ಮುಂಬೈ: ವೀಣೆ ರಾಜಾರಾಯರ ಜನ್ಮಶತಾಬ್ದಿ ಆಚರಣೆ |
ಪ್ರಕಟಿಸಿದ ದಿನಾಂಕ : 2010-03-22
ಡೊಂಬಿವಿಲಿ(ಪೂರ್ವ) : ಮುಂಬೈ ಉಪನಗರವಾದ ಡೊಂಬಿವಿಲಿಯಲ್ಲಿ ಕರ್ನಾಟಕ ಸಂಗೀತದ ಸೌರಭವನ್ನು ಹರಡುತ್ತಿರುವ ಕರ್ನಾಟಕ ಸಂಗೀತದ ವಿದುಷಿ ಉಮಾನಾಗಭೂಷಣ್ ಅವರ ಮೈಸೂರು ಸಂಗೀತ ವಿದ್ಯಾಲಯವು ಇತ್ತೀಚಿಗೆ ಡೊಂಬಿವಿಲಿಯ ಸಂತ ಜ್ಞಾನೇಶ್ವರ ಕಾರ್ಯಾಲ ಯದ ಸಭಾಂಗಣದಲ್ಲಿ ಗಾನಕಲಾ ಭೂಷಣ ವೀಣೆ ರಾಜಾರಾಯರ ಜನ್ಮಶತಮಾನೋತ್ಸವವನ್ನು ಆಚರಿಸಿತು.
ವೀಣೆ ರಾಜಾರಾಯರ ಶಿಷ್ಯರೂ, ಕಳೆದ ೫೦ ವರ್ಷಗಳಿಂದ ಮುಂಬೈನಲ್ಲಿ ಕರ್ನಾಟಕ ಸಂಗೀತದ ಸೇವೆ ಮಾಡುತ್ತಿರುವ ವಿದ್ವಾಂಸರೂ ಆದ ೯೧ರ ವಯೋವೃದ್ಧ ಸಿ.ಕೆ. ಶಂಕರನಾರಾಯಣ್ ರಾವ್ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬೆಂಗಳೂರಿನ ಉದಯವಾಣಿ ಪತ್ರಿಕೆಯ ಸಂಪಾದಕರಾದ ಡಾ. ಆರ್. ಪೂರ್ಣಿಮಾ ಅವರು ತಮ್ಮ ತಂದೆ ವೀಣೆ ರಾಜಾರಾಯರ ಜೀವನ- ಸಾಧನೆಯನ್ನು ಕುರಿತು ಮಾತನಾಡಿದರು.
ಕಾರ್ಯಕ್ರಮದ ಅಂಗವಾಗಿ ಮೈಸೂರು ವೀಣಾ ಪರಂಪರೆಗೆ ಸೇರಿದ ಪ್ರಸಿದ್ಧ ವೈಣಿಕ ಆರ್. ಎಸ್. ಕೇಶವಮೂರ್ತಿ ಅವರ ಪುತ್ರ ವಿದ್ವಾನ್ ಆರ್.ಕೆ. ಪದ್ಮನಾಭ ಅವರಿಂದ ವಿದ್ವತ್‌ಪೂರ್ಣ ವೀಣಾ ಕತೇರಿ ನಡೆಯಿತು. ಮೃದಂಗದಲ್ಲಿ ವಿದ್ವಾನ್ ಶ್ರೀಧರ ಪಾರ್ಥಸಾರಥಿ ಸಹಕರಿಸಿದರು. ನಂತರ ವೀಣೆ ರಾಜಾರಾಯರ ಕೆಲವು ಕೃತಿಗಳನ್ನು ವಿದುಷಿ ಉಮಾನಾಗಭೂಷಣ್ ಮಾಡಿದರು. ಅರುಣಾ ದುವ್ವರಿ ಸಹಗಾಯನದಲ್ಲಿ ಕುಮಾರ್ ಕೃಷ್ಣಮೂರ್ತಿ ಮೃದಂಗದಲ್ಲಿ ಮತ್ತು ಮುಕುಂದನ್ ಪಿಟೀಲಿನಲ್ಲಿ ಸಹಕರಿಸಿದರು. ಬಿ. ನಾಗಭೂಷಣ ಸ್ವಾಗತಿಸಿದರು.
ವರದಿಯ ವಿವರಗಳು |
 |
ಕೃಪೆ : ಕನ್ನಡಪ್ರಭ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-22 00:00:00
|
|
|