ದುಬೈ: ಧ್ವನಿ ಪ್ರತಿಷ್ಠಾನ ಬೆಳ್ಳಿ ಹಬ್ಬ ಮತ್ತು ಪ್ರಪ್ರಥಮ ಮಧ್ಯಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ: ಲಾಂಛನ ಲೋಕಾರ್ಪಣೆ |
ಪ್ರಕಟಿಸಿದ ದಿನಾಂಕ : 2010-03-28
ಏಪ್ರಿಲ್ 23 ರಂದು ನಡೆಯಲಿರುವ ಮಹಾಸಮ್ಮೇಳನಕ್ಕೆ ವಿವಿಧ ಕರ್ನಾಟಕ ಸಂಘಟನೆಗಳ ಬೆಂಬಲ
ದುಬೈ, ಮಾರ್ಚ್ 26: ಏಪ್ರಿಲ್ 23 ರಂದು ದುಬಾಯಿ ಜೆಮ್ ಪ್ರವೈಟ್ ಸ್ಕೂಲ್ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಯಲಿ ರುವ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ನಗರದ ಜಾಕಿ ಸ್ಟಾರ್ ರೆಸ್ಟೋರೆಂಟ್ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭ ದಲ್ಲಿ ಯು.ಎ.ಇ. ಯ ಕರ್ನಾಟಕ ಪರ ಸಂಘಟನೆಗಳ ಮುಖ್ಯಸ್ಥರ ಸಮ್ಮುಖದಲ್ಲಿ ನಡೆದ ಬಿಡುಗಡೆ ಸಮಾರಂಭದಲ್ಲಿ ಲೋಕಾ ರ್ಪಣೆ ಮಾಡಲಾಯಿತು.
ಪ್ರಪ್ರಥಮ ಮಧ್ಯಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ ಆದಿಕವಿ ಪಂಪ ಮಹಾ ಮಂಟಪದಲ್ಲಿ ಜರುಗಲಿದ್ದು ಸಮ್ಮೇಳನದ ಅಧ್ಯಕ್ಷತೆ ಯನ್ನು ಕರ್ನಾಟಕದ ಹಿರಿಯ ಸಾಹಿತಿ ಡಾ. ಚೆನ್ನವೀರ ಕಣವಿ ಯವರು ವಹಿಸಲಿದ್ದಾರೆ. ಸಮ್ಮೇಳನದ ಲಾಂಛನ ಬಿಡುಗಡೆ ಯಾಗುವುದರ ಮೂಲಕ ಸಮ್ಮೇಳನದ ಪೂರ್ವಭಾವಿ ಸಿದ್ಧತೆಗೆ ಅಧಿಕೃತ ಚಾಲನೆ ದೊರೆಯಿತು
ಧ್ವನಿ ಪ್ರತಿಷ್ಠಾನ ಯು. ಎ. ಇ. ತನ್ನ ೨೫ ವರ್ಷಗಳನ್ನು ಕನ್ನಡಪರ ಚಟುವಟಿಕೆಗಳನ್ನು ವಿಶೇಷ ರೀತಿಯಲ್ಲಿ ಯಶಸ್ವಿಯಾಗಿ ನಡೆಸಿ ಕೊಂಡು ಬರುತ್ತಿದ್ದು ಈದೀಗ ತನ್ನ ಬೆಳ್ಳಿ ಹಬ್ಬದ ಆಚರಣೆಯ ಸಂಭ್ರಮದಲ್ಲಿದೆ.ಪ್ರಪ್ರಥಮ ಮಧ್ಯಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳ ನವನ್ನು ಆಚರಿಸುವುದರ ಮೂಲಕ ಹೊರ ದೇಶದಲ್ಲಿ ವಿನೂತನ ದಾಖಲೆಯನ್ನು ನಿರ್ಮಿಸಲಿದೆ.



