಾವ. ಅಭಿನಂದನೆಗೈದ ಬನ್ನಂಜೆಯ ವರಿಗೆ ಮಾತುಗಳು ಬರಿಯ ಶಬ್ದವಾದಂತಹ ಅನುಭವ. ಇಂತಹದೊಂದು ಅನಿರ್ವಚ ನೀಯ ಸನ್ನಿವೇಶ ಸೄಷ್ಟಿಯಾಗಿತ್ತು. ಇವೆಲ್ಲದರ ಮಧ್ಯೆ ಬಹಳ ಪ್ರಯಾಸದಿಂದ ಒಂದು ಸೋಮವಾರ ದಂದು ಬೆಳಗಿನೀಂದ ಬೈಗಿನವರೆಗೆ ಅವರ ಜೊತೆಗಿದ್ದು ಕಾರ್ಯಕಲಾಪ ಗಳನ್ನು ಹತ್ತಿರದಿಂದ ವೀಕ್ಷಿಸುವ ಅವಕಾಶಕ್ಕೆ ಅನುಮತಿ ದೊರಕಿತು.

ಅಂತೆಯೇ 19ನೇ ತಾರೀಖು ಸೋಮವಾರ ಬೆಳಿಗ್ಗೆ ನಾಲ್ಕು ಗಂಟೆಗೆ ಉಡುಪಿಯಿಂದ ಗಲ್ಫ್ ಕನ್ನಡಿಗದ ಪ್ರತಿನಿಧಿಗಳು ಧರ್ಮಸ್ಥಳಕ್ಕೆ ಹೊರಟೆವು. ಹೆಗ್ಗಡೆಯವರು ಪ್ರಾತಃಕಾಲ ವಾರ್ತಾಪತ್ರಿಕೆಯನ್ನು ಓದುವುದರಿಂದ ಪ್ರಾರಂಭಿಸಿ ಪಾರ್ಶ್ವನಾಥನ ಪೂಜೆ ಮುಗಿಸಿ ಮಂಜುನಾಥನ ಪ್ರಸಾದ ಸ್ವೀಕರಿಸಿ, ಮಾತಿನ ತೀರ್ಮಾನ ಸಾರ್ವಜನಿಕರ ತುಲಾಭಾರ, ಅಹವಾಲುಗಳನ್ನು ಹತ್ತಿರದಿಂದ ಅವಲೋಕಿಸುವ ಒಂದು ಸುಯೋಗ. ನಡುನಡುವೆ ಸಂದರ್ಭ ಸಿಕ್ಕಿದಾಗಲೆಲ್ಲ ಅವರೊಡನೆ ಮಾತನಾಡುವ ಕ್ಷಣಗಳು, ಅಹಾ ನನಗಂತೂ ಗಗನವು ಎಲ್ಲೋ ಭೂಮಿಯು ಎಲ್ಲೋ ಒಂದೂ ಅರಿಯೆ ನಾ ಎನ್ನುವಂತಾಗಿತ್ತು.

ಸಂದರ್ಶನಕ್ಕೆಂದು ಹೋದರೂ ಏನೆಂದು ಸಂದರ್ಶಿಸುವುದು? ಅನೇಕ ಪಕ್ಷಿಗಳಿಗೆ ಜೀವ ಜಂತುಗಳಿಗೆ ಆಶ್ರಯವೀಯುವ ವಿಶಾಲವಾದ ಆಲದ ಮರದಂತಹ ಹೆಗ್ಗಡೆಯವರ ವ್ಯಕ್ತಿತ್ವದ ಎದುರು ಕುಬ್ಜಳಾದ ಅನುಭವ. ಮಾತ್ರುಗಳೋ ಮಡಕೆಯಲ್ಲಿ ಕಲ್ಲು ಹಾಕಿ ಶಬ್ದ ಮಾಡಿಸಿದಂತ ವ್ಯರ್ಥ ಅನುಭವ. ಆದರೂ ಧೈರ್ಯ ಮಾಡಿ ಕೊನೆಗೂ ಅವರಲ್ಲಿ ಪ್ರಶ್ನೆಗಳನ್ನು ಕೇಳಿದೆ. ಉತ್ತರಗಳು ಗೊತ್ತಿರಲಿಲ್ಲವೆಂತಲ್ಲ ಅವರೊಡನೆ ಏನಾದರೂ ಮಾತನಾಡಬೇಕು ಅಂತ. ರಾಜಕೀಯದ ಬಗ್ಗೆ ಬೇಡ, ಸಾಧನೆಯ ಬಗ್ಗೆ ಬೇರೆ ಯವರು ಬೇಕಾದಷ್ಟು ಮಾತಾಡಿಬಿಟ್ಟಿದ್ದರಿಂದ ನನಗೆ ಅಲ್ಲಿ ಕೇಳಲು ಏನೂ ಉಳಿದಿರಲ್ಲಿಲ್ಲ.

