ಉಡುಪಿ: ಉಗ್ರ-ನಕ್ಸಲ್‌ವಾದ, ಕೇಂದ್ರದ ವಿರುದ್ಧ ಆಂದೋಲನ: ಸುನಿಲ್ |
ಪ್ರಕಟಿಸಿದ ದಿನಾಂಕ : 2010-03-21
ಉಡುಪಿ, ಮಾ.೨೦: ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಹೆಚ್ಚುತ್ತಿರುವ ರಾಷ್ಟ್ರವಿರೋಧಿ ಉಗ್ರವಾದ ಮತ್ತು ನಕ್ಸಲ್‌ವಾದದ ವಿರುದ್ಧ ಜನಜಾಗೃತಿ ರೂಪಿಸುವ ದೊಡ್ಡ ಮಟ್ಟದ ಆಂದೋ ಲನವನ್ನು ಸದ್ಯದಲ್ಲಿಯೇ ಕೈಗೆತ್ತಿಕೊಳ್ಳಲಾಗುವುದು. ರೈಲ್ವೇ, ರಾಷ್ಟ್ರೀಯ ಹೆದ್ದಾರಿ ಮೊದಲಾದ ವಿಷಯಗಳಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿರುವ ಕೇಂದ್ರ ಸರಕಾರದ ವಿರುದ್ಧವೂ ಹೋರಾಟ ನಡೆಸಲಾಗುವುದು ಎಂದು ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.
ಉಡುಪಿಯ ಕಿದಿಯೂರು ಹೊಟೇಲ್‌ನಲ್ಲಿ ಮಾ. ೨೦ರಂದು ಜಿಲ್ಲಾ ಬಿಜೆಪಿ ವತಿಯಿಂದ ಅಭಿನಂದ ನೆಯನ್ನು ಸ್ವೀಕರಿಸಿ ಮಾತನಾಡಿದ ಅವರು, ಕೇಂದ್ರ ಸರಕಾರದ ಬೆಲೆ ಏರಿಕೆ ವಿರುದ್ಧ ಬಿಜೆಪಿ ನಡೆಸುವ ಸಹಿ ಸಂಗ್ರಹ ಅಭಿಯಾನಕ್ಕೆ ಪೂರಕವಾಗಿ ಯುವ ಮೋರ್ಚಾ ಎಲ್ಲ ತಾಲೂಕು ಕೇಂದ್ರ ಗಳಲ್ಲಿ ಸೈಕಲ್ ರ್‍ಯಾಲಿ ನಡೆಸಲಿದೆ ಎಂದರು.
ಕ್ರೈಸ್ತ, ಮುಸ್ಲಿಮರಾಗಿ ಮತಾಂ ತರ ಹೊಂದಿದ ಪರಿಶಿಷ್ಟರಿಗೆ ಸೌಲಭ್ಯ ಕೊಡುವ ರಂಗನಾಥ ಮಿಶ್ರ ಆಯೋಗದ ವರದಿಯನ್ನು ಜಾರಿಗೆ ತರಲು ಹೊರಟ ಕೇಂದ್ರ ಸರಕಾರದ ವಿರುದ್ಧ ಹೋರಾ ಟ ನಡೆಸಲಾಗುವುದು ಎಂದರು.
ತನಗೆ ವಹಿಸಿರುವ ಹೊಣೆಗಾರಿಕೆ ಯನ್ನು ಯಶಸ್ವಿಯಾಗಿ ನಿರ್ವಹಿಸುತ್ತೇನೆ. ಪಕ್ಷವನ್ನು ಗ್ರಾಮ ಗ್ರಾಮಗಳಲ್ಲಿ ಬೆಳೆಸಲು ಯತ್ನಿಸುತ್ತೇನೆ ಎಂದು ಸುನಿಲ್ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ. ಉದಯಕುಮಾರ ಶೆಟ್ಟಿ ಶುಭ ಕೋರಿದರು. ಸಂಸದ ಡಿ.ವಿ. ಸದಾನಂದ ಗೌಡ ಅಭಿನಂದಿಸಿದರು. ಶಾಸಕರಾದ ಲಾಲಾಜಿ ಮೆಂಡನ್, ಕೋಟ ಶ್ರೀನಿ ವಾಸ ಪೂಜಾರಿ, ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ, ಕ್ಷೇತ್ರಾಧ್ಯಕ್ಷ ರಾದ ಮನೋಹರ ಕಲ್ಮಾಡಿ, ಕುತ್ಯಾರು ನವೀನ್ ಶೆಟ್ಟಿ, ಹರಿಮಕ್ಕಿ ರತ್ನಾಕರ ಶೆಟ್ಟಿ, ಮಣಿರಾಜ ಶೆಟ್ಟಿ, ನಾಯಕರಾದ ರವಿ ಅಮೀನ್, ಉದಯ ಕೋಟ್ಯಾನ್, ರೇಶ್ಮಾ ಉದಯ ಶೆಟ್ಟಿ, ಎಂ. ಸಲೀಂ ಉಪಸ್ಥಿತರಿದ್ದರು.
ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಮಹೇಶ್ ಠಾಕೂರ್ ಸ್ವಾಗತಿಸಿ ಶಾಸಕ ರಘುಪತಿ ಭಟ್ ಪ್ರಸ್ತಾ ವನೆಗೈದರು. ಶ್ಯಾಮಲಾ ಕುಂದರ್ ಕಾರ್ಯಕ್ರಮ ನಿರ್ವಹಿಸಿದರು. ಸ್ವಾತಂತ್ರ್ಯ ಹೋರಾಟಗಾರ ಬಿ.ಶಂಭು ಶೆಟ್ಟಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸದನದಲ್ಲಿ ವಿರೋಧವಾದರೂ...
ಶುಕ್ರವಾರ ರಾತ್ರಿ ಸದನದಲ್ಲಿ ಗೋಹತ್ಯೆ ನಿಷೇಧ ಮತ್ತು ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆಗೆ ಸಂಬಂಧಿಸಿ ಮಸೂದೆ ಮಂಜೂರಾದಾಗ ವಿರೋಧಿಸಿದ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಹೊರಬಂದ ಬಳಿಕ ವೈಯಕ್ತಿಕವಾಗಿ ಮತ್ತು ದೂರವಾಣಿಯಲ್ಲಿ ಅಭಿನಂದಿಸಿದ್ದಾರೆ ಎಂದು ಸಚಿವ ಡಾ| ವಿ.ಎಸ್. ಆಚಾರ್ಯ ಹೇಳಿದ್ದಾರೆ.
ಸುನಿಲ್ ಕುಮಾರ್ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು ಒಳ್ಳೆಯ ಕೆಲಸ ಮಾಡಿದ ಬಗ್ಗೆ ವಿಪಕ್ಷೀಯರಿಗೂ ಗೊತ್ತಿದೆ. ದೇಶದ ಹಲವು ರಾಜ್ಯಗಳಲ್ಲಿ ಸಂಸ್ಕೃತ ವಿ.ವಿ., ಜಮ್ಮು ಕಾಶ್ಮೀರದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿರುವಾಗ ಇಲ್ಲಿ ಏಕೆ ವಿರೋಧ ಎಂದು ಪ್ರಶ್ನಿಸಿದರೆ ಅಲ್ಲಿನ ಬಿಜೆಪಿಯವರನ್ನು ಕೇಳಿ ಎನ್ನುತ್ತಾರೆ. ಬಿಜೆಪಿಯವರು ಹೇಗಿದ್ದರೂ ಬೆಂಬಲ ಕೊಟ್ಟಿದ್ದಾರೆಂದರೆ ಉತ್ತರ ವಿಲ್ಲ. ಕೂತರೆ ತಪ್ಪು, ನಿಂತರೆ ತಪ್ಪು ಎಂಬ ಧೋರಣೆ ಅವರದ್ದು ಎಂದು ಹೇಳಿದರು.
ಅಪಾರ ಸಂಖ್ಯೆಯ ಕಾರ್ಯಕರ್ತರಿಗೆ ಅತೀವ ಸಂತೋಷವಾಗಿದೆ ಎಂದು ಸುನಿಲ್‌ಕುಮಾರ್ ಹೇಳಿದರು.
ವರದಿಯ ವಿವರಗಳು |
 |
ಕೃಪೆ : ಉದಯವಾಣಿ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-21 00:00:00
|
|
| Ibrahim Hussain, Udipi, Karnataka | 2010-03-21 | | ಸುನಿಲ್ ಕುಮಾರ್, ಬಿಜೆಪಿ ನಿಮಗೆ ಕೊಟ್ಟಿರುವ ಪಟ್ಟವು ಚಲೋದಾಗಿ ನಿಭಾಯಿಸಿಕೊಳ್ಳಿ. ನಕ್ಸಲ್, ಉಗ್ರ ಎಂಬ ಮಾತುಗಳು ನಿಮಗೆ ಶೊಭೆತರುವಂತಹುದಲ್ಲ. ನಿಮ್ಮದೇ ತಾಲೂಕಿನಲ್ಲಿ, ನಕ್ಸಲ್ ಗುಂಡಿಗೆ ಬಲಿಯಾದವರಲ್ಲಿ ಎಲ್ಲರೂ ಅರ್ ಎಸ್ ಎಸ್ ಅಥವಾ ಬಿಜೆಪಿ ಕಾರ್ಯಕರ್ತರು. ನೀವು ನಕ್ಸಲ್ ಸಮಸ್ಯೆಗೆ ಸ್ಪಂದಿಸಬೇಕೇ ವಿನಹ ಅವರಲ್ಲಿ ಕಾಲುಕೆರೆದು ಜಗಳಕ್ಕೆ ಇಳಿಯಬೇಡಿ. ಇದರಿಂದ ನಿಮ್ಮ ಮತ್ತು ನಿಮ್ಮ ಕುಟುಂಬ ಸದಸ್ಯರ ಶಾಂತಿಯ ವಾತಾರಣವು ಕೆಡಲು ಸಾಧ್ಯವಿದೆ. ನೀವು ಕಳೆದ ಚುನಾವಣೆಯಲ್ಲಿ ಸೋತು ಮೊಲೆಯಲ್ಲಿ ಬಿದ್ದಿರಬಾರದೆಂಬುದಕ್ಕೆ ಬಿಜಿಪಿ ನಿಮ್ಮನ್ನು ಬಲಿಪಶು ಮಾಡುತ್ತಿದೆ. ಎಚ್ಚರದಿಂದಿರಿ. |
|