ದುಬೈ: ಕನ್ನಡ ಸಾಹಿತ್ಯ ಸಮ್ಮೇಳನ: ಸಮ್ಮೇಳನಾದ್ಯಕ್ಷ ಡಾ.ಚೆನ್ನವೀರ ಕಣವಿ, ಸಚಿವ ಕಾಗೇರಿ, ನಟಿ ತಾರ ಮತ್ತು ಇತರ ಗಣ್ಯರ ಆಗಮನ - ಹಾರ್ಧಿಕ ಸ್ವಾಗತ |
ಪ್ರಕಟಿಸಿದ ದಿನಾಂಕ : 2010-04-23
( ಚಿತ್ರಗಳು: ಅಶೋಕ್ ಬೆಳ್ಮಣ್)
ದುಬೈ: ಇಂದು ಏಪ್ರಿಲ್ 23 ಶುಕ್ರವಾರದಂದು ದುಬಾಯಿ ಜೆಮ್ ಪ್ರವೈಟ್ ಸ್ಕೂಲ್ ಸಭಾಂಗಣ ದಲ್ಲಿ ಅದ್ದೂರಿಯಾಗಿ ನಡೆಯಲಿ ರುವ ಪ್ರಪ್ರಥಮ ಮಧ್ಯಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನದ ಅದ್ಯಕ್ಷತೆ ವಹಿಸುವ ಹಿರಿಯ ಸಾಹಿತಿ ಡಾ.ಚೆನ್ನವೀರ ಕಣವಿ, ಮುಖ್ಯ ಅತಿಥಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಕನ್ನಡ ಚಲನಚಿತ್ರದ ಅತ್ಯಂತ ಪ್ರತಿಭಾವಂತ ತಾರೆಯಾದ ತಾರಾ, ವಿಜಯಕರ್ನಾಟಕದ ಸಂಪಾದಕರಾದ ವಿಶ್ವೇಶ್ವರ ಭಟ್, ಪ್ರಸಿದ್ಧ ಗಾಯಕ ಶಶಿಧರ್ ಕೋಟೆ,”ಮುಂಗಾರು ಮಳೆ’ ಖ್ಯಾತಿಯ ಜಯಂತ್ ಕಾಯ್ಕಿಣಿ, ಕನ್ನಡ ಮತ್ತು ಸಂಸ್ಕೃತ ಇಲಾಖೆಯ ನಿರ್ದೇಶಕ ಮನು ಬಳಿಗಾರ್ ಇತರರನ್ನು ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದ್ವನಿ ಪ್ರತಿಷ್ಠಾನದ ಅದ್ಯಕ್ಷ ಪ್ರಕಾಶ್ ರಾವ್ ಪಯ್ಯಾರ್ ಮತ್ತು ಸಮಿತಿ ಸದಸ್ಯರು ಹಾರ್ಧಿಕವಾಗಿ ಸ್ವಾಗತಿಸಿದರು
ಧ್ವನಿ ಪ್ರತಿಷ್ಠಾನ ಯು. ಎ. ಇ. ತನ್ನ ೨೫ ವರ್ಷಗಳನ್ನು ಕನ್ನಡಪರ ಚಟುವಟಿಕೆಗಳನ್ನು ವಿಶೇಷ ರೀತಿಯಲ್ಲಿ ಯಶಸ್ವಿಯಾಗಿ ನಡೆಸಿ ಕೊಂಡು ಬರುತ್ತಿದ್ದು ಈದೀಗ ತನ್ನ ಬೆಳ್ಳಿ ಹಬ್ಬದ ಆಚರಣೆಯ ಸಂಭ್ರಮದಲ್ಲಿದೆ.ಪ್ರಪ್ರಥಮ ಮಧ್ಯಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳ ನವನ್ನು ಆಚರಿಸುವುದರ ಮೂಲಕ ಹೊರ ದೇಶದಲ್ಲಿ ವಿನೂತನ ದಾಖಲೆಯನ್ನು ನಿರ್ಮಿಸಲಿದೆ.