ಸಂಜೆ ಆರು ಘಂಟೆಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿಯವರು ಲಾಂಛನವನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಯು.ಎ.ಇ.ಯಲ್ಲಿರುವ ಹಲವು ಕನ್ನಡ ಸಂಘಟನೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದು ಧ್ವನಿ ಪ್ರತಿಷ್ಠಾನ ಯು.ಎ.ಇ. ಪ್ರಸ್ತುತಪಡಿಸುತ್ತಿರುವ ಮಧ್ಯಪ್ರಾಚ್ಯ ಸಾಹಿತ್ಯ ಸಮ್ಮೇಳನಕ್ಕೆ ತಮ್ಮ ಬೆಂಬಲ ಸೂಚಿಸಿದರು.

ಲಾಂಛನವನ್ನು ಶಾರ್ಜಾ ಕರ್ನಾಟಕ ಸಂಘದ ಪೂರ್ವ ಅಧ್ಯಕ್ಷರಾದ ಶ್ರೀ ಬಿ.ಕೆ. ಗಣೇಶ್ ರೈಯವರು ವಿನ್ಯಾಸಗೊಳಿಸಿದ್ದು ತಮ್ಮ ವಿನ್ಯಾಸದ ಬಗ್ಗೆ ಅವರು ವಿವರಣೆ ನೀಡುತ್ತಾ ಈ ಅವಕಾಶ ಒದಗಿಬಂದಿದ್ದು ತಮ್ಮ ಪಾಲಿನ ಭಾಗ್ಯ ಎಂದು ಬಣ್ಣಿಸಿದರು.

