ಗುರುವಾರ, 09-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಹೊನ್ನಾವರ ಬಳಿ ಮರಕ್ಕೆ ಕಾರು ಢಿಕ್ಕಿ: ಉಡುಪಿ ಡಿಸಿಐಬಿ ನಿರೀಕ್ಷಕರಿಗೆ ತೀವ್ರ ಗಾಯ
Latest news item ಜಿಲ್ಲೆಯನ್ನು ಮುಜುಗರಕ್ಕೀಡು ಮಾಡಿದ ಪಾಲೆಮಾರ್ ; ಯಾಕಿಂಥ ಕೆಲಸ ಮಾಡಿದರು? | ಬಿಜೆಪಿಯ ಹಗರಣಗಳು ಮತ್ತು ಕಳಂಕಿತ ಮಿನಿಸ್ಟರುಗಳು | ವಾಜಪೇಯಿ, ಅಡ್ವಾಣಿ ಬೆಳೆಸಿದ ಪಕ್ಷ ಇದೇನಾ?
Latest news item ಯು. ಎ. ಇ. ಬಂಟ್ಸ್ ಡೈರೆಕ್ಟರಿ - 2012 | UAE BUNTS DIRECTORY -2012
Latest news item ಸದನದಲ್ಲಿ ಸಚಿವರ ಸೆಕ್ಸ್ ಫಿಲಂ ವೀಕ್ಷಣೆಯ ರದ್ದಾಂತ : ಉಡುಪಿಯಲ್ಲಿ ಎಸ್.ಡಿ.ಪಿ.ಐ ಪ್ರತಿಭಟನೆ
Latest news item ಯುಪಿಸಿ‌ಎಲ್ ವಿರುದ್ದ ಹೈಕೋರ್ಟ್ ನಲ್ಲಿ ದಾವೆ ಹೂಡಲು ಸಿದ್ದ : ಪತ್ರಿಕಾಗೋಷ್ಠಿಯಲ್ಲಿ ಜಯಶ್ರೀ ಕೃಷ್ಣ ಶೆಟ್ಟಿ
Latest news item ಹೋಟೆಲ್ ಕಿದಿಯೂರಿನ ರಜತ ಸಂಭ್ರಮ : ಪೇಜಾವರ ಶ್ರೀಗಳಿಗೆ ತುಲಾಭಾರ
Latest news item ರೇವ್ ಪಾರ್ಟಿ ಕುರಿತು ಗ್ರಾ.ಪಂ.ಗೆ ಗೊತ್ತೇ ಇಲ್ಲ! ಇನ್ನೊಂದು ವಿವಾದದತ್ತ ಜಿಲ್ಲಾಡಳಿತ
Latest news item ಸದನದಲ್ಲಿ ಸಚಿವತ್ರಯರ ‘ಕಾಮಹರಣ’ : ರಾಜ್ಯದಾದ್ಯಂತ ಆಕ್ರೋಶ : ಉಡುಪಿಯಲ್ಲಿ ನಾಗರೀಕರ ಸಮಿತಿಯ ವಿಶಿಷ್ಟ ಪ್ರತಿಭಟನೆ
Latest news item ಮಲೆನಾಡಿನ ಕವಿ, ಉಪ್ಪುಕಡಲಿನ ರವಿ- ಪ್ರೊ.ಎಸ್.ವಿ.ಪರಮೇಶ್ವರ ಭಟ್ಟರು
Latest news item ದುಬೈ:ಕೆ.ಎಮ್.ಡಬ್ಲು.ಎ ವತಿಯಿಂದ ಕ್ರಿಕೆಟ್ ಟೂರ್ನಮೆಂಟ್
Latest news item ಸದನದಲ್ಲಿ ಮೊಬೈಲ್ ಫೋನ್‌ ಅಶ್ಲೀಲ ದೃಶ್ಯಗಳನ್ನು ವೀಕ್ಷಿಸಿದ ಸಚಿವರುಗಳ ತಲೆದಂಡ: ಸವದಿ, ಸಿಸಿ, ಮತ್ತು ಪಾಲೇಮಾರ್‌ ಮಂತ್ರಿ ಸ್ಥಾನಕ್ಕೆ ರಾಜಿನಾಮೆ
Latest news item SHAME ON YOU! ..ಇದು ಸರೀನಾ?...ವಿಧಾನಸಭೆಯಲ್ಲೇ ಸೆಕ್ಸ್ ಫಿಲ್ಮ್ ವೀಕ್ಷಿಸಿದ ಸಚಿವ ಸವದಿ!; ರಾಜ್ಯಾದ್ಯಂತ ತೀವ್ರ ಆಕ್ರೋಶ | ಅವರ ಜತೆ ಅಶ್ಲೀಲಚಿತ್ರ ಹಂಚಿಕೊಂಡ ಸಚಿವರು ಯಾರ್ಯಾರು? ರಾಜ್ಯ ಸರ್ಕಾರಕ್ಕೆ ಮತ್ತೊಂದು ಮುಜುಗರ!!
Latest news item ಕಲಾಪದಲ್ಲೂ ಪ್ರತಿಧ್ವನಿಸಿದ 'ಮಲ್ಪೆ ಸೈಂಟ್ ಮೇರಿಸ್ ಕಾಮಕೇಳಿ ಪ್ರಕರಣ'; ತನಿಖೆ ಆದೇಶಿಸಿದ ಸಿ.ಎಮ್
Latest news item ರೇವ್ ಪಾರ್ಟಿ ಪಶು ಸಂಸ್ಕೃತಿಯ ಪ್ರತೀಕ : ಅಶೋಕ್ ಸಿಂಘಾಲ್ ಖಂಡನೆ | ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ
Latest news item ಮಲ್ಪೆ ರೇವ್ ಪಾರ್ಟಿ ಪ್ರಕರಣ : ಜೆಡಿ‌ಎಸ್ ವಿನೂತನ ಪ್ರತಿಭಟನೆ
Latest news item ರೇವ್ ಪಾರ್ಟಿಯಿಂದ ಪವಿತ್ರ ಕ್ಷೇತ್ರ ಅಪವಿತ್ರ: ಇಂತಹ ವಿಕೃತಿ ಎಲ್ಲಿಯೂ ನಡೆಯಬಾರದು : ಪೇಜಾವರ ಶ್ರೀ ಪ್ರತಿಕ್ರೀಯೆ
Latest news item ಕಿದಿಯೂರ್ ಹೋಟೆಲ್ ನ ನೂತನ ಶಿಲಾದೇಗುಲದಲ್ಲಿ ನಾಗದೇವರ ಪುನ:ಪ್ರತಿಷ್ಠೆ : ವಿಶೇಷ ಪೂಜಿತ ನಾಗರಕ್ಷಾದಾರ ಧಾರಣೆ
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ಮಂಗಳೂರು: ಎದುರುಪದವು: ಗ್ರಾಮಾಭಿವೃದಿಯಲ್ಲಿ ದಂಪತಿಯ ಸಾಧನೆ; ಸಾಕ್ಷರತೆ, ಸ್ವಸಹಾಯ ಗುಂಪು ರಚನೆಯ ಮೂಲಕ ಗ್ರಾಮಾಭಿವೃದ್ಧಿಗೆ ಶ್ರಮಿಸಿದ ಎಲೆಮರೆಯ ಕಾಯಿಗಳಿವರು

