ಆದಿತ್ಯವಾರ, 05-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಜನತಾ ನ್ಯಾಯಾಲಯದ ಮೂಲಕ 5154 ಪ್ರಕರಣ ಇತ್ಯರ್ಥ : ಲೋಕ್ ಅದಾಲತ್ ಸಮಾರೋಪದಲ್ಲಿ ನರೇಂದ್ರ ಕುಮಾರ್ ಗುಣಕಿ
Latest news item ಸೃಜನ ಶೀಲತೆ ಇಲ್ಲದಿದ್ದಾಗ ಶಿಕ್ಷಣದ ಬೆಳವಣಿಗೆಗೆ ಕೊರತೆ | ಅಶೋಕ್ ಕುಮಾರ್ ಶೆಟ್ಟಿ, ಎಂ.ಎಸ್.ನಾಗರಾಜ್ ರಾವ್ ಹಾಗೂ ಡಾ.ಚಂದ್ರಶೇಖರ್ ದಾಂಬ್ಲೆಯವರಿಗೆ ಸನ್ಮಾನ
Latest news item ದುಬಾಯಿಯಲ್ಲಿ ’ಗಮ್ಮತ್ ಕಲಾವಿದೇರ್’ ಪ್ರಥಮ ಪ್ರದರ್ಶನ: ನಟನಾ ಚಾತುರ್ಯದಲ್ಲಿ ಮಿಂಚಿದ ’ಈ ಪೊರ್ಲು ದಾಯೇ’ ತುಳು ನಾಟಕ
Latest news item ಸುಶಿಕ್ಷಿತರ ಸಂಖ್ಯೆ ಹೆಚ್ಚಾದಂತೆ ಕೃಷಿಯತ್ತ ಒಲವು ಕಡಿಮೆ : ಉಡುಪಿ ರೈತ ಸಮಾವೇಶದಲ್ಲಿ ಶಾಸಕ ರಘುಪತಿ ಭಟ್
Latest news item ಉಡುಪಿ ಲಯನ್ಸ್ ಗೆ ಜಿಲ್ಲಾ ಲಯನ್ಸ್ ಗವರ್ನರ್ ಇಂದ್ರಾಳಿ ಜಯಕರ್ ಶೆಟ್ಟಿ ಅಧಿಕೃತ ಭೇಟಿ
Latest news item ಸುಬ್ರಮಣಿಯನ್ ಸ್ವಾಮಿ ಅರ್ಜಿ ವಜಾ: ಚಿದಂಬರಂ ನಿರಾಳ
Latest news item ಇಲ್ರಿ.. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿಲ್ಲ: ಯಡ್ಡಿ
Latest news item ಚೆನ್ನೈ ತೆಕ್ಕೆಗೆ ಜಡೇಜಾ; 9.70 ಕೋಟಿಗೆ ಖರೀದಿ; ವಿನಯ ಕುಮಾರ್ ಗೆ 4.86ಕೋಟಿ ಕೊಟ್ಟ ರೋಯಲ್ ಚ್ಯಾಲೇಂಜರ್ಸ್ | ಯಾವ ಯಾವ ಫ್ರಾಂಚೈಸಿ ತೆಕ್ಕೆಗೆ?
Latest news item ಗೂಳಿ ಹೊರಕ್ಕೆ: ಕಳಂಕಿತ ಸಭಾಧ್ಯಕ್ಷರೇ ಎಂದಿದ್ದಕ್ಕೆ ಸದನದಿಂದ ಒಂದು ದಿನ ಅಮಾನತು (Updated)
Latest news item ಜೈನ ಸಾಹಿತಿಗಳಿಂದ ಕನ್ನಡ ಸಾಹಿತ್ಯದ ಬೆಳವಣಿಗೆ: ಡಾ.ಶಾಂತಿನಾಥ ದಿಬ್ಬದ
Latest news item ವೈದ್ಯರಲ್ಲಿ ಮಾನವೀಯತೆ ಮುಖ್ಯ: ನ್ಯಾ. ಸಂತೋಷ್ ಹೆಗ್ಡೆ
Latest news item ಪಡುಬಿದ್ರೆಯಲ್ಲಿ ಎಸಿಸಿ ಸಿಮೆಂಟ್ ಕಂಪೆನಿ ಸ್ಥಾಪನೆ: ರಸ್ತೆ ಕಾಮಗಾರಿಗೆ ಬೂದಿ ಬಳಸಬಹದು : ಡಿಸಿ | ಫೆ. 4ರಂದು ಪ್ರತಿಭಟನೆ
Latest news item ಉಡುಪಿ ಶೇಮ್, ಶೇಮ್ !: ಸೈಂಟ್ ಮೇರೀಸ್ ದ್ವೀಪದಲ್ಲಿ ಜಿಲ್ಲಾಡಳಿತ ಕೃಪಕಟಾಕ್ಷದಲ್ಲಿ ರೇವ್ ಪಾರ್ಟಿ: ವಿದೇಶಿ ಸಂಸ್ಕೃತಿ ಆನಾವರಣ, ಮದ್ಯ, ಡ್ರಗ್ಸ್ ಗಳದ್ದೇ ಕಾರುಬಾರು
Latest news item ಅಪಘಾತಕ್ಕೆ ತುತ್ತಾಗಿ ಕಾಮಿಡಿ ನಟ ಕರಿ ಬಸವಯ್ಯ ಅಕಾಲಿಕ ಮರಣ { VIEW VIDEO of HIS EMOTIONAL LIFE STORY }.
Latest news item ಬಯಲುಸೀಮೆ ಆರು ಜಿಲ್ಲೆಗಳಿಗೆ ಕುಡಿಯುವ ನೀರು; ತಿಂಗಳಲ್ಲಿ ಎತ್ತಿನಹೊಳೆ ನಿರ್ಧಾರ. ನೇತ್ರಾವತಿ ತಿರುವು ಇಲ್ಲ..ಹೆಚ್ಚಿನ ನೀರನ್ನು ಬಳಸಿಕೊಳ್ಳುವ ಯೋಜನೆ
Latest news item ಕುಸಿಯುವ ಭೀತಿಯಲ್ಲಿ ಕುದಿ ಗ್ರಾಮದ ಕೋಂಟು ಸೇತುವೆ : ಆತಂಕದಲ್ಲಿ ಗ್ರಾಮಸ್ಥರು : ಸೂಕ್ತ ಪರಿಹಾರಕ್ಕೆ ಒತ್ತಾಯ
Latest news item ಡಿವಿಜಿಯವರ ಕಾವ್ಯಗಳು ಜನಸ್ವಾರ್ಥ : ಡಾ. ಹೆಚ್. ಶಾಂತರಾಮ್
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ಸಂಭ್ರಮದ ಮಧ್ಯ ಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ : ಮುಗಿಲು ಮುಟ್ಟಿದ ಬೆಳ್ಳಿಹಬ್ಬದ ಸಡಗರದ ಜಯಭೇರಿಯ ಧ್ವನಿ (Updated)

{ ವರದಿ: ಗೋಪಿಕ ಮಯ್ಯ. ಚಿತ್ರಗಳು: ಅಶೋಕ್ ಬೆಲ್ಮಣ್ }

* .ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಹಕರಿಸಿದ ಕನ್ನಡ ಕೂಟ ದುಬೈ.

* ಕಾರ್ಯಕ್ರಮದಲ್ಲಿ ಶ್ರೀ ಗೋಪಿನಾಥ್ ರಾವ್ ರವರ ಸಹಯೋಗದೊಂದಿಗೆ ಕನ್ನಡ ಪುಸ್ತಕ ಪ್ರದರ್ಶನ - 'ಗ್ರಂಥ ಸಂಭ್ರಮ' ಹಾಗೂ ಶ್ರೀಮತಿ ಸರಳಾರವರ ಸಹಯೋಗದಲ್ಲಿ ರಂಗೋಲಿ ಸ್ಪರ್ಧೆಗಳನ್ನು ಪ್ರಾರಂಭದಲ್ಲಿ ಆಯೋಜಿಸಲಾಗಿತ್ತು.

