ಉಡುಪಿ: ಮನೋರಮಾರಿಗೆ ರಾಜ್ಯಪಾಲ ಹುದ್ದೆ ? |
ಪ್ರಕಟಿಸಿದ ದಿನಾಂಕ : 2010-03-22
ಉಡುಪಿ, ಮಾ. ೨೧: ಮಾಜಿ ಸಚಿವೆ, ಮಾಜಿ ಸಂಸದೆ ಮನೋರಮಾ ಮಧ್ವರಾಜ್ ಅವರಿಗೆ ಕೇಂದ್ರ ಸರಕಾರ ರಾಜ್ಯಪಾಲ ಹುದ್ದೆಯನ್ನು ನೀಡುವ ಸಾಧ್ಯತೆ ಇದೆ. ರಾಜ್ಯಗಳ ರಾಜ್ಯಪಾಲ ಹುದ್ದೆಯೂ ಇರಬಹುದು, ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್ ಗವರ್ನರ್ ಹುದ್ದೆಯೂ ಇರಬಹುದು ಎಂದು ತಿಳಿದುಬಂದಿದೆ.
ಈ ಕುರಿತು ಮನೋರಮಾ ಅವರನ್ನು ಸಂಪರ್ಕಿಸಿದಾಗ `ಮಹತ್ವದ ಹುದ್ದೆಗಳ ನಿರೀಕ್ಷೆ ಇದೆ. ಆದರೆ ಆಸೆ ಏನೂ ಇಲ್ಲ, ಹಿಂದೆ ಸಾಕಷ್ಟು ಅವಕಾಶಗಳು ಸಿಕ್ಕಿವೆ. ಹಿಂದೊಮ್ಮೆ ಸೋನಿಯಾ ಗಾಂಧಿಯವರೊಡನೆ ಮಾತನಾಡಿದಾಗ ಭರವಸೆಯ ಮಾತನಾಡಿದ್ದರು. ಮುಂದೇನಾಯಿತು ಗೊತ್ತಿಲ್ಲ. ಈಗ ದಿಲ್ಲಿ ಮಟ್ಟದಲ್ಲಿ ನಿಕಟ ಸಂಪರ್ಕವಿಲ್ಲ' ಎಂದು ಹೇಳಿದ್ದಾರೆ.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-22 00:00:00
|
|
| Ibrahim Hussain, Udipi, Karnataka | 2010-03-22 | | ಬರೇ ಲೋಕಸಭೆ ಕಾಂಗ್ರೆಸ್ಸಲ್ಲಿ ಟಿಕೇಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಪಕ್ಷ ಬದಲಾಯಿಸಿ ಕೇಸರಿ ಪಕ್ಷ ಸೇರಿದ ಗೋಸುಂಬೆ ಇದು. ನಂತರ ಬಿಜೆಪಿಯಲ್ಲಿ ಪ್ರಮುಖ ಕುರ್ಚಿ ಸಿಗಲಿಲ್ಲ ವೆಂಬ ಕಾರಣಕ್ಕೆ ಅಣು ಒಪ್ಪಂದದ ಬಗ್ಗೆ ಬಿಜೆಪಿಯ ವಿಪ್ ಉಲ್ಲಂಘಿಸಿದ ಮಹತಾಯಿ ಇದು. ನಂತರ ಕಾಂಗ್ರೆಸ್ಸಿಗೆ ತಿಪ್ಪರಲಾಗ ಹಾಕಿದ ಮಹಾಮಾರಿ ಇದು. ಬರೇ ಮೊಗವೀರ ಸಮಾಜವನ್ನು ಖುಶಿ ಪಡಿಸಲು ಇಅವರಿಗೆ ರಾಜ್ಯಾಪಾಲರ ಹುದ್ದೆ ನೀಡುವುದಾದರೆ, ಕಾಂಗ್ರೆಸ್ಸು ಭ್ರಮಾಲೋಕದಲ್ಲಿದೆ ಏಕೆಂದರೆ ಮೋಗವೀರರು ಎಂದು ಕಾಂಗ್ರೆಸ್ಸ್ ಪಕ್ಷಕ್ಕೆ ಬಲ ಕೊಟ್ಟವರಲ್ಲ. ಮತ್ತೆ ರಾಜ್ಯಪಾಲರಾಗಲು ಕನಿಷ್ಟ ಅರ್ಹತೆಯಾದರೂ ಬೇಕಲ್ಲವೆ? ಉಸ್ಮಾನಿಯಾ ಯೂನಿವರ್ಸಿಟಿಯ ನಕಲಿ ಪದವಿ ಸರ್ಟಿಫಿಕೇಟು ಮಲ್ಪೆಯ ಇವರ ಅರಮನೆಯ ಚಾವಡಿಯಲ್ಲಿ ನೇತು ಬಿದ್ದಿರುವುದನ್ನು ನಾನು ನೋಡಿರುತ್ತೇನೆ. ರಾಜ್ಯಪಾಲರಾಗುತ್ತಾರೆಂದು ಇವರು ಕನಸು ಕಾಣುತ್ತಿದಾರೆ ಎಂದು ನನಗನಿಸುತ್ತದೆ. ಕಾಂಗ್ರೆಸ್ಸು ತಿಳಿದು ಇಂತಹ ತಪ್ಪನ್ನು ಮಾಡಬಾರದು. |
|