ಮಂಗಳೂರು, ಮಾ.೧೮: ಒಂದು ಕುಟುಂಬದ ಅಭಿವೃದ್ಧಿಯಲ್ಲಿ ಆ ಕುಟುಂಬದ ಯಜಮಾನನ ಚಿಂತನೆ, ಕೆಲಸಕಾರ್ಯ, ಸಾಧನೆಗಳು ಮಹತ್ವದ್ದಾಗಿದ್ದರೆ ಒಂದು ಗ್ರಾಮದ ಅಭಿವೃದ್ಧಿಯಲ್ಲಿ ಅಲ್ಲಿನ ಜನರ ನಡುವಿನ ಅನ್ಯೋನ್ಯತೆ, ಸೌಹಾರ್ದತೆ ಜೊತೆಗೆ ಶ್ರಮ ಪ್ರಮುಖ ಪಾತ್ರ ವಹಿಸುತ್ತವೆ. ಈ ರೀತಿಯಾಗಿ ಇಂದು ನಮ್ಮ ಭಾರತದಲ್ಲಿ, ಕರ್ನಾಟಕದಲ್ಲಿ ಮಾತ್ರವಲ್ಲ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ಬಹಳಷ್ಟು ಗ್ರಾಮಗಳಲ್ಲಿ ಇಲ್ಲೊಂದು ಪುಟ್ಟ ಗ್ರಾಮವಿದೆ. ಮಂಗಳೂರು ತಾಲೂಕಿಗೆ ಸೇರಿದ ಈ ಗ್ರಾಮದ ಸರ್ವತೋಮುಖ ಅಭಿವೃದ್ಧಿ ಅದರಲ್ಲೂ ಮುಖ್ಯವಾಗಿ ಸಾಕ್ಷರ ಗ್ರಾಮ, ಸ್ವಾವಲಂಬಿ ಗ್ರಾಮವಾಗಿ ಬೆಳೆದ ಹೆಜ್ಜೆ ಗುರುತುಗಳಲ್ಲಿ ಜನರ ಶ್ರಮದ ಜೊತೆಗೆ ಎಲೆಮರೆಯ ಕಾಯಿಗಳಾಗಿ ಉಳಿದಿರುವ ದಂಪತಿಯ ಅಪರಿಮಿತ ಆಸಕ್ತಿ, ಜನರ ಕಷ್ಟ ಸುಖಗಳಲ್ಲಿ ಬೆರೆತು ಅವರ ಬೆಂಗಾವಲಾಗಿ ನಿಲ್ಲುವಲ್ಲಿ ಇಂದಿಗೂ ಅವರಲ್ಲಿ ತೋರುವ ಅದಮ್ಯ ಉತ್ಸಾಹ ಶ್ಲಾಘನೀಯ.

ವನ್ಯ ಜೀವಿ, ಪ್ರಾಕೃತಿಕ ತಾಣವಾಗಿ ಇಂದು ರೂಪುಗೊಂಡಿರುವ ಪಿಲಿಕುಳ ನಿಸರ್ಗಧಾಮಕ್ಕೆ ತಾಗಿಕೊಂಡಿರುವ ಮೂಡುಶೆಡ್ಡೆ ಗ್ರಾಮದ ಎದುರುಪದವು ಸುಮಾರು ೨೦-೩೦ ವರ್ಷಗಳ ಹಿಂದೆ ಬೋಳು ಗುಡ್ಡೆಯಾಗಿತ್ತು. ಸಂಪೂರ್ಣವಾಗಿ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದ ಈ ಗ್ರಾಮ ಅನಕ್ಷರಸ್ಥರು, ಕಷ್ಟ ಜೀವಿಗಳಿಂದ ತುಂಬಿತ್ತು. ಅಕ್ಕಪಕ್ಕದ ಗದ್ದೆಗಳಲ್ಲಿ, ಕಾರ್ಖಾನೆ ಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಇಲ್ಲಿನ ಜನರು ಕಷ್ಟಜೀವಿಗಳು.

ಅಲ್ಲಿನ ನೂರಾರು ಕುಟುಂಬಗಳಲ್ಲಿ ಎಸ್.ಮುಹಮ್ಮದ್ ಮತ್ತು ಪಾತುಂಞಿಯವರ ತುಂಬಿದ ಕುಟುಂಬವೂ ಬಡತನದ ಬೇಗೆಯಲ್ಲೇ ದಿನದೂಡುತ್ತಿದ್ದ ಕಾಲವದು. ಈ ದಂಪತಿಗೆ ಎಂಟು ಮಂದಿ ಮಕ್ಕಳು. ಐದು ಮಂದಿ ಹೆಣ್ಣು, ಮೂರು ಗಂಡು ಮಕ್ಕಳು. ಆ ಸಮಯಕ್ಕೆ ವಾಮಂಜೂರಿನ ಧರ್ಮಜ್ಯೋತಿ ಸಂಸ್ಥೆಗೆ ಬಂದ್ದ ಸಿಸ್ಟರ್ ಮರಿಯಾ ಗೊರೆಟ್ಟಿಯವರು ವಾರಕ್ಕೊಮ್ಮೆ ಈ ಎದುರುಪದವು ಗ್ರಾಮದ ಜನರ ಕಷ್ಟ ಸುಖಗಳನ್ನು ವಿಚಾರಿಸಲು ಬರುತ್ತಿದ್ದರು. ಹಾಗೆ ಬಂದವರು ಕೇವಲ ಇಲ್ಲಿನ ಜನರ ಸಮಸ್ಯೆಗಳಿಗೆ ಸಾಂತ್ವನ ಹೇಳಿ ಸುಮ್ಮನಾಗಲಿಲ್ಲ. ಜನರ ಸಮಸ್ಯೆಗಳಿಗೆ ಅವರಿಂದಲೇ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜನರ ಸಂಘವೊಂದನ್ನು ರಚಿಸಲು ಸಿಸ್ಟರ್ ಗೊರಟ್ಟಿಯವರು ನೀಡಿದ ಮಾರ್ಗದರ್ಶನದ ಮೇರೆಗೆ ೧೯೮೧ರ  ಆಗಸ್ಟ್ ತಿಂಗಳಲ್ಲಿ ‘ಕಷ್ಟಕಾರಿ ಕಾರ್ಮಿಕರ ಸಂಘ’ವೊಂದು ರಚನೆಯಾಯಿತು. ನಂತರ ಇದು ಗ್ರಾಮಾಭಿವೃದ್ಧಿ ಸಂಘವಾಗಿ ಹೆಸರು ಪಡೆಯಿತು.