* ಚೆನ್ನವೀರ ಕಣವಿಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ದುಬಾಯಿ ಕನ್ನಡಿಗರ ಕ್ರಿಯಾಶಕ್ತಿಯನ್ನೂ ಇಚ್ಛಾ ಶಕ್ತಿ ಜ್ಞಾನ ಶಕ್ತಿಯನ್ನೂ ಶ್ಲಾಘಿಸಿದರು. ತಾವು ಅಮೇರಿಕಾದವರ ಕನ್ನಡ ಪ್ರೇಮವನ್ನು ನೋಡಿ ಅದ್ಭುತ ಅಂದುಕೊಂಡಿದ್ದೆ ಅಲ್ಲಿಯ ಅಕ್ಕ ಸಾಹಿತ್ಯ ಸಮ್ಮೇಳನವನ್ನು ವೀಕ್ಷಿಸಿದ ಮೇಲೆ ಇನ್ನು ಈ ತರ ಬೇರೆ ಯಾರೂ ಸಂಭ್ರಮದಿಂದ ಅಚರಿಸಲಾರರು ಅಂದುಕೊಂಡಿದ್ದು ಮಾತ್ರವಲ್ಲ ಇನ್ನೆಲ್ಲಿಗೂ ಹೋಗುವುದು ಬಾಕಿ ಉಳಿದಿಲ್ಲ ಅಂತ ಪಾಸ್-ಪೋರ್ಟನ್ನು ಬೇರೆ ಎಲ್ಲಿ ಎತ್ತಿಟ್ಟಿದ್ದೆ ಅಂತ ತಿಳಿದು ಕೊಳ್ಳುವ ಗೋಜಿಗೇ ಹೋಗಿರಲಿಲ್ಲ. ಆದರೆ ಇಲ್ಲಿಯ ವೈಭವ, ಅಚ್ಚುಕಟ್ಟು ನೋಡಿದ ಮೇಲೆ ಬಂದದ್ದು ಸಾರ್ಥಕವಾಯಿತು ಅನ್ನಿಸುತ್ತಿದೆ ಎಂದರು.

* ಸುಂದರವಾದ ವೇದಿಕೆಯನ್ನು ಸಜ್ಜು ಗೊಳಿಸಲಾಗಿತ್ತು ಭುವನೇಶ್ವರಿಯ ಆರಾಧನೆಗೆ. ಆದಿಕವಿ ಪಂಪ ಮಹಾಮಂಟಪ ಎಂದು ಆ ಮಹ ಕವಿಯನ್ನು ಗೌರವದೊಂದಿಗೆ ಸ್ಮರಿಸಲಾಯಿತು. ಎರಡು ಮುಖ್ಯದ್ವಾರಗಳಿಗೆ ರನ್ನ ಮತ್ತು ಪೊನ್ನರ ಹೆಸರನ್ನಿಡ ಲಾಗಿತ್ತು. 

* ಬೆಳಿಗ್ಗೆ ವಿಶ್ವೇಶ್ವರ ಹೆಗ್ಗಡೆ ಕಾಗೇರಿಯವರಿಗೆ ಆದಿಕವಿ ಪಂಪ ಮಹಾಮಂಟಪವು ಬನವಾಸಿ ದೇಶವನ್ನು ನೆನಪಿಸಿತು. ಅವರು ಅಲ್ಲಿಯ ಉಸ್ತುವಾರಿ ಸಚಿವರಾಗಿದ್ದು ಪಂಪನ ಸ್ಮರಣೆಯು ಅವರಿಗೆ ಬನವಾಸಿಯಲ್ಲೇ ಇದ್ದಂತ ಅನುಭವ ನೀಡಿತು. ಮಾತೃಭಾಷೆಗೆ ಇರುವ ಅಗಾಧ ಶಕ್ತಿಯನ್ನು ವಿಶ್ಲೇಷಿಸುತ್ತ ಪ್ರೀತಿ ಪ್ರೇಮ ಬೇರೆ ಭಾಷೆಗಳಲ್ಲಿ ಬರಲು ಸಾಧ್ಯವಿಲ್ಲ.. ಭಾಷೆ ಎಂದರೆ ಭಾವನೆ ತುಂಬುವ ಒಂದು ಶಕ್ತಿ..  ಕನ್ನಡಕ್ಕೆ ಇರುವ ಭಾವನೆ ತುಂಬುವ ಶಕ್ತಿ ಬೇರೆ ಭಾಷೆಗೆ ಬರಲು ಸಾಧ್ಯವಿಲ್ಲವೆಂದರು.

 ಶಶಿಧರ್ ಕೋಟೆಯವರು ಅದೇ ಸಾಯಂಕಾಲ ನಿರ್ಗಮಿಸುವವರಿದ್ದರಿಂದ ಸಮಯಾಭಾವದಿಂದ ಅವರ ಕೋಟೆ ಶೈಲಿಯ ಒಂದು ಸಣ್ಣ ಟ್ರೈಲರಿನಲ್ಲಿಯೆ ತಮ್ಮ ಕಛೇರಿಯನ್ನು ಮುಗಿಸಬೇಕಾಯಿತು. ಆದರೂ ಕೇವಲ ಅರ್ಧ ಗಂಟೆಯಲ್ಲಿಯೇ ಸಂಗೀತ ಪ್ರೇಮಿಗಳ ಹೃದಯವನ್ನು ಭಾಗ್ಯದ ಲಕ್ಷ್ಮಿ ಬಾರಮ್ಮ ಎನ್ನುತ್ತಾ ಕದ್ದೇಬಿಟ್ಟರು

* ಜಯಂತ್ ಕಾಯ್ಕಿಣಿಯವರು ತಮ್ಮ ಸಾಹಿತ್ಯ ಗೋಷ್ಠಿಯ ಅಧ್ಯಕ್ಷೀಯ ಭಾಶಣದಲ್ಲಿ ಕನ್ನಡತನ ಎಂದರೇನು ಎಂದು ವಿಶ್ಲೇಷಿಸಿ ದರು.. ಅದೇನು ಅಮ್ಮ ಮಾಡುವ ಸಾರೇ, ಊರಿನ ಜಾತ್ರೆಯೇ, ಕನ್ನಡ ಹಾಡುಗಳೇ? ಕನ್ನಡ ಊರಿಗಿಂತ ಜಾಸ್ತಿ ಇಲ್ಲಿ ಜಾಸ್ತಿ ಇದೆ ಇಲ್ಲಿ ಎಲ್ಲರೂ ಕನ್ನಡದಲ್ಲೇ ಮಾತನಾಡುತಿದ್ದಾರೆ ಎಂದು ಮೆಚ್ಚಿಕೊಂಡರು.

* ಜರಗನಹಳ್ಳಿ ಶಿವ ಶಂಕರರವರು ಕವಿಗೋಷ್ಠಿಯ ಅಧ್ಯಕ್ಷರಾಗಿ ಜಾನಪದ ಕನ್ನಡ ಸಾಹಿತ್ಯದಲ್ಲಿ ಅಡಗಿರುವ ನಿಗೂಢ ಅರ್ಥ ಗಳನ್ನು ಬಿಡಿಸಿ ಹೇಳಿದರು

* ವಿಶ್ವೇಶ್ವರ ಭಟ್ ಮಾಧ್ಯಮ ಗೋಷ್ಠಿಯ ಅಧ್ಯಕ್ಷರಾಗಿ ಪ್ರಸ್ತುತ ಕನ್ನಡ ಪತ್ರಿಕೋದ್ಯಮ ಎದುರಿಸುತ್ತಿರುವ ಸ್ಪರ್ಧೆಗಳು ಮತ್ತು ಭಾಷಾ ಸಮಸ್ಯೆಗಳನ್ನು ವಿಮರ್ಶಿಸಿದರು..

* ಹಿರಿಯ ಚೇತನ ಚೆನ್ನವೀರ ಕಣವಿಯವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆರಿಸಿ ಸಲ್ಲಿಸಿದ ಗೌರವವನ್ನು ಶ್ಲಾಘಿಸಿದರು. ಅಭಿನಂದನೆಗಳನ್ನೂ ಸಲ್ಲಿಸಿದರು.

ದುಬೈ: ಇಲ್ಲಿನ ಜೆಮ್ ಸ್ಕೂಲ್ ನಲ್ಲಿ ಸಜ್ಜಿಸಲಾದ ಆದಿ ಕವಿ ಪಂಪ ಸಭಾಂಗಣದಲ್ಲಿ ಧ್ವನಿ ಪ್ರತಿಷ್ಠಾನದ ಬೆಳ್ಳಿಹಬ್ಬದ ಸಲುವಾಗಿ ನಡೆದ ಕನ್ನಡ ಭುವನೇಶ್ವರಿಯ ಅರಾಧನೆಯು ಅತ್ಯಂತ ವೈಭವಯುತವಾಗಿ ಸಂಪನ್ನಗೊಂಡಿತು. ಹಿರಿಯ ಚೇತನ ಚೆನ್ನವೀರ ಕಣವಿಯವರ ಅಧ್ಯಕ್ಷತೆಯಲ್ಲಿ ಮಧ್ಯಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನವು ದಿನಪೂರ್ತಿ ನಡೆದು ಧ್ವನಿಯ ಬೆಳ್ಳಿಹಬ್ಬದ ಸಂಭ್ರಮಕ್ಕೆ ಶೋಭೆಯನ್ನು ನೀಡಿತು. ಧ್ವನಿ ಪ್ರತಿಷ್ಠಾನದ ಕನಸು ನನಸಾದ ಸಾರ್ಥಕತೆಯ ಕ್ಷಣಗಳು, ಅಧ್ಯಕ್ಷ ಪ್ರಕಾಶ್ ರಾವ್ ಪಯ್ಯಾರರ ಸಾಧನೆಯ ಪಥದಲ್ಲಿ ಮಗದೊಂದು ಮೈಲಿಗಲ್ಲು!!.

