ಬೈಂದೂರು, ಮಾ.೨೧: ಇಲ್ಲಿನ ಮೈಯ್ಯಾಡಿ ಎಂಬಲ್ಲಿ ಇಂದು ಬೆಳಗ್ಗೆ ೮ಗಂಟೆ ಸುಮಾರಿಗೆ ಕುಂದಾಪುರ ಎಪಿಎಂಸಿ ಅಧ್ಯಕ್ಷ ದೀಪಕ್‌ಕುಮಾರ್ ಶೆಟ್ಟರ ಕಾರನ್ನು ತಡೆದ ದುಷ್ಕರ್ಮಿಗಳು ಅವರಿಗೆ ಹಲ್ಲೆ ಮಾಡಿ ೨೫ ಸಾವಿರ ರೂ. ನಗದು ದರೋಡೆ ಮಾಡಿರುವ ಬಗ್ಗೆ ವರದಿಯಾಗಿದೆ.
ದೀಪಕ್‌ಕುಮಾರ್ ಎಪಿಎಂಸಿಯಲ್ಲಿ ಕೆಲಸ ಮುಗಿಸಿಕೊಂಡು ನೆಲ್ಯಾಡಿಗೆ ಕಾರಿನಲ್ಲಿ ಹೋಗುತ್ತಿದ್ದಾಗ ಮೈಯ್ಯಾಡಿ ಎಂಬಲ್ಲಿ ನನ್‌ಚಂದ್ರ ಉಪ್ಪುಂದ, ಸದಾನಂದ ಹೋಬಳೀದಾರ್ ಎಂಬ ವರು ಕಾರನ್ನು ಅಡ್ಡಗಟ್ಟಿ, ದೀಪಕ್ ಕುಮಾರ್‌ಗೆ ಹಲ್ಲೆ ಮಾಡಿ, ಕೀ ತೆಗೆದುಕೊಂಡು ಗಾಡಿಯಲ್ಲಿದ್ದ ೨೫,೦೦೦ರೂ. ನಗದನ್ನು ದರೋಡೆ ಮಾಡಿ, ಜೀವ ಬೆದರಿಕೆ ಹಾಕಿರುವುದಾಗಿ ದೂರಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.