ಉಡುಪಿ: ಸ್ಯಾಕ್ಸೋಫೋನ್ ವಾದಕ ಶ್ರೀ ಓಬು ಸೇರಿಗಾರರಿಗೆ ಸನ್ಮಾನ : ಗಾನ ಕಲೆಗೆ ಪ್ರೋತ್ಸಾಹ ಅಗತ್ಯ: ಪೇಜಾವರ ಶ್ರೀ |
ಪ್ರಕಟಿಸಿದ ದಿನಾಂಕ : 2010-04-25
ಉಡುಪಿ, ಎ. ೨೪: ಪ್ರಾಚೀನ ಗಾನಕಲೆಯಲ್ಲಿ ಒಂದಾದ ನಾದಸ್ವರದ ವೈಶಿಷ್ಟ್ಯ ಕಡಿಮೆಯಾಗು ತ್ತಿದೆ. ಈ ನಿಟ್ಟಿನಲ್ಲಿ ನಾದಕಲೆ ಮತ್ತೆ ಮೆರೆಯಲು ಪ್ರೋತ್ಸಾಹ ಮತ್ತು ಉತ್ತೇಜನ ಅತ್ಯಗತ್ಯ ಎಂದು ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹೇಳಿದರು.
ಅವರು ಎ. ೨೪ರಂದು ಉಡುಪಿ ರಥಬೀದಿಯಲ್ಲಿ ಆಯೋಜಿಸಲಾದ ಸ್ಯಾಕ್ಸೋಫೋನ್ ಕಲಾವಿದ ಓಬು ಸೇರಿಗಾರ್ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪರ್ಯಾಯ ಶ್ರೀ ಶೀರೂರು ಮಠದ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರು ಕಾರ್ಯಕ್ರಮ ಉದ್ಘಾಟಿ ಸಿದರು. ಶ್ರೀ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳಾಗಿ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಧರ್ಮದರ್ಶಿ ಕೆ. ಅನಂತ ರಾಮ ಉಪಾಧ್ಯ, ಉದ್ಯಮಿ ಪ್ರಮೋದ್ ಮಧ್ವರಾಜ್, ಉಡುಪಿ ದೇವಾಡಿಗ ಸೇವಾ ಸಂಘದ ಅಧ್ಯಕ್ಷ ಸುಂದರ ಮೊಯ್ಲಿ, ಕಲಾವಿಮರ್ಶಕ ಹಾಗೂ ಉಡುಪಿ ರಾಗಧನದ ಅಧ್ಯಕ್ಷ ಎ. ಈಶ್ವರ ಯ್ಯ, ಕೃಷ್ಣಮೂರ್ತಿ ಉಪಸ್ಥಿತರಿದ್ದರು. ಶಾಸಕ ಕೆ. ರಘುಪತಿ ಭಟ್ ಸ್ವಾಗತಿಸಿ, ವಾಸುದೇವ ಭಟ್ ಕಾರ್ಯಕ್ರಮ ನಿರೂಪಿಸಿದರು.

ವರದಿಯ ವಿವರಗಳು |
 |
ಕೃಪೆ : ಚಿತ್ರ-ದುರ್ಗಪ್ರಸಾದ್ ಕೆ. ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-04-25 00:00:00
|
|
|