ಸತೀಶ್ ಪೂಜಾರಿ ಹಾಗೂ ಪದ್ಮರಾಜ್ ಎಕ್ಕಾರ್ ರವರು ಬೆಳಗ್ಗಿನ ಉಪಾಹಾರದ ಹೊಣೆ ಹೊತ್ತಿದ್ದರು. ಶ್ರೀ ಜಯರಾಮ ಸೋಮಯಾಜಿಯವರು ಪುಸ್ತಕ ಪ್ರದರ್ಶನವನ್ನು ಉದ್ಘಾಟಿಸಿದರು

ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿಯೇ ತಾಯ್ನಾಡಿನಿಂದ ವಿಶೇಷ ಗಣ್ಯ ಅತಿಥಿಗಳು ಆಗಮಿಸಿದ್ದರು. ಚೆನ್ನವೀರ ಕಣವಿ, ಶಿಕ್ಷಣ ಮಂತ್ರಿ ವಿಶ್ವೇಶ್ವರ ಹೆಗ್ಗಡೆ ಕಾಗೇರಿ, ಅನಿವಾಸಿ ಭಾರತೀಯ ರಾಜ್ಯ ಉಪಾಧ್ಯಕ್ಷ ಗಣೇಶ್ ಕಾರ್ಣಿಕ್,  ಜಯಂತ್ ಕಾಯ್ಕಿಣಿ, ಚಿತ್ರ ನಟಿ ತಾರ,  ವಿಜಯಕರ್ನಾಟಕ ದೈನಿಕ ಪತ್ರಿಕೆಯ ಸಂಪಾದಕರಾದ ವಿಶ್ವೇಶ್ವರ ಭಟ್, ಕೋಟೆ ಶೈಲಿಯ ಖ್ಯಾತಿಯ ಶಶಿಧರ್ ಕೋಟೆ,  ಹನಿಗವನಗಳ ದೊರೆ ಜರಗನ ಹಳ್ಳಿ ಶಿವಶಂಕರ್, ಹಿರಿಯ ರಂಗ ಕರ್ಮಿ ವೆಂಕಟರಾಜು, ಮನು ಬಳಿಗಾರ್, ಶ್ರೀಮತಿ ಅಭಿಲಾಷಾ ,ಕುವೈಟಿನಿಂದಾಗಮಿಸಿದ ಇಲ್ಯಾಸ್ ಸಾಂಕ್ಟಸ್, ಸೌದಿಯಿಂದಾಗಮಿಸಿದ ಕನಕರಾಜು, ಮತ್ತು ದುಬಾಯಿ ಯವರೇ ಆದ ಪದ್ಮಶ್ರಿ ಪುರಸ್ಕೃತ ಬಿ. ಆರ್. ಶೆಟ್ಟಿ, ಜಾಫರುಲ್ಲಾ ಖಾನ್, ಸರ್ವೋತ್ತಮ ಶೆಟ್ಟಿ, ಶೇಖರ್ ಶೆಟ್ಟಿ ಕಳತ್ತೂರು ಮತ್ತಿತರ ಗಣ್ಯವ್ಯಕ್ತಿಗಳನ್ನು ಸಂಭ್ರಮದಿಂದ ಪಂಚವಾದ್ಯಗಳ ವಾದನದೊಂದಿಗೆ ಮೆರವಣಿಗೆಯಲ್ಲಿ ಸಭಾಂಗಣಕ್ಕೆ ಕರೆತರುವ ಮೂಲಕ ಸಾಹಿತ್ಯ ಸಮ್ಮೇಳನವು ಸಂಚಾಲನೆ ಗೊಂಡಿತು. . 

ಬೆಳಿಗ್ಗೆ ಸುಮಾರು ಎಂಟೂವರೆಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಪಂಚವಾದ್ಯದ ಮೊಳಗುವಿಕೆಯ ನಡುವೆ ಸುಮಂಗಲೆಯರು ಆರತಿ ಎತ್ತಿ ಸಾಂಪ್ರಾದಾಯಿಕ ರೀತಿಯಲ್ಲಿ ಸ್ವಾಗತಿಸಿದರು. ಬಳಿಕ ಸಭಾಕಾರ್ಯಕ್ರಮ ಪ್ರಾರಂಭವಾಯಿತು. ಶ್ರೀ ಬಿ.ಕೆ. ಗಣೇಶ್ ರೈಯವರು ತಮ್ಮ ಅನುಭವದ ಸಾರವನ್ನು ಎರೆದು ನಿರ್ಮಿಸಿದ ವೇದಿಕೆ ಅತ್ಯಂತ ಸುಂದರವಾಗಿ ಮೂಡಿಬಂದಿತ್ತು. ಎಡಬಲಗಳಲ್ಲಿ ರನ್ನ ದ್ವಾರ ಹಾಗೂ ಪೊನ್ನ ದ್ವಾರಗಳಿಂದ ವಿರಚಿತ ಪಂಪಮಹಾಮಂಟಪದ ಮೇಲ್ಭಾಗದಲ್ಲಿ ಕನ್ನಡ ದಿಗ್ಗಜರ ಚಿತ್ರಪಟಗಳನ್ನು ತೂಗುಬಿಡಲಾಗಿದ್ದು ಅಪ್ಪಟ ಕರ್ನಾಟಕದ ಒಂದು ರೂಪ ಬಿಂಬಿತವಾಗಿತ್ತು. ಎಲ್ಲಾ ಆಹ್ವಾನಿತರು ಹಾಗೂ ಸದಸ್ಯರು ಕನ್ನಡ ರಂಗಿನ ಮೇಲ್ವಸ್ತ್ರ ತೊಟ್ಟು ಒಂದೇ ಮನೆಯ ಭಾವನೆಯನ್ನು ಬಿಂಬಿಸಿದರು.

ಪದ್ಮಶ್ರಿ ಪುರಸ್ಕೃತ ಬಿ. ಆರ್. ಶೆಟ್ಟಿಯವರ ನೇತೃತ್ವದಲ್ಲಿ ಸಮ್ಮೇಳನಾಧ್ಯಕ್ಷ ಚೆನ್ನವೀರ ಕಣವಿ ಮತ್ತು ಇತರ ಗಣ್ಯರು ದೀಪ ಬೆಳಗಿ ಉದ್ಘಾಟಿಸಿದರು. ಪ್ರಕಾಶ್ ರಾವ್ ಪಯ್ಯಾರರು ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನ್ನಾಡಿದರು.  ಸಮ್ಮೇಳನಾಧ್ಯಕ್ಷ ಚೆನ್ನವೀರ ಕಣವಿ, ಶಿಕ್ಷಣ ಮಂತ್ರಿ ವಿಶ್ವೇಶ್ವರ ಹೆಗ್ಗಡೆ ಕಾಗೇರಿ, ಅನಿವಾಸಿ ಭಾರತೀಯ ರಾಜ್ಯ ಉಪಾಧ್ಯಕ್ಷ ಗಣೇಶ್ ಕಾರ್ಣಿಕರವರು ಸಮಾರಂಭದಲ್ಲಿ ಭಾಷಣ ಮಾಡಿದರು.

ತಮ್ಮ ಉದ್ಘಾಟನಾ ಬಾಷಣದಲ್ಲಿ ಡಾ.ಬಿ.ಆರ್.ಶೆಟ್ಟಿಯವರು ದ್ವನಿ ಪರ್ತಿಷ್ಟಾನದ ಈ ಕಾರ್ಯಕ್ರಮಕ್ಕೆ ಯಶಸ್ಸುಕೋರಿದರು ಹಾಗೆಯೇ ಇದೇ ಶ್ರದ್ದೆಯಿಂದ ಮಂದುವರಿಸಿ ಇನ್ನೂ ಹೆಚ್ಚಿನ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಾದರಪಡಿಸುವ ನಿಟ್ಟಿನಲ್ಲಿ ತಮ್ಮ ಬೆಂಬಲವನ್ನು ಸೂಚಿಸಿದರು.

ವಿಶ್ವೇಶ್ವರ್ ಹೆಗ್ಗಡೆ ಕಾಗೇರಿಯವರು ತಮ್ಮ ಭಾಷಣದಲ್ಲಿ ಕನಡಿಗರು ದುಬಾಯಿಯನ್ನು ಕಟ್ಟುವ ರೀತಿಯನ್ನು ತುಂಬ ಮೆಚ್ಚಿಕೊಂಡದ್ದಲ್ಲದೆ ಬ್ರೈನ್- ಡ್ರೈನಿನ ಬಗ್ಗೆ ಬೇಸರಿಸಿಕೊಂಡರು. ಮಾನವ ಶಕ್ತಿಯನ್ನು ಸರಿಯಾಗಿ ಉಪಯೋಗಿಸಿಕೊಳ್ಳುವ ವ್ಯವಸ್ಥೆ ಇದ್ದಿರುತ್ತಿದ್ದರೆ ನೀವಿಲ್ಲಿರುತ್ತಿರಲಿಲ್ಲ ನಿಮ್ಮ ದೇಶದಲ್ಲೇ ನಿಮ್ಮ ದೇಶವನ್ನೇ ಕಟ್ಟುವ ಕೆಲಸವನ್ನು ಮಾಡುತ್ತಿದ್ದಿರಿ. ಆದರೂ ನೀವು ಯಾವಾಗ ಹಿಂದಿರುಗಿ ಬಂದರೂನಿಮಗೆ ಸ್ವಾಗತವಿದೆ ಈಗ ನಿಮ್ಮೊರಿನಲ್ಲಿಯೂ ಎಲ್ಲ ಅವಕಾಶ ಅನುಕೂಲಗಳಿವೆ ಎಂದು ಕರೆಗೊಟ್ಟರು.

