ಉಡುಪಿ: ಮಹಿಳೆಗೆ ಭಾವನಾತ್ಮಕ ಸ್ವಾತಂತ್ರ ಮುಖ್ಯ: ಡಾ.ಜ್ಯೋತಿ ಗುರುಪ್ರಸಾದ್
ಪ್ರಕಟಿಸಿದ ದಿನಾಂಕ : 2010-03-22
ಉಡುಪಿ, ಮಾ.೨೧: ಅಭಿವ್ಯಕ್ತಿ, ಆರ್ಥಿಕ, ಸ್ವಾತಂತ್ರಗಳಿಗಿಂತ ಮಹಿಳೆಗೆ ಭಾವನಾ ತ್ಮಕ ಸ್ವಾತಂತ್ರ ಅತಿ ಮುಖ್ಯವಾಗಿರು ತ್ತದೆ. ಆದುದರಿಂದ ಮಹಿಳೆಯರು ಅದನ್ನು ಸಾಧಿಸಿಕೊಳ್ಳಬೇಕೆಂದು ಲೇಖಕಿ ಡಾ.ಜ್ಯೋತಿ ಗುರುಪ್ರಸಾದ್ ಅಭಿ ಪ್ರಾಯಪಟ್ಟಿದ್ದಾರೆ.
ಉಡುಪಿ ಸ್ವಾಭಿಮಾನಿ ಮಹಿಳಾ ವೇದಿಕೆಯ ವತಿಯಿಂದ ರವಿವಾರ ಉಡುಪಿಯ ದುರ್ಗಾ ಇಂಟರ್‌ನ್ಯಾಶ ನಲ್ ಹೊಟೇಲ್‌ನ ಸಭಾಂಗಣದಲ್ಲಿ ಆಯೋಜಿಸಲಾದ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸ್ತ್ರೀ ಎಂಬುದು ಒಂದು ಧರ್ಮವಾಗ ಬೇಕಾಗಿದೆ. ಸಂಘಟನಾತ್ಮಕವಾಗಿ ಜಾಗೃತರಾಗುವ ಮೂಲಕ ಸ್ತ್ರೀ ಶಕ್ತಿ ಯನ್ನು ತೋರಿಸಬೇಕಾಗಿದೆ ಎಂದು ಅವರು ತಿಳಿಸಿದರು.
ಮನುಧರ್ಮ ಎಂಬುದು ಪೂರ್ವ ಗ್ರಹಪೀಡಿತವಾಗಿದೆ. ಮಹಿಳೆಯ ಕನಿಷ್ಠ ಅಗತ್ಯವನ್ನು ಪೂರೈಸಲು ಆಗದ ಸಮಾಜ ಸುಂದರವಾಗಿರಲು ಸಾಧ್ಯವಿಲ್ಲ. ಇಲ್ಲಿ ಮಹಿಳೆಯರು ಬೆಳೆಯಲು ಸಾಧ್ಯವೇ ಇಲ್ಲ ಎಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಚಿಂತಕಿ ಆತ್ರಾಡಿ ಅಮೃತಾ ಶೆಟ್ಟಿ, ನಮ್ಮನ್ನು (ಮಹಿಳೆ) ನಮ್ಮನ್ನಾಗಿ ಬದುಕು ವಂತೆ ಮಾಡುವುದೇ ದೊಡ್ಡ ಚಳವಳಿ ಯಾಗಿದೆ ಎಂದು ಅಭಿಪ್ರಾಯ ಪಟ್ಟರು.
ಸ್ವಸಹಾಯ ಸಂಘಗಳಿಂದ ಮಹಿಳೆ ಸ್ವಾಭಿಮಾನಿಯಾಗಿದ್ದಾಳೆ ಎಂದು ಹೇಳುತ್ತಿದ್ದರೂ ನಿಜವಾಗಿ ಅದು ಅವರ ನೆಮ್ಮದಿಯನ್ನೇ ಹಾಳುಮಾಡಿದೆ. ಸಂಘ ಸಂಸ್ಥೆಗಳ ಪುರುಷರು ಇಂದು ತಮ್ಮ ಎಲ್ಲ ಕಾರ್ಯಕ್ರಮಗಳ ತಯಾರಿಗೆ ಇದೇ ಮಹಿಳೆಯರನ್ನೇ ಬಳಸಿಕೊಳ್ಳುತ್ತ ತಾವು ವೇದಿಕೆಯಲ್ಲಿ ವಿರಾಜಮಾನರಾಗು ತ್ತಿದ್ದಾರೆ. ಇದನ್ನು ಮಹಿಳೆಯರು ಅರ್ಥ ಮಾಡಿಕೊಳ್ಳಬೇಕು ಎಂದರು.
ಅಧ್ಯಕ್ಷತೆಯನ್ನು ಮಾಜಿ ಜಿ.ಪಂ. ಅಧ್ಯಕ್ಷೆ ಡಾ.ವನಜಾಕ್ಷಿ ವಹಿಸಿದ್ದರು. ವೇದಿಕೆಯ ಅಧ್ಯಕ್ಷೆ ಶಾರದಾ ಮೂಡಸಗ್ರಿ ಪ್ರಾಸ್ತಾವಿಕವಾಗಿ ಮಾತನಾ ಡಿದರು. ಮಂಜುಳಾ ಸ್ವಾಗತಿಸಿದರು.