ಸಂಘದ ಪ್ರಥಮ ಅಧ್ಯಕ್ಷರಾಗಿ ಆಯ್ಕೆಯಾದ ಜಯರಾಮ ಎಸ್. ಕೊಟ್ಟಾರಿ ಸುಮಾರು ಐದು ವರ್ಷಗಳ ಕಾಲ ಅಧ್ಯಕ್ಷರಾಗಿ ಗ್ರಾಮಾಭಿವೃದ್ಧಿಯಲ್ಲಿ ಸಣ್ಣ ಸಣ್ಣ ಹೆಜ್ಜೆಗಳನ್ನಿರಿಸಿದರೆ, ೧೯೮೬-೮೭ನೆ ಸಾಲಿನಲ್ಲಿ ಅಧ್ಯಕ್ಷೆಯಾಗಿ ಸತ್ಯವತಿ ಶೆಟ್ಟಿಯವರು ಆಯ್ಕೆಯಾಗಿ ಎರಡು ವರ್ಷಗಳ ಕಾಲ ಗ್ರಾಮದ ಅಭಿವೃದ್ಧಿಯಲ್ಲಿ ಕೈಯಾಡಿಸಿದರು. ನಂತರ ಅಂದರೆ ೧೯೮೮-೮೯ನೆ ಸಾಲಿನಲ್ಲಿ ಗ್ರಾಮದ ಅಭಿವೃದ್ಧಿಯ ನೊಗ ಎಸ್. ಮುಹಮ್ಮದ್‌ರವರ ಹೆಗಲ ಮೇಲೆ ಬಿತ್ತು.

ಬಡತನದ ಬೇಗೆಯ ನಡುವೆಯೇ ತುಂಬಿದ ಸಂಸಾರದ ಭಾರದ ಜೊತೆಗೆ ಗ್ರಾಮಾಭಿವೃದ್ಧಿಯ ಹೊಣೆಯನ್ನು ಸವಾಲಾಗಿಯೇ ಸ್ವೀಕರಿಸಿದ ಎಸ್. ಮುಹಮ್ಮದ್‌ರವರಿಗೆ ಸಾಥ್ ನೀಡಿದ್ದು ಅವರ ಪತ್ನಿ ಪಾತುಂಞಿ. ಈ ದಂಪತಿಗಳಿಬ್ಬರೂ ಅಲ್ಪಸ್ವಲ್ಪ ಪ್ರಾಥಮಿಕ ಶಾಲಾನುಭವ ಹೊಂದಿದ್ದರಿಂದ ಶಿಕ್ಷಣದ ಬಗ್ಗೆ ಅಪಾರ ಗೌರವ, ಪ್ರೀತಿಯನ್ನು ಹೊಂದಿದ್ದರು. ಹಾಗಾಗಿಯೇ ೧೯೯೦-೯೧ರಲ್ಲಿ ಜಿಲ್ಲೆಗೆ ಕಾಲಿಟ್ಟ ಸಾಕ್ಷರತಾ ಯೋಜನೆ ಈ ದಂಪತಿಯ ಅದಮ್ಯ ಉತ್ಸಾಹ, ಸಾಧಿಸುವ ಛಲವನ್ನು ಹೆಚ್ಚಿಸುವ ಜೊತೆಗೆ ಗ್ರಾಮಾಭಿವೃದ್ಧಿಗೆ ಒತ್ತು ನೀಡಲು ಸಹಕರಿಸಿತು.

೧೯೯೦ರ ಆಗಸ್ಟ್ ೯ರಲ್ಲಿ ನಡೆದ ಸಾಕ್ಷರತಾ ಜನಗಣತಿಯಲ್ಲಿ ಈ ಗ್ರಾಮದ ಸುಮಾರು ೩೦ ಜನರು ಭಾಗವಹಿಸಿದ್ದು, ಅವರಲ್ಲಿ ಈ ದಂಪತಿಯೂ ಪ್ರಮುಖರು.  ಅವರಲ್ಲಿ ಅಂದು ಜಾತಿವಾರು ಪ್ರಕಾರ ದಾಖಲಿಸಿಕೊಂಡ ಜನಗಣತಿಯ ದಾಖಲೆಗಳು ಇನ್ನೂ ಭದ್ರವಾಗಿವೆ. ೧೪ರಿಂದ ೩೫ ವರ್ಷದೊಳಗಿನವರನ್ನು ಸಾಕ್ಷರನ್ನಾಗಿಸುವ ಸರಕಾರದ ಈ ಮಹತ್ವದ ಯೋಜನೆಯ ಬಗ್ಗೆ ಜನರಿಗೆ ಮಾಹಿತಿ ನೀಡುವ ಕೆಲಸವೂ ಎದುರುಪದವು ಊರಿನಲ್ಲಿ ನಡೆಯಿತು. ಊರಿನ ಬಹಳಷ್ಟು ಮಂದಿಗೆ ಕಲಿಯಲೇನೋ ಆಸಕ್ತಿ ಇತ್ತು.

 ಆದರೆ ಎಲ್ಲರೂ ಕೂಲಿ ನಾಲಿ ಮಾಡಿಕೊಂಡು ಬದುಕುತ್ತಿದ್ದವರಾದ್ದರಿಂದ ಒಂದು ದಿನ ಕೂಲಿಗೆ ತಪ್ಪಿದರೂ ಆ ದಿನ ಆ ಕುಟುಂಬ ಉಪವಾಸ ಬೀಳುತ್ತದೆ. ಹಾಗಾಗಿ ಪುರುಷರಿಗೆ ರಾತ್ರಿಯಲ್ಲಿ ಕಲಿಕೆಗೆ ಗ್ರಾಮಾಭಿವೃದ್ಧಿ ಸಂಘದ ಕಚೇರಿಯಲ್ಲಿ ಚಿಮಿಣಿ ದೀಪದ ಬೆಳಕಿನಲ್ಲಿ ಅವಕಾಶ ಕಲ್ಪಿಸಲಾಯಿತು. ಹಾಗಿದ್ದರೂ ಮಹಿಳೆಯರ ಕಲಿಕೆಗೆ ಸಾಕಷ್ಟು ಎಡರು ತೊಡರುಗಳು ಕಂಡು ಬಂದವು. ಕೆಲ ಮಹಿಳೆಯರಲ್ಲಿ ಆಸಕ್ತಿ ಇದ್ದರೂ, ಹೆಂಗಸರು ಕಲಿತೇನು ಆಗಬೇಕೆಂಬ ಮೂದಲಿಕೆ, ಕಲಿಸುವವರು ಯಾರೆಂಬ ಚಿಂತೆ, ಎಲ್ಲಿ ಕಲಿಸುವುದೆಂಬ ಆತಂಕ ಕಾಡಿದಾಗ ಕೊನೆಗೆ ಎಸ್. ಮುಹಮ್ಮದ್‌ರವರು ತಮ್ಮ ಪತ್ನಿಯನ್ನು ಊರಿನ ಆಸಕ್ತ ಮಹಿಳೆಯರಿಗೆ ಕಲಿಸಲು ಪ್ರೇರೇಪಿಸಿದರು.