ಗಣೇಶ್ ಕಾರ್ಣಿಕ್ ರವರು ದೂರದೂರಿನಲ್ಲಿ ಕನ್ನಡದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕನ್ನಡಿಗರು ತಮ್ಮ ಊರಿನ ನೆನಪನ್ನು ಹಸಿರಾಗಿಡುತ್ತಾರೆ, ತಮ್ಮ ಒಂಟಿತನದ ತಮ್ಮವರಿಂದ ದೂರವಿದ್ದು ಅನ್ಯರೊಟ್ಟಿಗಿರುವ ಐಡೆಂಟಿಟಿ ಕ್ರೈಸಿಸನ್ನು ಹತ್ತಿಕ್ಕಿಕೊಳ್ಳುವ ಪ್ರಯತ್ನ ಮಾಡುತ್ತಾರೆ ಎಂದರು. ಇದೀಗ ಭಾರತ ಸರ್ಕಾರವು ಮಾನವ ಸಂಪನ್ಮೂಲಗಳಿಗೆ ಇಮ್ಮಿಗ್ರೇಶನ್ ಬಗ್ಗೆ ಸೂಕ್ತ ತರಬೇತಿ ಕೊಟ್ಟು ವಿದೇಶಕ್ಕೆ ಕಳಿಸುವ ವಾಗದಾನ ಮಾಡುವ ನಕಲಿ ಏಜೆಂಟರ ಕೈಗೆ ಸಿಕ್ಕಿಬೀಳದಂತೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಸೆಕ್ಟರ್ ಸ್ಪೆಸಿಫಿಕ್ ಇನ್ವೆಸ್ಟಮೆಂಟ್ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿದರು.

ಸನ್ಮಾನಿತ ಅತಿಥಿ ಜನಾಬ್ ಜಫ್ರುಲ್ಲ ಖಾನ್ ಮಾತಾಡಿ ಈ ಸಮ್ಮೇಳನ ಎಲ್ಲಾ ಸಮುದಾಯ ಮತ್ತು ಬಾಗದ ಕನ್ನಡಿಗರನ್ನು ಒಟ್ಟುಗೂಡಿಸಲು ಶಕ್ತವಾಗಿದೆ ಹಾಗೆಯೇ ಈ ಸಂಘಟನೆಗೆ ತಮ್ಮ ಎಲ್ಲಾ ಸಹಕಾರವಿದೆ ಎಂದು ಘೋಷಿಸಿದರು.

 

ತದನಂತರ ದುಬಾಯಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಸಮ್ಮಾನಿಸಲಾಯಿತು. ಜಾಫರುಲ್ಲಾ ಖಾನ್, ಸರ್ವೋತ್ತಮ ಶೆಟ್ಟಿ, ಶೇಖರ್ ಶೆಟ್ಟಿ ಕಳತ್ತೂರು, ಅಶೋಕ್ ಶೆಟ್ಟೀ, ಬಿ.ಜೆ. ಸೋಮಯಾಜಿ, ಜೇಮ್ಸ್ ಮೆಂಡೋನ್ಸ, ಉದಯ್ ಕುಮಾರ್ ಕಟೀಲ್ ಮೊದಲಾದ ಗಣ್ಯವ್ಯಕ್ತಿಗಳು ಸಮ್ಮಾನಿತರಾದರು.

ಸಾಹಿತ್ಯ ಗೋಷ್ಟಿ, ಮಾಧ್ಯಮ ಗೋಷ್ಠಿ, ಕವಿಗೋಷ್ಠಿ ಮತ್ತು ಅನಿವಾಸಿ ಗೋಷ್ಠಿಗಳಿದ್ದವು. ಆದರೆ ಸಮಯಾಭಾವದಿಂದಾಗಿ ಅನಿವಾಸಿ ಗೋಷ್ಠಿಯನ್ನು ರದ್ದುಪಡಿಸಲಾಯಿತು. ಸಾಹಿತ್ಯ ಗೋಷ್ಠಿಯು ಜಯಂತ್ ಕಾಯ್ಕಿಣಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಮಾಧ್ಯಮ ಗೋಷ್ಠಿಯು ವಿಜಯಕರ್ನಾಟಕ ದೈನಿಕ ಪತ್ರಿಕೆಯ ಸಂಪಾದಕರಾದ ವಿಶ್ವೇಶ್ವರ ಭಟ್ ಇವರ ಅಧ್ಯಕ್ಷತೆಯಲ್ಲಿ ಬಹಳ ವಿನೋದವಾಗಿ ಮೂಡಿ ಬಂತು. ಜರಗನ ಹಳ್ಳಿ ಶಿವಶಂಕರ್ ಇವರ ಸ್ವಾರಸ್ಯಕರವಾದ ಅಧ್ಯಕ್ಷೀಯ ಭಾಷಣದೊಂದಿಗೆ ಕವಿ ಗೋಷ್ಟಿಯು ಚೊಕ್ಕದಾಗಿ ಮೂಡಿಬಂತು.

ಆರಂಭವೇ ವಿಳಂಬಗೊಂಡದ್ದರಿಂದ ಕಾರ್ಯಕ್ರಮಗಳು ನಿಗದಿ ಪಡಿಸಿದ ಸಮಯಕ್ಕಿಂತ ಕೊಂಚ ಹಿಂದೆಯಿತ್ತು ಎನ್ನುವುದನ್ನು ಬಿಟ್ಟರೆ ಬಾಕಿ ವಿವಿಧ ಕನ್ನಡ ಸಂಸ್ಠೆಗಳಿಂದ ಪ್ರಸ್ತುತಪಡಿಸಲಾದ  ಸಾಂಸ್ಕೃತಿಕ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನಡೆಯಿತು. ಪ್ರತಿಯೊಂದು ನೃತ್ಯವೂ ರೂಪಕವೂ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು

ಗೌತಮ್, ರಾಜೇಶ್, ಪೃಥ್ವಿ, ಸರಳಾ, ಸಂಗೀತ, ಸೋನಿಯಾ ಹಾಗೂ ಯಶೋದ ರವರು ಹಾಡಿದ ಜನಪದಗೀತೆ ಮನಸೆಳೆಯಿತು. ಯು.ಎ.ಇ.ಯಲ್ಲಿ ಕನ್ನಡಪರ ಕಾರ್ಯಕ್ರಮಗಳಿಂದ ಇತ್ತೀಚೆಗೆ ಗಮನಸೆಳೆಯುತ್ತಿರುವ ಕನ್ನಡ ಕೂಟ ದುಬೈ ಸಂಘಟನೆಯ ಸದಸ್ಯರು ಹಾಗೂ ಬಸವ ಸಮಿತಿಯ ಸದಸ್ಯರು ಜಂಟಿಯಾಗಿ ಹಲವು ಮನರಂಜನಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು. ತಾವೂ ಯಾರಿಗೂ ಕಡಿಮೆ ಇಲ್ಲ ಎಂದು ಚಿಣ್ಣರೂ ತಮ್ಮ ಪ್ರತಿಭೆಯನ್ನು ಮೆರೆದು ಪ್ರಕಟಿಸಿದರು. ಕೆಲವು ರೂಪಕಗಳಲ್ಲಂತೂ ಸದಸ್ಯರು ಮತ್ತೊಮ್ಮೆ ಪ್ರಸ್ತುತಪಡಿಸಲು ಆಗ್ರಹಿಸಿ ತಮ್ಮ ಅಭಿಮಾನವನ್ನು ಪ್ರಕಟಿಸುತ್ತಿದ್ದರು. 

ಮದ್ಯಾಹ್ನದ ಊಟವನ್ನು ಉಚಿತವಾಗಿ ಆಯೋಜಿಸಲಾದ್ದು ಅಪ್ಪಟ ಸಸ್ಯಾಹಾರ ಭೋಜನ ಆಗಮಿಸಿದವರ ಜಿಹ್ವಾಚಾಪಲ್ಯವನ್ನು ತಣಿಸಿತು..

ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ ತಾಯ್ನಾಡಿನಿಂದಾಗಮಿಸಿದ  ಜಯಂತ್ ಕಾಯ್ಕಿಣಿ, ಚಿತ್ರ ನಟಿ ತಾರ, ವಿಜಯಕರ್ನಾಟಕ ದೈನಿಕ ಪತ್ರಿಕೆಯ ಸಂಪಾದಕರಾದ ವಿಶ್ವೇಶ್ವರ ಭಟ್, ಕೋಟೆ ಶೈಲಿಯ ಖ್ಯಾತಿಯ ಶಶಿಧರ್ ಕೋಟೆ ಇವರಿಗೆ ಬೆಳ್ಳಿಹಬ್ಬದ ಪ್ರಶಸ್ತಿಯೊಂದಿಗೆ ಪುರಸ್ಕರಿಸಲಾಯಿತು.

ಎಲ್ಲಾ ಗಣ್ಯವ್ಯಕ್ತಿಗಳಿಗೆ ಸ್ಮರಣಿಕೆ ನೀಡಿದ ಬಳಿಕ ಸಮಾರೋಪ ಸಮಾರಂಭದ ಅಧ್ಯಕ್ಷರಾದ ಮನು ಬಳಿಗಾರ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ತರುವಾಯ ಸರ್ವ ಸಮ್ಮೇಳನಧ್ಯಕ್ಷ ಚೆನ್ನವೀರ ಕಣವಿಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಧ್ವನಿ ಪ್ರತಿಶ್ಠಾನವನ್ನೂ ಅದರ ಕಾರ್ಯ್ಕ್ಷಮತೆಯನ್ನೊ ಹೊಗಳಿ ತಮ್ಮ ಮೆಚ್ಚುಗೆಯನ್ನು ಮುಚ್ಚು ಮರೆಯಿಲ್ಲದೆ ಪ್ರಸ್ತುತ ಪಡಿಸಿದರು.

ಅನಂತರಾವ್, ಮನೋಹರ್ ತೊನ್ಸೆ, ಗೋಪಿಕ ಮಯ್ಯ ಕಾರ್ಯಕ್ರಮ ನಿರೂಪಿಸಿ ಸಮಾರಂಭಕ್ಕೆ ಕಳೆ, ಗಾಂಬೀರ್ಯ ಮತ್ತು ಶೋಭೆ ನೀಡಿದರು.

ಆರಂಭದಲ್ಲಿ ಕಾರ್ಯದರ್ಶಿ ಮಧುಸೂದನ್ ರವರು ಎಲ್ಲರನ್ನೂ ಸ್ವಾಗತಿಸಿ ಸಮ್ಮೇಳನಕ್ಕೆ ಚಾಲನೆ ನೀಡಿದರು.

ಇತ್ತೀಚೆಗೆ ಈ ಸಮ್ಮೇಳನದ ತಯಾರಿಗಳು ನಡೆಯುತ್ತಿರುವಾಗಲೇ ಕರ್ನಾಟಕ ಸರ್ಕಾರದ ನಾಟಕ ಅಕ್ಯಾಡೆಮಿ ಪ್ರಶಸ್ತಿ ಶ್ರೀ ಪ್ರಕಾಶ್ ರಾವ್ ಪಯ್ಯಾರ್ ರವರಿಗೆ ಸಂದಿದ್ದು ಸದಸ್ಯರಿಗೆ ಅತೀವ ಹರ್ಷ ಉಂಟುಮಾಡಿದ್ದು ಸದಸ್ಯರು ಪ್ರಕಾಶ್ ರಾವ್ ಪಯ್ಯಾರ್ ಹಾಗೂ ಶ್ರೀಮತಿ ಕುಸುಮಾ ಪ್ರಕಾಶ್ ದಂಪತಿಗಳನ್ನು ಅನಿರೀಕ್ಷಿತವಾಗಿ ವೇದಿಕೆಗೆ ಆಹ್ವಾನಿಸಿ ಸನ್ಮಾನಿಸುವ ಮೂಲಕ ತಮ್ಮ ಸಂತೋಷವನ್ನು ಪ್ರಕಟಿಸಿದರು. 

ಇಡಿಯ ದಿನ ನಡೆದ ಕಾರ್ಯಕ್ರಮ ಸುಮಾರು ಒಂಭತ್ತೂವರೆಯ ಹೊತ್ತಿಗೆ ಅಂತ್ಯಕಂಡಿತು. ಅಧ್ಯಕ್ಷ ಶ್ರೀ ಪ್ರಕಾಶ್ ರಾವ್ ಪಯ್ಯಾರ್ ವಂದನಾರ್ಪಣೆ ಸಲ್ಲಿಸಿದರು.

ಧ್ವನಿ ಪ್ರತಿಷ್ಠಾನದ ಸದಸ್ಯರಾದ ಲತಾ ಹೆಗಡೆ, ಆನಂದ್ ಬೈಲೂರ್, ಜಯರಾಮ ಸೋಮಯಾಜಿ, ಶ್ರೀಮತಿ ನಳಿನಿ ಸೋಮಯಾಜಿ, ಸಂಪತ್ ಶೆಟ್ಟಿ, ಸತೀಶ್ ಪೂಜಾರಿ, ಮಧುಸೂದನ್, ಶ್ರೀಮತಿ ಜಯಶೀ ಮಧುಸೂದನ್, ಗೌತಮ್, ಶ್ರೀಮತಿ ಸೋನಿಯಾ ಗೌತಮ್, ಪದ್ಮರಾಜ್ ಎಕ್ಕಾರ್, ಆರ್ಥರ್ ರೋಶನ್ ಪಿರೇರಾ, ಶ್ರೀಧರ್, ಸರಳಾ ರಘುಪ್ರಸಾದ್, ನವೀನ್ ಸೀಕ್ವೇರಾ, ಗಣೇಶ್ ಕುಲಾಲ್, ಶ್ರೀ ಬಿ.ಕೆ. ಗಣೇಶ್ ರೈ, ಮುರುಗೇಶ್ ಗಾಜರೆ, ಸುಮಾ ಗಾಜರೆ, ದೀಪಾ, ಅರ್ಶದ್ ಹುಸೇನ್, ಪ್ರಕಾಶ್, ವಿದ್ಯಾ ಶೆಟ್ಟಿ, ವಿನಯ ಕುಮಾರ್, ವೀರೇಂದ್ರ, ಶ್ರೀಮತಿ ದೀಪ್ತಿ ವೀರೇಂದ್ರ, ಶ್ರೀ ಗೋಪಿನಾಥ ರಾವ್ ಈ ಕಾರ್ಯಕ್ರಮದ ಯಶಸ್ಸಿನಲ್ಲಿ ಭಾಗಿಯಾಗಿದ್ದಾರೆ. ಎಲ್ಲರಿಗೂ ಅಧ್ಯಕ್ಷರಾದ ಶ್ರೀ ಪ್ರಕಾಶ್ ರಾವ್ ಪಯ್ಯಾರ್ ತಮ್ಮ ಅಭಿನಂದನೆಗಳನ್ನು ಅರ್ಪಿಸಿದ್ದಾರೆ.

ಕಾರ್ಯಕ್ರಮದಲ್ಲಿ ಸುಮಾರು ಏಳುನೂರಕ್ಕೂ ಹೆಚ್ಚು ಕನ್ನಡಿಗರು ಆಗಮಿಸಿ ಸಂಭ್ರಮಪಟ್ಟರು

ಕರ್ನಾಟಕ ಕಲಾವೈಭವವನ್ನು ಪ್ರತಿಬಿಂಭಿಸಿದ ಸಮ್ಮೇಳನದ ವೇದಿಕೆ

ಕರ್ನಾಟಕದ ಶ್ರೀಮಂತ ಕಲಾವೈಭವದ ಶಿಲ್ಪಕಲೆಗಳು ಗಲ್ಫ್ ರಾಷ್ಟ್ರದ ವಾಸ್ತುಶಿಲ್ಪದೊಂದಿಗೆ ಚಿತ್ರಸಂಯೋಜನೆಯ ಬೃಹತ್ ಡಿಜಿಟಲ್ ಮುದ್ರಣದಲ್ಲಿ ಕನ್ನಡ ಅಕ್ಷರಗಳು ರಾರಾಜಿಸುತ್ತಿದ್ದರೆ ಅದಿಕವಿ ಪಂಪಾಮಹಾಕವಿ ಮಂಟಪದ ಮೇಲೆ ಕನ್ನಡದ ಕಣ್ಮಣಿಗಳು ಚಿತ್ರರೂಪದಲ್ಲಿ ಕನ್ನಡಿಗರ ಕನ್ನಡ ಅಭಿಮಾನ ಜಾಗೃತಿಗೊಳ್ಳಿಸುತಿದ್ದು, ಮಂಟಪದ ಎರಡು ಬದಿಯಲ್ಲಿ ರನ್ನ ದ್ವಾರ, ಪೊನ್ನ ದ್ವಾರ ಶಿಲ್ಪಕಲೆಯ ಮಾದರಿಯನ್ನು ನಿರ್ಮಿಸಲಾಗಿದ್ದು, ಕ್ರಿಯಾತ್ಮಕ ಕಲಾನಿರ್ದೇಶಕ ಬಿ. ಕೆ. ಗಣೇಶ್ ರೈ ಯವರ ಪರಿಕಲ್ಪನೆ ವಿನ್ಯಾಸ ಸಮ್ಮೇಳನದಲ್ಲಿ ಭಾಗವಹಿಸಿದ್ದ ಎಲ್ಲಾ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಸಮಾರಂಭದಲ್ಲಿ ಗಣೇಶ್ ರೈಯವರನ್ನು ಸಮ್ಮೇಳನ ಅಧ್ಯಕ್ಷರಾದ ಡಾ. ಚೆನ್ನವೀರ ಕಣವಿಯವರು ಸನ್ಮಾನಿಸಿ ಗೌರವಿಸಿದರು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ವರದಿ: ಗೋಪಿಕ ಮಯ್ಯ. ಚಿತ್ರಗಳು: ಅಶೋಕ್ ಬೆಲ್ಮಣ್
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-04-24 00:00:00