ಮಂಜಯ್ಯ ಹೆಗ್ಡೆಯವರು ಪ್ರಾರಂಭಿಸಿದ ಸಂಸ್ಥೆಗಳಿಗೆ ಹೊಸ ಅಯಾಮ ನೀಡಿ ಸಾಂಸ್ಥಿಕ ಚೌಕಟ್ಟನ್ನು ನೀಡಿದವರು ವೀರೇಂದ್ರ ಹೆಗ್ಗಡೆಯವರು. ಕಳೆದ ನಲ್ವತ್ತು ವರ್ಷಗಳ ಸಾಧನೆಯನ್ನು ಅವಲೋಕಿಸುವಾಗ ಹೆಮ್ಮೆಯೆನಿಸುತ್ತದೆ. ಧರ್ಮಸ್ಥಳದಲ್ಲಿ ಪ್ರಾರಂಭ ಗೊಂಡ ಸಂಸ್ಥೆಗಳು ಇಂದು ರಾಜ್ಯದ ರಾಜಧಾನಿಯಲ್ಲೂ ಮುಂಚೂಣಿಯಲ್ಲಿ ಗುರುತಿಸಲ್ಪ ಡುವುದು ವಿಶೇಷವೇ ಸೈ. ಮುಂದಿನ ಗುರಿ ಏನು ಅಥವಾ ಭವಿಷ್ಯದ ಬಗ್ಗೆ ತಲೆಕೆಡಿಸಿ ಕೊಳ್ಳದೆ ಇಂದಿನ ಗುರಿಯತ್ತ ನಿಸ್ಪೃಹರಾಗಿ ಸಾಗುವುದೇ ಹೆಗ್ಗಡೆಯವರ ಯಶಸ್ಸಿಗೆ ಕಾರಣ.

ಹೀಗೆ ಹೆಗ್ಗಡೆಯವರ ಸಂದರ್ಶನ ಮಾಡಿ ಷಷ್ಟ್ಯಬ್ಧಿ ಪೂರ್ತಿಯ ಸಂಕ್ರಮಣದಲ್ಲಿ ಗಲ್ಫ್ ಕನ್ನಡಿಗರ ಪರವಾಗಿ ಗೌರವಾರ್ಪಣೆ ಸಲ್ಲಿ ಸೋಣ ಎಂದುಕೊಂಡಿದ್ದೆ ಆದರೆ ಅವರ ದರ್ಶನ ಮಾತ್ರದಿಂದ ನಮ್ಮನ್ನು ನಾವೆ ಗೌರವಿಸಿಕೊಂಡ ಭಾವನೆಯೊಂದಿಗೆ ಹಿಂದುರುಗಿದೆವು

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಚಿತ್ರ: ಜೆ.ಪಿ.ಕಿಣಿ ಮತ್ತು ಗಲ್ಫ ಕನ್ನಡಿಗ ಬಳಗ
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2009-02-13 00:00:00