 ಹಾಗಾಗಿ ಮುಹಮ್ಮದ್ ಪಾತುಂಞಿಯವರ ಮನೆಯೇ ಕಲಿಕಾ ಶಾಲೆಯಾಗಿ ರೂಪುಗೊಂಡಿತು. ಪತಿಯ ಸಹಕಾರ, ಮಕ್ಕಳ ಪ್ರೋತ್ಸಾಹದೊಂದಿಗೆ ಊರಿನ ಅನಕ್ಷರಸ್ಥ ಮಹಿಳೆಯರಿಗೆ ಕಲಿಕೆಯ ಹೊಣೆಯನ್ನು ಸಮರ್ಥವಾಗಿ ನಿಭಾಯಿಸಿದ ಪಾತುಂಞಿ ಯವರಿಗೆ ಊರಿನವರ ಬೆಂಬಲವೂ ದೊರಕಿತು. ಪಾಳಿಯಂತೆ ಒಟ್ಟು ೨೬ ಮಹಿಳೆಯರಿಗೆ ಪಾತುಂಞಿಯವರು ಮನೆಯಲ್ಲೇ ನಾಲ್ಕು ತಿಂಗಳ ಕಾಲ ಸಾಕ್ಷರತೆ ಯೋಜನೆಯನ್ನು ಸಾಕಾರಗೊಳಿಸಿದರು. ಯೋಜನೆಯು ಮತ್ತೆ ಎರಡು ತಿಂಗಳಿಗೆ ವಿಸ್ತರಿಸಿದಾಗಲೂ ಈ ದಂಪತಿಗಳು ಈ ಕಾರ್ಯದಲ್ಲಿ ಅತ್ಯಂತ ಹುಮ್ಮನಿಸಿನಿಂದ ತೊಡಗಿಕೊಂಡರು. ಬಳಿಕ ದ.ಕ. ಜಿಲ್ಲೆಗೆ ಸಾಕ್ಷರತಾ ಯೋಜನೆಗೆ ನೀಡಲಾಗಿದ್ದ ಎರಡು ಕೋಟಿ ರೂ.ಗಳಲ್ಲಿ ಹಣ ಉಳಿಕೆಯಾದಾಗ ಆರಂಭಗೊಂಡ ನಿರಂತರ ಶಿಕ್ಷಣದಲ್ಲೂ ಈ ದಂಪತಿಯ ಭಾಗವಹಿಸುವಿಕೆ ಹಿಂದಿನಂತೆಯೇ ಮುಂದುವರಿಯಿತು. ಹೀಗೆ ಎದುರುಪದವು ಗ್ರಾಮದಲ್ಲಿ ಮುಂದುವರಿದ ಸಾಕ್ಷರತೆ ಯೋಜನೆಯಲ್ಲಿ ನವಸಾಕ್ಷರರಾದವರು ಹೊರ ಜಗತ್ತಿನ, ಸರಕಾರದ ಸೌಲಭ್ಯಗಳ ಬಗ್ಗೆ ಅರಿವನ್ನು ಪಡೆಯುವಂತಾಯಿತು. ಸಾಕ್ಷರತೆಯ ಜೊತೆಗೆ ಸ್ವ ಉದ್ಯೋಗಕ್ಕೆ ಇಂಬು ಕೊಡುವ ನಿಟ್ಟಿನಲ್ಲಿ ಹೊಲಿಗೆ ತರಬೇತಿಗೆ ಈ ದಂಪತಿ ಪ್ರೋತ್ಸಾಹ ನೀಡಿದರು. ತಮ್ಮ ಹೆಣ್ಣು ಮಕ್ಕಳಿಗೂ ಹೊಲಿಗೆ ಕಲಿಸಿ ಅವರ ಮೂಲಕ ಊರಿನ ಹೆಣ್ಣು ಮಕ್ಕಳಿಗೆ ಉಚಿತವಾಗಿ ಹೊಲಿಗೆ ತರಬೇತಿ ನೀಡಲು ಪ್ರೋತ್ಸಾಹಿಸಿದರು.

ಎದುರುಪದವಿನಲ್ಲಿ ಸಾಕ್ಷರತೆಯ ಮೂಲಕ ನವಸಾಕ್ಷರೆಯಾಗಿ ಮೂಡಿಬಂದ ಬಿಫಾತಿಮ ನವಸಾಕ್ಷರರ ಜಿಲ್ಲಾ ಮಟ್ಟದ ಕಾರ್ಯದರ್ಶಿಯಾಗಿ, ತಾಲೂಕು ಮಟ್ಟದಲ್ಲಿ ಅಧ್ಯಕ್ಷೆಯಾಗಿ ಅಧಿಕಾರಿಗಳ ಜೊತೆ ಸಮಾಲೋಚನಾ ಮಟ್ಟಕ್ಕೆ ಬೆಳೆಯಲು ಕಾರಣವಾಯಿತು ಎಂಬುದನ್ನು ಇಲ್ಲಿ ಉಲ್ಲೇಖಿಸಲೇಬೇಕು.


ಇಷ್ಟಕ್ಕೆ ಈ ದಂಪತಿ ಸುಮ್ಮನಾಗಲಿಲ್ಲ. ತಮ್ಮ ಮಕ್ಕಳ ಆಸಕ್ತಿಗೆ ಅನುಸಾರವಾಗಿ ಅವರಿಗೆ ವಿದ್ಯಾಭ್ಯಾಸ ನೀಡಿದ ಇವರು, ಊರಿನವರ ಪ್ರತಿಯೊಂದು ಸಮಸ್ಯೆ, ಕಷ್ಟ ಸುಖಗಳಲ್ಲೂ ಭಾಗಿಯಾದರು. ಸಾಕ್ಷರತೆಯ ಮೂಲಕ ಹೊಸ ಜೀವನೋತ್ಸಾಹ ಪಡೆದ ಈ ಗ್ರಾಮದ ಜನರ, ಈ ದಂಪತಿಗಳ ಸಾಧನೆಗೆ ಬೆಂಗಾವಲಾಗಿ ನಿಂತಿದ್ದ ಸಿಸ್ಟರ್ ಗೊರಟ್ಟಿಯವರ ಪ್ರೇರಣೆಯ ಮೇರೆಗೆ ಆರ್ಥಿಕವಾಗಿ ಸ್ವಾವಲಂಬಿಯಾಗುವ ದಾರಿಯನ್ನು ಕಂಡುಕೊಳ್ಳಲಾಯಿತು. ವಾರಕ್ಕೆ ೧೦ ರೂ.ಗಳಂತೆ ಉಳಿಕೆಯೊಂದಿಗೆ ಮಹಿಳೆಯರಿಂದಲೇ ಆರಂಭವಾದ ಈ ಗ್ರಾಮದ  ಸ್ವಸಹಾಯ ಗುಂಪು ಧರ್ಮಸ್ಥಳದ ಸ್ವಸಹಾಯ ಯೋಜನೆ ಈ ಗ್ರಾಮಕ್ಕೆ ಕಾಲಿಡುವ ಮೊದಲೇ ಆರಂಭಗೊಂಡಿತ್ತು ಎನ್ನುವುದು ವಿಶೇಷ. ಹೀಗೆ  ಒಟ್ಟು ೨೩ ಸ್ವಸಹಾಯ ಗಂಪುಗಳು ರಚನೆಯಾದವು. ಈ ಸ್ವಸಹಾಯ ಗುಂಪು ರಚನೆಯಲ್ಲಿ ಈ ದಂಪತಿಯ ಪಾತ್ರ ಮಹತ್ತರವಾದುದು. ಉಳಿಕೆಯ ಹಣವನ್ನು ಸಂಗ್ರಹಿಸಿ ಬ್ಯಾಂಕ್‌ನಲ್ಲಿ ಠೇವಣಿಯಿರಿಸಿ, ಅಗತ್ಯವಿರುವವರಿಗೆ ಸಾಲ ಸೌಲಭ್ಯ ಕಲ್ಪಿಸುವ ಅತ್ಯಂತ ಕ್ಲಿಷ್ಟಕರ ಜವಾಬ್ಧಾರಿಯನ್ನು ಪಾತುಂಞಿಯವರು ವಹಿಸಿಕೊಂಡರು. ಪ್ರಸ್ತುತ ಕೆಲ ಗುಂಪುಗಳು ನೆಲಕಚ್ಚಿದ್ದರೆ, ೧೩ ಗುಂಪುಗಳನ್ನು ನವೋದಯ ಸ್ವಸಹಾಯ ಸಂಘಕ್ಕೆ ಪಾತುಂಞಿಯವರು ವಹಿಸಿಕೊಟ್ಟಿದ್ದಾರೆ.