Tell a Friend
ಇತರ ಸಂಭಂದಪಟ್ಟ ವರದಿಗಳು
»ದುಬೈ: ಕನ್ನಡ ಸಾಹಿತ್ಯ ಸಮ್ಮೇಳನ: ಸಮ್ಮೇಳನಾದ್ಯಕ್ಷ ಡಾ.ಚೆನ್ನವೀರ ಕಣವಿ, ಸಚಿವ ಕಾಗೇರಿ, ನಟಿ ತಾರ ಮತ್ತು ಇತರ ಗಣ್ಯರ ಆಗಮನ - ಹಾರ್ಧಿಕ ಸ್ವಾಗತ
»ಪ್ರಪ್ರಥಮ ಮಧ್ಯಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ: ಸಕಲ ಸಿದ್ಧತೆ
»ದುಬೈ: ಧ್ವನಿ ಪ್ರತಿಷ್ಠಾನ ಬೆಳ್ಳಿ ಹಬ್ಬ ಮತ್ತು ಪ್ರಪ್ರಥಮ ಮಧ್ಯಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ: ಬಣ್ಣದ ರಂಗೋಲಿ ಸ್ಪರ್ಧೆಯ ಮುನ್ನುಡಿ
»ದುಬೈ: ಧ್ವನಿ ಪ್ರತಿಷ್ಠಾನ ಬೆಳ್ಳಿ ಹಬ್ಬ ಮತ್ತು ಪ್ರಪ್ರಥಮ ಮಧ್ಯಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ: ಬೆಳ್ಳಿ ಹಬ್ಬ ಪ್ರಶಸ್ತಿಗೆ ನಾಲ್ಕು ಗಣ್ಯರ ಆಯ್ಕೆ
»ದುಬೈ: ಧ್ವನಿ ಪ್ರತಿಷ್ಠಾನ ಬೆಳ್ಳಿ ಹಬ್ಬ ಮತ್ತು ಪ್ರಪ್ರಥಮ ಮಧ್ಯಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ: ಲಾಂಛನ ಲೋಕಾರ್ಪಣೆ
»ದುಬೈಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ; ಅಧ್ಯಕ್ಷತೆಗೆ ಪ್ರಖ್ಯಾತ ಕವಿ ಡಾ.ಚೆನ್ನವೀರ ಕಣವಿ ಆಯ್ಕೆ
»

ಪ್ರತಿಸ್ಪಂದನ
mohamed rafeeq, kodagu-dubai
2011-05-05
excellent program, keep on rocking kannadigas in dubai and everywhere , good wishes to the team, jai karnataka
shridhar dubai, kateel
2010-06-26
good program,excellent.
Latha S Hegde, Dubai
2010-04-27
Excellent report from Gopika Mayya too.........
ravishankara lohit s, hassan-karnataka
2010-04-27
I heard the news from my wife,as she is working in our ownh s -dubai.her name is premalatha. I really appreciate the works conducted by u all. I pray god to give good soul and mind to perform more and more activities. ನನಗೆ ನಿಮ್ಮೆಲ್ಲರ ಬಗ್ಗೆ ತುಂಬಾ ಹೆಮ್ಮೆ.ಕನ್ನಡ ದ್ವಜವನ್ನು ಮುಗಿಲೆತ್ತರಕ್ಕೆ ಹಾರಿಸುತ್ತಿರುವವರಿಗೆ ಜಯವಾಗಲಿ.ನಿಮ್ಮೆಲ್ಲರಿಗೂ ಶುಭಾಶಯಗಳು.
megha, payyar
2010-04-25
ಏನಿದು!?
ಜಯರಾಮ ಸೋಮಯಾಜಿ, ಸಾಲಿಕೇರಿ/ದುಬೈ
2010-04-25
ಧ್ವನಿ ಪ್ರತಿಷ್ಠಾನ, ಯು.ಎ.ಇ. ಅವರ ಬೆಳ್ಳಿ ಹಬ್ಬದ ಸಮಾರಂಭದಲ್ಲಿ ನಡೆದ ಮಧ್ಯಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ ಅತ್ಯಂತ ಯಶಸ್ವಿವಾಗಿ ಜರಗಿರುವುದು ಎಲ್ಲಾ ಕನ್ನಡಿಗರಿಗೆ ಹೆಮ್ಮೆ, ಗೌರವ ತಂದಿರುವ ವಿಚಾರ. ಇದಕ್ಕೆ ಶ್ರಮಿಸಿದ ಎಲ್ಲಾ ಸ್ವಾಗತ ಸಮಿತಿಯ ಸದಸ್ಯರಿಗೆ, ಕಾರ್ಯಕರ್ತರಿಗೆ ಅಭಿನಂದನೆಗಳು. ಕಾರ್ಯಕ್ರಮವು ಅಂದವಾಗಿ, ಅದ್ದೂರಿಯಾಗಿ ನಡೆದಿರುವುದು ಕರ್ನಾಟಕದಿಂದ ಬಂದ ಅತಿಥಿಗಳು, ಗಣ್ಯ ವ್ಯಕ್ತಿಗಳ ಮಾತುಗಳಿಂದ ತಿಳಿಯಬಹುದಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮ, ಪಂಚವಾದ್ಯ, ಪೂರ್ಣ ಕುಂಭ ಸ್ವಾಗತ, ರಂಗೋಲಿ ಸ್ಪರ್ಧೆ, ಪುಸ್ತಕ ಪ್ರದರ್ಶನ ಎಲ್ಲವೂ ಸಮಾರಂಭಕ್ಕೆ ಮೆರುಗನ್ನು ಕೊಟ್ಟಿದೆ....... ಜಯರಾಮ ಸೋಮಯಾಜಿ
ಗಣೇಶ್ ರಾವ್, ಕುಂಬಳೆ
2010-04-25