Tell a Friend

ಪ್ರತಿಸ್ಪಂದನ
hemacharya, Mangalore
2010-04-06
One of the best article on this legendary personality. I wish to reproduce this interview in our 'Daijiworld Weekly' english journal, the only weekly from Managalore. please confirm your approval.
jaya, siganduru
2010-02-17
thanks a good webpage
ಗಣೇಶ್ ರೈ, ಕೊಡಗು / ಶಾರ್ಜಾ
2009-08-13
ವಿಶ್ವ ತುಳು ಸಮ್ಮೇಳನದ ಪೂರ್ವಭಾವಿ ತಯಾರಿಯ ಸಭೆಯನ್ನು ನಡೆಸಲು ಕೆಲವು ದಿನಗಳ ಹಿಂದೆಯಷ್ಟೆ ಆಗಮಿಸಿದ್ದ ಪೂಜ್ಯ ಡಾ. ವೀರೇಂದ್ರ ಹೆಗ್ಗಡೆಯವರನ್ನು ದುಬಾಯಿಯಲ್ಲಿ ಭೇಟಿ ಮಾಡಿದ ನಮಗೆಲ್ಲರಿಗೂ ಮತ್ತೊಮ್ಮೆ ಇದೀಗ ದೂರ ದೇಶದಲ್ಲಿ ಇದ್ದುಕೊಂಡೆ ಗಲ್ಫ್ ಕನ್ನಡಿಗ ಮಾದ್ಯಮದ ಮೂಲಕ ಶ್ರೀ ಕ್ಷೇತ ಧರ್ಮಸ್ಥಳ ದರ್ಶನ ಭಾಗ್ಯ ಲಭ್ಯವಾಗಿದೆ. ಅಮೂಲ್ಯ ಚಿತ್ರಸಹಿತ ಸಂದರ್ಶನ ವರದಿಗೆ ಗೋಪಿಕಾ ಮಯ್ಯ, ಜಯಪ್ರಕಾಶ್ ಕಿಣಿ ಮತ್ತು ಗಲ್ಫ್ ಕನ್ನಡಿಗ ಬಳಗಕ್ಕೆ ಧನ್ಯವಾದಗಳು.
B.G.Lakshmikanth Beskoor, Udupi
2009-02-14
It's one of the remarkable interview article/photo album of Gulf kannadiga.com. Thanks to Mr.B.G.Mohandas , Smt.Gopika mayya
Uday Kumar, Kateel
2009-02-14
It is rather a Great opportunity for the Gulf Kannadiga team to meet up with this Phenominal personality.. It is true that Great things will not fit into words but with some fine pictures !! Many thanks for the pictorial interview .. that tells all ..
ಪ.ರಾಮಚಂದ್ರ, ರಾಸ್ ಲಫ್ಫಾನ್,ಕತಾರ್
2009-02-14
ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ದ ಯಾತ್ರ ಸ್ಥಳ ಧರ್ಮಸ್ಥಳ. ಅಲ್ಲಿನ ಧರ್ಮಾಧಿಕಾರಿ ರಾಜರ್ಷಿ ಡಾ.ವೀರೇಂದ್ರ ಹೆಗ್ಗಡೆಯವರ ಷಷ್ಟ್ಯಬ್ಧಿ ಪೂರ್ತಿಯ ಸಂಕ್ರಮಣದಲ್ಲಿ ಗಲ್ಫ್ ಕನ್ನಡಿಗರ ಪರವಾಗಿ ಗೌರವಾರ್ಪಣೆ ಸಲ್ಲಿಸಿ ವಿದೇಶದ ನಮಗೆಲ್ಲ ಧರ್ಮಸ್ಥಳದ ದರ್ಶನ ಬಾಗ್ಯವನ್ನು ಒದಗಿಸಿದ ಕೊಲ್ಲಿ ಪ್ರದೇಶದ ಕರ್ನಾಟಕದ ಪ್ರತಿಬಿಂಬ - \"ಗಲ್ಫ್ ಕನ್ನಡಿಗ\" ಬಳಗಕ್ಕೆ ಧನ್ಯವಾದಗಳು.
Kiran Manjanabailu, Udupi
2009-02-14
Very good article.
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ವಿಶಿಷ್ಟ ಬರಹ]