ಪ್ರಸ್ತುತ ಪಾತುಂಞಿಯವರು ಮೂರು ಗುಂಪುಗಳನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಹೀಗೆ ಗ್ರಾಮದ ಅಭಿವೃದ್ಧಿಯಲ್ಲಿ ತಮ್ಮದೇ ರೀತಿಯಲ್ಲಿ ಸದ್ದಿಲ್ಲದೆ ಕೊಡುಗೆ ನೀಡುತ್ತಾ ಸಾಗಿದ ಈ ದಂಪತಿ, ಊರಿನ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು, ಆಶ್ರಯ ಮನೆ, ನಿವೇಶನ ಪತ್ರ ಹೀಗೆ ನಾನಾ ರೀತಿಯ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಜನರು ಹಾಗೂ ಸರಕಾರದ ನಡುವಿನ ಕೊಂಡಿಗಳಾಗಿ ತಮ್ಮನ್ನು ತಾವು ಅರ್ಪಿಸಿಕೊಳ್ಳುವ ಮೂಲಕ ಜನರ ಪ್ರೀತಿಗೆ ಪಾತ್ರರಾದರು. ತಮ್ಮ ಮಕ್ಕಳ ವಿದ್ಯಾಭ್ಯಾಸ, ಮದುವೆ ಮೊದಲಾದ ತಮ್ಮ ವೈಯಕ್ತಿಕ ಸಮಸ್ಯೆಗಳ ನಡುವೆಯೂ ಜನರ ಜೊತೆ ಬೆರೆತ ಈ ದಂಪತಿ ಇಂದಿಗೂ ತಮ್ಮ ಜನಪರ ಸೇವೆಯ ಕಾರ್ಯವನ್ನು  ಮುಂದುವರಿಸುತ್ತಿದ್ದಾರೆ. ಪಿಲಿಕುಳದ ಕೆರೆಯನ್ನು ಉಳಿಸುವ ಹೋರಾಟ ದಲ್ಲಿಯೂ ಈ ದಂಪತಿಯ ಪಾತ್ರವಿದೆ. ಜನರ ಪ್ರೀತಿಯಿಂದಾಗಿಯೇ ಎದುರುಪದವು ಗ್ರಾಮಾಭಿವೃದ್ಧಿ ಸಂಘದ ಅಧ್ಯಕ್ಷರಾಗಿ ೧೯೮೮-೮೯ನೆ ಸಾಲಿನಲ್ಲಿ ಜನಪರ ಸೇವೆಯ ಹೊಣೆಯನ್ನು ಹೊತ್ತ ಎಸ್. ಮುಹಮ್ಮದ್‌ರವರು ಸತತ ೧೬ ವರ್ಷಗಳ ಕಾಲ ಅಧ್ಯಕ್ಷರಾಗಿ ಮುಂದುವರಿದಿದ್ದರು. ಪ್ರಸ್ತುತ ಸುಮಾರು ೬೫ರ ಹರೆಯದ ಮುಹಮ್ಮದ್ ಸಂಘದ ಕೋಶಾಧಿಕಾರಿಯಾಗಿದ್ದು, ಪಾತುಂಞಿಯವರು ಸಮಿತಿ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕೂಲಿಯ ಸಂಪಾದನೆಯಲ್ಲೇ ತಮ್ಮ ಮಕ್ಕಳಿಗೆ ಮದುವೆ (ಐದು ಹೆಣ್ಣು ಮಕ್ಕಳಲ್ಲಿ ನಾಲ್ಕು ಮಂದಿಗೆ ವಿವಾಹವಾಗಿದ್ದರೆ, ಮೂವರು ಗಂಡು ಮಕ್ಕಳಲ್ಲಿ ಇಬ್ಬರಿಗೆ ವಿವಾಹವಾಗಿದೆ) ಶಿಕ್ಷಣ ನೀಡಿರುವ ಇವರ ಮಕ್ಕಳಲ್ಲಿ ಕಿರಿಯವಳಾದ ತಾಯಿರಾ ಬಾನು ಪ್ರಸ್ತುತ ಕಾನೂನು ಪದವಿ(ಐದು ವರ್ಷಗಳ)ಯ ಅಂತಿಮ ವರ್ಷದ ಅಧ್ಯಯನದಲ್ಲಿ ನಿರತರಾಗಿದ್ದಾರೆ.

‘ವಾರ್ತಾಭಾರತಿ’ ಪತ್ರಿಕೆಯ ಜೊತೆ ತಮ್ಮ ಅನುಭವಗಳನ್ನು ಹಂಚಿಕೊಂಡ ಈ ದಂಪತಿಗಳ ಕಣ್ಣುಗಳಲ್ಲಿ ಇನ್ನೂ ಉತ್ಸಾಹದ ಸೆಲೆಯಿದೆ. ಕಾಲಿನ ಗಂಟು ಬೇನೆಯಿಂದ ಆಸ್ಪತ್ರೆಯಲ್ಲಿ ಒಂದು ವಾರ ಚಿಕಿತ್ಸೆ ಪಡೆದು ಮನೆಗೆ ಬಂದ ಮಾರನೆಯ ದಿನವೇ ‘ಇಂದು ಮಧ್ಯಾಹ್ನದ ಮೇಲೆ ನನಗೆ ಮಂಗಳೂರಿಗೆ ಮೀಟಿಂಗೊಂದಕ್ಕೆ ಹೋಗಲಿಕ್ಕಿದೆ’ ಎಂದು ಪಾತುಂಞಿಯವರು ಹೇಳುವಾಗ ಜನಸೇವೆಯ ಬಗೆಗಿನ ಅವರ ಕಾಳಜಿಯನ್ನು ಊಹಿಸಬಹುದು.