ಸಮ್ಮೇಳನ ಚೆನ್ನಾಗಿತ್ತು ಆದರೆ ಸಮಯ ಪ್ರಜ್ನೆಯಿರಲಿಲ್ಲ!. ಕಾರ್ಯಕ್ರಮಗಳನ್ನು ಸಂಯೋಜಿಸುವಾಗ ಅದಕ್ಕೆ ತಾಗುವ ಸಮಯದ ಅಂದಾಜು ಇಲ್ಲದಿದ್ದರೆ ಈ ರೀತಿ ಅವಾಂತರ ಸಂಭವಿಸುವುದು ಅನಿವಾರ್ಯ.ಬಹುಶ್ಯ: ಅನುಭವದ ನಿಪುಣತೆಯ ಕೊರತೆ ಇರಬಹುದು. ಬೆಳೆಗ್ಗೆ ೧೦ ಘಂಟೆಗೆ ಪಾರಂಭವಾಗಿದ್ದರೆ ಚೆನ್ನಾಗಿರುತಿತ್ತೇನೋ?!. ಏನೇ ಆಗಲಿ ಪ್ರಥಮ ಮದ್ಯಪ್ರಾಚ್ಯ ಸಾಹಿತ್ಯ ಸಮ್ಮೇಳನ ವೆಂಬ ಒಂದು ಕಾರ್ಯಕ್ರಮವನ್ನು ಸಂಘಟಿಸಿ ನೆರೆವೇರಿಸಿದ್ದು ಬಾರೀ ಹೆಮ್ಮೆಯ ವಿಷಯ. ಅದಕ್ಕೆ ನಮ್ಮ ದನ್ಯವಾದಗಳು.ಇಂತಹ ಕರ್ನಾಟಕ ಸಾಹಿತ್ಯ ಸಮ್ಮೇಳನ ಪ್ರತೀ ವರ್ಷ ಚಿಕ್ಕ ಚೊಕ್ಕವಾಗಿ ನಡೆಯಲಿ ಎಂಬ ಹಾರೈಕೆ.
ರೋಶನ್, ಮಂಗಳೂರು, ದುಬಾಯಿ
2010-04-25
ದುಬಾಯಿಯಲ್ಲಿ ನಡೆದ ಸಮ್ಮೇಳನದಲ್ಲಿ ಪಾಲುಗೊಳ್ಳುವ ಅವಕಾಶ ಸಿಕ್ಕಿ ದಿನಪೂರ್ತಿ ಅನಂದಪಟ್ಟಿದ್ದೇನೆ. ಅತಿಥಿಗಳನ್ನು ಕಳಸ ಹಿಡಿದ ಮಹಿಳೆಯರು ಮೆರವಣಿಗೆಯಲ್ಲಿ ಕರೆದು ತಂದಿದ್ದು, ಗಣೇಶ್ ರೈ ಯವರ ಅರ್ಥಪೂರ್ಣ ಅತ್ಯಂತ ಸುಂದರ ರಂಗಮಂದಿರ ನಿರ್ಮಾಣ, ಅನಂತ್ ತಂಡದವರ ಉತ್ತಮ ಕಾರ್ಯಕ್ರಮ ನಿರೂಪಣೆ, ಅತಿಥಿಗಳೆಲ್ಲರ ಉತ್ತಮ ಭಾಷಣ, ಉತ್ತಮ ಸಾಂಸ್ಕೃತಿಕ ಕಾರ್ಯಕ್ರಮ, ಅತ್ಯುತ್ತಮ ಮಟ್ಟದಲ್ಲಿ ಒಂದು ಸುಂದರ ಸಮ್ಮೇಳನವನ್ನು ಮಾಡಿದ ಧ್ವನಿಯ ಪ್ರಕಾಶ್ ರಾವ್ ಮತ್ತು ಸದಸ್ಯರು ಒಳ್ಳೆಯ ಕೆಲಸ ಮಾಡಿದ್ದಾರೆ. ಉತ್ತಮ ಫೊಟೋಗಳು, ವರದಿ ನೀಡಿದ ಗಲ್ಫ್ ಕನ್ನಡಿಗ ಮಾಧ್ಯಮಕ್ಕೆ ಧನ್ಯವಾದಗಳು.
ಬಿ. ಕೆ. ಗಣೇಶ್ ರೈ , ಕೊಡಗು, ಶಾರ್ಜಾ
2010-04-25
ಕನ್ನಡ ಸಮ್ಮೇಳನದ ಸಂಭ್ರಮವನ್ನು ಮುಗಿಲಿಗೆ ಮುಟ್ಟಿಸಿ ಮಧ್ಯಪ್ರಾಚ್ಯದಲ್ಲಿ ಯಶಸ್ವಿಯಾಗಿ ನಡೆಸಿದ ಕೀರ್ತಿ ಪ್ರಕಾಶ್ ರಾವ್ ಪಯ್ಯಾರ್ ಮತ್ತು ಹಗಲಿರುಳು ದುಡಿದ ನುರಿತ ಅನುಭವಿ ತಂಡದವರಿಗೆ ಸಲ್ಲುತ್ತದೆ. ಕನ್ನಡದ ಮೇಲಿನ ಅಭಿಮಾನದಿಂದ ಕಾರ್ಯಕ್ರಮದ ಪ್ರಯೋಜಕರು, ಅಹ್ವಾನಿತ ಅತಿಥಿಗಳು, ಪ್ರೇಕ್ಷಕರು, ಹಲವಾರು ಸಂಘಟನೆಗಳು ಕರ್ನಾಟಕ ಶ್ರೀಮಂತ ಕಲೆಯನ್ನು ಕೊಲ್ಲಿ ರಾಷ್ಟ್ರದ ದುಬಾಯಿಯಲ್ಲಿ ಅತ್ಯಂತ ವೈಭವದಿಂದ ನಡೆಯುವಂತೆ ಮಾಡಿ ಐತಿಹಾಸಿಕ ದಾಖಲೆಯನ್ನು ಸೃಷ್ಟಿಸಿ ಅಭಿನಂದನಾರ್ಹವಾಗಿದ್ದಾರೆ. ಪೂರ್ವಭಾವಿ ತಯಾರಿಯಿಂದ ಸಮಾರಂಭ ಮುಗಿಯುವವರೆಗೆ ವಿಶ್ವದಾದ್ಯಂತ ಕನ್ನಡಿಗರಿಗೆ ಮಾಧ್ಯಮದ ಮೂಲಕ ಮುಟ್ಟಿಸುವಲ್ಲಿ ಗಲ್ಫ್ ಕನ್ನಡಿಗದ ಕನ್ನಡ ಸೇವೆ ಶ್ಲಾಘನೀಯವಾಗಿದ್ದು ಬಿ. ಜಿ. ಮೋಹನ್ ದಾಸ್ ಮತ್ತು ಗೋಪಿಕಾ ಮಯ್ಯ ರವರ ವರದಿ ಛಾಯಚಿತ್ರದ ಮೂಲಕ ಸಮಾರಂಭದ ದೃಶ್ಯಗಳನ್ನು ನಮ್ಮ ಮನೆಯಂಗಳಕ್ಕೆ ಮುಟ್ಟಿಸಿದ ಅಶೋಕ್ ಬೆಳ್ಮಣ್ ಮತ್ತು ತಂಡದವರಿಗೆ ಅಭಿನಂದನೆಗಳು.
Latha S Hegde, Dubai
2010-04-24
Congratulations to Dwani Pratistana. It was a great success. KUDOS to the President and Managing Committee of Dwani for their hard work & commitment towards educating and entertaining all the Kannadigas in UAE. Ashok B, you are as usual too good, excellent photography. Keep up the good work.
kavitha, davanagere
2010-04-24
The event had given a platform for all kannadigas to interact with sahithis and to know more about kannada sahithya,programme was very well conducted with great performances depicting our rich culture
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಸಾಹಿತ್ಯ-ಸಂಸ್ಕೃತಿ]