ಲಾಂಛನದ ಕೆಳಭಾಗದಲ್ಲಿರುವ ಅಲೆಯ ವಿನ್ಯಾಸ ಯು.ಎ.ಇ.ಯ ಮರಳುಗಾಡನ್ನು ಸೂಚಿಸುತ್ತಿದೆ. ಅದರ ಮೇಲಿರುವ ತೆರೆದ ಪುಸ್ತಕದ ವಿನ್ಯಾಸ ನಮ್ಮಲ್ಲಿರುವ ಜ್ಞಾನ ತೆರೆದ ಪುಸ್ತಕವಾಗಬೇಕೆಂಬ ಕರೆಯನ್ನು ನೀಡುತ್ತಿದೆ. ಮೇಲಿರುವ ಜ್ಯೋತಿ ಕನ್ನಡ ಧ್ವಜದ ಬಣ್ಣಗಳಾದ ಕೆಂಪು ಮತ್ತು ಹಳದಿಯನ್ನು ಹೊಂದಿದ್ದು ಕನ್ನಡ ಜ್ಯೋತಿ ನಿರಂತವಾಗಿ ಪ್ರಜ್ವಲಿಸುತ್ತಿರಲಿ ಎಂಬ ಸಂದೇಶ ವನ್ನು ನೀಡುತ್ತದೆ. ಎಡಭಾಗದ ಸ್ತಂಭ ಯು.ಎ.ಇ.ಯ ಪರಂಪರೆ ಲಾಂಛನವಾಗಿದೆ. ಮರುಭೂಮಿಯ ಬಿಸಿಲಬೇಗೆಯನ್ನು ಕಡಿಮೆ ಗೊಳಿಸುವ ಈ ಸ್ಥಂಭಗಳು ಈಗಲೂ ಯು.ಎ.ಇ.ಯ ಹಲವೆಡೆ ಸ್ಥಿತವಿದ್ದು ಯು.ಎ.ಇ.ಯ ಇತಿಹಾಸವನ್ನು ಬಣ್ಣಿಸುತ್ತಿದೆ. ಬಲಭಾಗ ದ ಶಂಖದ ವಿನ್ಯಾಸ ಧ್ವನಿ ಪ್ರತಿಷ್ಠಾನದ ಮೂಲ ಲಾಂಛನವಾಗಿದ್ದು ಧ್ವನಿಯನ್ನು ಮೊಳಗಿಸುತ್ತಿದೆ. ಲಾಂಛನದ ಮಧ್ಯದಿಂದ ಅಂಚಿ ನೆಡೆಗೆ ಸಾಗುವ ನೀಲಿ ಬಣ್ಣದ ಅಲೆಗಳು ಶಾಂತಿಯನ್ನು ವಿಶ್ವದೆಲ್ಲೆಡೆ ಪಸರಿಸುವ ಸಂದೇಶವನ್ನು ನೀಡುತ್ತದೆ . ಈ ಕನ್ನಡದ ಸುಮಧುರ ಧ್ವನಿ ದಶದಿಕ್ಕುಗಳಲ್ಲಿ ತರಂಗಗಳಾಗಿ ಪ್ರತಿಧ್ವನಿಸಲಿ, ನೀಲಿ ಬಣ್ಣದ ಅಳವಡಿಕೆ ವಿಶ್ವಶಾಂತಿಯ ಸಂಕೇತವಾಗಿದ್ದು,ಧ್ವನಿ ಪ್ರತಿಷ್ಠಾನ ಯು.ಎ.ಇ. ಬೆಳ್ಳಿ ಹಬ್ಬ ೨೦೧೦, ಮಧ್ಯಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ ದುಬಾಯಿ ಅಕ್ಷರಗಳು ಅಳವಡಿಕೆ ಯಾಗಿದ್ದು ಸುಂದರ ಲಾಂಚನ ರೂಪುಗೊಂಡಿದ್ದು ಸಮ್ಮೇಳನ ಐತಿಹಾಸಿಕ ದಾಖಲೆಯಾಗಲಿದೆ ಎಂದು ಅವರು ವಿವರಿಸಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಧ್ವನಿ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರಿ ಪ್ರಕಾಶ್ ರಾವ್ ಪಯ್ಯಾರ್ ಮಾತನಾಡಿ ಮುಂದಿನ ತಿಂಗಳು ನಡೆಯಲಿರುವ ವಿಶ್ವಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಲು ಎಲ್ಲಾ ಸಂಘಟನೆಗಳ ಬೆಂಬಲ ಹಾಗೂ ಸಹಕಾರ ತಮಗೆ ಅಗತ್ಯ ಎಂದು ಮನವಿ ಮಾಡಿಕೊಂಡರು. ಹಾಗೂ ಕಾರ್ಯಕ್ರಮದ ವೇಳಾಪಟ್ಟಿಯ ಕರಡುಪ್ರತಿಯನ್ನು ವಿತರಿಸಿ ಕಾರ್ಯಕ್ರಮದ ರೂಪುರೇಷೆಗಳಲ್ಲಿ ಏನಾದರೂ ಬದಲಾವಣೆ ಅಥವಾ ಸಲಹೆಗಳನ್ನು ಅಹ್ವಾನಿಸಿದರು.
ಕಾರ್ಯಕ್ರಮಕ್ಕೆ ಆಗಮಿಸಿದ ವಿವಿಧ ಸಂಘಟನೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಲವಾರು ಅಮೂಲ್ಯ ಸಲಹೆಗಳನ್ನು ನೀಡಿ ಕಾರ್ಯಕ್ರಮ ಇನ್ನಷ್ಟು ಉತ್ತಮಗೊಳ್ಳುವ ನಿಟ್ಟಿನಲ್ಲಿ ತಮ್ಮ ಸಹಕಾರ ಹಾಗೂ ಪ್ರೋತ್ಸಾಹವನ್ನು ಪ್ರಕಟಿಸಿದರು.
ಮಹಿಳೆಯರ ಪರವಾಗಿ ಶ್ರೀಮತಿ ನಳಿನಿ ಸೋಮಯಾಜಿಯವರು ಮಾತನಾಡಿ ಕಾರ್ಯಕ್ರಮಕ್ಕೆ ತಮ್ಮ ಪ್ರೋತ್ಸಾಹವನ್ನು ಪ್ರಕಟಿಸಿದರು.


ಕಾರ್ಯಕ್ರಮ ನಿವೇದಿತಾ ಅರವಿಂದ್ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಧ್ವನಿ ಪ್ರತಿಷ್ಠಾನದ ಕಾರ್ಯದರ್ಶಿ ಗಳಾದ ಶ್ರೀ ಮಧೂಸೂಧನ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.

ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿ, ಶ್ರೀ ಜಯರಾಮ ಸೋಮಯಾಜಿ, ಹಾಗೂ ಧ್ವನಿ ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಶ್ರೀ ಮಧುಸೂಧನ್ ಮತ್ತು ಕೋಶಾಧಿಕಾರಿ ಶ್ರೀ ಆನಂದ್ ಬೈಲೂರ್ ವೇಧಿಕೆಯಲ್ಲಿ ಉಪಸ್ಥಿತರಿದ್ದರು.

ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ನೊಯೆಲ್ ಆಲ್ಮೇಡಾ, ಕರ್ನಾಟಕ ಸಂಘ ದುಬೈಯ ಮಾಜಿ ಅದ್ಯಕ್ಷ ಹಾಗೂ ಗಲ್ಫ್ ಕನ್ನಡಿಗ.ಕಾಂ ವ್ಯವಸ್ಥಾಪಕರಾದ ಶ್ರೀ ಬಿ.ಜಿ.ಮೋಹನದಾಸ್, ಬಿಲ್ಲವಾಸ್ ದುಬೈ ಅಂಡ್ ನಾರ್ಧರ್ನ್ ಎಮಿರೇಟ್ಸ್ ಸಂಘದ ಅಧ್ಯಕ್ಷರಾದ ಶ್ರೀ ಮೋಹನ್ ಅತ್ತಾವರ್, ಶ್ರೀ ಸತೀಶ್ ಪೂಜಾರಿ, ಮಂಗಳೂರು ಕೊಂಕಣ್ಸ್ ಅಧ್ಯಕ್ಷರಾದ ಶ್ರೀ ಸಂತೋಷ್ ನಾಜರೆತ್, ಮಂಗಳೂರು ಕೊಂಕಣ್ಸ್ ಸಂಘಟನೆಯ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಜೇಮ್ಸ್ ಮೆಂಡೋನ್ಸಾ, ಅಬುಧಾಬಿ ಕರ್ನಾಟಕ ಸಂಘದ ಶ್ರೀ ಮನೋಹರ ತೋನ್ಸೆ,, ಕನ್ನಡಧ್ವನಿಯ ಶ್ರೀ ಗೋಪಿನಾಥ ರಾವ್, ಸಾಹಿಲ್ ಆನ್ಲೈನ್ ಕನ್ನಡ ವಿಭಾಗದ ಅರ್ಶದ್ ಹುಸೇನ್, ಕನ್ನಡಕೂಟ ಯು.ಎ.ಇ.ಯ ಸಂಚಾಲಕ ಶ್ರೀ ಅರುಣ ಮುತ್ತುಗದೂರು, ಸದಸ್ಯರಾದ ಶ್ರೀ ಈರಣ್ಣ ಮೂಲಿಮನಿ, ಶ್ರೀ ಮಲ್ಲಿಕಾರ್ಜುನ, ಶ್ರೀ ವೀರೇಂದ್ರ ಹಾಗೂ ಇನ್ನೂ ಹಲವಾರು ಗಣ್ಯರು ಉಪಸ್ಥಿತರಿದ್ದರು.







ನೆರೆದ ಗಣ್ಯ್ರರು ತಮ್ಮ ತಮ್ಮ ವಿಚಾರಗಳನ್ನು ಮಂಡಿಸಿದರು.
ಕಾರ್ಯಕ್ರಮದ ಅಂತ್ರ್ಯದಲ್ಲಿ ಶ್ರೀ ಅರ್ಥರ್ ರೋಶನ್ ಪೆರೇರಾರವರು ದನ್ಯವಾದ ಸಮರ್ಪಿಸಿದರು


ವರದಿಯ ವಿವರಗಳು |
 |
ಕೃಪೆ : ವರದಿ: ಅರ್ಶದ್ ಹುಸೇನ್ ಎಂ.ಹೆಚ್. ಚಿತ್ರ: Raghu's photo album ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-28 00:00:00
|
|
|