ಬೆಳ್ತ೦ಗಡಿ: ಹಣಕಾಸು ನಿರ್ವಹಣೆಯಲ್ಲಿ ಶಿಸ್ತು ಅಗತ್ಯ: ಡಾ|ಹೆಗ್ಗಡೆ |
ಪ್ರಕಟಿಸಿದ ದಿನಾಂಕ : 2010-03-21
ಬೆಳ್ತಂಗಡಿ, ಮಾ. ೨೦: ಹಣಕಾಸು ನಿರ್ವಹಣೆಯಲ್ಲಿ ಶಿಸ್ತು ಅತ್ಯಗತ್ಯವಾಗಿದ್ದು ಈ ಶಿಸ್ತನ್ನು ಕಲಿಸಿ ಕೊಡುವಲ್ಲಿ ಬ್ಯಾಂಕ್ ಪ್ರಬಂಧಕರ ಪಾತ್ರ ಪ್ರಮುಖವಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಹೇಳಿದರು.
ಅವರು ಎಸ್. ಕೆ. ಡಿ. ಆರ್. ಡಿ. ಪಿ. ಸಿಡ್ಬಿ ಕಿರು ಆರ್ಥಿಕ ವ್ಯವಹಾರ ತರಬೇತಿ ಕೇಂದ್ರ ಹಾಗೂ ಕೆನರಾ ಬ್ಯಾಂಕ್ ಸಿಬಂದಿ ತರಬೇತಿ ಮಹಾವಿದ್ಯಾಲಯದ ಸಹಭಾಗಿತ್ವದಲ್ಲಿ ಬ್ಯಾಂಕಿನ ಪ್ರಬಂಧ ಕರಿಗಾಗಿ ಧರ್ಮಸ್ಥಳದ ಸನ್ನಿಧಿಯಲ್ಲಿ ನಡೆದ `ಸ್ವ ಸಹಾಯ ಸಂಘಗಳ ರಚನೆ ಹಾಗೂ ಹಣಕಾ ಸು ನಿರ್ವ ಹಣೆಯ ಕುರಿತಾದ ತರಬೇತಿ ಕಾರ್‍ಯಾಗಾರ' ವನ್ನು ಉದ್ಘಾಟಿಸಿ ಮಾತನಾಡಿದರು. ಕೆನರಾ ಬ್ಯಾಂಕಿನ ವಿವಿಧ ಶಾಖೆಗಳಿಂದ ಆಗಮಿಸಿದ ೬೭ ಪ್ರಬಂಧಕರು ತರಬೇತಿ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು.
೪ ದಿನಗಳ ಕಾಲ ನಡೆದ ತರಬೇತಿಯು ಉಪನ್ಯಾಸ ಹಾಗೂ ಕ್ಷೇತ್ರ ಸಂದರ್ಶನವನ್ನು ಒಳ ಗೊಂಡಿದ್ದು, ಅಭ್ಯರ್ಥಿಗಳು ನಿಡ್ಲೆಯ ಪೆರೋಡಿ ಪ್ರಗತಿಬಂಧು, ನೇತ್ರಾವತಿಯ ಕಾಮಧೇನು ಸ್ವ ಸಹಾಯ ಸಂಘಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಿದರು. ತರಬೇತಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ| ಎಲ್. ಎಚ್. ಮಂಜು ನಾಥ್, ನಿರ್ದೇಶಕಿ ಮನೋರಮಾ ಭಟ್, ಯೋಜನಾಧಿಕಾರಿ ಮಮತಾ ರಾವ್, ಉಪನ್ಯಾಸಕ ವಸಂತ್, ಕೆನರಾ ಬ್ಯಾಂಕ್ ಸಿಬಂದಿ ತರಬೇತಿ ಮಹಾವಿದ್ಯಾಲಯದ ಶ್ರೀನಿವಾಸ ರಾವ್, ಶ್ರೀನಿವಾಸ ಮೂರ್ತಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-21 00:00:00
|
|
|