»ರಷ್ಯನ್‌ ಕಥೆಗಳು ಪುಸ್ತಕ ಬಿಡುಗಡೆ: ಕನ್ನಡ ಸಾಹಿತ್ಯ ಲೋಕದಲ್ಲಿ ಅನುವಾದಕರಿಗೆ ವಿಪುಲ ಅವಕಾಶ: ಪ್ರೋ.ಸಿ. ನಾಗಣ್ಣ
» ಪ್ರಶಂಸೆಗೆ ಪಾತ್ರವಾದ ಸಿಕ್ಕಿಂ ವಿದ್ಯಾರ್ಥಿಗಳ ಯಕ್ಷಗಾನ ಪ್ರದರ್ಶನ : ನೆರೆದವರ ರಂಜಿಸಿದ ಜಟಾಯು ಮೋಕ್ಷ
»ಜಾತಿ, ಮತದ ಗಡಿ ದಾಟಿದರೆ ಮಾತ್ರ ಕವಿಯಾಗಬಲ್ಲ: ಎಚ್.ಎಸ್.ವೆಂಕಟೇಶಮೂರ್ತಿ
»2011ನೇ ಸಾಲಿನ ಪ.ಗೋ. ಸಂಸ್ಮರಣಾ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಗೆ ಅರ್ಜಿ ಆಹ್ವಾನ
»ಕುಕ್ಕೆ ಸುಬ್ರಹ್ಮಣ್ಯ: ಮಲೆ ಮಾದೇಶ್ವರಕ್ಕೆ ISO ಅಂತಾರಾಷ್ಟ್ರೀಯ ಮಾನ್ಯತೆ
»ಕವನ : ಕ್ಲಾಸ್ ಶಯನ...
»ಮಾತು ಬೇರೆ ಬೇಕೆ ಗೆಳೆಯ....
»ಚಂದ್ರಶೇಖರ ಕೆದ್ಲಾಯರಿಗೆ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ; ಫೆ.4ರಂದು ಪ್ರಶಸ್ತಿ ಪ್ರದಾನ
»ಉಡುಪಿ :ದಿವಂಗತ ಸೂರ್ಯನಾರಾಯಣ ಚಡಗ ಸ್ಮಾರಕ ಪ್ರಶಸ್ತಿ ಪ್ರದಾನ
»ಕವಿ, ಪ್ರಾಧ್ಯಾಪಕ ಡಾ| ಧನಂಜಯ ಕುಂಬ್ಳೆ ಅವರಿಗೆ ಮುದ್ದಣ ಕಾವ್ಯ ಪ್ರಶಸ್ತಿ ಪ್ರದಾನ
»ಯಕ್ಷಗಾನ ಬಯಲಾಟ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ: ಯಕ್ಷಗಾನಕ್ಕೆ ನಿರ್ದಿಷ್ಟ ಸ್ವರೂಪ ಅಗತ್ಯ- ಗೋವಿಂದ ಭಟ್‌
»ತೋನ್ಸೆ ಕಾಂತಪ್ಪ ಮಾಸ್ತರರ ಸಂಸ್ಮರಣಾ ಪ್ರಶಸ್ತಿ ಪ್ರದಾನ ಸಮಾರಂಭ: ಪರಿಪೂರ್ಣ ಕಲಾವಿದನಾಗಬೇಕಾದರೆ ಯಕ್ಷಗಾನದ ಬಗ್ಗೆ ಆಸಕ್ತಿ ಜ್ಞಾನ ಅಗತ್ಯ- ಡಾ. ಭಾಸ್ಕರಾನಂದ ಕುಮಾರ್
»ಮೈಸೂರು ಉದ್ಯಾನಕಲಾ ಸಂಘದ ವತಿಯಿಂದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರರಿಗೆ ಸನ್ಮಾನ
»ಕವನ : ನನ್ನ ಸುಬ್ಬಿ
»ಮಲಯಾಳಂನ ಖ್ಯಾತ ಸಾಹಿತಿ ಸುಕುಮಾರ್ ಅಝಿಕೋಡ್ ನಿಧನ
»ಯಕ್ಷಗಾನ ಬಯಲಾಟ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಗೋವಿಂದ ಭಟ್ಟ
»ಭಾರತದ ಪ್ರಪಿತಾಮಹನೆ ...
»ಖ್ಯಾತ ಸಾಹಿತಿ ನಾಡೋಜ ಪ್ರೊ. ಹಂಪ. ನಾಗರಾಜಯ್ಯರಿಗೆ ‘ವಿಶ್ವಮಾನವ ಪ್ರಶಸ್ತಿ’; ಕನ್ನಡ ಸಾಹಿತ್ಯಕ್ಕೆ ಸಂಕುಚಿತತೆ ಇಲ್ಲ: ಎಚ್.ಆರ್.ಭಾರದ್ವಾಜ್
» ಅನಂತಮೂರ್ತಿ ವಿಚಾರಧಾರೆ : ಅನಂತಮೂರ್ತಿ ಸೃಜನಶೀಲ ಸಾಹಿತಿ:ಡಾ.ನ. ರತ್ನ
»ಅದೆರಳಿದೆ....
»ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ತಾನೂ ಆಕಾಂಕ್ಷಿ: ಚಂಪಾ
»ಡಾ| ಪಾಟೀಲ ಪುಟ್ಟಪ್ಪಗೆ ನಾಗರಿಕ ಸಮ್ಮಾನ: ಗಾಂಧೀಜಿ ತತ್ವ ಪ್ರಚುರಪಡಿಸಲು ಗಾಂಧಿ ಗ್ರಾಮ ಸ್ಥಾಪನೆ:ಜಗದೀಶ ಶೆಟ್ಟರ್
»ಆಸ್ಟ್ರೋ ಮೋಹನ್ ರವರ ’ಪಿಕ್ಟೋರಿಯಲ್ ಜರ್ನಿ ಟು ಉಡುಪಿ”ಪುಸ್ತಕ ಬಿಡುಗಡೆ ಸಮಾರಂಭ
»ಮತ್ತೆ ಮಳೆ ಬರುವುದೆ....
»ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮ:ಗಣಿತ ನನಗೆ ಕಬ್ಬಿಣದ ಕಡಲೆಯಾಗಿತ್ತು: ಡಾ. ಚಂದ್ರಶೇಖರ ಕಂಬಾರ
»ಡಾ.ಜಿ.ಎನ್. ಉಪಾಧ್ಯಗೆ ‘ಶ್ರೀ ಗುರುನಾರಾಯಣ ಸಾಹಿತ್ಯ ಪ್ರಶಸ್ತಿ’
»ಕಾಳಿಂಗ ನಾವಡ ಯಶೋಗಾಥೆ ಸಾಕ್ಷ್ಯಚಿತ್ರ ವಿಡಿಯೋ
»ಕುವೆಂಪು ಕಂಚಿನ ಪ್ರತಿಮೆಗೆ ಪ್ಲಾಸ್ಟಿಕ್ ಮುಸುಕು!: ರಾಷ್ಟ್ರ ಕವಿ ಪ್ರತಿಮೆಗೂ ಬಿಜೆಪಿ ಭಿನ್ನಮತದ ಕರಿನೆರಳು; ಸಿಎಂಗಾಗಿ ಕಾದು ಕುಳಿತಿರುವ ಅಧಿಕಾರಿಗಳು
»ಗಾಯಕಿ ಎಸ್.ಜಾನಕಿಗೆ ಬಸವಭೂಷಣ ಪ್ರಶಸ್ತಿ ಪ್ರದಾನ
»ಜ್ಞಾನಪೀಠ ಶ್ರೇಷ್ಠವಾದದ್ದಲ್ಲ; ನಾಟಕ ಬರೆದದ್ದೇ ಆಕಸ್ಮಿಕ: ಡಾ| ಗಿರೀಶ ಕಾರ್ನಾಡ
»ಪಾರ್ಥಸಾರಥಿಯವರಿಗೆ ಕೊಲರಾಡೋ ಕನ್ನಡ ಪ್ರಶಸ್ತಿ
»ಯಕ್ಷಗಾನದ ಮೇರುನಟರ ಕ್ಯಾಲೆಂಡರ್‌ ಬಿಡುಗಡೆ; ಸಮಗ್ರ ಮಾಹಿತಿಯುಳ್ಳ ವೆಬ್‌ಸೈಟ್‌ ಕೂಡ ತಯಾರಿಯಲ್ಲಿ.
»30 ಜಿಲ್ಲೆಗಳಲ್ಲಿ ಕಂಬಾರರ ನಾಟಕಗಳ ಉತ್ಸವ
»ಎಲೆಯ ಮರೆಯ ಹೂ...
»ಪುತಿನ ಕಲಾಮಂದಿರ ಲೋಕಾರ್ಪಣೆ
»ಸುಳ್ಯ ಯಶಸ್ವೀ ಸಂಗೀತ ಸಂಭ್ರಮ 2011
»ಹಿರಿಯ ಸಾಹಿತಿ ಏರ್ಯ ಲಕ್ಷಿನಾರಾಯಣ ಆಳ್ವ ರಿಂದ ಡಾ| ಮೋಹನ ಆಳ್ವರಿಗೆ ಕಿಲ್ಲೆ ಪ್ರಶಸ್ತಿ ಪ್ರಧಾನ
»`ಕುವೆಂಪು ಪ್ರಭಾವ ಎಲ್ಲೆಡೆ ಪಸರಿಸಲಿ' ....
»ಕಸಾಪ ಅಧ್ಯಕ್ಷ ಸ್ಥಾನಕ್ಕೆ ಚಂಪಾ, ಹಾಲಂಬಿ ಸ್ಪರ್ಧೆ?
»ಕವನ : ಕನಸಿನಾಳದಿಂದ .....
»ನಾಲ್ವರು ಸಾಧಕರಿಗೆ `ನಾಡೋಜ' ಗೌರವ ಪದವಿ ನೀಡಿ ಸನ್ಮಾನ
»ಸಂತೆ ಶಿವಾರದಲ್ಲಿ ಸಾಹಿತಿ ಡಾ ಭೈರಪ್ಪರಿಗೆ ಸನ್ಮಾನ
»ಕವನ...
»ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ ಅವರಿಗೆ 2009ನೇ ಸಾಲಿನ ಪಂಪ ಪ್ರಶಸ್ತಿ: ಬೇನಾಮಿ ಇಂಗ್ಲಿಷ್ ಶಾಲೆ ಮುಚ್ಚಿ: ಪ್ರೊ. ಚಂದ್ರ ಶೇಖರ ಪಾಟೀಲ
»ಇಂದು ಸರಸ್ವತಿ ಪುತ್ರನಿಗೆ ಹುಟ್ಟೂರ ಸನ್ಮಾನ: ಸಾಹಿತಿ ಡಾ. ಭೈರಪ್ಪ ಅವರಿಗೆ ಸಂತೇಶಿವರದಲ್ಲಿ ಅಭಿನಂದನೆ, ವಿಚಾರಸಂಕಿರಣ
»ಜೋಗಿ ಬರೆದ ಫೇಸ್ ಬುಕ್ ಕಥೆ ಪುಸ್ತಕ ಬಿಡುಗಡೆ...
»ಉತ್ತರ ಕನ್ನಡದ ವಕ್ಕಲಿಗರ ಜನಪದ ಸೊಗಡು ಸುಗ್ಗೀ ಹಬ್ಬ
»ಅಮೇರಿಕಾದ ನ್ಯೂಜೆರ್ಸಿಯ ಶ್ರೀ ಕೃಷ್ಣವೃಂದಾವನದಿಂದ ಹರಿದಾಸ ಸಾಹಿತ್ಯ ವಿದ್ವಾಂಸರಾದ ಡಾ| ಅರಳುಮಲ್ಲಿಗೆ ಪಾರ್ಥಸಾರಥಿ ಅವರಿಗೆ ‘ಆಸ್ಥಾನ ವಿದ್ವಾಂಸ’ಪದವಿ ಹಾಗೂ ‘ವಿದ್ಯಾಕಲ್ಪತರು’ ಪ್ರಶಸ್ತಿ ಪ್ರದಾನ.
»ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಗೋಪಾಲಕೃಷ್ಣ ಪೈ, ಮೆಲ್ವಿನ್‌ ರವರ ಪರಿಚಯ (Updated)
»ಗುಹಾ, ಪೈ, ಖಲೀಲ್, ರೋಡ್ರಿಗಸ್‌ಗೆ ಕೇಂದ್ರ ಸಾಹಿತ್ಯ ಅಕಾಡಮಿ ಗೌರವ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri