ದುಬೈ: ಧ್ವನಿ ಪ್ರತಿಷ್ಠಾನ ಬೆಳ್ಳಿ ಹಬ್ಬ ಮತ್ತು ಪ್ರಪ್ರಥಮ ಮಧ್ಯಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ: ಬಣ್ಣದ ರಂಗೋಲಿ ಸ್ಪರ್ಧೆಯ ಮುನ್ನುಡಿ |
ಪ್ರಕಟಿಸಿದ ದಿನಾಂಕ : 2010-04-07
ಮಧ್ಯಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ- ಬಣ್ಣದ ಚಿತ್ತಾರ ಸ್ಪರ್ಧೆ
ಮಧ್ಯಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ- ಧ್ವನಿ ಪ್ರತಿಷ್ಠಾನದ ಬೆಳ್ಳಿ ಹಬ್ಬ ಆಚರಣೆಯ ಅಂಗವಾಗಿ ೨೩.೦೪.೨೦೧೦ ರಂದು ದಿನ ಪೂರ್ತಿ ಆಯೋಜಿಸಲಾಗಿರುವ ಮಧ್ಯಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪೂರ್ವ ತಯಾರಿ ಬಿರುಸಿನಿಂದ ನಡೆಯುತ್ತಿದೆ ಎಂದು ಬೆಳ್ಳಿ ಹಬ್ಬ ಆಚಾರಣ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಸಮ್ಮೇಳನದ ದಿನ ಮುಂಜಾನೆ ೮.೩೦ ರಿಂದ ೯.೩೦ರ ವರೆಗೆ ಮಹಿಳೆಯರಿಗಾಗಿ ರಂಗೋಲಿ ರಚನಾ ಸ್ಪರ್ಧೆಯನ್ನು ಎರ್ಪಾಡಿಸ ಲಾಗಿದ್ದು ಸುಂದರವಾದ ರಂಗೋಲಿ ರಚಿಸದವರಿಗೆ ಬಹುಮಾನಗಳನ್ನು ನೀಡಲಾಗುವುದು; ಅಲ್ಲದೆ ಭಾಗವಹಿಸಿದ ಎಲ್ಲಾ ಮಹಿಳೆಯರನ್ನು ಗೌರವಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಆಸಕ್ತರು ಹೆಸರು ನೊಂದಾಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಶ್ರೀಮತಿ ನಳಿನಿ ಸೋಮಯಾಜಿ: ೦೬೫೩೧೬೩೮೮ ಶ್ರೀಮತಿ ಸುಮಾ ಗಾಜರೆ: ೦೪ ೩೯೬೯೪೪೦ ಶ್ರೀಮತಿ ಲತಾ ಹೆಗ್ದೆ: ೦೫೦ ೧೧೩೫೬೯೦ ಉಮಾ ವಿಧ್ಯಾಧರ್:೦೫೦ ೮೮೯೨೪೮೭ ಸೋನಿಯಾ ಗೌತಮ್: ೦೫೬೧೦೧೪೦೨೧ ಅವರನ್ನು ಸಂಪರ್ಕಿಸಬಹುದು.
ಗ್ರಂಥ ಸಂಪತ್ತು ಪ್ರದರ್ಶನ
ಮುಂಜಾನೆ ೯.೦೦ಕ್ಕೆ ಗ್ರಂಥ ಸಂಪತ್ತು ಪ್ರದರ್ಶನ ಉಧ್ಘಾಟಿಸಲ್ಪಡುವುದು.
ಗ್ರಂಥ ಸಂಪತ್ತು ಪ್ರದರ್ಶನದಲ್ಲಿ ತಮ್ಮ ಗ್ರಂಥ ಭಂಡಾರವನ್ನು ಪ್ರದರ್ಶಿಸಲು ಬಯಸುವವರು ಶ್ರೀ ಗೋಪಿನಾಥ್ ರಾವ್:೦೫೦ ೭೬೫೯೯೫೭, ಶ್ರೀಈರಣ್ಣ ಮೂಲಿಮನೆ:೦೫೦ ೩೯೫೯೯೪೩, ಅರ್ಶದ್ ಹುಸ್ಸೇನ್:೦೫೦ ೬೮೮೯೮೩೫ ಅವರನ್ನು ಸಂಪರ್ಕಿಸಬಹುದು.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-04-07 00:00:00
|
|
|