ಧ್ವನಿ ಪ್ರತಿಷ್ಠಾನದ ಬೆಳ್ಳಿ ಹಬ್ಬದ ಅಂಗವಾಗಿ ನಡೆಯಲಿರುವ ಹಿರಿಯ ಸಾಹಿತಿ ಡಾ.ಚೆನ್ನವೀರ ಕಣವಿಯವರ ಘನ ಅದ್ಯಕ್ಶತೆಯಲ್ಲಿ ಆದಿಕವಿ ಪಂಪ ಮಹಾ ಮಂಟಪದಲ್ಲಿ ಜರುಗಲಿದ್ದು ಈ ಸಮ್ಮೇಳನವನ್ನು ಪದ್ಮಶ್ರೀ ಪುರಸ್ಕೃತ ಡಾ.ಬಿ.ಆರ್.ಶೆಟ್ಟಿಯವರು ಬೆಳಗ್ಗೆ ೧೦.೩೦ ಕ್ಕೆ ಉದ್ಘಾಟಿಸುವರು.

ದುಬೈ ಹಿರಿಯ ಉದ್ಯಮಿ ಜನಾಬ್ ಜಫ್ರುಲ್ಲಾ ಖಾನ್, ಕರ್ನಾಟಕದ ಅನಿವಾಸಿ ಭಾರತೀಯ ಸೆಲ್ ನ ಉಪಾದ್ಯಕ್ಷ ಕ್ಯಾ.ಗಣೇಶ್ ಕಾರ್ಣಿಕ್, ಕನ್ನಡ ಮತ್ತು ಸಂಸ್ಕೃತ ಇಲಾಖೆಯ ನಿರ್ದೇಶಕ ಮನು ಬಳಿಗಾರ್ ರವರು ಮುಖ್ಯ ಅತಿಥಿಗಳಾಗಿ ಬಾಗವಹಿಸುವರು.
ಧ್ವನಿ ಪ್ರತಿಷ್ಠಾನದ ಬೆಳ್ಳಿ ಹಬ್ಬದ ಅಂಗವಾಗಿ ಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುವುದು. ಪ್ರಶಸ್ತಿಗೆ ಜಯಂತ ಕಾಯ್ಕಿಣಿ(ಸಾಹಿತ್ಯ) ವಿಶ್ವೇಶ್ವರ ಭಟ್(ಮಾದ್ಯಮ) ತಾರಾ (ಚಲಚಿತ್ರ ರಂಗ), ಶಶಿಧರ್ ಕೋಟೆ (ಸಂಗೀತ) ಅವರನ್ನು ಆಯ್ಕೆ ಮಾಡಲಾಗಿದ್ದು ಸನ್ಮಾನಿಸಲ್ಪಡುವರು .
ಮುಂಜಾನೆ ೮.೩೦ ರಿಂದ ೯.೩೦ರ ವರೆಗೆ ಮಹಿಳೆಯರಿಗಾಗಿ ರಂಗೋಲಿ ರಚನಾ ಸ್ಪರ್ಧೆಯನ್ನು ಎರ್ಪಾಡಿಸಲಾಗಿದ್ದು ಸುಂದರವಾದ ರಂಗೋಲಿ ರಚಿಸದವರಿಗೆ ಬಹುಮಾನಗಳನ್ನು ನೀಡಲಾಗುವುದು; ಅಲ್ಲದೆ ಭಾಗವಹಿಸಿದ ಎಲ್ಲಾ ಮಹಿಳೆಯರನ್ನು ಗೌರವಿಸಲಾಗುವುದು.
ಮುಂಜಾನೆ ೯.೦೦ಕ್ಕೆ ಗ್ರಂಥ ಸಂಪತ್ತು ಪ್ರದರ್ಶನ ಉಧ್ಘಾಟಿಸಲ್ಪಡುವುದು.
ಸಮ್ಮೆಳನಕ್ಕೆ ಪ್ರವೇಶ ಮುಕ್ತ ವಾಗಿದ್ದು, ಬೆಳಿಗ್ಗೆ ರುಚಿಕರ ಲಘು ಉಪಹಾರ, ಮಧ್ಯಾಹ್ನ ಸ್ವಾದಿಷ್ಟ ಬೋಜನ ಉಚಿತವಾಗಿ ನೀಡುವ ವ್ಯವಸ್ಥೆ ಮಾಡಲಾಗಿದೆ.
ಕನ್ನಡ ಸಾಹಿತ್ಯದ ವಿವಿಧ ನೆಲೆಗಳು ಎಂಬ ವಿಷಯದ ಮೇಲೆ ಎರಡು ಅಪೂರ್ವ ಗೋಷ್ಠಿಗಳು, ಗಲ್ಫ್ ಕನ್ನಡಿಗರ ಸಮಸ್ಯೆಗಳ ಬಗ್ಗೆ ವಿಚಾರ ಸಂಕಿರಣ ಹಾಗೂ ಕವಿ ಗೋಷ್ಠಿ ನಡೆಯಲಿದೆ. ಕರ್ನಾಟಕದಿಂದ ಆಗಮಿಸಲಿರುವ ಪ್ರಖ್ಯಾತ ಅತಿಥಿ ಕಲಾವಿದರುಗಳು ಅಪೂರ್ವ ಮನರಂಜನೆ ನೀಡಲಿರುವರು.
ಧ್ವನಿ ಪ್ರತಿಷ್ಠಾನದ ಬೆಳ್ಳಿ ಹಬ್ಬ ಸಂಭ್ರಮ





ಮುಂಬೈಯಲ್ಲಿ ಸಮಾನ ಮನಸ್ಕ ಯುವಕರು ಹೊರನಾಡಿನಲ್ಲಿ ಕನ್ನಡ ಚಟುವಟಿಕೆಗಳು ನಿಂತ ನೀರಾಗದೆ ಹರಿಯುವ ನದಿಯಾಗ ಬೇಕೆಂಬ ಉದ್ದೇಶದಿಂದ 1985 ರಲ್ಲಿ ಅಸ್ತಿತ್ವಕ್ಕೆ ತಂದ ಧ್ವನಿ ಪ್ರತಿಷ್ಠಾನ ಈಗ ಬೆಳ್ಳಿ ಹಬ್ಬದ ಸಡಗರದಲ್ಲಿದೆ. ಧ್ವನಿ ಸಮಾಜದಲ್ಲಿ ಒಂದು ಸಂಸ್ಥೆಯಾಗಿ ಗುರುತಿಸಿಕೊಳ್ಳದೆ ಒಂದು ಸಾಮಾಜಿಕ ಪ್ರಕ್ರಿಯೆ ಯಾಗಬೇಕೆಂಬ ಉದ್ದೇಶದಿಂದ ಕಾರ್ಯ ಪ್ರವೃತ್ತವಾಗಿದ್ದು ಆ ನಿಟ್ಟಿನಲ್ಲಿ ಸತತ ಇಪ್ಪತೈದು ವರ್ಷಗಳಿಂದ ಕನ್ನಡ ಸೇವೆಯನ್ನು ಮಾಡುತ್ತಾ ಬಂದಿದೆ.
ಕನ್ನಡಿಗರು ಸಹಸ್ರ, ಸಹಸ್ರ ಸಂಖ್ಯೆಯಲ್ಲಿ ಆಗಮಿಸಿ ಸಮ್ಮೇಳನವನ್ನು ಚಾರಿತ್ರಿಕ ದಾಖಲೆಯನ್ನಾ ಗಿಸ ಬೇಕೆಂದು ಧ್ವನಿ ಬೆಳ್ಳಿಹಬ್ಬ ಆಚರಣ ಸಮಿತಿ ವಿನಂತಿಸಿಕೊಂಡಿದೆ.
ಸಮ್ಮೆಳನದ ಸ್ಥಳ: ದುಬೈ ಜೆಮ್ ಪ್ರೈವೆಟ್ ಸ್ಕೂಲ್ ಸಭಾಂಗಣ, ಕೆ.ಎಮ್. ಟ್ರೇಡಿಂಗ್ ಹತ್ತಿರ, ದುಬೈ.
ಬೆಳಿಗ್ಗೆ ೮.೩೦ರಿಂದ ಸಂಜೆ ೭.೦೦ ರ ತನಕ
ವರದಿಯ ವಿವರಗಳು |
 |
ಕೃಪೆ : ಚಿತ್ರಗಳು: ಅಶೋಕ್ ಬೆಳ್ಮಣ್ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-04-23 00:00:00
|
|
| M.E.Moolur( Mohd.Ibrahim Moolur), UDDUPI/DUBAI | 2010-04-25 | | I regret missing this wonderful function.Congratulations to Dhwani Prathisthana and Mr.Prakash Payyar for conducting this first ever Middle East Kannada Literary Convention. |
|