ಪುತ್ತೂರು, ಮಾ.೨೧: ನಾವು ಗಳಿಸಿದ ಸಂಪತ್ತಿನ ಒಂದಂಶವನ್ನು ಸಮಾಜ ಕಾರ್ಯಕ್ಕೂ ಬಳಸಿಕೊಳ್ಳಬೇಕು ಎಂದು ಪೇಜಾವರ ಮಠಾಧೀಶ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ರವಿವಾರ ಪುತ್ತೂರಿನ ಮಹತೋ ಬಾರ ಶ್ರೀ ಮಹಾಲಿಂಗೇಶ್ವರ ದೇವಳಕ್ಕೆ ಉದ್ಯಮಿ ಮುತ್ತಪ್ಪ ರೈ ಅರ್ಪಿಸುವ ಬ್ರಹ್ಮರಥ ಸಮಾರ್ಪಣ ಸಮಾರಂಭದ ಪ್ರಯುಕ್ತ ದೇವರ ಮಾರುಗದ್ದೆಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವ ಹಿಸಿ ಆಶೀರ್ವಚನ ನೀಡಿದರು.
ದೇವ ರಥದ ಜೊತೆಗೆ ದೇಶ ಎನ್ನುವ ರಥವನ್ನು ಎಳೆ ಯಬೇಕು. ಹಾಗಾದಲ್ಲಿ ಮಾತ್ರ ಮನುಷ್ಯ ಜೀವನ ಪರಿಪೂರ್ಣ ವಾಗಲು ಸಾಧ್ಯ ಎಂದು ವಿಶ್ವೇಶ್ವರ ತೀರ್ಥರು ಅಭಿಪ್ರಾಯಪಟ್ಟರು.
ಕೋಡಿಮಠದ ರಾಜೇಂದ್ರ ಮಹಾಸ್ವಾಮಿ ಅರ್ಶೀವಚನ ನೀಡಿ ಮನುಷ್ಯನಲ್ಲಿ ಕೋಪವೆಂಬುದು ಅನರ್ಥ ಸಾಧನ. ಕೋಪವನ್ನು ನಿಯಂತ್ರಿಸಿದಾಗ ಮನಸ್ಸು ಶುದ್ಧವಾಗುವುದಲ್ಲದೆ ಮನುಷ್ಯನ ಉನ್ನತಿ ಸಾಧ್ಯ ಎಂದು ನುಡಿದರು.
ಎಡನೀರು ಮಠದ ಕೇಶವಾನಂದ ಭಾರತಿ ಸ್ವಾಮೀಜಿ, ಒಡಿಯೂರು ಕ್ಷೇತ್ರದ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಶಾಸಕ ಅಭಯಚಂದ್ರ ಜೈನ್, ಎನ್.ಮುತ್ತಪ್ಪ ರೈ, ರೇಖಾ ಮುತ್ತಪ್ಪ ರೈ ಉಪಸ್ಥಿತರಿದ್ದರು.
ಸ್ವಾಗತ ಸಮಿತಿ ಅಧ್ಯಕ್ಷ ಎನ್. ಸುಧಾಕರ ಶೆಟ್ಟಿ ಸ್ವಾಗತಿಸಿದರು. ನಿರಂಜನ ರೈ ಮಠಂತಬೆಟ್ಟು ವಂದಿಸಿದರು.
ಮಧ್ಯಾಹ್ನ ಗೃಹ ಸಚಿವ ಡಾ.ವಿ. ಎಸ್.ಆಚಾರ್ಯ ಭೇಟಿ ನೀಡಿ ಬ್ರಹ್ಮರಥ ಕ್ಷಿಸಿ ಶುಭ ಹಾರೈಸಿದರು.