“ಸಾಕ್ಷರತೆ ನಮ್ಮ ಗ್ರಾಮದ ಜನರ ಸ್ವರೂಪವನ್ನೇ ಬದಲಾಯಿಸಿತು. ಇಲ್ಲಿನ ಜನರ ಕಷ್ಟ ಸುಖಗಳಿಗೆ ಸ್ಪಂದಿಸುವ ಮೂಲಕ ನಮ್ಮಲ್ಲಿ ಉತ್ಸಾಹ ತುಂಬಿದ ಸಿಸ್ಟರ್ ಗೊರಟ್ಟಿಯವರ ಮೂಲಕ ಗ್ರಾಮಾಭಿವೃದ್ಧಿಗೆ ನಾಂದಿ ಹಾಡಲಾಯಿತಾದರೆ, ಸಾಕ್ಷರತೆಯ ಮೂಲಕ ತಮ್ಮ ಊರಿನ ಪ್ರತಿಯೊಂದು ಮನೆ ಮನೆಗಳಿಗೂ ಭೇಟಿ ನೀಡಿ ಅರಿವು ಮೂಡಿಸಿದ ಕೆಲ ಅಧಿಕಾರಿಗಳು ಹಾಗೂ ಶೀನ ಶೆಟ್ಟಿ ಹಾಗೂ ಕೃಷ್ಣ ಮೂಲ್ಯರು ಈ ಜಿಲ್ಲೆಗೇ ಒಂದು ಕೊಡುಗೆ” ಎಂದು ಮೆಚ್ಚುಗೆ ವ್ಯಕ್ತಪಡಿಸುವ ಎಸ್. ಮುಹಮ್ಮದ್ “ಇಂದು ನಮ್ಮ ಊರಿನಲ್ಲಿ ಒಬ್ಬರೇ ಒಬ್ಬರು ಅನಕ್ಷರಸ್ಥರು ಇಲ್ಲ ಎಂದು ಹೇಳಲು ಹೆಮ್ಮೆಯಾಗುತ್ತದೆ” ಎನ್ನುವಾಗ ಅವರ ಕಣ್ಣುಗಳಲ್ಲಿ ಅದೇನೋ ಸಾಧಿಸಿದ ಧನ್ಯತಾ ಭಾವವನ್ನು ಕಾಣಬಹುದು.

“ನಮ್ಮ ಗ್ರಾಮದ ಅಭಿವೃದ್ಧಿಯಲ್ಲಿ ಕ್ರೈಸ್ತ, ಮುಸ್ಲಿಂ, ಹಿಂದೂಗಳೆಂಬ ಧರ್ಮ, ಜಾತಿಗಳು ಅಡ್ಡಿಯಾಗಿಲ್ಲ. ಇಲ್ಲಿ ಹರಿಜನ, ಹಾಗೂ ವಿಭಿನ್ನ ಜಾತಿಯ ಎಲ್ಲರೂ ಸೌಹಾರ್ದದಿಂದಿದ್ದಾರೆ. ಪ್ರತಿಯೊಬ್ಬರು ಪರಸ್ಪರರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಾರೆ. ಹಾಗಾಗಿಯೇ ಇಲ್ಲಿ ಯಾವುದೇ ರೀತಿಯ ಮತೀಯ ಗಲಭೆ, ಮತಾಂತರವೆಂಬ ಗುಲ್ಲು, ಕೋಮುಗಲಭೆಯ ಸೋಂಕು ನಮ್ಮ ಊರಿಗೆ ತಗಲಿಲ್ಲ ಎಂದು ಹೇಳಲು ಸಂತಸವಾಗುತ್ತದೆ. ಯಾವುದೇ ರೀತಿಯ ಸಣ್ಣಪುಟ್ಟ ಗಲಭೆ, ವೈಮನಸ್ಸುಗಳು ನಡೆದರೂ ಇಲ್ಲಿನ ಧಾರ್ಮಿಕ ಮುಖಂಡರು ಪರಸ್ಪರ ಮಾತುಕತೆಯ ಮೂಲಕವೇ ಬಗಹರಿಸುತ್ತಾರೆ” ಎಂದು ಮುಹಮ್ಮದ್‌ರವರು ಹೇಳುವಾಗ ‘ಸುಖ ಇರುವವರಿಗೆ ಜನರ ಪ್ರೀತಿ ಸಿಗುವುದು ಕಡಿಮೆ. ನಾವು ಆರ್ಥಿಕವಾಗಿ ಸುಖವನ್ನು ಅನುಭವಿಸದಿದ್ದರೂ ಜನರ ಪ್ರೀತಿ ನಮಗೆ  ಎಲ್ಲಕ್ಕಿಂತ ಹೆಚ್ಚಿನ ಮನಸ್ಸಿನ ನೆಮ್ಮದಿ ನೀಡಿದೆ. ಇಲ್ಲಿನ ಜನರೆಲ್ಲರೂ ನಮ್ಮ ಜೊತೆಗಿದ್ದಾರೆ ಎನ್ನುವ ಸಂತಸ ನಮಗಿದೆ.’ ಎಂದು ಪತಿಯ ಮಾತಿಗೆ ಧ್ವನಿಗೂಡಿಸುತ್ತಾರೆ ಪಾತುಂಞಿ.

ಒಟ್ಟು ಒಂದು ಗ್ರಾಮದ ಅಭಿವೃದ್ಧಿಗೆ ಕೇವಲ ಚಿಂತನೆ, ಮನಸ್ಸು, ಆಸಕ್ತಿ ಮಾತ್ರ ಸಾಲದು. ಸಾಧಿಸಿ ತೋರಿಸುವ ಕೆಚ್ಚು ಕೂಡಾ ಅಗತ್ಯ ಎಂಬುದಕ್ಕೆ ಈ ದಂಪತಿ ಒಂದು ನಿದರ್ಶನ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ವಾರ್ತಾಭಾರತಿ
ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-22 00:00:00

Tell a Friend

ಪ್ರತಿಸ್ಪಂದನ
ಪ.ರಾಮಚಂದ್ರ , ರಾಸ್ ಲಫ್ಫಾನ್ , ಕತಾರ್
2010-03-25
ಗ್ರಾಮದ ಜನತೆ ಪಾಲ್ಗೊಂಡ ಅತ್ಯುತ್ತಮ ಸಹಭಾಗಿತ್ವದ ವರದಿಯನ್ನು ನಾಡಿನ ಜನತೆಗೆ ಬಿತ್ತರಿಸಿದ "ಗಲ್ಫ್ ಕನ್ನಡಿಗ" ವೃಂದಕ್ಕೆ ವಂದನೆಗಳು.
Ibrahim Hussain, Udipi, Karnataka
2010-03-23
ಈ ಲೇಖನವನ್ನು ಓದಿ ನನ್ನ ಅಂತರಾಳದಿಂದ ಸಂತೋಷ ಪಟ್ಟೆನು ಮತ್ತು ಕಣ್ಣನ್ನು ಒರೊಸಿಕೊಂಡೆ. ಮುಹಮ್ಮದ್ ಮತ್ತು ಪಾತುಂಞಿ ಎಂಬ ಈ ದಂಪತಿಗಳು ಎಲ್ಲರಿಗೆ ಮಾದರಿಯಾಗಿರುವೂದು ಅದರಲ್ಲೂ ಮುಸ್ಲಿಮ್ ಸಮುದಾಯಕ್ಕೆ ಹೆಮ್ಮೆಯ ವಿಚಾರ. ಇವರ ಸಮಾಜ ಸೇವಾ ಮನೋಭಾವವನ್ನು ಅಲ್ಲಾಹನು ಮೆಚ್ಚಿ ಇವರಿಗೆ ದೀರ್ಘಾಯುಷ್ಯವನ್ನು, ಸಂಸಾರದಲ್ಲಿ ಸುಖವನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.
Max, Brk
2010-03-23
That is Great, allah avara yella sat karya galannu neraverisaly..We are with u Sir...
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರಾವಳಿ]

