ದುಬೈ: ಧ್ವನಿ ಪ್ರತಿಷ್ಠಾನ ಬೆಳ್ಳಿ ಹಬ್ಬ ಮತ್ತು ಪ್ರಪ್ರಥಮ ಮಧ್ಯಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ: ಬೆಳ್ಳಿ ಹಬ್ಬ ಪ್ರಶಸ್ತಿಗೆ ನಾಲ್ಕು ಗಣ್ಯರ ಆಯ್ಕೆ |
ಪ್ರಕಟಿಸಿದ ದಿನಾಂಕ : 2010-04-05
{ ಜಯಂತ ಕಾಯ್ಕಿಣಿ, ತಾರಾ, ಶಶಿಧರ್ ಕೋಟೆ ಮತ್ತು ವಿಶ್ವೇಶ್ವರ ಭಟ್ }
ದುಬೈ: ಧ್ವನಿ ಪ್ರತಿಷ್ಠಾನದ ಬೆಳ್ಳಿ ಹಬ್ಬದ ಅಂಗವಾಗಿ ಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುವುದು. ಪ್ರಶಸ್ತಿಗೆ ಜಯಂತ ಕಾಯ್ಕಿಣಿ(ಸಾಹಿತ್ಯ) ವಿಶ್ವೇಶ್ವರ ಭಟ್(ಮಾದ್ಯಮ) ತಾರಾ (ಚಲಚಿತ್ರ ರಂಗ), ಶಶಿಧರ್ ಕೋಟೆ (ಸಂಗೀತ) ಅವರನ್ನು ಆಯ್ಕೆ ಮಾಡಲಾಗಿದೆ.
ಪ್ರಶಸ್ತಿ ಪ್ರದಾನವು ಹಿರಿಯ ಕವಿ ಚೆನ್ನವೀರ ಕಣವಿಯವರ ಅಧ್ಯಕ್ಷತೆಯಲ್ಲಿ ೨೩.೦೪.೨೦೧೦ ರಂದು ದುಬೈ ಜೆಮ್ ಪ್ರೈವೆಟ್ ಸ್ಕೂಲ್ ಸಭಾಗಂಣದಲ್ಲಿ ನೆರವೇರಲಿರುವ ಮಧ್ಯ ಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನೀಡಲಾಗುವುದೆಂದು ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ್ ರಾವ್ ಪಯ್ಯಾರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವರು.
ಸಮ್ಮೆಳನಕ್ಕೆ ಪ್ರವೇಶ ಮುಕ್ತ ವಾಗಿದ್ದು , ಬೆಳಿಗ್ಗೆ ರುಚಿಕರ ಲಘು ಉಪಹಾರ, ಮಧ್ಯಾಹ್ನ ಸ್ವಾದಿಷ್ಟ ಬೋಜನ ಉಚಿತವಾಗಿ ನೀಡುವ ವ್ಯವಸ್ಥೆ ಮಾಡಲಾಗಿದೆ.
ಕನ್ನಡಿಗರು ಸಹಸ್ರ, ಸಹಸ್ರ ಸಂಖ್ಯೆಯಲ್ಲಿ ಆಗಮಿಸಿ ಸಮ್ಮೇಳನವನ್ನು ಚಾರಿತ್ರಿಕ ದಾಖಲೆಯನ್ನಾ ಗಿಸ ಬೇಕೆಂದು ಧ್ವನಿ ಬೆಳ್ಳಿಹಬ್ಬ ಆಚರಣ ಸಮಿತಿ ವಿನಂತಿಸಿಕೊಂಡಿದೆ.
ಸಮ್ಮೆಳನದ ಸ್ಥಳ: ದುಬೈ ಜೆಮ್ ಪ್ರೈವೆಟ್ ಸ್ಕೂಲ್ ಸಭಾಂಗಣ, ಕೆ.ಎಮ್.ಟ್. ಟ್ರೇಡಿಂಗ್ ಹತ್ತಿರ, ದುಬೈ.
ಬೆಳಿಗ್ಗೆ ೮.೩೦ರಿಂದ ಸಂಜೆ ೭.೦೦ ರ ತನಕ
ಸಮ್ಮೆಳನಕ್ಕೆ ಪ್ರವೇಶ ಮುಕ್ತ ವಾಗಿದ್ದು , ಬೆಳಿಗ್ಗೆ ರುಚಿಕರ ಲಘು ಉಪಹಾರ, ಮಧ್ಯಾಹ್ನ ಸ್ವಾದಿಷ್ಟ ಬೋಜನ
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-04-05 00:00:00
|
|
| Jinachandran, Bangalore | 2010-04-26 | | ಇಂತಹ ಒಳ್ಳೆಯ ಕಾರ್ಯಕ್ರಮ ಕೊಟ್ಟ ಧ್ವನಿ ಪ್ರತಿಷ್ಟ್ಹಾನದ ಎಲ್ಲಾ ಸದಸ್ಯರಿಗೂ ನನ್ನ ಹಾರ್ದಿಕ ಅಭಿನಂದನೆಗಳು. ರಂಗಾದ ರಂಗೋಲಿಯೊಂದಿಗೆ ಕಾರ್ಯಕ್ರಮ ಶುರುವಾದಾಗ ನಾನು ಇದೊಂದು ನೆನಪಿನಲ್ಲಿ ಉಳಿಯುವ ದಿನವಾಗುತ್ತೆ ಅಂದುಕೊಂಡಿರಲಿಲ್ಲ. ತಡವಾಗಿ ಶುರುವಾಯಿತು ಎನ್ನುವುದನ್ನು ಬಿಟ್ಟರೆ ಮಿಕ್ಕೆಲ್ಲ ಅಂಶಗಳು ಚೆನ್ನಾಗಿ ಮೂಡಿ ಬಂದವು. ಕವಿಗೋಷ್ಠಿ ನಮ್ಮಲ್ಲಿ ವಿಚಾರ ಮಂಥನ ನಡೆಸುವ ಹಾಗೆ ಮಾಡಿದರೆ, ಕೋಳಿ ಕೆ ರಂಗ ಹಾಗು ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಿಕರಿಗೆ ಕಚಗುಳಿ ಇಡುತ್ತಿದ್ದವು. ಚೆನ್ನವೀರ ಕಣವಿ ಯವರಿಗೆ ಸ್ವಲ್ಪ ಹೆಚ್ಚು ಮಾತನಾಡುವ ಅವಕಾಶ ಕೊಡಬೇಕಿತ್ತು. ಒಟ್ಟಾರೆ ಕಾರ್ಯಕ್ರಮ ಬಹಳ ಚೆನ್ನಾಗಿದ್ದವು . |
|