»ಪಳೆಯುಳಿಕೆಗಳಾಗುತ್ತಿರುವ ಗ್ರಾಮೀಣ ಪರಿಕರಗಳು: ಸಾಂಪ್ರದಾಯಿಕ ಪರಿಕರಗಳು ಆಧುನಿಕತೆಯ ಸೋಗಿನಲ್ಲಿ ಕಣ್ಮರೆ
»ಕೋಮುವಾದದತ್ತ ಜಾರುತ್ತಿದೆಯೇ ಭಾರತ?...
»ವಿದೇಶದಲ್ಲಿದ್ದವನ ಭಾರತದ ಮೆಲುಕುಗಳು..!
»ಮಾತು ಬೇರೆ ಬೇಕೆ ಗೆಳೆಯ ...
»ಕೋಡಗನ ಕೋಳಿ ನುಂಗಿತ್ತಾ....
»ರಾಜಕೀಯ ನನಗೆ ಆಶ್ರಯ ತಾಣ ಅಲ್ಲ!
» ಜರ್ಮನಿಯಲ್ಲಿ ದೇವುಪೂಂಜ, ಜುಮಾದಿ : ಕಟ್ಟ್ ನಿಘಂಟುಗಳ ಕೋಲ ನೇಮಗಳಲ್ಲಿ ಪದಭೂತಗಳ ನಲಿಕೆ
»ಮನೆಯ ಪರಿಸರ ಚೆನ್ನಾಗಿರ್ಬೇಕಂದ್ರೆ ಕುಡಿತ ಬಿಡಬೇಕು:ಸಾಲುಮರದ ತಿಮ್ಮಕ್ಕ
» ಸುಗ್ಗಿಯ ಕಾಲದ ಹಬ್ಬ: ಉತ್ತರಾಯಣದ ಪುಣ್ಯಕಾಲ ಮಕರ ಸಂಕ್ರಾಂತಿ
»ಪ್ರಕೃತಿ-ಚಾರಣ ಪ್ರಿಯರ ಸ್ವರ್ಗ ಕುಮಾರಪರ್ವತ...
»ಫ್ರೀಲಾನ್ಸ್ ಪತ್ರಕರ್ತನಾಗುವುದು ಹೇಗೆ?...
»ಹೊಸವರ್ಷದಲ್ಲಿ ನಾವೂ ಹೊಸಬರಾಗೋಣ...
»ಕನ್ನಡಪ್ರೇಮಿ ಕರ್ನಾಟಕ ಕ್ರೈಸ್ತರಿಗೆ ಜಯಹೆ
»ಸುತ್ತೂರಿನಲ್ಲೊಂದು ಕೃಷಿ ಬ್ರಹ್ಮಾಂಡ...
»ಆತನೂ ಅನಿವಾರ್ಯ. . .
»ಜವರಾಯನ ಲೋಕಕ್ಕೆ `ಪತ್ತೇದಾರ'ನ ಪಯಣ ( ಪರಿಷ್ಕ್ತತ ವರದಿ )
»ಸುರೇಶ್ ಗೌಡ ಮಾತ್ರ ಯಾಕೆ ಉಡುಗೊರೆಗೆ ಯೋಗ್ಯ!
»ಅಟಲ್‌ಜೀ ಒಡನಾಟದ ಝಲಕು-ಮೆಲುಕು
»ಶೂನ್ಯ ಬಂಡವಾಳ ಪ್ರತಿಪಾದಕ ಬಡಗರ ಸಿದ್ದಾಶ್ರಮದ ಶ್ರೀ. ಮೋಹನಕುಮಾರ್ ಸ್ವಾಮೀಜಿ
»ಮದ್ಯಪಾನದ ಮೋಜಲ್ಲಿ ಆರೋಗ್ಯ ಮರೆಯದಿರಿ
»ಮಡಿಕೇರಿಯಲ್ಲಿ ಮಂಜಿನ ಚಿತ್ತಾರ...
»ಮಲೇರಿಯಾ ತಡೆಯೋದಕ್ಕೆ ಕೆರೆ ಮುಚ್ಚಿದ್ರು, ಗೊತ್ತಾ?
»ಕರ್ಮವೀರ ಪುರಸ್ಕಾರ ಪ್ರಶಸ್ತಿ ವಿಜೇತ ಕೊಡಕ್ಕಲ್ ಶಿವಪ್ರಸಾದ್
» ಕoದ....
»ಸರ್ಕಾರವೇ ಭೂ ದಲ್ಲಾಳಿಯಾದರೆ ಜನರ ಗತಿ ಏನು?
»ಸುಳ್ಯದ ಸಮ್ಮೇಳನದಲ್ಲಿ ಕನ್ನಡ ನಾಡಗೀತೆ ಹಾಡಿದ ಸ್ವೀಡನ್ನಿನ ಸಿಸಿಲಿಯಾ
»ಗೋಬಿ ಮಂಚೂರಿ : ಎಚ್ಚರ !
»ಶಾಲೆ ಮುಚ್ಚುವ ನಿರ್ಧಾರದಲ್ಲಿ ಗೊಂದಲಗಳಿವೆ : ಮುಖ್ಯಮ೦ತ್ರಿ ಚ೦ದ್ರು ಅವರೊ೦ದಿಗೆ ಸ೦ದರ್ಶನ