»‘ಭಾರತ್ ಬೀಡಿ’ಯ ಸಂಸ್ಥಾಪಕರ ದಿನಾಚರಣೆ
»ಜಿಲ್ಲೆಯನ್ನು ಮುಜುಗರಕ್ಕೀಡು ಮಾಡಿದ ಪಾಲೆಮಾರ್
»ಬ್ಲೂಫಿಲಂ ಪ್ರಕರಣ: ಕಾಂಗ್ರೆಸ್‌ನಿಂದ ವಿಧಾನಸಭೆ ಶುಚಿತ್ವ!
»ಸದನದಲ್ಲಿ ಬ್ಲೂಫಿಲಂ ವೀಕ್ಷಣೆ ಪ್ರಕರಣ: ನೈತಿಕತೆ ಇದ್ದಲ್ಲಿ ವಜಾಗೊಳಿಸಿ: ಬಿಜೆಪಿಗೆ ಮೊಯ್ಲಿ ಸವಾಲು
»ಸದನದಲ್ಲಿ ಸಚಿವರಿಂದ ಬ್ಲೂ ಫಿಲಂ ವೀಕ್ಷಣೆ ಪ್ರಕರಣ: ಕರಾವಳಿಯಾದ್ಯಂತ ಕಾವು ಪಡೆದ ಪ್ರತಿಭಟನೆ; ಶಾಸಕ ಸ್ಥಾನ ಅನರ್ಹಗೊಳಿಸಿ ಜೈಲಿಗೆ ತಳ್ಳಿ: ಸಿಪಿಎಂ
»ವಿಕಲಚೇತನರ ಕುಟುಂಬಗಳಿಗೆ ಚೈತನ್ಯ ತುಂಬಿದ ಖಾಝಿ ಭೇಟಿ
»ಫೆ.10: ಕೋಮುದೌರ್ಜನ್ಯ ಖಂಡಿಸಿ ಪ್ರತಿಭಟನೆ
»ಸಿಸಿಬಿ ಪೊಲೀಸರಿಂದ ಗುಲಾಂ ಮುಹಮ್ಮದ್ ವಿಚಾರಣೆ: ಬಿಡುಗಡೆ
»13ರಂದು ರಫ್ತುದಾರರ ಸಮಾವೇಶ: ವೀರಪ್ಪ ಮೊಯ್ಲಿ
»ಹೊನ್ನಾವರ ಬಳಿ ಮರಕ್ಕೆ ಕಾರು ಢಿಕ್ಕಿ: ಉಡುಪಿ ಡಿಸಿಐಬಿ ನಿರೀಕ್ಷಕರಿಗೆ ತೀವ್ರ ಗಾಯ
»ಕಾಸರಗೋಡಿನಲ್ಲಿ ಘರ್ಷಣೆ: ಪೊಲೀಸರಿಂದ ಲಾಠಿ ಪ್ರಹಾರ; 200ಮಂದಿಯ ವಿರುದ್ಧ ಪ್ರಕರಣ ದಾಖಲು
»ಸದನದಲ್ಲಿ ಸಚಿವರ ಸೆಕ್ಸ್ ಫಿಲಂ ವೀಕ್ಷಣೆಯ ರದ್ದಾಂತ : ಉಡುಪಿಯಲ್ಲಿ ಎಸ್.ಡಿ.ಪಿ.ಐ ಪ್ರತಿಭಟನೆ
»ಫೆ.10 ರಿಂದ ರಾಷ್ಟ್ರೀಯ ಮಟ್ಟದ ಮ್ಯಾನೇಜ್‌ಮೆಂಟ್ ಉತ್ಸವ
»ಫೆ.25ರಂದು ಭಾರತೀಯ ಮಜ್ದೂರ್ ಸಂಘದ 18ನೇ ತ್ರೈವಾರ್ಷಿಕ ಪ್ರದೇಶ ಅಧಿವೇಶನ
»ಯುಪಿಸಿ‌ಎಲ್ ವಿರುದ್ದ ಹೈಕೋರ್ಟ್ ನಲ್ಲಿ ದಾವೆ ಹೂಡಲು ಸಿದ್ದ : ಪತ್ರಿಕಾಗೋಷ್ಠಿಯಲ್ಲಿ ಜಯಶ್ರೀ ಕೃಷ್ಣ ಶೆಟ್ಟಿ
»ಹೋಟೆಲ್ ಕಿದಿಯೂರಿನ ರಜತ ಸಂಭ್ರಮ : ಪೇಜಾವರ ಶ್ರೀಗಳಿಗೆ ತುಲಾಭಾರ
»ತಣ್ಣೀರುಪಂಥದ ಖತೀಜಮ್ಮ ಕೊಲೆ ಪ್ರಕರಣ: ಮೂವರ ಬಂಧನ
»ಏತಡ್ಕ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಆರಂಭೋತ್ಸವ
»ರೇವ್ ಪಾರ್ಟಿ ಕುರಿತು ಗ್ರಾ.ಪಂ.ಗೆ ಗೊತ್ತೇ ಇಲ್ಲ! ಇನ್ನೊಂದು ವಿವಾದದತ್ತ ಜಿಲ್ಲಾಡಳಿತ
»ವಿಧಾನಸಭೆಯಲ್ಲಿ ಸಚಿವರಿಂದ ಬ್ಲೂಫಿಲಂ ವೀಕ್ಷಣೆ: ರಾಜ್ಯಾದ್ಯಂತ ಪ್ರತಿಭಟನೆ
»ಸದನದಲ್ಲಿ ಸಚಿವತ್ರಯರ ‘ಕಾಮಹರಣ’ : ರಾಜ್ಯದಾದ್ಯಂತ ಆಕ್ರೋಶ : ಉಡುಪಿಯಲ್ಲಿ ನಾಗರೀಕರ ಸಮಿತಿಯ ವಿಶಿಷ್ಟ ಪ್ರತಿಭಟನೆ
»ಶ್ರೀ ಅಶೋಕ್ ಸಿಂಘಾಲ್ ಅವರಿಗೆ ಗೌರವಪೂರ್ವಕ ಸ್ವಾಗತ
»ಮಂಗಳೂರು: ಕ್ರೈಸ್ತ ಸಂಘಟನೆ ಮೇಲೆ ತೆರಿಗೆ ವಂಚನೆ ಆರೋಪ
»ವಿಧಾನಸಭೆಯಲ್ಲಿ ಸಚಿವರಿಂದ ಬ್ಲೂಫಿಲಂ ವೀಕ್ಷಣೆ; ಶಾಸಕ ಸ್ಥಾನ ಅನರ್ಹಗೊಳಿಸಿ ಜೈಲಿಗೆ ತಳ್ಳಿ: ಸಿಪಿಎಂ
»ರೇವ್ ಪಾರ್ಟಿ: ಗ್ರಾಪಂಗೆ ಮಾಹಿತಿಯೇ ಇಲ್ಲ!...
»ಪಚ್ಚನಾಡಿ ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿ: ಎರಡು ದಿನಗಳಿಂದ ಹೊಗೆಯಲ್ಲಿ ದಿನಗಳೆದ ಸ್ಥಳೀಯರು
