ಮ೦ಗಳೂರು:ದಿಯಾ ಸಿಸ್ಟಮ್ಸ್ ಆಶ್ರಯದಲ್ಲಿ ಉದ್ಯೋಗ ಮೇಳ: `ನಿರುದ್ಯೋಗ ಪರಿಹಾರಕ್ಕೆ ಉದ್ಯೋಗ ಮೇಳ ಪೂರಕ' : ಪಾಲೇಮಾರ್ |
ಪ್ರಕಟಿಸಿದ ದಿನಾಂಕ : 2010-03-22
ಮಂಗಳೂರು, ಮಾ. ೨೧: ದೇಶದ ನಿರುದ್ಯೋಗ ಸಮಸ್ಯೆ ಪರಿಹಾರಕ್ಕೆ ಉದ್ಯೋಗ ಮೇಳ ಪೂರಕ. ಈ ನಿಟ್ಟಿನಲ್ಲಿ ಸರಕಾರವೂ ಬದ್ಧತೆಯಿಂದ ಕಾರ್ಯ ನಿರ್ವಹಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ. ಕೃಷ್ಣ ಪಾಲೆಮಾರ್ ಅವರು ಹೇಳಿದರು.
ದ. ಕ. ಜಿಲ್ಲಾಡಳಿತ, ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ ಮಂಗಳೂರು ಮತ್ತು ದಿಯಾ ಸಿಸ್ಟಮ್ಸ್ (ಮಂಗಳೂರು) ಪ್ರೈ.ಲಿ.ನ ಆಶ್ರಯದಲ್ಲಿ ರವಿವಾರ ಕದ್ರಿಯ ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆದ ಉದ್ಯೋಗ ಮೇಳವನ್ನು ಅವರು ಉದ್ಘಾಟಿಸಿದರು.
ಕಳೆದ ಬಾರಿ ಮಂಗಳೂರಿನಲ್ಲಿ ಮಾನವ ಸಂಪನ್ಮೂಲ ವಿಭಾಗ ಹಮ್ಮಿಕೊಂಡ ಉದ್ಯೋಗ ಮೇಳದಲ್ಲಿ ೧೫ ಸಾವಿರ ಉದ್ಯೋಗಾಕಾಂಕ್ಷಿಗಳು ನೋಂದಾವಣೆ ಮಾಡಿದ್ದರು. ಆ ಪೈಕಿ ೨,೫೦೦ ಮಂದಿಗೆ ಉದ್ಯೋಗ ದೊರಕಿದ್ದು, ೪ ಸಾವಿರ ಮಂದಿ ಕೌಶಲ್ಯ ತರಬೇತಿ ಪಡೆಯುತ್ತಿ ದ್ದಾರೆ. ದಿಯಾ ಸಿಸ್ಟಮ್ಸ್ ಈಗಾಗಲೇ ೮೦೦ ಕ್ಕಿಂತಲೂ ಅಧಿಕ ಮಂದಿಗೆ ಉದ್ಯೋಗ ಒದಗಿಸಿಕೊ ಟ್ಟಿರುವುದು ಶ್ಲಾಘನೀಯ. ಪರಿಸರಕ್ಕೆ ಹಾನಿ ಉಂಟು ಮಾಡುವ, ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀಡದಿರುವ ಬೃಹತ್ ಉದ್ದಿಮೆಗಳನ್ನು ವಿರೋಧಿಸಿ, ಸ್ಥಳೀಯರಿಗೆ ಉದ್ಯೋಗ ಒದಗಿ ಸಿಕೊಡುವ ಇಂತಹ ಸಂಸ್ಥೆಗಳಿಗೆ ಸರಕಾರ ಕಡಿಮೆ ದರದಲ್ಲಿ ಭೂಮಿ ಮತ್ತಿತರ ಮೂಲ ಆವಶ್ಯ ಕತೆಗಳನ್ನು ಒದಗಿಸಿಕೊಡಲು ಸಿದ್ಧವಿದೆ ಎಂದರು.
ದಿಯಾ ಸಿಸ್ಟಮ್ಸ್‌ನ ಮುಖ್ಯ ಕಾರ್‍ಯ ನಿರ್ವಹಣಾಧಿಕಾರಿ ಡಾ| ವಿ.ರವಿಚಂದ್ರನ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕೈಗಾರಿಕಾ ಮತ್ತು ಬಂಡವಾಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎನ್. ಯೋಗೀಶ್ ಭಟ್, ಯು.ಟಿ.ಖಾದರ್, ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷ ಕ್ಯಾ| ಗಣೇಶ್ ಕಾರ್ಣಿಕ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ, ಮಂಗಳೂರು ವಿವಿ ಹಣಕಾಸು ಅಧಿಕಾರಿ ಕುಪ್ಪೂರು ಲಿಂಗಯ್ಯ, ದಿಯಾ ಸಿಸ್ಟಮ್ಸ್‌ನ ಆಡಳಿತ ನಿರ್ದೇಶಕಿ ಇಂದಿ ರಾ ರವಿಚಂದ್ರನ್, ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಮೇಜರ್ ಬಿ.ವಿಜಯ ಕುಮಾರ್ ಮುಖ್ಯ ಅತಿಥಿಗಳಾಗಿದ್ದರು.
ಸಂಸ್ಥೆಯ ಪ್ರಬಂಧಕಿ ದೀಪಿಕಾ ಸ್ವಾಗತಿಸಿದರು. ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾ ಧಿಕಾರಿ ಎಸ್.ಡಿ.ಬಸವರಾಜು ಅವರು ವಂದಿಸಿದರು.
ವರದಿಯ ವಿವರಗಳು |
 |
ಕೃಪೆ : ಉದಯವಾಣಿ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-22 00:00:00
|
|
|