»ಮೈಕ್ರೋ ವೇವ್ ಕುಕ್ಕಿಂಗ್
»ಹೆಣ್ಣೇ ನಿನಗೆ ನಮೋ ನಮಃ...
»ಮಡೆಸ್ನಾನ: ತಿಳಿಹೇಳುವುದನ್ನು ಬಿಟ್ಟು ನಂಬಿಕೆ ನೆಪವೇಕೆ? ...
»ಸಾಮಾಜಿಕ ತಾಣಗಳಲ್ಲೂ ಬೇಕಲ್ಲವೇ ಸ್ವಾಸ್ಥ್ಯದ ಪರಿಕಲ್ಪನೆ?...
»ಮೂಲಭೂತ ಸೌಕರ್ಯವಿಲ್ಲದೆ ನರಳುತ್ತಿರುವ ರೆಡ್‌ಕ್ರಾಸ್ ಶಾಲಾ ವಿದ್ಯಾರ್ಥಿಗಳು: 17 ತಿಂಗಳಿನಿಂದ ಸಂಬಳವಿಲ್ಲದೆ ಕಂಗಾಲಾದ ಸಿಬ್ಬಂದಿ
»ಹಾಲಿ - ಮಾಜಿ ಮುಖ್ಯ ಮಂತ್ರಿಗಳಿಗೊಂದು ಬಹಿರಂಗ ಪತ್ರ...
»ನೂರೆಂಟು ನೋಟ: ಪ್ರೇಮ ಚಲನೆಯ ಸಂಕೇತ, ಮದುವೆ ನಿಶ್ಚಲದ ಪ್ರತೀಕ!
»ಎಲ್ಲಕ್ಕೂ ಒಂದು ಕೊನೆಯಿದೆ, ಮಡೆಸ್ನಾನಕ್ಕೂ ಇರಲಿ
»ಪುಣ್ಯಕೋಟಿಯ ಹಾಡು....
» ಪೌರಾಣಿಕ ಹಿನ್ನಲೆಯಲ್ಲೂ ಪ್ರಸಿದ್ದ: ಅದ್ಬುತ ಪ್ರವಾಸಿ ತಾಣ; ಶಿರಸಿಯ ಯಾಣ
»ಒಂದು ಕ್ಷಣದ ಆತುರದಿಂದ ತನ್ನ ಜೀವವನ್ನೇ ತೆತ್ತ ಆ ಚಿಕ್ಕ ಹುಡುಗ.
»ಭಾಷಾ ದುರಾಭಿಮಾನಿಗಳನ್ನು ಕನ್ನಡದ ನೆಲದಿಂದ ದೂರವಿಡಿ..!
»ಪರಮಾತ್ಮ ಸ್ವರೂಪ ...
»ಕಣ್ಣಾಲಿಗಳು ತೇವವಾಗುತ್ತದೆ...
»ಕನಕದಾಸರ ಜನ್ಮದಿನದ ಜಿಜ್ಞಾಸೆ : ಆಧ್ಯಾತ್ಮ ಕ್ಷೇತ್ರ: ಕನಕದಾಸರ ಕೊಡುಗೆ ಅಪಾರ
»ಕುಂಬಾರರೀಗ ಕುಲಕಸುಬು ನೆಚ್ಚಿಕೊಳ್ಳುವಂತಿಲ್ಲ...
»ಕಳಪೆ ರಸ್ತೆ ಕಾಮಗಾರಿ ಮತ್ತು ಮಾಹಿತಿ ಹಕ್ಕು ಕಾನೂನು............
»ನ್ಯಾ ಸುಧೀಂದ್ರರಾವ್ : ಬಂಗಾರಪೇಟೆಯ ಸ್ಟಾಂಪ್ ವೆಂಡರ್ ಮಗ ಇಂದಿಗೂ ಮನೆ ಸಾಲ ಕಟ್ಟುತ್ತಿರುವ ನ್ಯಾಯಾಧೀಶ
»ಸೈಟು ಪ್ರಶಿಸುವವರ ಕಣ್ಣಿಗೆ ಸಂಘದ ಸಾಮಾಜಿಕ ಬದ್ಧತೆಯೇಕೆ ಕಾಣುವುದಿಲ್ಲ?
»ಕನ್ನಡಿಗರ ಕಣ್ಮಣಿಯಾಗುತ್ತಿರುವ ನಮ್ಮ ಸುವರ್ಣ ವಾರ್ತಾ ವಾಹಿನಿ 24X7
»ಆ ಪಟ್ಟಿಯಲ್ಲಿ ಈ ಪದ್ಯಾಣರ ಹೆಸರಿರಬೇಕಿತ್ತು...!
»ಇದು ನಮ್ಮ ಗ್ರ್ಯಾಂಡ್ ಪ್ರಿಕ್ಸ್: ರಥ V/S ಫಾರ್ಮುಲಾ 1

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri