ಮಂಗಳೂರು, ಮಾ.೨೧: ವಜಾಗೊಂ ಡಿರುವ ವೆನ್ಲಾಕ್ ಆಸ್ಪತ್ರೆಯ ಸ್ವಚ್ಛತಾ ಮತ್ತು ಭದ್ರತಾ ಕಾರ್ಮಿಕರು ಆಸ್ಪತ್ರೆಯ ಎದುರು ನಡೆಸುತ್ತಿರುವ ಪ್ರತಿಭಟನೆ ೮ನೆ ದಿನಕ್ಕೆ ಕಾಲಿರಿಸಿದೆ.
ಕಳೆದ ಒಂದು ವಾರದಿಂದ ನಡೆ ಯುವ ಈ ಪ್ರತಿಭಟನೆಗೆ ಜಿಲ್ಲಾ ಡಳಿತವಾಗಲಿ, ಜನಪ್ರತಿನಿಧಿಗಳಾಗಲಿ ಸ್ಪಂದಿಸದಿರುವುದಕ್ಕೆ ಕಾರ್ಮಿಕರು ತೀವ್ರ ವ್ಯಕ್ತಪಡಿಸಿದ್ದಾರೆ.
ಕೆಎಂಸಿ ಆಸ್ಪತ್ರೆಯ ಜತೆ ವೆನ್ಲಾಕ್ ಆಸ್ಪತ್ರೆಯ ಪರವಾಗಿ ಸರಕಾರದ ಮುಖ್ಯಸ್ಥರು ಮಾತುಕತೆ ನಡೆಸಿದ್ದು, ಅದರಂತೆ ಇದೀಗ ಕಾರ್ಮಿಕರು ಕೆಲಸ ಕಳಕೊಂಡಿದ್ದಾರೆ. ಒಂದೆಡೆ ಸರಕಾರ ಕಾರ್ಮಿಕರಿಗೆ ತೊಂದರೆಯಾ ಗುತ್ತಿಲ್ಲ ಎಂದು ಹೇಳಿಕೊಂಡರೂ ಅವರಿಗೆ ನ್ಯಾಯ ದೊರಕಿಸಿ ಕೊಡು ವಲ್ಲಿ ವಿಫಲವಾಗಿದೆ.
ಇಂದಿನ ಪ್ರತಿಭಟನೆಯಲ್ಲಿ ಡಿವೈಎಫ್‌ಐ ನಗರಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ಜೆಎಂಎಸ್ ಸಂಘಟನೆಯ ಪ್ರಮೀಳಾ, ದಯಾನಂದ ಶೆಟ್ಟಿ, ಪ್ರಶಾಂತ್, ಮನೋಜ್, ಮುನೀರ್ ಕಾಟಿಪಳ್ಳ ಮತ್ತ್ತಿತರರು ಪಾಲ್ಗೊಂಡಿದ್ದರು.