»ಮಂಗಳೂರು: ಗೋದ್ರೆಜ್ ಅಲ್‌ಪೈನ್‌ಗೆ ಚಾಲನೆ
»ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಎಫ್‌ಐಆರ್: ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದಿಂದ ಪ್ರತಿಭಟನೆ
»ಉಳ್ಳಾಲ ಪುರಸಭೆಗೆ ಸ್ಪೆಷಲ್ ರೆಕೊಗ್ನಿಷನ್ ಅವಾರ್ಡ್-2012
»ನಾಪತ್ತೆಯಾಗಿದ್ದ ವ್ಯಕ್ತಿಯ ಅಸ್ಥಿಪಂಜರ ಪತ್ತೆ
»ಸೈಂಟ್ ಮೇರಿಸ್ ದ್ವೀಪದಲ್ಲಿ ನಡೆದ ನಂಗ ನಾಚಿಗೆ ಮುಖ್ಯಮಂತ್ರಿ ಸಮರ್ಥನೆ : ಸಿ.ಎಮ್. ರಾಜಿನಾಮೆಗೆ ಜನಾರ್ಧನ್ ಪೂಜಾರಿ ಆಗ್ರಹ
»ರೇವ್ ಪಾರ್ಟಿ ಪಶು ಸಂಸ್ಕೃತಿಯ ಪ್ರತೀಕ : ಅಶೋಕ್ ಸಿಂಘಾಲ್ ಖಂಡನೆ | ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ
»ಮಲ್ಪೆ ರೇವ್ ಪಾರ್ಟಿ ಪ್ರಕರಣ : ಜೆಡಿ‌ಎಸ್ ವಿನೂತನ ಪ್ರತಿಭಟನೆ
»ರೇವ್ ಪಾರ್ಟಿಯಿಂದ ಪವಿತ್ರ ಕ್ಷೇತ್ರ ಅಪವಿತ್ರ: ಇಂತಹ ವಿಕೃತಿ ಎಲ್ಲಿಯೂ ನಡೆಯಬಾರದು : ಪೇಜಾವರ ಶ್ರೀ ಪ್ರತಿಕ್ರೀಯೆ
»ಕಿದಿಯೂರ್ ಹೋಟೆಲ್ ನ ನೂತನ ಶಿಲಾದೇಗುಲದಲ್ಲಿ ನಾಗದೇವರ ಪುನ:ಪ್ರತಿಷ್ಠೆ : ವಿಶೇಷ ಪೂಜಿತ ನಾಗರಕ್ಷಾದಾರ ಧಾರಣೆ
»ಅಖಿಲ ಭಾರತ ಬಿಲ್ಲವರ ಯೂನಿಯನ್ ಗೆ 100ರ ಸಂಭ್ರಮ:ಫೆ.12ರಂದು ಮುಖ್ಯಮಂತ್ರಿಗಳಿಂದ ಚಾಲನೆ
»ಸ್ಟ್ರಿಂಗ್ ಝೂಕ್ ನಲ್ಲಿ ಅತಿರೇಕವಾಗಿದ್ದರೆ ಕರ್ತವ್ಯದಲ್ಲಿದ್ದವರಿಂದ ವರದಿ ಕಡ್ಡಾಯ: ಜಿಲ್ಲಾಧಿಕಾರಿ ಡಾ.ಎಂ.ಟಿ.ರೇಜು
»ಹೋಟೆಲ್ ಕಿದಿಯೂರ್ ರಜತ ಮಹೋತ್ಸವ ಉದ್ಘಾಟನೆ
»ಭಟ್ಕಳ: ಮಾವಿನಕಟ್ಟೆ ಬಳಿ ಭೀಕರ ಅಪಘಾತ; ಕೇರಳದ ಇಬ್ಬರ ದುರ್ಮರಣ
»ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಕೋಮು ಕಾಯ್ದೆ ವಿರುದ್ಧ ರಾಷ್ಟ್ರಾದ್ಯಂತ ಹೋರಾಟ: ಸಿಂಘಾಲ್‌
»ಮೂಡಬಿದಿರೆ ಪುರಸಭೆಗೆ ’ವರ್ಲ್ಡ್ ವಾಟರ್‌ ಅವಾರ್ಡ್‌’
»ಪೆರುಂಬಳ ದುರಂತ: ಒಂದೇ ಕುಟುಂಬದ ಇಬ್ಬರು ವಿದ್ಯಾರ್ಥಿಗಳ ಸಾವು
»ಬಿ.ಸಿ.ರೋಡ್: ಪೈಪ್‌ಲೈನ್ ಒಡೆದು ಪೋಲಾಗುತ್ತಿರುವ ನೀರು
»ಬೆಂಡರವಾಡಿಗೆ ‘ಪನ್ನಾಭ ಪುರಸ್ಕಾರ’
»ಬ್ಯಾರಿ ಅಕಾಡಮಿಯ ನೂತನ ಅಧ್ಯಕ್ಷರ ಪದಗ್ರಹಣ
»ಫೆ.11-12: ಮಂಗಳೂರು ಧರ್ಮ ಪ್ರಾಂತ್ಯದ ಶತಮಾನೋತ್ತರ ಬೆಳ್ಳಿ ಹಬ್ಬ
»‘ಅಲ್‌ಪೈನ್ ಅಸೋಸಿಯೇಟ್ಸ್’ಗೆ ನಾಲ್ಕನೆ ವರ್ಷದ ಸಂಭ್ರಮ: ಆಯುರ್ವೇದ-ಯುನಾನಿ ಔಷಧಿಗಳು, ತಜ್ಞರಿಂದ ಚಿಕಿತ್ಸೆ
»ಪುತ್ತೂರು: ಯಕ್ಷಗಾನ ಬಯಲಾಟ ಸಪ್ತಾಹ ಉದ್ಘಾಟನೆ
»ವಿರೋಧದ ನಡುವೆಯೂ ಸೂಲಿಬೆಲೆ ಭಾಷಣ...
»ಹೋಟೆಲ್ ಕಿದಿಯೂರ್ ರಜತ ಸಂಭ್ರಮ: ಅಷ್ಟಪವಿತ್ರ ನಾಗಮಂಡಲೋತ್ಸವಕ್ಕೆ ಬೃಹತ್ ಹೊರಕಾಣಿಕೆ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri