ಮಂಗಳೂರು: ಕಾರ್ಮಿಕರ ಹಿತಾಸಕ್ತಿಗಾಗಿ ನ್ಯಾಯಾಲಯ ನೀಡಿರುವ ಆದೇಶವನ್ನು ಅನುಷ್ಠಾನಗೊಳಿಸುವಂತೆ ಅಗ್ರಹಿಸಿ ಕೆ.ಯಸ್.ಆರ್.ಟಿ.ಸಿ ಮಜ್ದೂರ್ ಸಂಘದ ವತಿಯಿಂದ ಸರದಿ ಉಪವಾಸ ಸತ್ಯಾಗ್ರಹ. |
ಪ್ರಕಟಿಸಿದ ದಿನಾಂಕ : 2010-03-22
ಮಂಗಳೂರು,ಮಾ.22: ಕಾಂಟ್ರಾಕ್ಟ್ ಕ್ಯಾರಿಯೇಜಿನವರ ಅನಧಿಕ್ರತ ಕಾರ್ಯಚರಣೆ ತಡೆಯುವಲ್ಲಿ ಉಚ್ಚ ನ್ಯಾಯಾಲಯವು ನೀಡಿರುವ ಆದೇಶವನ್ನು ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಮತ್ತು ಮಂಗಳೂರು - ಕಾಸರಗೋಡು ಅಂತರ್ ರಾಜ್ಯ ಸರಕಾರಿ ಸಾರಿಗೆ ವಾಹನಗಳಿಗೆ ಸ್ಟೇಟ್ ಬ್ಯಾಂಕ್ ನಿಲ್ದಾಣ ಪ್ರದೇಶಕ್ಕೆ ಒತ್ತಾಯಿಸಿ ಕೆ.ಯಸ್.ಆರ್.ಟಿ.ಸಿ ಮಜ್ದೂರ್ ಸಂಘ(ರಿ) ಮಂಗಳೂರು ವಿಭಾಗ ಇವರ ವತಿಯಿಂದ ಹಮ್ಮಿಕೊಂಡಿರುವ 7 ದಿನಗಳ ಸರದಿ ಉಪವಾಸ ಸತ್ಯಾಗ್ರಹವು ಮಂಗಳೂರು ಜಿಲ್ಲಾಧಿಕಾರಿ ಕಛೇರಿ ಮುಂಭಾಗದಲ್ಲಿ ಇಂದಿನಿಂದ ಆರಂಭಗೊಂಡಿತ್ತು.
ಬಿ.ಎಂ.ಎಸ್.ರಾಜ್ಯಾಧ್ಯಕ್ಷರಾದ ಸದಾನಂದ ಪೂಂಜಾ ಅವರು ಸತ್ಯಾಗ್ರಹವನ್ನು ಉದ್ಘಾಟಿಸಿ ಮಾತನಾಡುತ್ತಾ ದೇಶದಲ್ಲೇ ಪ್ರಥಮ ಸ್ಥಾನದಲ್ಲಿರುವ ಕಾರ್ಮಿಕ ಸಂಘಟನೆಯಾದ ಭಾರತೀಯಾ ಮಜ್ದೂರ್ ಸಂಘದ ಸಂಯೋಜನೆಗೊಳಪಟ್ಟ ಕೆ.ಯಸ್.ಆರ್ ಟಿ. ಸಿ ಮಜ್ದೂರ್ ಸಂಘವು ಕಾರ್ಮಿಕರ ಹಿತಾಸಕ್ತಿಗಾಗಿ ಕಾರ್ಯನಿರ್ವಹಿಸುತ್ತಿದ್ದರೂ, ಸರಕಾರ ವಿರೋಧಿ ನೀತಿಯನ್ನುಸರಿಸುತ್ತದೆ. ಜಿಲ್ಲಾಡಳಿಕ್ಕೆ ಈ ಬಗ್ಗೆ ಮನವಿ ಸಲ್ಲಿಸಿದರು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.
ರಾಜ್ಯ ಸಾರಿಗೆ ಪ್ರಾಧಿಕಾರ ನ್ಯಾಯಾಲಯದಿಂದ ಆದೇಶಿಸಲ್ಪಟ್ಟ ಕಾನೂನು ಕಾಯಿದೆಗಳು ಇದುವರೆಗೆ ಅನುಷ್ಠಾನಕ್ಕೆ ಬಾರದಿರುವ ವಿಚಾರ ಶೋಚನೀಯ ಸಂಗತಿಯಾಗಿರುತ್ತದೆ. ಕಾರ್ಮಿಕ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಹಾಗೂ ನ್ಯಾಯಾಲಯದ ಆದೇಶ ಪಾಲಿಸುವಂತೆ ಅಧಿಕಾರಿಗಳಿಗೆ ನೆನಪಿಸಲು ಇದೀಗ ಒಂದುವಾರ "ಸರದಿ ಉಪವಾಸ ಸತ್ಯಾಗ್ರಹ" ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಸ್ಪಂದನೆ ಸಿಗದಿದ್ದಲ್ಲಿ ನಿರ್ಧಾರಾತ್ಮಕ ಹೋರಾಟವಾಗಿ ದಿನಾಂಕ 29-03-2010 ರಂದು ರಾಜ್ಯದ ಪಧಾಧಿಕಾರಿಗಳೊಂದಿಗೆ "ಅಮರಣಾಂತ ಉಪವಾಸ" ಕೈಗೊಳ್ಳುವುದಾಗಿ ತಿಳಿಸಿದರು. "ತಾರತಮ್ಯ ನೀತಿ ಕೊನೆಗೊಳಿಸಿ ನ್ಯಾಯಲಯದ ಆದೇಶ ಪಾಲಿಸಿ" ಎಂಬ ಘೋಷಣೆಯಡಿ ಹಮ್ಮಿಕೊಳ್ಳಲಾದ ಈ ಸರದಿ ಉಪವಾಸ ಸತ್ಯಾಗ್ರಹಕ್ಕೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ.
ನಾಗರೀಕ ಹಿತರಕ್ಷಣಾ ವೇದಿಕೆಯ ಹನುಮಂತ ಕಾಮತ್, ದಲಿತ ಸಂಘರ್ಷ ಸಮಿತಿಯ ಕೇಶವ, ಬಿ.ಎಂ.ಎಸ್.ಕರಾರಸಾಸಂ ಮಂಗಳೂರು ವಿಭಾಗ ಇದರ ಕಾನೂನು ಸಲಹೆಗಾರರಾದ ಜೆ.ಕೆ ಪೌಲ್, ಬಿ.ಎಂ.ಎಸ್ ನ ಜಿಲ್ಲಾಧ್ಯಕ್ಷರಾದ ವಿಶ್ಯ್ವನಾಥ್ ಶೆಟ್ಟಿ, ಇಂಟಕ್ ಕರಾರಸಾಸಂ ಮಂಗಳೂರು ಇದರ ಅಧ್ಯಕ್ಷ ರತ್ನಾಕರ, ಬಿ.ಎಂ.ಎಸ್ ಪಾಪ್ಯುಲರ್ ಬೇಕರಿಯ ಜಗದೀಶ್, ಹರೀಶ್ ಮತ್ತಿತರರು ಉಪಸ್ಥಿತರಿದ್ದರು.
ವರದಿಯ ವಿವರಗಳು |
 |
ವರದಿಗಾರರು : ಸತೀಶ್ ಕಾಪಿಕಾಡ್
ಪ್ರಕಟಿಸಿದ ದಿನಾಂಕ : 2010-03-22 00:00:00
|
|
|